ಲೆಫೆಬ್ರೈಟ್ ಎಪಿಸ್ಕೋಪಲ್ ದೀಕ್ಷೆಗಳು ಸ್ವಿಟ್ಜರ್ಲೆಂಡ್‌ನಲ್ಲಿ ನಡೆದವು. ಲೆಫೆಬ್ರೈಟ್ ಎಪಿಸ್ಕೋಪಲ್ ದೀಕ್ಷೆಗಳು ಸ್ವಿಟ್ಜರ್ಲೆಂಡ್‌ನಲ್ಲಿ ನಡೆದವು.  (AFP or licensors)

ಲೆಫೆಬ್ವ್ರಿಯನ್ ಎಪಿಸ್ಕೋಪಲ್ ದೀಕ್ಷೆಗಳಿಗೆ ಬಹಿಷ್ಕಾರದ ಶಿಕ್ಷೆ ಘೋಷಣೆ.

ನಂಬಿಕೆಯ ಸಿದ್ಧಾಂತಕ್ಕಾಗಿ ಇರುವ ಡಿಕಾಸ್ಟರಿಯ ಪ್ರಿಫೆಕ್ಟ್ ಕಾರ್ಡಿನಲ್ ವಿಕ್ಟರ್ ಮ್ಯಾನುಯೆಲ್ ಫೆರ್ನಾಂಡೆಸ್ ಅವರು ಸಹಿ ಮಾಡಿದ ಒಂದು ದಸ್ತಾವೇಜು, ಜುಲೈ 1ರಂದು ನೆರವೇರಿಸಲಾದ ವಿಧಿಯನ್ನು "ಭಿನ್ನಮತೀಯ ಸ್ವರೂಪದ ಕೃತ್ಯ" ಎಂದು ವ್ಯಾಖ್ಯಾನಿಸುತ್ತದೆ. ಜೊತೆಗೆ, ಅದಕ್ಕೆ ಲಗತ್ತಿಸಲಾದ ವಿವರಣಾತ್ಮಕ ಟಿಪ್ಪಣಿಯಲ್ಲಿ ಬಹಿಷ್ಕಾರ ಎಂಬ ಗಂಭೀರವಾದ ಕ್ಯಾನನ್ ಕಾನೂನು ಶಿಕ್ಷೆಯ ವಿವರಗಳನ್ನು ನೀಡಲಾಗಿದೆ.

ವ್ಯಾಟಿಕನ್ ವರದಿ

ಸಂತ Xನೇ ಪಿಯಸ್ ರವರು  ಯಾಜಕರ ಸಹೋದರತ್ವದ ಬಿಷಪ್‌ಗಳಾದ ಅಲ್ಫೋನ್ಸೊ ದೆ ಗಲಾರೆತ್ತಾ ಮತ್ತು ಬೆರ್ನಾರ್ಡ್ ಫೆಲ್ಲೇ ಕ್ರಮವಾಗಿ ಮುಖ್ಯ ಸಮರ್ಪಣಾಧ್ಯಕ್ಷರು ಮತ್ತು ಸಹ-ಸಮರ್ಪಣಾಧ್ಯಕ್ಷರು ಹಾಗೂ ಹೊಸದಾಗಿ ಬಿಷಪ್‌ಗಳಾಗಿ ಸಮರ್ಪಿಸಲ್ಪಟ್ಟ ಪಾಸ್ಕಲ್ ಶ್ರೈಬರ್, ಮೈಕೆಲ್ ಗೋಲ್ಡೇಡ್, ಮಿಶೆಲ್ ಪೊಯ್ನ್ಸಿನೆ ದೆ ಸಿವ್ರಿ ಮತ್ತು ಮಾರ್ಕ್ ಹನಪ್ಪಿಯರ್ ರವರು, "ಭಿನ್ನಮತೀಯ ಸ್ವರೂಪದ ಕೃತ್ಯ" ಎಸಗಿದ ಕಾರಣದಿಂದ, ಜಗದ್ಗುರುಗಳ ಅಧಿಕಾರ ಸ್ಥಳವು ಮೀಸಲಾಗಿರುವ "ಇಪ್ಸೊ ಫಾಕ್ಟೊ" ಹಾಗೂ "ಲಾತೆ ಸೆಂಟೆಂತಿಯೆ" ಬಹಿಷ್ಕಾರದ ಶಿಕ್ಷೆಗೆ ಒಳಗಾಗಿದ್ದಾರೆ. ಆ ಕೃತ್ಯವೆಂದರೆ, ಜಗದ್ಗುರುಗಳ ಅಧಿಕೃತ ಆದೇಶವಿಲ್ಲದೆ ಹಾಗೂ ಪರಮೋನ್ನತ ಪಾಂಟಿಫ್ ರವರ ಸ್ಪಷ್ಟ ಇಚ್ಛೆಗೆ ವಿರುದ್ಧವಾಗಿ ನಾಲ್ವರು ಯಾಜಕರಿಗೆ ಬಿಷಪ್‌ಗಳ ದೀಕ್ಷೆಯನ್ನು ನೀಡಿರುವುದು.

ಇದನ್ನು ಜುಲೈ 2ರಂದು ಪ್ರಕಟಿಸಲಾದ ಆದೇಶದಲ್ಲಿ ತಿಳಿಸಲಾಗಿದೆ. ಈ ಆದೇಶಕ್ಕೆ ನಂಬಿಕೆಯ ಸಿದ್ಧಾಂತಕ್ಕಾಗಿ ಇರುವ ಡಿಕಾಸ್ಟರಿಯ ಪ್ರಿಫೆಕ್ಟ್ ಕಾರ್ಡಿನಲ್ ವಿಕ್ಟರ್ ಮ್ಯಾನುಯೆಲ್ ಫೆರ್ನಾಂಡೆಸ್ ರವರು ಸಹಿ ಮಾಡಿದ್ದು, ಅದೇ ಡಿಕಾಸ್ಟರಿಯ ಇಬ್ಬರು ಕಾರ್ಯದರ್ಶಿಗಳು ಪ್ರತಿಸಹಿ ಮಾಡಿದ್ದಾರೆ.

ಈ ನಿರ್ಧಾರವು 2026ರ ಜುಲೈ 1ರ ಬೆಳಿಗ್ಗೆ ಸ್ವಿಟ್ಜರ್ಲ್ಯಾಂಡ್‌ನ ಏಕೋನ್ ನಲ್ಲಿ ನಡೆದ ವಿಧ್ಯುಕ್ತ ಸಮಾರಂಭದ ಇಪ್ಪತ್ತನಾಲ್ಕು ಗಂಟೆಗಳ ನಂತರ ಕೈಗೊಳ್ಳಲಾಯಿತು.

ನಂಬಿಕೆಯ ಸಿದ್ಧಾಂತಕ್ಕಾಗಿ ಇರುವ ಡಿಕಾಸ್ಟರಿಯ ಆದೇಶವು, ಈ ಬಿಷಪ್ ಸಮರ್ಪಣೆಯನ್ನು ನೆರವೇರಿಸಿದ ಕೃತ್ಯದ ಮೂಲಕ, ಸಮರ್ಪಣೆ ಮಾಡಿದವರೂ ಹಾಗೂ ಸಮರ್ಪಣೆ ಸ್ವೀಕರಿಸಿದವರೂ ಇಬ್ಬರೂ ಕ್ಯಾನನ್ ಕಾನೂನಿನಲ್ಲಿ ನಿಗದಿಪಡಿಸಲಾದ ಬಹಿಷ್ಕಾರದ ಶಿಕ್ಷೆಗೆ ಒಳಗಾಗಿದ್ದಾರೆ ಎಂದು ಸ್ಪಷ್ಟಪಡಿಸುತ್ತದೆ.

ಈ ದುಃಖಕರ ಅಂತ್ಯವು ಜಗದ್ಗುರು XIVನೇ ಲಿಯೋರವರು ಪುನಃ ಪುನಃ ವ್ಯಕ್ತಪಡಿಸಿದ್ದ ಇಚ್ಛೆಗೆ ವಿರುದ್ಧವಾಗಿ ಲೆಫೆಬ್ವ್ರಿಯನ್ನರು ತೆಗೆದುಕೊಂಡ ನಿರ್ಧಾರದ ಪರಿಣಾಮವಾಗಿದೆ.

ಈ ಬಹಿಷ್ಕಾರದ ಮೂಲಕ, ಸಂತ Xನೇ ಪಿಯಸ್ ರವರು ಯಾಜಕರ ಸಹೋದರತ್ವದ ಬಿಷಪ್‌ಗಳು ಮತ್ತು ಯಾಜಕರು ರೋಮಿನ ಧರ್ಮ ಸಭೆಯೊಂದಿಗಿನ ಪೂರ್ಣ ಐಕ್ಯತೆಯಿಂದ ಮತ್ತೊಮ್ಮೆ ಪ್ರತ್ಯೇಕಗೊಂಡಿದ್ದಾರೆ.

ಸಾಮಾನ್ಯ ವಿಶ್ವಾಸಿಗಳ ವಿಷಯಕ್ಕೆ ಬಂದರೆ, ಈ ಸಹೋದರತ್ವಕ್ಕೆ ಔಪಚಾರಿಕವಾಗಿ ತಮ್ಮನ್ನು ಸೇರಿಸಿಕೊಂಡಿರುವವರನ್ನು ಸಹ ಬಹಿಷ್ಕೃತರೆಂದು ಪರಿಗಣಿಸಬೇಕು.

ಮುಂದಿನ ವಿವರಗಳನ್ನು"ವಿವರಣಾತ್ಮಕ ಟಿಪ್ಪಣಿ"ಯಲ್ಲಿ ನೀಡಲಾಗಿದೆ. ಈ ಟಿಪ್ಪಣಿಯನ್ನು ಡಿಕಾಸ್ಟರಿಯು ಬಹಿಷ್ಕಾರದ ಆದೇಶದೊಂದಿಗೆ ಏಕಕಾಲದಲ್ಲಿ ಪ್ರಕಟಿಸಿದ್ದು, ಅದರ ಪೂರ್ಣ ಪಠ್ಯವನ್ನು ಕೆಳಗೆ ನೀಡಲಾಗಿದೆ.

ಡಿಕಾಸ್ಟರಿಯ ವಿವರಣಾತ್ಮಕ ಟಿಪ್ಪಣಿ

ಜಗದ್ಗುರು ಸಂತ VIನೇ ಪೌಲ  ಅವರ ಕಾಲದಿಂದ ಹಿಡಿದು, ಇತ್ತೀಚೆಗೆ ಈ ಡಿಕಾಸ್ಟರಿಯಲ್ಲಿ ನಡೆದ ಕೊನೆಯ ಮಾತುಕತೆಗಳವರೆಗೆ, ಆರ್ಚ್‌ಬಿಷಪ್ ಮಾರ್ಸೆಲ್ ಲೆಫೆಬ್ವ್ರೆ ಆರಂಭಿಸಿದ ಚಳವಳಿಯ ಸದಸ್ಯರನ್ನು ಕಥೋಲಿಕ ಧರ್ಮಸಭೆಯೊಂದಿಗೆ ಪೂರ್ಣ ಐಕ್ಯತೆಗೆ ಮರಳಿ ತರುವ ಉದ್ದೇಶದಿಂದ ಕೈಗೊಂಡ ಅನೇಕ ಪ್ರಯತ್ನಗಳು ಫಲಕಾರಿಯಾಗಿಲ್ಲ.

ಇತ್ತೀಚೆಗೆ, ಜಗದ್ಗುರುಗಳ ಅಧಿಕೃತ ಆದೇಶವಿಲ್ಲದೆ, ಜಗದ್ಗುರುಗಳು ಸ್ಪಷ್ಟ ಇಚ್ಛೆಗೆ ವಿರುದ್ಧವಾಗಿ ಹಾಗೂ ಕ್ಯಾನನ್ ಕಾನೂನನ್ನು ಬಹಿರಂಗವಾಗಿ ಉಲ್ಲಂಘಿಸಿ ನಡೆಸಲಾದ ಬಿಷಪ್ ಸಮರ್ಪಣೆಗಳ ಕಾರಣದಿಂದ ಈ ಪರಿಸ್ಥಿತಿ ಮತ್ತಷ್ಟು ಗಂಭೀರವಾಗಿದೆ.

ಆದ್ದರಿಂದ, ತನಗೆ ವಹಿಸಲಾದ ಜವಾಬ್ದಾರಿಯನ್ನು ನಿಷ್ಠೆಯಿಂದ ನಿರ್ವಹಿಸುವ ಸಲುವಾಗಿ, ಈ ಡಿಕಾಸ್ಟರಿಯು ಈ ಕೃತ್ಯವು ಭಿನ್ನಮತದ  ಅಪರಾಧವಾಗಿದ್ದು, ಅದರಲ್ಲಿ ಭಾಗಿಯಾದ ಪವಿತ್ರ ಸೇವಕರು ಹಾಗೂ ಸಾಮಾನ್ಯ ವಿಶ್ವಾಸಿಗಳ ಮೇಲೆ ಕ್ಯಾನನ್ ಕಾನೂನಿನ ಪ್ರಕಾರ ಅನ್ವಯವಾಗುವ ಪರಿಣಾಮಗಳು ಉಂಟಾಗುತ್ತವೆ ಎಂದು ಘೋಷಿಸುವುದು ಅಗತ್ಯವೆಂದು ಪರಿಗಣಿಸುತ್ತದೆ. ವಾಸ್ತವವಾಗಿ, 1988ರಲ್ಲಿಯೇ ಘೋಷಿಸಲಾದಂತೆ, "ರೋಮ್‌ನ ಪ್ರಧಾನಾಧಿಕಾರವನ್ನು ಪ್ರಾಯೋಗಿಕವಾಗಿ ತಿರಸ್ಕರಿಸುವ ಇಂತಹ ವಿಧೇಯತೆಯಿಲ್ಲದ ನಡೆ, ಭಿನ್ನಮತೀಯ ಕೃತ್ಯವಾಗುತ್ತದೆ".

ಈ ಹಿನ್ನೆಲೆಯಲ್ಲಿ, ಇನ್ನು ಮುಂದೆ:

1. ಸಂತ Xನೇ ಪಿಯಸ್  ಯಾಜಕರ ಸಹೋದರತ್ವಕ್ಕೆ ಸೇರಿದ ಪವಿತ್ರ ಸೇವಕರು ಭಿನ್ನಮತದ ಸ್ಥಿತಿಯಲ್ಲಿದ್ದಾರೆ. ಆದ್ದರಿಂದ ಅವರನ್ನು ಭಿನ್ನಮತೀಯರು ಎಂದು ಪರಿಗಣಿಸಬೇಕು (ಹೋಲಿಸಿ: Ecclesia Dei, 5 c; ಶಾಸನ ಪಠ್ಯಗಳ ಪಾಂಟಿಫಿಕಲ್ ಕೌನ್ಸಿಲ್, ಬಿಷಪ್ ಮಾರ್ಸೆಲ್ ಲೆಫೆಬ್ವ್ರೆಯ ಚಳವಳಿಗೆ ಸೇರ್ಪಡೆಯಾದವರಿಗೆ ಅನ್ವಯವಾಗುವ ಭಿನ್ನಮತದ ಬಹಿಷ್ಕಾರದ ಕುರಿತು ವಿವರಣಾತ್ಮಕ ಟಿಪ್ಪಣಿ, 24.08.1996, 5–6). ಅವರು ಕ್ಯಾನನ್ ಕಾನೂನಿನ ಪ್ರಕಾರ ನಿಗದಿಪಡಿಸಲಾದ ಬಹಿಷ್ಕಾರದ ಶಿಕ್ಷೆಗೆ ಒಳಪಟ್ಟಿದ್ದಾರೆ (ಕ್ಯಾನನ್ 1364 § 1 CIC).

2. ಸಾಮಾನ್ಯ ವಿಶ್ವಾಸಿಗಳ ವಿಷಯದಲ್ಲಿ, ಸಂತ Xನೇ ಪಿಯಸ್ ರವರ ಯಾಜಕರ ಸಹೋದರತ್ವಕ್ಕೆ ಔಪಚಾರಿಕವಾಗಿ ಸೇರ್ಪಡೆಯಾದವರನ್ನು, 1996ರ ಶಾಸನ ಪಠ್ಯಗಳ ಪಾಂಟಿಫಿಕಲ್ ಕೌನ್ಸಿಲಿನ ವಿವರಣಾತ್ಮಕ ಟಿಪ್ಪಣಿಯಲ್ಲಿ ನಿಗದಿಪಡಿಸಲಾದ ಷರತ್ತುಗಳ ಪ್ರಕಾರ, ಭಿನ್ನಮತೀಯರು ಮತ್ತು ಬಹಿಷ್ಕೃತರು ಎಂದು ಪರಿಗಣಿಸಬೇಕು (ಹೋಲಿಸಿ: ಅದೇ, 7). ಆ ವಿವರಣಾತ್ಮಕ ಟಿಪ್ಪಣಿ ಈಗಲೂ ಜಾರಿಯಲ್ಲಿದ್ದು, ಈ ಡಿಕಾಸ್ಟರಿಯು ಅದನ್ನು ತನ್ನ ಅಧಿಕೃತ ನಿಲುವಾಗಿ ಅಂಗೀಕರಿಸುತ್ತದೆ.

3. ಕೊನೆಯದಾಗಿ, ದೇವರ ಪವಿತ್ರ ಜನರಿಗೆ ಈ ಎಚ್ಚರಿಕೆಯನ್ನು ನೀಡಲಾಗುತ್ತದೆ: ಸಂತ Xನೇ ಪಿಯಸ್ ರವರು ಯಾಜಕರ ಸಹೋದರತ್ವದ ಪವಿತ್ರ ಸೇವಕರು ಸಂಸ್ಕಾರಗಳನ್ನು ಕಾನೂನುಬಾಹಿರವಾಗಿ ಆಚರಿಸುತ್ತಿದ್ದಾರೆ. ಅವರಿಂದ ನೀಡಲಾಗುವ ಪಶ್ಚಾತ್ತಾಪದ ಸಂಸ್ಕಾರ ಹಾಗೂ ಅವರು ಸಾಕ್ಷಿಯಾಗಿರುವ ವಿವಾಹಗಳು ಮಾನ್ಯವಾಗಿರುವುದಿಲ್ಲ.

ಪ್ರೀತಿಯ ತಾಯಿಯಾದ ಧರ್ಮ ಸಭೆ, ಪೂರ್ಣ ಐಕ್ಯತೆಗೆ ಮರಳಲು ಬಯಸುವ ಎಲ್ಲರನ್ನು ಪ್ರಾಮಾಣಿಕ ಪ್ರೀತಿ ಮತ್ತು ಹೃತ್ಪೂರ್ವಕ ಕಾಳಜಿಯಿಂದ ಸ್ವಾಗತಿಸುತ್ತದೆ. ವಿವಿಧ ಸಂದರ್ಭಗಳಲ್ಲಿ ಸ್ಥಳೀಯ ಧರ್ಮಾಧ್ಯಕ್ಷರು ಅನುಸರಿಸಬೇಕಾದ ಕ್ರಮಗಳನ್ನು ಪ್ರೇಷಿತರ ರಾಯಭಾರಿಗಳು ವ್ಯವಸ್ಥೆಗೊಳಿಸಲಿದ್ದಾರೆ.

ಕೊನೆಯದಾಗಿ, ಎಲ್ಲಾ ವಿಶ್ವಾಸಿಗಳು ರೋಮಿನ ಪಾಂಟಿಫ್, ರವರೊಂದಿಗೆ ಐಕ್ಯತೆಯಲ್ಲಿರುವ ಬಿಷಪ್‌ಗಳು ಹಾಗೂ ಇಡೀ ಧರ್ಮ ಸಭೆಯೊಂದಿಗೆ ದೃಢವಾದ ಐಕ್ಯತೆಯಲ್ಲಿ ಸ್ಥಿರವಾಗಿ ಉಳಿಯಬೇಕು (ಹೋಲಿಸಿ: Lumen Gentium, 22; ಕ್ಯಾನನ್ 751 CIC) ಮತ್ತು ಮೇಲ್ಕಂಡ ಸಂತ Xನೇ ಪಿಯಸ್  ಯಾಜಕರ ಸಹೋದರತ್ವ ಆಯೋಜಿಸುವ ಧಾರ್ಮಿಕ ಆಚರಣೆಗಳು ಹಾಗೂ ಇತರ ಚಟುವಟಿಕೆಗಳಲ್ಲಿ ಭಾಗವಹಿಸುವುದನ್ನು ತಪ್ಪಿಸಿಕೊಳ್ಳಬೇಕು.

02 ಜುಲೈ 2026, 16:49