ಗಾಜಾ ಶಾಂತಿ ಒಪ್ಪಂದಕ್ಕೆ ಬದ್ಧರಾಗಲು ವಿಶ್ವ ನಾಯಕರಿಗೆ ಪೋಪ್ ಕರೆ
ವರದಿ: ವ್ಯಾಟಿಕನ್ ನ್ಯೂಸ್
ಸಂತ ಪೇತ್ರರ ಚೌಕದಲ್ಲಿ ನಡೆದ ಬಲಿಪೂಜೆಯಲ್ಲಿ ಕೊನೆಯಲ್ಲಿ ಮಾತನಾಡಿದ ಪೋಪ್ ಲಿಯೋ, ಗಾಜಾದವರ "ಅಗಾಧ ನೋವು" ಮತ್ತು ವಿಶ್ವಾದ್ಯಂತ "ಯೆಹೂದ್ಯ ವಿರೋಧಿ ದ್ವೇಷ"ದ ಏರಿಕೆಯನ್ನು ಖಂಡಿಸಿದರು ಮತ್ತು ಇಸ್ರೇಲ್-ಹಮಾಸ್ ಶಾಂತಿ ಒಪ್ಪಂದವನ್ನು "ಸಾಧ್ಯವಾದಷ್ಟು ಬೇಗ" ಅಂತಿಮಗೊಳಿಸಲಾಗುವುದು ಎಂದು ಅವರು ಆಶಿಸಿದರು.
ಪೋಪ್ ಲಿಯೋ XIV ಅವರು ರಾಜಕೀಯ ನಾಯಕರಿಗೆ ನಡೆಯುತ್ತಿರುವ ಇಸ್ರೇಲ್-ಹಮಾಸ್ ಶಾಂತಿ ಮಾತುಕತೆಗಳಿಗೆ "ತಮ್ಮನ್ನು ತಾವು ಬದ್ಧಗೊಳಿಸಿಕೊಳ್ಳುವಂತೆ" ಕರೆ ನೀಡಿದ್ದಾರೆ, ಇದು ಇತ್ತೀಚೆಗೆ "ಮಹತ್ವದ ಹೆಜ್ಜೆಗಳನ್ನು" ತೋರಿಸಿದೆ ಎಂದು ಅವರು ಹೇಳಿದರು.
ಈ ಒಪ್ಪಂದವು "ಸಾಧ್ಯವಾದಷ್ಟು ಬೇಗ" ಅಂತಿಮಗೊಳ್ಳಲಿದೆ ಎಂದು ಪೋಪ್ ತಮ್ಮ ಆಶಯವನ್ನು ವ್ಯಕ್ತಪಡಿಸಿದರು ಮತ್ತು "ನ್ಯಾಯಯುತ ಮತ್ತು ಶಾಶ್ವತ ಶಾಂತಿ" ಗಾಗಿ "ಪ್ರಾರ್ಥನೆಯಲ್ಲಿ ಒಗ್ಗಟ್ಟಿನಿಂದ ಇರಲು" ತಮ್ಮ ಕೇಳುಗರನ್ನು ಒತ್ತಾಯಿಸಿದರು.
"ಜಗತ್ತಿನಲ್ಲಿ ಯೆಹೂದ್ಯ ವಿರೋಧಿ ದ್ವೇಷದ ಏರಿಕೆ" ಬಗ್ಗೆ ಅವರು ತಮ್ಮ ಕಳವಳವನ್ನು ವ್ಯಕ್ತಪಡಿಸಿದರು, ವಿಶೇಷವಾಗಿ ಇಂಗ್ಲೆಂಡ್‌ನ ಮ್ಯಾಂಚೆಸ್ಟರ್‌ನಲ್ಲಿರುವ ಸಿನಗಾಗ್ ಮೇಲೆ ಗುರುವಾರ ನಡೆದ ದಾಳಿಯನ್ನು ಉಲ್ಲೇಖಿಸಿದರು.