FILE PHOTO: Illustration shows message reading "AI artificial intelligence", keyboard and robot hands FILE PHOTO: Illustration shows message reading "AI artificial intelligence", keyboard and robot hands  (REUTERS)

ಕೃತಕ ಬುದ್ಧಿಮತ್ತೆ (AI) ಕಂಪನಿಗಳಿಂದ ಪಾರದರ್ಶಕತೆ ಕೇಳುತ್ತಿರುವ ಅಂತರರಾಷ್ಟ್ರೀಯ ಮಾಧ್ಯಮಗಳು

“Facts In, Facts Out”: ಪ್ರಮುಖ ಕೃತಕ ಬುದ್ಧಿಮತ್ತೆ (AI) ಕಂಪನಿಗಳು ತಮ್ಮ ನಿರ್ಧಾರ ಪ್ರಕ್ರಿಯೆಯಲ್ಲಿ ಮಾಹಿತಿಯ ವಿಶ್ವಾಸಾರ್ಹತೆಗೆ ಆದ್ಯತೆ ನೀಡಬೇಕು ಎಂದು ಒತ್ತಾಯಿಸುವ ಅಂತರರಾಷ್ಟ್ರೀಯ ಅಭಿಯಾನ. ಜನರು ಹೆಚ್ಚುತ್ತಿರುವ ಪ್ರಮಾಣದಲ್ಲಿ ಸುದ್ದಿಗಾಗಿ ಕೃತಕ ಬುದ್ಧಿಮತ್ತೆ (AI) ಸಾಧನಗಳನ್ನು ಬಳಸುತ್ತಿದ್ದಾರೆ. ಆದರೆ ಮೂಲ ಮೂಲಗಳೊಂದಿಗೆ ಹೋಲಿಸಿದರೆ, ಈ ಮಾಹಿತಿಗಳು ಅನೇಕ ಬಾರಿ ವಕ್ರವಾಗಿರುವುದು ಅಥವಾ ಸಂದರ್ಭವಿಲ್ಲದೆ ನೀಡಲ್ಪಡುವುದು ಕಂಡುಬರುತ್ತಿದೆ. ಆದ್ದರಿಂದ, ತಂತ್ರಜ್ಞಾನ ಕ್ರಾಂತಿಯಲ್ಲಿ ತಮ್ಮ ಪಾತ್ರಕ್ಕೆ ಕೃತಕ ಬುದ್ಧಿಮತ್ತೆ (AI) ದೈತ್ಯ ಸಂಸ್ಥೆಗಳು ಹೊಣೆ ಹೊತ್ತುಕೊಳ್ಳಬೇಕೆಂದು ಮಾಧ್ಯಮಗಳು ಆಗ್ರಹ

ಕೃತಕ ಬುದ್ಧಿಮತ್ತೆ (AI) ಕಂಪನಿಗಳು ಮೂಲಗಳ ಪಾರದರ್ಶಕತೆ ಮತ್ತು ಪತ್ರಿಕೋದ್ಯಮದ ವಿಷಯ ಬಳಕೆಯ ಕುರಿತು ಮಾಧ್ಯಮಗಳೊಂದಿಗೆ ಸಂವಾದ ನಡೆಸಬೇಕಾದ ಸಮಯ ಬಂದಿದೆ. ಇದು “Facts In, Facts Out” ಅಭಿಯಾನದ ಮೂಲಕ ವಿಶ್ವದ ಪ್ರಮುಖ ಮಾಧ್ಯಮ ಸಂಘಟನೆಗಳು ಮುಂದಿಟ್ಟಿರುವ ಮುಖ್ಯ ಬೇಡಿಕೆಯಾಗಿದೆ. ಈ ಅಭಿಯಾನವನ್ನು ಯೂರೋಪಿನ ಪ್ರಸಾರ ಒಕ್ಕೂಟ (ಯುರೋಪಿಯನ್ ಬ್ರಾಡ್‌ಕಾಸ್ಟಿಂಗ್ ಯೂನಿಯನ್-EBU) ಅಭಿಯಾನವನ್ನು ಪ್ರಚುರಪಡಿಸುತ್ತಿದೆ.  ಇದರ ಸ್ಥಾಪಕ ಸದಸ್ಯರಲ್ಲಿ ವಾಟಿಕನ್ ರೇಡಿಯೋ ಕೂಡ ಸೇರಿದೆ.  ವರ್ಲ್ಡ್ ಅಸೋಸಿಯೇಶನ್ ಆಫ್ ನ್ಯೂಸ್ ಪಬ್ಲಿಷರ್ಸ್ (WAN-IFRA) ಮತ್ತು ಇಂಟರ್‌ನ್ಯಾಷನಲ್ ಫೆಡರೇಶನ್ ಆಫ್ ಪಿರಿಯಾಡಿಕಲ್ ಪಬ್ಲಿಷರ್ಸ್ (FIPP) ಪ್ರಚಾರ ಮಾಡುತ್ತಿವೆ.

ಈ ಅಭಿಯಾನಕ್ಕೆ ವಿಶೇಷ ಪ್ರೇರಣೆಯಾಗಿ BBC ಮತ್ತು EBU ತಯಾರಿಸಿದ AI ಸಹಾಯಕರಲ್ಲಿ ಸುದ್ದಿ ಸಮಗ್ರತೆ (News Integrity in AI Assistants) ವರದಿ ಕಾರ್ಯನಿರ್ವಹಿಸಿದೆ. ಜೂನ್ 2025ರಲ್ಲಿ ಪ್ರಕಟವಾದ ಈ ಅಧ್ಯಯನವು, ಭೌಗೋಳಿಕ ಸ್ಥಳ, ಭಾಷೆ ಅಥವಾ ವೇದಿಕೆಯ ವ್ಯತ್ಯಾಸವಿಲ್ಲದೆ, ಕೃತಕ ಬುದ್ಧಿಮತ್ತೆ (AI) ಸಾಧನಗಳು ವಿಶ್ವಾಸಾರ್ಹ ಮಾಧ್ಯಮ ಮೂಲಗಳಿಂದ ಬಂದ ಸುದ್ದಿಗಳನ್ನು ವ್ಯವಸ್ಥಿತವಾಗಿ ಬದಲಾಯಿಸುತ್ತಿರುವುದು, ಸಂದರ್ಭವಿಲ್ಲದೆ ನೀಡುತ್ತಿರುವುದು ಅಥವಾ ದುರುಪಯೋಗ ಮಾಡುತ್ತಿರುವುದನ್ನು ತೋರಿಸಿದೆ.

ಕೃತಕ ಬುದ್ಧಿಮತ್ತೆ (AI) ಸಾಧನಗಳು ಇನ್ನೂ ವಿಶ್ವಾಸಾರ್ಹ ಸುದ್ದಿಯ ಮೂಲಗಳಲ್ಲ

“ಕೃತಕ ಬುದ್ಧಿಮತ್ತೆಗೆ (AI)  ಸಾಮರ್ಥ್ಯ ಮತ್ತು ಸಾಧ್ಯತೆಗಳಿದ್ದರೂ ಸಹ, ಅದು ಇನ್ನೂ ಸುದ್ದಿಗಳು ಮತ್ತು ಮಾಹಿತಿಗಾಗಿ ವಿಶ್ವಾಸಾರ್ಹ ಮೂಲವಾಗಿಲ್ಲ – ಮತ್ತು ಕೃತಕ ಬುದ್ಧಿಮತ್ತೆ (AI) ಉದ್ಯಮ ಇದನ್ನು ಆದ್ಯತೆಯಾಗಿ ಪರಿಗಣಿಸುತ್ತಿಲ್ಲ,” ಎಂದು EBU ನ್ಯೂಸ್ ನಿರ್ದೇಶಕಿ ಲಿಜ್ ಕಾರ್ಬಿನ್ ಹೇಳಿದ್ದಾರೆ. ಆದ್ದರಿಂದಲೇ “Facts In, Facts Out” ಅಭಿಯಾನವು ಮೂಲ ಪಾರದರ್ಶಕತೆಗೆ ತಕ್ಷಣದ ಗಮನವನ್ನು ಕೋರುತ್ತಿದೆ. ಇಲ್ಲಿ ಪತ್ರಿಕೋದ್ಯಮದ ವಿಶ್ವಾಸಾರ್ಹತೆಯೇ ಪಣವಾಗಿರುವುದಾಗಿ ಅಭಿಯಾನ ತಿಳಿಸುತ್ತದೆ.

WAN-IFRA ಸಿಇಒ ವಿನ್ಸೆಂಟ್ ಪೈಗ್ರೆನ್ : “ಕೃತಕ ಬುದ್ಧಿಮತ್ತೆ (AI) ಸಹಾಯಕಗಳು ವಿಶ್ವಾಸಾರ್ಹ ಸುದ್ದಿ ಸಂಸ್ಥೆಗಳು ಪ್ರಕಟಿಸಿದ ಮಾಹಿತಿಯನ್ನು ಒಳಗೆ ತೆಗೆದುಕೊಂಡರೆ, ಹೊರಬರುವುದೂ ಅದೇ ಸತ್ಯವಾಗಿರಬೇಕು. ಆದರೆ ಇಂದಿನ ಸ್ಥಿತಿ ಹಾಗಿಲ್ಲ.”

ಅಭಿಯಾನದ ಪ್ರಚಾರಕರು, ಹೆಚ್ಚುತ್ತಿರುವ ಸಂಖ್ಯೆಯ ಜನರು ಕೃತಕ ಬುದ್ಧಿಮತ್ತೆ (AI) ವೇದಿಕೆಗಳನ್ನು ಸುದ್ದಿಯನ್ನು ಪಡೆಯುವ ಮಾರ್ಗವಾಗಿ ಬಳಸುತ್ತಿರುವುದನ್ನು ಒತ್ತಿ ಹೇಳಿದ್ದಾರೆ. ಈ ಸಾಧನಗಳು ಮಾಹಿತಿಯನ್ನು ವಕ್ರಗೊಳಿಸಿದಾಗ, ಬದಲಾಯಿಸಿದಾಗ ಅಥವಾ ಸುಳ್ಳುಮಾಡಿದಾಗ, ಇದು ಪ್ರಜಾಸತ್ತಾತ್ಮಕ ವ್ಯವಸ್ಥೆಗೆ ಅಗತ್ಯವಾದ ಮಾಧ್ಯಮಗಳ ಮೇಲಿನ ನಂಬಿಕೆಯನ್ನು ಗಂಭೀರವಾಗಿ ಕುಗ್ಗಿಸುತ್ತದೆ.   ವಿಶೇಷವಾಗಿ ಭವಿಷ್ಯದಲ್ಲಿ, ಯುವಜನರಲ್ಲಿ ಕೃತಕ ಬುದ್ಧಿಮತ್ತೆ (AI) ಮೂಲಕ ಮಾಹಿತಿ ಪಡೆಯುವ ಪ್ರಮಾಣ ಇನ್ನಷ್ಟು ಹೆಚ್ಚಾಗುವ ನಿರೀಕ್ಷೆಯಿರುವ ಹಿನ್ನೆಲೆಯಲ್ಲಿ ಈ ಸಮಸ್ಯೆಯನ್ನು ತಕ್ಷಣವೇ ಪರಿಹರಿಸಬೇಕೆಂದು ಅಭಿಯಾನ ಒತ್ತಾಯಿಸುತ್ತದೆ.

ಕೃತಕ ಬುದ್ಧಿಮತ್ತೆ (AI)ಯಲ್ಲಿ ಮಾಹಿತಿಯ ಪಾರದರ್ಶಕತೆಗೆ ಐದು ತತ್ವಗಳು

“Facts In, Facts Out” ಅಭಿಯಾನವು News Integrity in the Age of AI ಎಂಬ ವಿಶಾಲ ಉಪಕ್ರಮದ ಭಾಗವಾಗಿದೆ. ಇದರಲ್ಲಿ ಕೃತಕ ಬುದ್ಧಿಮತ್ತೆ (AI) ಕಂಪನಿಗಳು ಪಾಲಿಸಬೇಕಾದ ಐದು ಮೂಲ ತತ್ವಗಳನ್ನು ನಿರ್ದಿಷ್ಟಪಡಿಸಲಾಗಿದೆ:

1. ಒಪ್ಪಿಗೆ ಇಲ್ಲದೆ – ವಿಷಯ ಇಲ್ಲ

ಮೂಲ ಸೃಷ್ಟಿಕರ್ತರ ಅನುಮತಿ ಇಲ್ಲದೆ ಸುದ್ದಿ ವಿಷಯವನ್ನು AI ಸಾಧನಗಳಲ್ಲಿ ಬಳಸಬಾರದು.

2. ನ್ಯಾಯಯುತ ಮಾನ್ಯತೆ

ವಿಶ್ವಾಸಾರ್ಹ ಸುದ್ದಿ ವಿಷಯವನ್ನು ಮೂರನೇ ಪಕ್ಷಗಳು ಬಳಸಿದಾಗ ಅದರ ಮೌಲ್ಯವನ್ನು ಗುರುತಿಸಬೇಕು.

3. ನಿಖರತೆ, ಉಲ್ಲೇಖ, ಮೂಲ ಗುರುತು

AI ಸೃಷ್ಟಿಸಿದ ಯಾವುದೇ ವಿಷಯದ ಹಿಂದೆ ಇರುವ ಮೂಲ ಸ್ಪಷ್ಟವಾಗಿರಬೇಕು ಮತ್ತು ಪರಿಶೀಲಿಸಬಹುದಾಗಿರಬೇಕು.

4. ಬಹುಮುಖತೆ ಮತ್ತು ವೈವಿಧ್ಯತೆ

AI ವ್ಯವಸ್ಥೆಗಳು ಜಾಗತಿಕ ಸುದ್ದಿಯ ಪರಿಸರದ ವೈವಿಧ್ಯತೆಯನ್ನು ಪ್ರತಿಬಿಂಬಿಸಬೇಕು.

5. ಪಾರದರ್ಶಕತೆ ಮತ್ತು ಸಂವಾದ

ತಂತ್ರಜ್ಞಾನ ಕಂಪನಿಗಳು ಮಾಧ್ಯಮ ಸಂಸ್ಥೆಗಳೊಂದಿಗೆ ತೆರೆಯಾದ ಸಂವಾದ ನಡೆಸಿ, ಸುರಕ್ಷತೆ, ನಿಖರತೆ ಮತ್ತು ಪಾರದರ್ಶಕತೆಯ ಸಾಮಾನ್ಯ ಮಾನದಂಡಗಳನ್ನು ರೂಪಿಸಬೇಕು.

ಈ ತತ್ವಗಳ ಆಧಾರದ ಮೇಲೆ, ಸತ್ಯ ಮತ್ತು ವಿಶ್ವಾಸಾರ್ಹ ಮಾಹಿತಿಯನ್ನು ಖಚಿತಪಡಿಸುವ ದಿಕ್ಕಿನಲ್ಲಿ ಒಟ್ಟಾಗಿ ಕೆಲಸ ಮಾಡುವುದೇ ಗುರಿಯಾಗಿದೆ.

EBU ಯ ಲಿಜ್ ಕಾರ್ಬಿನ್ ಅವರ ಮಾತಿನಲ್ಲಿ: “ಇದು ಯಾರನ್ನಾದರೂ ಆರೋಪಿಸುವ ವಿಷಯವಲ್ಲ. ನಾವು ತಂತ್ರಜ್ಞಾನ ಕಂಪನಿಗಳನ್ನು ಅರ್ಥಪೂರ್ಣ ಸಂವಾದಕ್ಕೆ ಆಹ್ವಾನಿಸುತ್ತಿದ್ದೇವೆ. ಜನರು ಯಾವ ತಂತ್ರಜ್ಞಾನ ಬಳಸಿದರೂ, ಗುಣಮಟ್ಟದ ಮತ್ತು ವಿಶ್ವಾಸಾರ್ಹ ಪತ್ರಿಕೋದ್ಯಮಕ್ಕೆ ಪ್ರವೇಶವನ್ನು ಬಯಸುತ್ತಾರೆ.”

09 ಜನವರಿ 2026, 20:53