ಕ್ಯೂಬಾ: ಪವಿತ್ರ ವಾರದ ಅಂಗವಾಗಿ 2,010 ಕೈದಿಗಳಿಗೆ ಕ್ಷಮಾದಾನ
ವ್ಯಾಟಿಕನ್ ವರದಿ
ಕ್ಯೂಬಾ ಸರ್ಕಾರವು ಪುನರುತ್ಥಾನಹಬ್ಬದ ಮುನ್ನ 2,010 ಬಂಧಿತರನ್ನು ಬಿಡುಗಡೆ ಮಾಡಿರುವುದಾಗಿ ತಿಳಿಸಿದೆ. ಇದಕ್ಕಿಂತ ಮುನ್ನ, ಒಂದು ತಿಂಗಳಿಗೂ ಕಡಿಮೆ ಅವಧಿಯಲ್ಲಿ 14 ಕೈದಿಗಳನ್ನು ಬಿಡುಗಡೆ ಮಾಡಲಾಗಿತ್ತು.
“ಪವಿತ್ರ ವಾರದ ಧಾರ್ಮಿಕ ಆಚರಣೆಗಳ ಸಂದರ್ಭದಲ್ಲಿಯೇ ಈ ಕ್ರಮ ಕೈಗೊಳ್ಳಲಾಗಿದ್ದು, ಇದು ಮಾನವೀಯ ಮತ್ತು ಸ್ವಾಯತ್ತತೆಯ ಸಂಕೇತವಾಗಿದೆ,” ಎಂದು ಸರ್ಕಾರವು ಕ್ಯೂಬಾ ದೂರದರ್ಶನದ ಮೂಲಕ ಹೊರಡಿಸಿದ ಅಧಿಕೃತ ಪ್ರಕಟಣೆಯಲ್ಲಿ ತಿಳಿಸಿದೆ.
ಕ್ಷಮಾದಾನ ಪಡೆದವರ ಪಟ್ಟಿ ಅಥವಾ ಈ ನಿರ್ಧಾರದ ನಿಖರ ಕಾರಣಗಳನ್ನು ಬಹಿರಂಗಪಡಿಸದಿದ್ದರೂ, ಬಿಡುಗಡೆಗೊಂಡವರು “ತಮ್ಮ ಶಿಕ್ಷೆಯ ಪ್ರಮುಖ ಭಾಗವನ್ನು ಅನುಭವಿಸಿದ್ದು” ಮತ್ತು “ಕಾರಾಗೃಹದಲ್ಲಿ ಉತ್ತಮ ವರ್ತನೆ ತೋರಿದ್ದಾರೆ” ಎಂದು ಪ್ರಕಟಣೆ ವಿವರಿಸಿದೆ.
ಈ ಗುಂಪಿನಲ್ಲಿ “ಯುವಜನರು, ಮಹಿಳೆಯರು, 60 ವರ್ಷ ಮೇಲ್ಪಟ್ಟವರು, ವಿದೇಶಿ ನಾಗರಿಕರು ಹಾಗೂ ವಿದೇಶದಲ್ಲಿ ವಾಸಿಸುವ ಕ್ಯೂಬಾ ಪ್ರಜೆಗಳು” ಸೇರಿದ್ದಾರೆ ಎಂದು ಹೇಳಲಾಗಿದೆ.
ವಾಷಿಂಗ್ಟನ್‌ನ ಒತ್ತಡ—ಇಂಧನ ನಿರ್ಬಂಧಗಳಿಗೂ ಸಂಬಂಧಿಸಿದೆ—ಇದರ ನಡುವೆಯೂ, ಈ ಕ್ಷಮಾದಾನ ಕ್ರಮವು 2011ರಿಂದ ನೀಡಲಾಗುತ್ತಿರುವ “ಐದನೇ” ಕ್ಷಮಾದಾನವಾಗಿದೆ ಎಂದು ಕ್ಯೂಬಾ ಸರ್ಕಾರ ಸ್ಪಷ್ಟಪಡಿಸಿದೆ.ಸುಮಾರು 11,000 ಜನರು ಇಂತಹ ಕ್ರಮಗಳಿಂದ ಲಾಭ ಪಡೆದಿದ್ದಾರೆ ಎಂದು ವರದಿಯಾಗಿದೆ.
ನಮ್ಮ ಲೇಖನವನ್ನು ಓದಿದ್ದಕ್ಕಾಗಿ ಧನ್ಯವಾದಗಳು. ನಮ್ಮ ದೈನಂದಿನ ಸುದ್ದಿಪತ್ರಕ್ಕೆ ಚಂದಾದಾರರಾಗುವ ಮೂಲಕ ನೀವು ಸದಾ ಇತ್ತೀಚಿನ ಮಾಹಿತಿಯನ್ನು ಪಡೆದುಕೊಳ್ಳಬಹುದು.(ಇಲ್ಲಿ ಕ್ಲಿಕ್ ಮಾಡಿ).