ಹುಡುಕಿ

INDIA-TIBET-CHINA-QUAKE INDIA-TIBET-CHINA-QUAKE  (AFP or licensors)

ಟಿಬೆಟ್ ಭೂಕಂಪ ಸಂತ್ರಸ್ತರಿಗೆ ನೆರವಿನ ಹಸ್ತ

ಮಂಗಳವಾರ ಸಂಭವಿಸಿದ ಭೀಕರ ಭೂಕಂಪದ ನಂತರ ಟಿಬೆಟ್‌ನಲ್ಲಿ ತಮ್ಮ ಮನೆಗಳಿಂದ ಸ್ಥಳಾಂತರಗೊಂಡ 50,000 ಜನರಿಗೆ ಸಹಾಯ ಮಾಡಲು ಚೀನಾದಾದ್ಯಂತದ ಕಥೊಲಿಕ ಸಮುದಾಯಗಳು ದೇಣಿಗೆ ಸಂಗ್ರಹಿಸಲು ಒಟ್ಟುಗೂಡುತ್ತಿವೆ.


ಕೀಲ್ಸ್ ಗುಸ್ಸಿ

100 ವರ್ಷಗಳಲ್ಲಿ ಹಿಮಾಲಯ ಪ್ರದೇಶವನ್ನು ಅಪ್ಪಳಿಸಿದ ಅತ್ಯಂತ ಭೀಕರ ಭೂಕಂಪಗಳಲ್ಲಿ ಇದೂ ಒಂದು ಎಂದು ಈಗ ಕರೆಯಲ್ಪಡುವ ಚೀನೀ ಭೂಕಂಪ ಜಾಲಗಳ ಕೇಂದ್ರವು ಜನವರಿ 7 ರಂದು ಚೀನಾದ ಟಿಬೆಟ್ ಪ್ರದೇಶದ ಡಿಂಗ್ರಿ ಕೌಂಟಿ ಮತ್ತು ಶಿಗಾಟ್ಸೆ ಪ್ರದೇಶವನ್ನು ಅಪ್ಪಳಿಸಿದ ಭೂಕಂಪವು 6.8 (ರಿಕ್ಟರ್ ಮಾಪಕದಲ್ಲಿ 7.1) ತೀವ್ರತೆಯನ್ನು ಹೊಂದಿತ್ತು ಎಂದು ದಾಖಲಿಸಿದೆ.

ಇದು ವಿನಾಶಕಾರಿ ಪರಿಣಾಮವನ್ನು ಬೀರಿದೆ. 120ಕ್ಕೂ ಹೆಚ್ಚು ಜನರು ಸಾವನ್ನಪ್ಪಿದರು, 330ಕ್ಕೂ ಹೆಚ್ಚು ಜನರು ಗಾಯಗೊಂಡರು, ಸುಮಾರು 50,000 ಜನರು ಸ್ಥಳಾಂತರಗೊಂಡರು ಮತ್ತು ಹತ್ತಾರು ಸಾವಿರ ಮನೆಗಳು ನಾಶವಾಗಿವೆ.

ರಕ್ಷಣಾ ಕ್ರಿಯೆಗಳು
ಎಲ್ಲೆಡೆಯಿಂದ ಒಗ್ಗಟ್ಟು ಮತ್ತು ಕಾಳಜಿಯ ಅಭಿವ್ಯಕ್ತಿಗಳು ಬಂದಿವೆ. ಜನವರಿ 9 ರಂದು ಪವಿತ್ರ ನಾಡಿನ ಮಾನ್ಯತೆ ಪಡೆದ ರಾಜತಾಂತ್ರಿಕ ದಳವನ್ನುದ್ದೇಶಿಸಿ ಮಾಡಿದ ಭಾಷಣದಲ್ಲಿ, ವಿಶ್ವಗುರು ಫ್ರಾನ್ಸಿಸ್ ರವರು ಸಂತ್ರಸ್ತರಿಗೆ ತಮ್ಮ ಸಂತಾಪ ಮತ್ತು ಪ್ರಾರ್ಥನೆಗಳನ್ನು ವ್ಯಕ್ತಪಡಿಸಿದರು, ಏಕೆಂದರೆ 400ಕ್ಕೂ ಹೆಚ್ಚು ಜನರು ಇನ್ನೂ ಅವಶೇಷಗಳ ಅಡಿಯಲ್ಲಿ ಸಿಲುಕಿಕೊಂಡಿದ್ದಾರೆ ಎಂದು ಚೀನಾದ ಅಧಿಕಾರಿಗಳು ತಿಳಿಸಿದ್ದಾರೆ.

ಭಾರತ ಮತ್ತು ನೇಪಾಳದಲ್ಲಿ ದೇಶಭ್ರಷ್ಟರಾಗಿ ವಾಸಿಸುತ್ತಿರುವ ನೂರಾರು ಟಿಬೆಟ್‌ನ ನಾಗರಿಕರು ಪ್ರಾಣ ಕಳೆದುಕೊಂಡವರಿಗೆ ಮೇಣದಬತ್ತಿಯ ಬೆಳಕಿನಲ್ಲಿ ಜಾಗರಣೆ ಮಾಡುವ ಮೂಲಕ ತಮ್ಮ ಬೆಂಬಲವನ್ನು ವ್ಯಕ್ತಪಡಿಸಿದರು.

ಟಿಬೆಟ್‌ನಲ್ಲಿ, ಚೀನಾದ ಕಥೊಲಿಕ ಸಮುದಾಯಗಳು ಅಗತ್ಯವಿರುವವರಿಗೆ ನೆರವು ನೀಡಲು ಒಗ್ಗಟ್ಟಿನ ಉಪಕ್ರಮಗಳನ್ನು ಸ್ಥಾಪಿಸಿವೆ.

ಬೀಜಿಂಗ್ ಧರ್ಮಕ್ಷೇತ್ರವು ಒಂದು ಮನವಿಯನ್ನು ಹೊರಡಿಸಿತು, ಅದು ಜೂಬಿಲಿ ವರ್ಷ ಮತ್ತು ಕ್ರಿಸ್‌ಮಸ್ ಕಾಲದ ಮಧ್ಯದಲ್ಲಿ, "ನಾವು ಪ್ರಭುವಿನ ಬೋಧನೆಯನ್ನು ನೆನಪಿಸಿಕೊಳ್ಳುವ ಅವಕಾಶವನ್ನು ಬಳಸಿಕೊಳ್ಳಬಹುದು: " ಈ ನನ್ನ ಸೋದರರಲ್ಲಿ ಒಬ್ಬನಿಗೆ ಅವನೆಷ್ಟೇ ಕನಿಷ್ಟನಾಗಿರಲಿ, ನೀವು ಹೀಗೆ ಮಾಡಿದಾಗಲೆಲ್ಲಾ ಅದನ್ನು ನನಗೆ ಮಾಡಿದಿರಿ" ಎಂಬುದನ್ನು ಎತ್ತಿ ತೋರಿಸಿತು.

ಸೇವೆಯ ಕರೆ
ಬೀಜಿಂಗ್ ಧರ್ಮಕ್ಷೇತ್ರದಾದ್ಯಂತ, ಭೂಕಂಪದ ಸಂತ್ರಸ್ತರನ್ನು ಬೆಂಬಲಿಸಲು ದೇಣಿಗೆ ಕೇಳಲು ಎಲ್ಲಾ ಧರ್ಮಕೇಂದ್ರಗಳನ್ನು ಆಹ್ವಾನಿಸಲಾಯಿತು. ನಂತರ ಧರ್ಮಕ್ಷೇತ್ರದ ದಿವ್ಯ ಕರುಣೆ ಎಂಬ ದತ್ತಿ ಸಂಸ್ಥೆಯು ಹಣವನ್ನು ವಿತರಿಸಿತು.

ಇತ್ತೀಚೆಗೆ ಪ್ರಾರಂಭವಾದ ಭರವಸೆಯ ಜೂಬಿಲಿ ವರ್ಷದ ಬೆಳಕಿನಲ್ಲಿ, ಶಾಂಟೌ ಧರ್ಮಕ್ಷೇತ್ರ ವಿಶ್ವದಾದ್ಯಂತದ ಕಥೊಲಿಕ ಧರ್ಮಕ್ಷೇತ್ರದ ಸಮುದಾಯಗಳಿಗೆ ಸಹಾಯವನ್ನು ಒದಗಿಸಲು ಕಾಣಿಕೆಗಳನ್ನು ಸಂಗ್ರಹಿಸಲು ಮನವಿಯನ್ನು ಪ್ರಾರಂಭಿಸಿತು.

ಶಾಂಘೈ ನಗರ ಬೆಂಬಲದ ಪ್ರಯತ್ನಗಳನ್ನು ಸಂಯೋಜಿಸುವ ಸ್ಥಳೀಯ ಸಂಸ್ಥೆಗಳು, ಮೊದಲ ದೇಣಿಗೆಗಳಲ್ಲಿ ಶಾಂಘೈ ಧರ್ಮಕ್ಷೇತ್ರವು ನೀಡಿದ 500,000 ಯುವಾನ್ ಅಥವಾ 66,000 ಯುರೋಗಳ ಮೊತ್ತವನ್ನು ಒಳಗೊಂಡಿವೆ ಎಂದು ತೋರಿಸುವ ಡೇಟಾವನ್ನು ಬಿಡುಗಡೆ ಮಾಡಿದೆ.

10 ಜನವರಿ 2025, 12:40