ಸಿನೊಡಾಲಿಟಿ ಮತ್ತು ಆಫ್ರಿಕಾದ ಧರ್ಮಸಭೆ
ಮಾರ್ಥಾ ಮ್ವುಲಾ - ಲುಸಾಕಾ
ಧರ್ಮಾದ್ಯಕ್ಷರಾದ ನೊಂಗೊ-ಅಜಿಯಾಗ್ಬಿಯಾರವರು 2024ರ ಅಕ್ಟೋಬರ್ 2 ರಿಂದ 27 ರವರೆಗೆ ರೋಮ್‌ನಲ್ಲಿ "ಸಿನೊಡಲ್ ಧರ್ಮಸಭೆಗಾಗಿ: ಐಕ್ಯತೆ, ಭಾಗವಹಿಸುವಿಕೆ ಮತ್ತು ಧರ್ಮಪ್ರಚಾರ" ಎಂಬ ವಿಷಯದ ಮೇಲೆ ನಡೆದ ಸಿನೊಡಾಲಿಟಿ ಕುರಿತು ಸಿನೊಡ್‌ನ 16ನೇ ಸಾಮಾನ್ಯ ಸಭೆಯ ಎರಡನೇ ಅಧಿವೇಶನದಲ್ಲಿ ಭಾಗವಹಿಸಿದರು.
"ಕಳೆದ ಎರಡು ವರ್ಷಗಳಿಂದ, ಧರ್ಮಸಭೆಯ ಸಾರ್ವತ್ರಿಕತೆಯು, ಕ್ರಿಸ್ತರ ದೇಹವಾಗಿರುವ ಈ ಒಂದು ಧರ್ಮಸಭೆಯನ್ನು ಸಂಪೂರ್ಣವಾಗಿ ಹೊಸ ರೀತಿಯಲ್ಲಿ ಅನುಭವಿಸಲು ನನಗೆ ಸಹಾಯ ಮಾಡಿದೆ" ಎಂದು ಮಧ್ಯ ಆಫ್ರಿಕಾದ ಗಣರಾಜ್ಯದ ಧರ್ಮಾದ್ಯಕ್ಷರು, ಸಮ್ಮೇಳನದ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸುತ್ತಿರುವ ಧರ್ಮಾದ್ಯಕ್ಷರಾದ ನೊಂಗೊ-ಅಜಿಯಾಗ್ಬಿಯಾರವರು ಹೇಳಿದರು.
ಏಕತೆ ಮತ್ತು ಸಾಮರಸ್ಯ
ಧರ್ಮಾದ್ಯಕ್ಷರಾದ ನೊಂಗೊ-ಅಜಿಯಾಗ್ಬಿಯಾರವರ ಪ್ರಕಾರ, ಸಿನೊಡ್‌ನ ಪ್ರತಿಯೊಬ್ಬ ಸದಸ್ಯರು, ಅವರು ಎಲ್ಲಿಂದ ಬಂದವರಾಗಿದ್ದರೂ, ತಮ್ಮ ಕಳವಳಗಳನ್ನು ಹಂಚಿಕೊಳ್ಳಲು ಅವಕಾಶವನ್ನು ನೀಡಲಾಯಿತು.
ಅಂತೆಯೇ ಪ್ರತಿಯೊಬ್ಬರೂ ಸಾರ್ವತ್ರಿಕ ಧರ್ಮಸಭೆಯ ನವೀಕರಣದ ಬಯಕೆಗೆ ಮುಕ್ತವಾಗಿ ಕೊಡುಗೆ ನೀಡಬಹುದು ಎಂದು ಹೇಳಿದರು.
“ನಾವು ಹಂಚಿಕೊಂಡ ಕೆಲವು ವಿಷಯಗಳು ವಿಶ್ವದಾದ್ಯಂತದ ದೇವಜನರ ಮೇಲೆ ಬೀರಿತ್ತಿರುವ ಪರಿಣಾಮವನ್ನು ಎತ್ತಿ ತೋರಿಸುತ್ತದೆ. ಇತರ ಪ್ರದೇಶಗಳಿಂದ ನಾವು ಆಲಿಸಿದ ಕಳವಳಗಳಿಗೆ ಹೋಲಿಸಿದಿರೆ, ಇದು ನಿಜ” ಎಂದು ಅವರು ಹೇಳಿದರು.
ಯಾರೂ ಹಿಂದುಳಿಯದಂತೆ ಧರ್ಮಸಭೆಯನ್ನು ಮುನ್ನಡೆಸಲು ಕಾರ್ಡಿನಲ್ಸ್, ಧರ್ಮಾಧ್ಯಕ್ಷರುಗಳು, ಗುರುಗಳು, ಧಾರ್ಮಿಕ ಪುರುಷರು ಮತ್ತು ಮಹಿಳೆಯರು, ಶ್ರೀ ಸಾಮಾನ್ಯರು ಮತ್ತು ಯುವಕರು ಸಾಮಾನ್ಯ ಸಭೆಯಲ್ಲಿ ಒಂದಾಗಿ ಕೆಲಸ ಮಾಡುವುದನ್ನು ನೋಡುವುದು ಒಂದು ಅನನ್ಯ ಅನುಭವ ಎಂದು ಧರ್ಮಾಧ್ಯಕ್ಷರಾದ ನೊಂಗೊ-ಅಜಿಯಾಗ್ಬಿಯಾರವರು ಹೇಳಿದರು.
ಧರ್ಮಾಧ್ಯಕ್ಷರಾದ ನೊಂಗೊ-ಅಜಿಯಾಗ್ಬಿಯಾರವರ ಅಭಿಪ್ರಾಯದಲ್ಲಿ, ಸಿನೊಡಲ್ ಪ್ರಕ್ರಿಯೆಯು ಧರ್ಮಸಭೆಗೆ ಮತ್ತು ವಿಶ್ವಕ್ಕೆ, ಪ್ರಪಂಚದಾದ್ಯಂತ ಶಾಂತಿ, ಏಕತೆ ಮತ್ತು ಸಮನ್ವಯವನ್ನು ಉತ್ತೇಜಿಸಲು, ಕುಳಿತು ಪರಸ್ಪರ ಆಲಿಸುವುದಕ್ಕಿಂತ ಬೇರೆ ಯಾವುದೇ ಪರಿಹಾರವಿಲ್ಲ ಎಂದು ಕಲಿಸಿದೆ.
ಆಫ್ರಿಕಾದಲ್ಲಿ ಧರ್ಮಸಭೆಯ ಸವಾಲುಗಳು
ಧರ್ಮಾಧ್ಯಕ್ಷರಾದ ನೊಂಗೊ-ಅಜಿಯಾಗ್ಬಿಯಾರವರು ಜಾಗತಿಕ ವೇದಿಕೆಗೆ ತಂದ ಆಫ್ರಿಕಾದ ಧರ್ಮಸಭೆಯ ಕೆಲವು ಗುರುಗಳ ಸವಾಲುಗಳನ್ನು ಸಹ ಉದ್ದೇಶಿಸಿ ಮಾತನಾಡಿದರು.
ಚರ್ಚಿಸಲಾದ ಇತರ ಸವಾಲುಗಳು, ಸಾಂಸ್ಕೃತಿಕ ನಂಬಿಕೆಗಳು ಮತ್ತು ಒಳಗೊಳ್ಳುವಿಕೆಯ ಬಗ್ಗೆ ಜಾಗತಿಕ ಚರ್ಚೆಗಳ ನಡುವಿನ ಉದ್ವಿಗ್ನತೆಗೆ ಸಂಬಂಧಿಸಿವೆ ಎಂದು ಅವರು ಹೇಳಿದರು. "ಊಹಾಪೋಹಗಳು ಮತ್ತು ಕೆಲವು ತಪ್ಪು ತಿಳುವಳಿಕೆಗಳಿಗೆ ವಿರುದ್ಧವಾಗಿ, ಪರ್ಯಾಯ ಜೀವನಶೈಲಿಯನ್ನು ಚರ್ಚಿಸಲು ಸಿನೊಡ್ ಅನ್ನು ಕರೆಯಲಾಗಿಲ್ಲ" ಎಂದು ಅವರು ಸ್ಪಷ್ಟಪಡಿಸಿದರು.
ಸಿನೊಡ್ ಸಭಾಂಗಣದಲ್ಲಿರುವ ಎಲ್ಲರೂ ಒಪ್ಪಿಕೊಂಡ ವಿಷಯವೆಂದರೆ ಯಾವುದೇ ಕಾರಣಕ್ಕೂ ಪಾಲನಾ ಆರೈಕೆಯನ್ನು ನಿರ್ಲಕ್ಷಿಸಬಾರದು.
"LGBTQ+ ಅಥವಾ ಬಹುಪತ್ನಿತ್ವದ ಜೀವನ ಜೀವಿಸುವವರು ಸೇರಿದಂತೆ ಪಾಲನಾ ಆರೈಕೆಯ ಅಗತ್ಯವಿರುವ ಎಲ್ಲರೂ ಪಾಲನಾ ತಿಳುವಳಿಕೆ ಪಡೆಯಲೆಬೇಕು" ಎಂದು ಧರ್ಮಾಧ್ಯಕ್ಷರಾದ ನೊಂಗೊ-ಅಜಿಯಾಗ್ಬಿಯಾರವರು ಹೇಳಿದರು.
SECAM ನ ಮಾರ್ಗದರ್ಶನದಲ್ಲಿ ಒಂದೇ ಧ್ವನಿಯಲ್ಲಿ ಮಾತನಾಡಿದ ಆಫ್ರಿಕಾದ ಧರ್ಮಸಭೆಯನ್ನು ಅವರು ಶ್ಲಾಘಿಸಿದರು ಮತ್ತು ಜುಲೈ 2025ರಲ್ಲಿ ಕೀನ್ಯಾದ ನಬುಲಿಯಲ್ಲಿ ನಡೆಯಲಿರುವ SECAM ನ ಸಾಮಾನ್ಯ ಸಭೆಯಲ್ಲಿ ಸವಾಲಿನ ಪಾಲನಾ ಕಾಳಜಿಯ ವಿಷಯಗಳನ್ನು ಮತ್ತಷ್ಟು ಚರ್ಚಿಸಲಾಗುವುದು ಎಂದು ಹೇಳಿದರು.
ಆಫ್ರಿಕಾ ಮತ್ತು ಮಡಗಾಸ್ಕರ್‌ನ ಧರ್ಮಾಧ್ಯಕ್ಷೀಯ ಸಮ್ಮೇಳನಗಳ ವಿಚಾರ ಸಂಕಿರಣವಾದ SECAM, ಆಫ್ರಿಕಾ ಖಂಡದ ಧರ್ಮಾಧ್ಯಕ್ಷರುಗಳನ್ನು ಒಟ್ಟುಗೂಡಿಸುತ್ತದೆ.
ಧರ್ಮಸಭೇಯಲ್ಲಿ ಮಹಿಳೆಯರ ಪಾತ್ರಕ್ಕೆ ಆದ್ಯತೆ ನೀಡುವುದು.
ಸಿನೊಡ್‌ನಲ್ಲಿ ಚರ್ಚಿಸಲಾದ ಇತರ ವಿಷಯಗಳೆಂದರೆ "ಧರ್ಮಸಭೆಯಲ್ಲಿ ಮಹಿಳೆಯರು ಸಂಪೂರ್ಣವಾಗಿ ಭಾಗವಹಿಸಲು ಹೇಗೆ ಸಹಾಯ ಮಾಡಬಹುದು" ಎಂಬುದು ಚರ್ಚೆಯ ಮುಖ್ಯ ಅಂಶವಾಗಿದೆ ಎಂದು ಧರ್ಮಾಧ್ಯಕ್ಷರಾದ ನೊಂಗೊ-ಅಜಿಯಾಗ್ಬಿಯಾರವರು ಹೇಳಿದರು. "ಇಡೀ ಧರ್ಮಸಭೆಯು ಎದುರು ನೋಡುತ್ತಿರುವ ಮತ್ತು ಪ್ರೋತ್ಸಾಹಿಸುವ ವಿಷಯವು ಇದಾಗಿದೆ."