ಇಂಡೋನೇಷ್ಯಾದಲ್ಲಿ ಹೊಸದಾಗಿ ಉದ್ಘಾಟನೆಗೊಂಡ ಧರ್ಮಸಭೆಯಲ್ಲಿ ವಿಶ್ವಾಸ ಮತ್ತು ವಾಸ್ತುಶಿಲ್ಪದ ಮಹತ್ವ
ಮಥಿಯಾಸ್ ಹರಿಯಾಡಿ, ಲಿಕಾಸ್ ಸುದ್ಧಿ
ಸಪಕ್ ಬಯೋಬಯೋ, ಸಂಗಲ್ಲಾ, ತಾನಾ ಟೋರಾಜದ ಪ್ರಾದೇಶಿಕ ಸ್ಥಳದಲ್ಲಿ ನೆಲೆಗೊಂಡಿರುವ ಸ್ಯಾಂಕ್ಟಾ ಫ್ಯಾಮಿಲಿಯಾ ದೇವಾಲಯವು, ಸಮುದಾಯದ ಜನರನ್ನು ದೇವಾಲಯದ ವಿನ್ಯಾಸ ಮತ್ತು ಮಹತ್ವದತ್ತ ಗಮನ ಸೆಳೆದಿದೆ.
ದೇವಾಲಯವು ನೈಸರ್ಗಿಕ ಭೂದೃಶ್ಯದೊಂದಿಗೆ ಅನನ್ಯ ಏಕೀಕರಣವನ್ನು ಹೊಂದಿದೆ.
ದೇವಾಲಯದ ಒಳಗೆ ಕ್ರಿಸ್ತರ ಶರೀರ ಮತ್ತು ರಕ್ತದ ಚಿತ್ರಣವು ಯೇಸುವಿನ ಮರಣದ ಹಿಂದಿನ ವಿಷಯಗಳನ್ನು ಪ್ರಸ್ತುತಪಡಿಸುತ್ತದೆ. ಸಪಕ್ ಬಯೋಬಯೋದಲ್ಲಿನ, ಪವಿತ್ರ ಕುಟುಂಬ ಯಾತ್ರಾ ಕೇಂದ್ರದ (ಹೋಲಿ ಫ್ಯಾಮಿಲಿ ಪಿಲ್ಗ್ರಿಮ್ ಸೆಂಟರ್‌ನ) ಸಿ.ಇ.ಒ ಮೈಕೆಲ್ ಆಂಡಿನ್ ರವರು ಈ ವಿನ್ಯಾಸದ ಕುರಿತು ವಿವರಿಸಿದರು.
"ಯೇಸುವು ಯಾತನೆಯಲ್ಲಿದ್ದಾಗ ಮತ್ತು ಭಾವನಾತ್ಮಕವಾಗಿ ತನ್ನ ಪಿತನ ಬಳಿ “ಓ ಪಿತನೇ, ನಿಮಗೆ ಇಷ್ಟವಾದರೆ ಈ ಕಷ್ಟದ ಕೊಡವನ್ನು ನನ್ನಿಂದ ತೊಲಗಿಸಿರಿ. ಆದರೂ ನನ್ನ ಚಿತ್ತವಲ್ಲ, ನಿಮ್ಮ ಚಿತ್ತವೇ ನೆರವೇರಲಿ,”ಎಂದರು ಮತ್ತು ತನ್ನ ತಾಯಿಯಿಂದ ನೈತಿಕತೆಯ ಬೆಂಬಲವನ್ನು ಕೇಳಿಕೊಳ್ಳುವ ಕ್ರಿಸ್ತರ ಶರೀರ ಮತ್ತು ರಕ್ತದ ನಿರ್ಣಾಯಕ ಪರಿಸ್ಥಿತಿಯನ್ನು ಚಿತ್ರಿಸುತ್ತದೆ" ಎಂದು ಆಂಡಿನ್ ರವರು ಡಿಸೆಂಬರ್ 29, 2024ರಂದು ನಡೆದ ದಿವ್ಯಬಲಿಪೂಜೆಯ ನಂತರ ಲಿಕಾಸ್ ಸುದ್ಧಿಗೆ ತಿಳಿಸಿದರು.
ಜಕಾರ್ತದ ಮಹಾಧರ್ಮಾಧ್ಯಕ್ಷರಾದ ಕಾರ್ಡಿನಲ್ ಇಗ್ನೇಷಿಯಸ್ ಸುಹಾರ್ಯೊರವರು, ಮಹಾಧರ್ಮಾಧ್ಯಕ್ಷರಾದ ಜಾನ್ ಲಿಕು ಅದಾ', ಮಕಾಸ್ಸರ್ನ ಮಹಾಧರ್ಮಾಧ್ಯಕ್ಷರಾದ ಪರಮಪೂಜ್ಯರು; ಮತ್ತು ಮಹಾಧರ್ಮಾಧ್ಯಕ್ಷರಾದ ಫ್ರಾನ್ಸ್ ನಿಪಾರವರು ದೈವಾರಾಧನಾ ವಿಧಿಯ ಸಮಾರಂಭವನ್ನು ಆಚರಿಸಿದರು.
ಮಹಾಧರ್ಮಾಧ್ಯಕ್ಷರಾದ ಅದಾರವರು ತಮ್ಮ ಆರಂಭಿಕ ವರ್ಷಗಳನ್ನು ದೇವಾಲಯದ ಸೈಟ್‌ನ ಬಳಿ ಕಳೆದಿದ್ದರಿಂದ ಈ ಕಾರ್ಯಕ್ರಮದ ಮಹತ್ವವನ್ನು ಎತ್ತಿ ತೋರಿಸಿದರು.
ಈ ದೇವಾಲಯವನ್ನು ವಾಸ್ತುಶಿಲ್ಪಿಯಾದ ಪೂರ್ವ ಜಾವಾದ ಸುರಬಯಾದ ಆಂಡ್ರೆ ಹಡಿಸುಬಿಯಾಕ್ಟೊರವರು ವಿನ್ಯಾಸಗೊಳಿಸಿದ್ದಾರೆ.
ಈ ದೇವಾಲಯದ ಯೋಜನಾ ನಿರ್ವಹಣೆಯನ್ನು ಮಕಾಸ್ಸರ್‌ನಿಂದ ರಾಬಿ ಎಲ್. ಪಂಗ್ಲೆವಾಯ್ ರವರು ನಿರ್ವಹಿಸಿದರು. "ಈ ಯೋಜನೆಯನ್ನು ಮೇಲ್ವಿಚಾರಣೆ ಮಾಡಲು ಈ ಪುಣ್ಯಕ್ಷೇತ್ರದ ಆಡಳಿತದವರು ನನ್ನ ಮೇಲೆ ವಿಶ್ವಾಸವನ್ನಿಟ್ಟು ನನಗೆ ಕರೆ ನೀಡಿರುವುದು, ನನಗೆ ಸಂತೋಷವಾಗುತ್ತಿದೆ" ಎಂದು ಪಾಂಗ್ಲೆವೈರವರು ಲಿಕಾಸ್ ಸುದ್ಧಿಗೆ ತಿಳಿಸಿದರು.
ನ್ಯಾಷನಲ್ ಕ್ಯಾಥೋಲಿಕ್ ಪ್ರೊಫೆಷನಲ್ಸ್ ಮತ್ತು ಬಿಸಿನೆಸ್ ಪೀಪಲ್ (ಪುಕಟ್ನಾಸ್)ನ ಅಧ್ಯಕ್ಷ ಜೂಲಿಯಸ್ ಜುನಸ್ ಟೆಡ್ಜಾರವರು, ಇತರ ವ್ಯಕ್ತಿಗಳು ಮತ್ತು ಗುಂಪುಗಳು ಈ ದೇವಾಲಯವು ಪೂರ್ಣಗೊಳ್ಳಲು ತಮ್ಮ ಬೆಂಬಲವನ್ನು ನೀಡಿದ್ದಾರೆ.
ದೇವಾಲಯದ ಸಾಮಗ್ರಿಗಳನ್ನು ಪೂರೈಸಿದ ಸುರಬಯಾದ ವಿಲ್ಲೆಮ್‌ನಂತಹ ಕೊಡುಗೆದಾರರಿಂದ ಹೆಚ್ಚುವರಿ ನೆರವು ಬಂದಿತು.
ಮಕಾಸ್ಸರ್ ಮತ್ತು ಜಕಾರ್ತಾ ಸೇರಿದಂತೆ ವಿವಿಧ ಸ್ಥಳಗಳಿಂದ ಧಾರ್ಮಿಕ ಮುಖಂಡರು ದೈವಾರಾಧನಾ ವಿಧಿಯ ಸಮಾರಂಭದಲ್ಲಿ ಉಪಸ್ಥಿತರಿದ್ದರು. ಬಾಂಟೆನ್ ಪ್ರಾಂತ್ಯದ ಸೆರ್ಪಾಂಗ್‌ನ ಪ್ರಹಸ್ತಾಂಟೊರವರು ತಮ್ಮ ಕುಟುಂಬದೊಂದಿಗೆ ಪಾಲ್ಗೊಂಡು ಈ ಕಾರ್ಯಕ್ರಮದ ಬಗ್ಗೆ ಅರ್ಥಪೂರ್ಣವಾಗಿ ವಿವರಿಸಿದರು.
"ತೊರಾಜಾದಲ್ಲಿ ಇಂತಹ ಆಧ್ಯಾತ್ಮಿಕ ಮತ್ತು ಸಮುದಾಯದ ಕಾರ್ಯಕ್ರಮವನ್ನು ವೀಕ್ಷಿಸುವುದು ನಮಗೆ ವಿಶೇಷ ಕ್ಷಣವಾಗಿದೆ" ಎಂದು ಅವರು ಲಿಕಾಸ್ ಸುದ್ಧಿಯೊಂದಿಗೆ ಹಂಚಿಕೊಂಡಿದ್ದಾರೆ.