ಖಾರ್ಕಿವ್‌ನಲ್ಲಿ, ಸಿಸ್ಟರ್ ಡೇರಿಯಾ ದುಃಖದ ನಡುವೆಯೂ ದೇವರ ಪ್ರಸನ್ನತೆಯ ಅನುಭವ
ಸ್ವಿಟ್ಲಾನಾ ಡುಖೋವಿಚ್
ಸಿಸ್ಟರ್. ಡೇರಿಯಾ ಪನಾಸ್ಟ್ ರವರು ಆತ್ಮ ಮತ್ತು ದೇಹ ಎರಡರಲ್ಲೂ ಯುದ್ಧದ ಭೀಕರತೆಯನ್ನು ಅನುಭವಿಸಿದ್ದಾರೆ. ಜನವರಿ 2023ರಲ್ಲಿ, ಖಾರ್ಕಿವ್ ಪ್ರದೇಶದ ಲಿಪ್ಟ್ಸಿ ಗ್ರಾಮದ ಬಳಿಯಲ್ಲಿ ಸಿಸ್ಟರ್. ಡೇರಿಯಾ ಪನಾಸ್ಟ್ ರವರು ಮತ್ತು ಗ್ರೀಕ್ ಕಥೋಲಿಕ ಯಾಜಕರೊಬ್ಬರು ಸೇರಿ ಗಾಯಗೊಂಡಿದ್ದಾರೆ. ರಷ್ಯಾದ ಫಿರಂಗಿ ದಾಳಿಯು ಸಹೋದರಿಯು ಮತ್ತು ಇತರ ಇಬ್ಬರು ನೆರವು ಕಾರ್ಯಕರ್ತರೊಂದಿಗೆ ಪ್ರಯಾಣಿಸುತ್ತಿದ್ದ ಸ್ಥಳೀಯ ಕಾರಿತಾಸ್ ವಾಹನಕ್ಕೆ ಡಿಕ್ಕಿ ಹೊಡೆದಿದೆ.
ಸುಮಾರು ಎರಡು ವರ್ಷಗಳ ನಂತರ, ಸಿಸ್ಟರ್ ಡೇರಿಯಾ ಖಾರ್ಕಿವ್‌ನಲ್ಲಿ ಮತ್ತೊಬ್ಬ ಸಹೋದರಿಯೊಂದಿಗೆ ತನ್ನ ಸೇವೆಯನ್ನು ಮುಂದುವರಿಸುತ್ತಾರೆ.
ವ್ಯಾಟಿಕನ್ ಮಾಧ್ಯಮಕ್ಕೆ ನೀಡಿದ ಸಂದರ್ಶನದಲ್ಲಿ, ಅವರು ಭಯ ಮತ್ತು ಸಂಕಟದ ಮಾನವ ಭಾವನೆಗಳು, ದೇವರ ಮೇಲಿನ ಆಳವಾದ ಅವಲಂಬನೆ, ಭಯ ಮತ್ತು ಸಂಕಟದಂತಹ ಸನ್ನಿವೇಶಗಳಲ್ಲಿ ಜನರು ದೇವರ ಪ್ರಸನ್ನತೆಯನ್ನು ಗುರುತಿಸುವ ಅಗತ್ಯತೆಯ ತಮ್ಮ ಅನುಭವಗಳನ್ನು ವ್ಯಕ್ತಪಡಿಸುತ್ತಾರೆ.
ಯುದ್ಧದ ಹೋರಾಟಗಳು
"ಬಾಂಬ್ ದಾಳಿಯ ಅತ್ಯಂತ ಕಷ್ಟಕರವಾದ ಕ್ಷಣಗಳ" ಕುರಿತು ಸಿಸ್ಟರ್.ಡೇರಿಯಾರವರು ತಮ್ಮ ಅನುಭವವನ್ನು ಹಂಚಿಕೊಳ್ಳುತ್ತಾರೆ.
ಯಾರೂ ಅವುಗಳನ್ನು ನಿರೀಕ್ಷಿಸದ ಸಮಯವಾದ ರಾತ್ರಿ ಹೊತ್ತಿನಲ್ಲಿ ಹೆಚ್ಚಾಗಿ ಈ ಯುದ್ಧಗಳು ಸಂಭವಿಸುತ್ತವೆ ಎಂದು ಅವರು ಗಮನಿಸುತ್ತಾರೆ.
ತುಂಬಾ ಹತ್ತಿರದಿಂದ ಯುದ್ಧದ ಭೀಕರತೆಯ ಅನುಭವವನ್ನು ಎದರುಗೊಂಡ ಇವರು, "ಇದು ವಿಶೇಷವಾಗಿ ಕಷ್ಟಕರವಾದ," ಸನ್ನಿವೇಶಗಳು ಎಂದು ಸಿಸ್ಟರ್.ಡೇರಿಯಾರವರು ತಮ್ಮ ಅನುಭವವನ್ನು ವ್ಯಕ್ತಪಡಿಸುತ್ತಾರೆ". ಸ್ವಾಭಾವಿಕವಾಗಿ, ನಾನು ರಕ್ಷಣೆಗಾಗಿ ದೇವರನ್ನು ಪ್ರಾರ್ಥಿಸುತ್ತೇನೆ, ಆದರೆ ನಾನು ಮನುಷ್ಯ ಜೀವಿ, ಆದ್ದರಿಂದ ಮುಂದಿನ ಕ್ಷಿಪಣಿ ನಮ್ಮ ಮನೆಗೆ ಅಪ್ಪಳಿಸಬಹುದೆಂಬ ಭಯ ಯಾವಾಗಲೂ ಇರುತ್ತದೆ."
ಎಲ್ಲವೂ ದೇವರ ಕೈಯಲ್ಲಿದೆ
ನಾನು ಗಾಯಗೊಂಡ ಆ ಅತ್ಯಂತ ಕಠಿಣ ಕ್ಷಣದಲ್ಲಿ, ನನ್ನ ಜೀವವು ಇಲ್ಲಿಗೆ ಮುಗಿಯುತ್ತಿದೆ ಎಂದು ಭಾಸವಾಯಿತು. ನನ್ನೊಳಗೆ ಹೋರಾಟದ ಭಾವನೆಗಳಿದ್ದವು: ಒಂದೆಡೆ, ದೇವರು ನಿನ್ನನ್ನು ಕೈಬಿಡುವುದಿಲ್ಲ ಎಂದು ನಿನಗೆ ತಿಳಿದಿದೆ ಎನ್ನುವ ಆಶಾವಾದದ ಭಾವನೆ, ಆದರೆ ಮಾನವ ಜೀವಿಯ ದೃಷ್ಟಿಯಿಂದ, ನೀನು ನಿಜವಾಗಿಯೂ ನಿನ್ನ ಜೀವವನ್ನು ಸಂಪೂರ್ಣವಾಗಿ ನೀಡಲು ಸಿದ್ಧನಿದ್ದೀಯಾ ಎನ್ನುವ ಭಾವನೆ ನನ್ನನ್ನು ಕಾಡುತ್ತಿದ್ದವು."
ಆಕೆಯು "ಎಲ್ಲವನ್ನೂ ದೇವರ ಕೈಯಲ್ಲಿ ಇರಿಸಿ ದಿನದಿಂದ ದಿನಕ್ಕೆ ಜೀವಿಸುವ" ಮೂಲಕ ಭಯ ಮತ್ತು ಸಂಕಟವನ್ನು ಜಯಿಸಿದರು. "ಇದು ನನ್ನ ಜೀವನ ಮತ್ತು ನನ್ನ ಸೇವೆಯನ್ನು ಮುಂದುವರಿಸಿಕೊಂಡು ಹೋಗಲು ಮತ್ತು ಹತಾಶೆಯನ್ನು ತಡೆಯುವ ಏಕೈಕ ವಿಷಯ" ಎಂದು ಸಿಸ್ಟರ್.ಡೇರಿಯಾರವರು ತಮ್ಮ ಮಾತುಗಳನ್ನು ಸೇರಿಸುತ್ತಾರೆ.
ಪ್ರಾರ್ಥನೆ ಮತ್ತು ಸೇವೆಯ ಮೂಲಕ ಗುಣಪಡಿಸುವುದು
ಅಗಾಧ ಸವಾಲುಗಳ ಹೊರತಾಗಿಯೂ, ಸಿಸ್ಟರ್.ಡೇರಿಯಾರವರು ಪ್ರಾರ್ಥನೆ ಮತ್ತು ಸಮರ್ಪಣೆಯಿಂದ ಹುಟ್ಟಿದ ಪ್ರಶಾಂತ ಆತ್ಮವಿಶ್ವಾಸವನ್ನು ಹೊರಹಾಕುತ್ತಾರೆ. "ಪ್ರತಿದಿನ ಬೆಳಿಗ್ಗೆ, ನನಗಾಗಿ ಮತ್ತು ನಾನು ಭೇಟಿಯಾಗುವ ಜನರಿಗೆ, ಆಶೀರ್ವಾದಕ್ಕಾಗಿ ನಾನು ದೇವರಲ್ಲಿ ಪ್ರಾರ್ಥಿಸುತ್ತೇನೆ. ನಾನು ಯಾರೊಂದಿಗಾದರೂ ಮಾತನಾಡುವಾಗಲೆಲ್ಲಾ, ಆ ವ್ಯಕ್ತಿಗಾಗಿ ನನ್ನ ಹೃದಯದಲ್ಲಿ ಪ್ರಾರ್ಥಿಸುತ್ತೇನೆ, ಅವರ ಹೃದಯವನ್ನು ಗುಣಪಡಿಸಲು, ನನಗೆ ಸರಿಯಾದ ಪದಗಳನ್ನು ನೀಡಬೇಕೆಂದು ದೇವರಲ್ಲಿ ಕೇಳಿಕೊಳ್ಳುತ್ತೇನೆ. ಕೆಲವೊಮ್ಮೆ ಪದಗಳು ಸಾಕಾಗುವುದಿಲ್ಲ ಎಂದು ನನಗೆ ತಿಳಿದಿದೆ, ಆದರೆ ದೇವರಿಗೆ ಪ್ರತಿಯೊಂದು ಹೃದಯವನ್ನೂ ತಲುಪುವ ಮಾರ್ಗ ಯಾವುದು ಎಂಬುದು" ತಿಳಿದಿದೆ.
ಬದಲಾಗುತ್ತಿರುವ ನಗರ ಮತ್ತು ಜನರು
ಪೂರ್ಣ ಪ್ರಮಾಣದ ಯುದ್ಧವು ಸುಮಾರು ಮೂರು ವರ್ಷಗಳು ಕಳೆದಿವೆ, ಉಕ್ರೇನ್‌ನಲ್ಲಿ ಬಳಲಿಕೆ ವ್ಯಾಪಕವಾಗಿದೆ. ಖಾರ್ಕಿವ್‌ನಲ್ಲಿ ಜನರ ಮನಸ್ಥಿತಿಯ ಕುರಿತಾದ ಪ್ರಶ್ನೆಗೆ ಉತ್ತರಿಸುತ್ತಾ, ಸಿಸ್ಟರ್.ಡೇರಿಯಾರವರು "ಜನರು ಸ್ವತಂತ್ರರಾಗಿರಲು ಬಯಸುತ್ತಾರೆ, ಅದು ಖಚಿತ" ಎಂದು ಹೇಳುತ್ತಾರೆ, "ಹೌದು, ಅವರು ದಣಿದಿದ್ದಾರೆ, ಆದರೆ ಗಮನಾರ್ಹ ಬದಲಾವಣೆಯೂ ಇದೆ: ಜನರು ತಮ್ಮ ಜೀವನವನ್ನು ಪುನರ್ವಿಮರ್ಶಿಸುತ್ತಿದ್ದಾರೆ.
"ನಮ್ಮ ಧರ್ಮಕೇಂದ್ರಕ್ಕೆ ಅನೇಕ ಹೊಸ ಜನರು ಬಂದಿದ್ದಾರೆ ಮತ್ತು ನಾವು ಅವರಿಗೆ ದೇವರು ಯಾರು ಎಂಬುದನ್ನು, ಅಂದರೆ ಕ್ರಿಸ್ತರ ಪರಿಚಯವನ್ನು - ಶಿಲುಬೆಯ ಮರಣದ ತ್ಯಾಗ ಚಿಹ್ನೆಯ ಅರ್ಥ, ಇತ್ಯಾದಿಗಳನ್ನು ವಿವರಿಸುತ್ತಾ ಮೊದಲಿನಿಂದ ಪ್ರಾರಂಭಿಸುತ್ತೇವೆ. ಅವರು ಜೀವನದ ಬಗ್ಗೆ ತಮ್ಮ ದೃಷ್ಟಿಕೋನವನ್ನು ಸಂಪೂರ್ಣವಾಗಿ ಬದಲಾಯಿಸಿದ್ದಾರೆ, ಕ್ಷುಲ್ಲಕ ವಿಷಯಗಳನ್ನು ತ್ಯಜಿಸಿದ್ದಾರೆ ಎಂದು ಅವರು ನಮಗೆ ಹೇಳುತ್ತಾರೆ. ಸಂಬಂಧಗಳು ಬದಲಾಗಿವೆ ಮತ್ತು ಕುಟುಂಬಗಳು ಈಗ ವಿಭಿನ್ನವಾಗಿ ಜೀವಿಸುತ್ತಿದ್ದಾರೆ. ಖಾರ್ಕಿವ್ ರೂಪಾಂತರಗೊಳ್ಳುತ್ತಿದೆ, ಮತ್ತು ಈ ಬದಲಾವಣೆಯು ಕಣ್ಣುಗಳಿಂದ ನೋಡುವುದಕ್ಕಿಂತ ಹೆಚ್ಚಾಗಿ ಆತ್ಮದಲ್ಲಿ ಅನುಭವಿಸಲ್ಪಡುತ್ತದೆ."
ಉಕ್ರೇನ್‌ನಲ್ಲಿ ಕ್ರೈಸ್ತ ಧರ್ಮಸಭೆಯ ಪಾತ್ರ
"ಇಂದು ಉಕ್ರೇನ್‌ನಲ್ಲಿರುವ ಧರ್ಮಸಭೆಯ ಪ್ರತಿಯೊಬ್ಬ ವ್ಯಕ್ತಿಯು, ಜನರಿಗೆ ಅತ್ಯಂತ ಮುಖ್ಯವಾದದ್ದು ಯಾವುದು?" ಎಂಬುದನ್ನು ಅರಿತುಕೊಳ್ಳಬೇಕು ಎಂದು ಸಿಸ್ಟರ್.ಡೇರಿಯಾರವರು ಒತ್ತಿ ಹೇಳುತ್ತಾರೆ, ದೇವರಿಗೆ ಹತ್ತಿರವಾಗುವುದು, ಆಧ್ಯಾತ್ಮಿಕ ಜೀವನದ ಬೇಳವಣಿಗೆ-ಪ್ರಾರ್ಥನೆ ಮಾಡುವುದು ಮತ್ತು ವಿಶೇಷವಾಗಿ ಆಂತರಿಕ ಪ್ರಾರ್ಥನೆ."
"ಆದಾಗ್ಯೂ," ಸಮರ್ಪಣಾ ಜೀವನದಲ್ಲಿ ಪ್ರಾರ್ಥನೆ, ಕೆಲಸ ಮತ್ತು ವಿಶ್ರಾಂತಿ ಎಲ್ಲವೂ ಒಂಕ್ಕೊಂದು ಸಂಬಂಧ ಹೊಂದಿದೆ. ಆದ್ದರಿಂದ, "ಕೆಲವೊಮ್ಮೆ ದೇವರಿಗೆ ಸಮರ್ಪಿತವಾದ ಕಾರ್ಯವು ಪ್ರಾರ್ಥನೆಯ ಒಂದು ರೂಪವಾಗಿರುತ್ತದೆ" ಎಂದು ಅವರು ನೆನಪಿಸಿಕೊಳ್ಳುತ್ತಾರೆ.