ಹುಡುಕಿ

Sr.Anne Arabome with other women religious at the Sophia Institute for Theological Studies and Spiritual Formation in Namibia Sr.Anne Arabome with other women religious at the Sophia Institute for Theological Studies and Spiritual Formation in Namibia 

ನಮೀಬಿಯಾ: ಧಾರ್ಮಿಕ ಸಹೋದರಿಯಿಂದ ದೈವಶಾಸ್ತ್ರ ಮತ್ತು ಆಧ್ಯಾತ್ಮಿಕ ತರಬೇತಿ ಕೇಂದ್ರದ ಸ್ಥಾಪನೆ

ನಮೀಬಿಯಾದಲ್ಲಿ ಧಾರ್ಮಿಕ ದೈವಕರೆಗಳು ಹೆಚ್ಚುತ್ತಿವೆ, ಸಹೋದರಿಯರ ಸರಿಯಾದ ರಚನೆಗೆ ತುರ್ತು ಅಗತ್ಯವನ್ನು ಸೃಷ್ಟಿಸುತ್ತಿದೆ. ಈ ಕರೆಗೆ ಉತ್ತರಿಸುತ್ತಾ, ನಮೀಬಿಯಾದಲ್ಲಿ ಧಾರ್ಮಿಕ ಮಹಿಳೆಯರನ್ನು ತಮ್ಮ ದೈವಕರೆಯಲ್ಲಿ ಸಬಲೀಕರಣಗೊಳಿಸಲು ಮೊದಲ ದೈವಶಾಸ್ತ್ರ ಮತ್ತು ಆಧ್ಯಾತ್ಮಿಕ ರಚನಾ ಕೇಂದ್ರವನ್ನು ಸ್ಥಾಪಿಸುವಲ್ಲಿ ಸಿಸ್ಟರ್. ಅನ್ನ ಅರಾಬೊಮ್ ಮುಂದಾಳತ್ವವನ್ನು ವಹಿಸಿದ್ದಾರೆ.

ಸಿಸ್ಟರ್. ಮಿಶ್ಚಲ್ ನಜೇರಿ,OSF

ನಮೀಬಿಯಾದ ವಿಂಡ್‌ಹೋಕ್‌ನಲ್ಲಿರುವ ಪ್ರಮುಖ ಧಾರ್ಮಿಕ ಅಧಿಕಾರಿಗಳಿಗೆ ನಡೆಯುತ್ತಿರುವ ದೈವಶಾಸ್ತ್ರದ ಮತ್ತು ಆಧ್ಯಾತ್ಮಿಕ ರಚನೆಯ ತರಬೇತಿ ಈಗ ಲಭ್ಯವಿದೆ.
ಆನ್ಯುರಿಯಮ್ ಸ್ಟ್ಯಾಟಿಸ್ಟಿಕಮ್ ಎಕ್ಲೇಸಿಯೇ 2023ರ ಪ್ರಕಾರ, ಆಫ್ರಿಕಾದಲ್ಲಿ ಧಾರ್ಮಿಕ ದೈವಕರೆಯಲ್ಲಿ ಗಮನಾರ್ಹ ಮತ್ತು ಸಮರ್ಥನೀಯ ಬೆಳವಣಿಗೆಯಾಗುತ್ತಿದೆ. ಈ ಬೆಳವಣಿಗೆಯು ಸ್ವಾಗತಾರ್ಹ ಕೊಡುಗೆಯಾಗಿದ್ದರೂ, ಸಭಾಪಾಲನೆಗೆ ಸಂಬಂಧಪಟ್ಟ ಉನ್ನತ ಶಿಕ್ಷಣಕ್ಕೆ ಪ್ರವೇಶವನ್ನು ಹೊಂದಿರದ ಕಥೋಲಿಕ ಮಹಿಳೆಯರಿಗೆ ಧಾರ್ಮಿಕ ಮತ್ತು ಆಧ್ಯಾತ್ಮಿಕ ರಚನೆಯ ಕಾರ್ಯಕ್ರಮಗಳಿಗೆ ಇದು ಆಳವಾದ ಅಗತ್ಯವನ್ನು ಸೃಷ್ಟಿಸುತ್ತದೆ.

ಕಾಳಜಿಬಾಹಿರತೆಯಲ್ಲಿ ಇರುವವರಿಗೆ ಮತ್ತು ಬಡತನದಲ್ಲಿ ವಾಸಿಸುವ ಜನರಿಗೆ ಸಮರ್ಪಕವಾಗಿ ಸೇವೆಗಳನ್ನು ಒದಗಿಸಲು, ಕ್ರಿಸ್ತನ ಸೇವೆಗೆ ತಮ್ಮ ಜೀವನವನ್ನು ಸಮರ್ಪಿಸುತ್ತಿರುವ ಈ ಮಹಿಳೆಯರು ದೈವಶಾಸ್ತ್ರ, ಧರ್ಮಗ್ರಂಥ, ಆಧ್ಯಾತ್ಮಿಕತೆ ಮತ್ತು ನಾಯಕತ್ವ ಕೌಶಲ್ಯಗಳಲ್ಲಿ ಭದ್ರ ಬುನಾದಿ ಹೊಂದಲು ಅರ್ಹರಾಗಿದ್ದಾರೆ.

ʼಸೋಫಿಯಾ ಇನ್‌ಸ್ಟಿಟ್ಯೂಟ್ ಫಾರ್ ಥಿಯೋಲಾಜಿಕಲ್ ಸ್ಟಡೀಸ್ ಮತ್ತು ಸ್ಪಿರಿಚುವಲ್ ಫಾರ್ಮೇಶನ್ʼ ನ್ನು ನಮೀಬಿಯಾದಲ್ಲಿ ಸ್ಥಾಪಿಸುವ ಮೂಲಕ ʼಲಾಸ್ ಏಂಜಲೀಸ್‌ನ ಸಿಸ್ಟರ್ಸ್ ಆಫ್ ಸೋಶಿಯಲ್ ಸರ್ವೀಸ್‌ʼನ ಸದಸ್ಯರಾದ ಸಿಸ್ಟರ್. ಅನ್ನ ಅರಾಬೊಮ್ ರವರು, ಆಫ್ರಿಕಾದಲ್ಲಿ ಮಹಿಳೆಯರ ಧಾರ್ಮಿಕ ರಚನೆಯ ಅಗತ್ಯಕ್ಕೆ ಪ್ರತಿಕ್ರಿಯಿಸಿದ್ದಾರೆ.

"ಸಮಾಜ ಸೇವೆಗಳ ಸಹೋದರಿಯರ ವರ್ಚಸ್ಸು ಪವಿತ್ರಾತ್ಮರ ಬಗ್ಗೆ ತಮ್ಮ ಅರಿವನ್ನು ಬೆಳೆಸಲು ಸದಸ್ಯರಿಗೆ ಅಧಿಕಾರ ನೀಡುತ್ತದೆ ಮತ್ತು ಆ ಪವಿತ್ರಾತ್ಮರ ಆತ್ಮವು ಪ್ರಪಂಚದಲ್ಲಿ ಧರ್ಮಸಭೆಯ ಧರ್ಮಪ್ರಚಾರ ಕಾರ್ಯದಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವಂತೆ ನಮಗೆ ಸಹಾಯ ಮಾಡುತ್ತದೆ. ಸೋಫಿಯಾ ಇನ್ಸ್ಟಿಟ್ಯೂಟ್ ಈ ವರ್ಚಸ್ಸಿನ ಸಾಕಾರತೆಯಾಗಿದೆ,'' ಎಂದು ಸಿಸ್ಟರ್. ಅನ್ನರವರು ಹೇಳಿದರು.

ಮಹಿಳೆಯರಿಗೆ ಧಾರ್ಮಿಕ ಕರೆ - ಆಫ್ರಿಕಾಕ್ಕೆ ಹಿಂತಿರುಗಿ
ಅಮೇರಿಕದಲ್ಲಿ ಹಲವು ವರ್ಷಗಳ ಸೇವೆ ಮತ್ತು ಸಚಿವಾಲಯ ಸೇವೆಯ ನಂತರ, ಅವರು ಆಫ್ರಿಕಾದ ಮಹಿಳೆಯರಿಗೆ ಧಾರ್ಮಿಕ ರಚನೆಗೆ ನವೀನ ಅವಕಾಶಗಳನ್ನು ಸೃಷ್ಟಿಸಲು ಆಫ್ರಿಕಾಕ್ಕೆ ಮರಳಿದರು, ಅದು ಅನನ್ಯ ಆಫ್ರಿಕಾದ ಮೌಲ್ಯಗಳು, ಧಾರ್ಮಿಕ ಜೀವನ ಮತ್ತು ಆಧ್ಯಾತ್ಮಿಕತೆಯ ತತ್ವಗಳನ್ನು ಸೆಳೆಯುತ್ತದೆ.

“ನಾನು ಯಾವಾಗಲೂ ದೇವರಿಂದ ಕರೆಯಲ್ಪಡುವ ದೈವಕರೆಯ ದೃಢವಾದ ಅರ್ಥವನ್ನು ಅರಿತಿದ್ದೇನೆ; ಈ ಕರೆಯು ನನ್ನನ್ನು ಆಫ್ರಿಕಾಕ್ಕೆ, ನಿರ್ದಿಷ್ಟವಾಗಿ ನಮೀಬಿಯಾ ಮತ್ತು ದಕ್ಷಿಣ ಆಫ್ರಿಕಾಕ್ಕೆ ಮರಳಿ ಕರೆತಂದಿದೆ" ಎಂದು ಸೋಫಿಯಾ ಇನ್ಸ್ಟಿಟ್ಯೂಟ್ ಅನ್ನು ಪ್ರಾರಂಭಿಸಲು ತನ್ನ ಪ್ರೇರಣೆಯ ಬಗ್ಗೆ ಸಿಸ್ಟರ್. ಅನ್ನ ರವರು ಹೇಳಿದರು.

"ಆಫ್ರಿಕಾದ ಈ ಪ್ರದೇಶದಲ್ಲಿ ಧಾರ್ಮಿಕ ಮಹಿಳೆಯರಿಗೆ ದೈವಶಾಸ್ತ್ರದ ಅಧ್ಯಯನಗಳು ಮತ್ತು ಆಧ್ಯಾತ್ಮಿಕತೆಯ ರಚನೆಗೆ ಸೀಮಿತ ಅವಕಾಶಗಳಿವೆ" ಎಂದು ಅವರು ವಿಷಾದಿಸಿದರು. “ಧರ್ಮಸಭೆಯ ಧ್ಯೇಯೋದ್ದೇಶಗಳ ಬಗ್ಗೆ ಭಾವೋದ್ರಿಕ್ತರಾಗಿರುವ ಅನೇಕ ಪ್ರತಿಭಾನ್ವಿತ, ಪ್ರತಿಭಾವಂತ ಮತ್ತು ಸಮರ್ಥ ಮಹಿಳೆಯರು ಧಾರ್ಮಿಕರಾಗಿದ್ದಾರೆ – ಇವರು ಕ್ರಿಸ್ತನ ಬೆಳಕನ್ನು ಇತರರಿಗೆ ಪ್ರಸರಿಸಲು ಹಂಬಲಿಸುತ್ತಿದ್ದಾರೆ. ಅವರಿಗೆ ಆಧ್ಯಾತ್ಮಿಕವಾಗಿ, ದೈವಶಾಸ್ತ್ರೀಯವಾಗಿ ಮತ್ತು ನಾಯಕತ್ವದ ಕೌಶಲ್ಯಗಳ ಬೆಂಬಲದ ಅಗತ್ಯವಿದೆ.

ನಿಖರವಾಗಿ ಇದು ಸೋಫಿಯಾ ಇನ್ಸ್ಟಿಟ್ಯೂಟ್ ಗೆ ನೀಡಿರುವ ಕರೆ ಎಂದು ಅವರು ಹೇಳಿದರು, ಇದು ಈಗಾಗಲೇ ಧಾರ್ಮಿಕ ಜೀವನ ಜೀವಿಸಲು ಹಾತೊರೆಯುವ ಯುವತಿಯರಿಗೆ, ಧಾರ್ಮಿಕ ಸಹೋದರಿಗಳಿಂದ ತರಬೇತಿ ನೀಡುವ ಕಾರ್ಯಕ್ರಮವನ್ನು ಆಯೋಜಿಸಿದೆ.

"ಈ ರಚನೆಯು ವಾಸ್ತವಿಕವಾಗಿದೆ, ದಕ್ಷಿಣ ಆಫ್ರಿಕಾ, ಬೋಟ್ಸ್ವಾನಾ, ಜಿಂಬಾಬ್ವೆ ಮತ್ತು ಲೆಸೊಥೊದಲ್ಲಿರುವ ಮಹಿಳೆಯರಿಗೆ ಈ ತರಬೇತಿಯನ್ನು ನೀಡಲಾಗುತ್ತಿದೆ. ಮತ್ತು ಇದನ್ನು ಕನಿಷ್ಠ ಹಣಕಾಸಿನ ವೆಚ್ಚದಲ್ಲಿ ಮಾಡಲಾಗುತ್ತದೆ,” ಎಂದು ಸಿಸ್ಟರ್. ಅನ್ನರವರು ಹೇಳಿದರು.

ಸಚಿವಾಲಯ ಮತ್ತು ಸಾಮಾಜಿಕ ನ್ಯಾಯಕ್ಕಾಗಿ ಉತ್ಸಾಹ ಹೊಂದಿರುವ ತಜ್ಞರು
ಇಗ್ನೇಷಿಯನ್ ಆಧ್ಯಾತ್ಮಿಕತೆ ಮತ್ತು ದೈವಶಾಸ್ತ್ರದಲ್ಲಿ ವಿಸ್ಕಾನ್ಸಿನ್‌ನ ಮಾರ್ಕ್ವೆಟ್ ವಿಶ್ವವಿದ್ಯಾಲಯದಲ್ಲಿ ಸಿಸ್ಟರ್.ಅನ್ನರವರು ಸಚಿವ ಖಾತೆಯ ಅನುಭವ ಪರಿಣತಿಯನ್ನು ಮತ್ತು ಇಗ್ನೇಷಿಯನ್ ಆಧ್ಯಾತ್ಮಿಕತೆಯ ಫೇಬರ್ ಸೆಂಟರ್‌ನ ಸಹಾಯಕ ನಿರ್ದೇಶಕರಾಗಿ ಎಂಟು ವರ್ಷಗಳ ಅವಧಿಯ ಅನುಭವವನ್ನು ಹೊಂದಿದ್ದಾರೆ.

ಅವರು ನೈರೋಬಿಯದ ಹೆಕಿಮಾದಲ್ಲಿ ಅಧ್ಯಾಪಕರ ಭಾಗವಾಗಿದ್ದಾರೆ, ಸಹೋದರಿ-ವಿದ್ವಾಂಸರ ಕಾರ್ಯಕ್ರಮದ ಭಾಗವಾಗಿ ಮಾನವಶಾಸ್ತ್ರ, ಆಧ್ಯಾತ್ಮಿಕತೆ ಮತ್ತು ಧಾರ್ಮಿಕ ಜೀವನದ ತರಗತಿಗಳನ್ನು ನೀಡುತ್ತಿದ್ದಾರೆ. ಕೆನಾಡದ ರೋಹ್ಯಾಂಪ್ಟನ್ ವಿಶ್ವವಿದ್ಯಾಲಯದಿಂದ ವ್ಯವಸ್ಥಿತ ದೇವತಾಶಾಸ್ತ್ರದಲ್ಲಿ ಸಿಸ್ಟರ್.ಅನ್ನರವರು ಪಿಎಚ್.ಡಿ. ಪದವಿಯನ್ನು ಪಡೆದಿದ್ದಾರೆ ಹಾಗೂ ಚಿಕಾಗೋದ ಕ್ಯಾಥೋಲಿಕ್ ಥಿಯಲಾಜಿಕಲ್ ಯೂನಿಯನ್‌ನಿಂದ ಸಚಿವಾಲಯ ಮತ್ತು ಆಧ್ಯಾತ್ಮಿಕತೆಯಲ್ಲಿ ಡಾಕ್ಟರೇಟ್ ಪದವಿಯನ್ನು ಪಡೆದಿದ್ದಾರೆ.

ಸಿಸ್ಟರ್. ಅನ್ನರವರ ಉಪಕ್ರಮವು ಎರಡು ಖಂಡಗಳನ್ನು ವ್ಯಾಪಿಸಿದೆ, ಏಕೆಂದರೆ ಅವರು ಸ್ಕಾಟ್‌ಲ್ಯಾಂಡ್‌ನ ಗ್ಲಾಸ್ಗೋದಲ್ಲಿರುವ ಇಗ್ನೇಷಿಯನ್ ಆಧ್ಯಾತ್ಮಿಕ ಕೇಂದ್ರದ ಸಹಯೋಗದೊಂದಿಗೆ ಆಫ್ರಿಕಾದ ಮಹಿಳೆಯರಿಗೆ ಧಾರ್ಮಿಕವಾಗಿ ಅಂತರ್-ಸಾಂಸ್ಕೃತಿಕ ಜೀವನ ಮತ್ತು ದೈವಶಾಸ್ತ್ರದ ಅಧ್ಯಯನ ಕಾರ್ಯಕ್ರಮವನ್ನು ಸಂಯೋಜಿಸುತ್ತಾರೆ.

ಆಫ್ರಿಕಾದ ಸಹೋದರಿಯರ ಘನತೆಯನ್ನು ಸಶಕ್ತಗೊಳಿಸುವುದು
ಇಲ್ಲಿಯವರೆಗಿನ ಪ್ರಯಾಣವನ್ನು ಪ್ರತಿಬಿಂಬಿಸುತ್ತಾ, ಸಿಸ್ಟರ್. ಅನ್ನರವರು ಸೋಫಿಯಾ ಇನ್ಸ್ಟಿಟ್ಯೂಟ್ಗಾಗಿ ತನ್ನ ಉತ್ಕಟ ಭರವಸೆಯನ್ನು ಹಂಚಿಕೊಂಡರು.

"ಈ ಉಪಕ್ರಮವು ಸೃಜನಾತ್ಮಕ ಮತ್ತು ಸಂದರ್ಭೋಚಿತ ದೈವಶಾಸ್ತ್ರದ ಚಿಂತನೆ, ರಚನೆ, ನವೀಕರಣ, ಆಧ್ಯಾತ್ಮಿಕ ಅನುಬಂಧ ಮತ್ತು ಇಗ್ನೇಷಿಯನ್ ಧ್ಯಾನಗಳ ಮೂಲಕ ಆಫ್ರಿಕಾದ ಮಹಿಳೆಯರ ಧಾರ್ಮಿಕ ಜೀವನ, ಅವರ ಸಮುದಾಯಗಳ ಘನತೆ ಮತ್ತು ಸೌಂದರ್ಯವನ್ನು ಸಶಕ್ತಗೊಳಿಸಲು ಹಾಗೂ ಮರುಪಡೆಯಲು ಒಂದು ಸಾಧನವಾಗಿದೆ ಎಂದು ನಾನು ಕನಸು ಕಂಡಿದ್ದೇನೆ" ಎಂದು ಅವರು ಹೇಳಿದರು.

"ಇದೊಂದು ಅತ್ಯಾಕರ್ಷಕ ಸಾಹಸ" ಎಂದು ಸಿಸ್ಟರ್. ಅನ್ನರವರು ತೀರ್ಮಾನಿಸಿದರು. ಏಕೆಂದರೆ “ನನಗಿಂತ ಶ್ರೇಷ್ಠರಾದ ಒಬ್ಬರ ಉಪಸ್ಥಿತಿಯನ್ನು ನಾನು ನನ್ನ ಜೀವನದಲ್ಲಿ ಅನುಭವಿಸುತ್ತಿದ್ದೇನೆ, ಅವರು ನನ್ನನ್ನು ಧಾರ್ಮಿಕ ಮಹಿಳೆಯರೊಂದಿಗೆ ಪ್ರಯಾಣಿಸಲು ಕರೆದಿದ್ದಾರೆ. ಈ ಮೂಲಕ ನಾನು ಧರ್ಮಸಭೆಯ ಸಾಮಾಜಿಕ ಧ್ಯೇಯವನ್ನು ನಿರ್ವಹಿಸುತ್ತಿದ್ದೇನೆ.

06 ಜನವರಿ 2025, 14:02