ಹುಡುಕಿ

 Zambian youth Zambian youth 

ಜಾಂಬಿಯಾ: ಯುವಜನತೆ ಮತ್ತು ಸಿನೊಡ್ – ಎಲ್ಲರಿಗಾಗಿ ಧರ್ಮಸಭೆ

ಜಾಂಬಿಯಾ ಕಥೋಲಿಕ ಧರ್ಮಾಧ್ಯಕ್ಷರುಗಳ ಸಮ್ಮೇಳನದ, ರಾಷ್ಟ್ರೀಯ ಯುವ ಸಂಯೋಜಕರಾದ ಧರ್ಮಗುರು.ಕ್ರಿಸ್ಟೋಫರ್ ಕುಂಡಾರವರು, ಸಿನೊಡಾಲಿಟಿಯ ಮೇಲಿನ ಸಿನೊಡ್‌ನ ಹೆಜ್ಜೆಯಲ್ಲಿ ಧರ್ಮಸಭೆಯಲ್ಲಿ, ಯುವಜನತೆಯನ್ನು ಕುರಿತು ಧರ್ಮಪ್ರಚಾರಕ ಕಾರ್ಯದಲ್ಲಿ, ಅವರು ಧರ್ಮಸಭೆಯ ಸಂಪೂರ್ಣ ಸದಸ್ಯರಾಗಿ ತಮ್ಮ ಜವಾಬ್ದಾರಿಯನ್ನು ನಿರ್ವಹಿಸಲು ಆಹ್ವಾನಿಸುತ್ತಾರೆ.

ಮಾರ್ಥಾ ಮ್ವುಲಾ - ಲುಸಾಕಾ

ಸಿನೊಡಲಿಟಿಯ ಮೇಲಿನ ಸಿನೊಡ್‌ನ ಉತ್ಸಾಹದಲ್ಲಿ, ಯುವಜನತೆಯು ಧರ್ಮಸಭೆಯ ಧರ್ಮಪ್ರಚಾರ ಮತ್ತು ಸೇವಾಕಾರ್ಯದಲ್ಲಿ ಸಕ್ರಿಯರಾಗಿ ಪಾಲ್ಗೊಳ್ಳುವವರಾಗಿರಬೇಕು. ಜಾಂಬಿಯಾ ಕಥೋಲಿಕ ಧರ್ಮಾಧ್ಯಕ್ಷರುಗಳ ಸಮ್ಮೇಳನದ, ರಾಷ್ಟ್ರೀಯ ಯುವ ಸಂಯೋಜಕರು (ZCCB) ತಮ್ಮ ಭರವಸೆಯನ್ನು ವ್ಯಕ್ತಪಡಿಸಿದ್ದಾರೆ.

ಜಾಂಬಿಯಾದಲ್ಲಿನ ಡಾನ್ ಬಾಸ್ಕೊದ ಸೇಲೇಶಿಯನ್ಸ್‌ಗೆ ಯುವ ಸಂಯೋಜಕರಾಗಿ ಸೇವೆ ಸಲ್ಲಿಸುತ್ತಿರುವ ಧರ್ಮಗುರು. ಕ್ರಿಸ್ಟೋಫರ್ ಕುಂಡಾರವರು ವ್ಯಾಟಿಕನ್ ಸುದ್ಧಿಯೊಂದಿಗೆ ಸಿನೊಡಾಲಿಟಿಯು ಯುವಜನತೆಯ ಜೀವನದ ಮೇಲೆ ಹೇಗೆ ಪ್ರಭಾವ ಬೀರಬಹುದು ಎಂಬುದರ ಕುರಿತು ಮಾತನಾಡಿದರು.

ಯುವಜನರೊಂದಿಗೆ ಸಂವಾದ ಮತ್ತು ಸಿನೊಡಾಲಿಟಿಯನ್ನು ಜಾರಿಗೊಳಿಸುವುದು
ಗುರುಗಳು ವ್ಯಾಟಿಕನ್‌ನಲ್ಲಿ ಸಿನೊಡಲಿಟಿ ಅಧಿವೇಶನಗಳ ಸಿನೊಡ್ ಮುಕ್ತಾಯಗೊಂಡಿದ್ದರೂ ಸಹ, ಸ್ಫೂರ್ತಿ ಮತ್ತು ಹೊಸ ವಿಧಾನಗಳು, ಯುವಜನತೆಯನ್ನು ಧರ್ಮಸಭೆಯ ವಿಷಯಗಳಲ್ಲಿ ಮತ್ತು ಸೇವಾಕಾರ್ಯದಲ್ಲಿ ತೊಡಗಿಸಿಕೊಳ್ಳಲು ಪ್ರೇರೇಪಿಸುತ್ತವೆ ಎಂದು ಕುಂದಾ ಆಶಿಸಿದ್ದಾರೆ.

ಸಿನೊಡ್ ಯುವ ಜನತೆಗೆ ಸವಾಲಾಗಿದೆ
ರಾಷ್ಟ್ರೀಯ ಯುವ ಸಂಯೋಜಕರ ಪ್ರಕಾರ, ಸಿನೊಡಾಲಿಟಿ ಎಂದರೆ ಧರ್ಮಸಭೆಯು ಒಂದೇ ನಿಟ್ಟಿನಲ್ಲಿ ಮಾತನಾಡುವುದಿಲ್ಲ. ಯುವಕರು ಧರ್ಮಸಭೆಯಲ್ಲಿ ತಮ್ಮ ಜವಾಬ್ದಾರಿಗಳನ್ನು ಸ್ವೀಕರಿಸುವ ಮೂಲಕ ತಮ್ಮ ಪಾತ್ರವನ್ನು ನಿರ್ವಹಿಸಬೇಕಾಗಿದೆ. ಅವರು ತಮ್ಮ ಜೀವನದಲ್ಲಿ ಏನು ಮಾಡುತ್ತಾರೆ ಮತ್ತು ಅವರು ಹೇಗೆ ಬದುಕಬೇಕೆಂದರೆ, ಅವರು ತಮ್ಮನ್ನು ತಾವು ಕಾಳಜಿ ವಹಿಸುವಂತೆ, ಇತರರ ಮೇಲೂ ಕಾಳಜಿ ವಹಿಸುವ ಜವಾಬ್ದಾರಿಯನ್ನು ಹೊಂದಿದ್ದಾರೆ.

"ಸಹ-ಜವಾಬ್ದಾರಿಯು ಇತರ ಯುವ ಜನರೊಂದಿಗೆ ಸೇರಿ ಒಟ್ಟಾಗಿ ನಾವು ಈ ದೊಡ್ಡ ಚಳುವಳಿಯನ್ನು ರಚಿಸಬಹುದು, ಅದು ಕಡಿಮೆ ಸವಲತ್ತುಗಳನ್ನು ಹೊಂದಿರುವವರನ್ನು ನೋಡಿಕೊಳ್ಳುವಂತೆ, ನಮ್ಮೆಲ್ಲರ ಸಾಮಾನ್ಯ ಆಸ್ರಯವಾದ ಧರೆಯ ಮೇಲೆ ಕಾಳಜಿ ವಹಿಸುತ್ತದೆ" ಎಂದು ಅವರು ಹೇಳಿದರು.

“ಸಿನೊಡಲ್ ಧರ್ಮಸಭೆಯಲ್ಲಿ, ಧರ್ಮಸಭೆಯು ಏನಾಗಿರಬೇಕು ಮತ್ತು ಅದು ಏನಾಗಬೇಕು ಎಂಬ ಜವಾಬ್ದಾರಿಯನ್ನು ಪ್ರತಿಯೊಬ್ಬ ಕ್ರೈಸ್ತರೂ ಹೊಂದಿದ್ದಾರೆ. ಇದರರ್ಥ, ಸೂಚ್ಯವಾಗಿ, ನಾವು ಯಾವ ರೀತಿಯ ಕ್ರೈಸ್ತ ಸಮುದಾಯವನ್ನು ರಚಿಸಲು ಬಯಸುತ್ತೇವೆ ಎಂದು ನಾವೆಲ್ಲರೂ ತಿಳಿದಿರಬೇಕು ಎಂದು ಧರ್ಮಗುರು. ಕುಂದಾ ಒತ್ತಿ ಹೇಳಿದರು. "ಕ್ರೈಸ್ತರ ಯಾವುದೇ ಒಂದು ಗುಂಪು ಧರ್ಮಸಭೆಯ ಮೇಲೆ ಅಧಿಕಾರ ಸಾಧಿಸಲು ಅಥವಾ ಅದರ ಮೇಲೆ ವಿಶೇಷ ಹಕ್ಕುಗಳನ್ನು ಹೊಂದಲು ಸಾಧ್ಯವಿಲ್ಲ. ಪ್ರತಿಯೊಬ್ಬ ಸದಸ್ಯರು ಅತ್ಯಗತ್ಯ ಎಂದು ಸಿನೊಡ್ ನಮಗೆಲ್ಲರಿಗೂ ನೆನಪಿಸುತ್ತದೆ. ಧರ್ಮಸಭೆಯಲ್ಲಿ ನಾವೆಲ್ಲರೂ ವಿಭಿನ್ನ ಪಾತ್ರಗಳನ್ನು ನಿರ್ವಹಿಸುತ್ತೇವೆ.

08 ಜನವರಿ 2025, 15:17