ಪೂರ್ವ ಕ್ರೈಸ್ತರಿಗೆ "ಧ್ವನಿ ನೀಡಲು" ಅವಳಿ ಸಹೋದರರು ನೇರಪ್ರಸಾರ ಮಾದ್ಯಮದ ವೇದಿಕೆಯನ್ನು ಪ್ರಾರಂಭಿಸಿದ್ದಾರೆ
ಕೀಲ್ಸ್ ಗುಸ್ಸಿ
ಈ ವಾರ ಡಿಜಿಟಲ್ ಧರ್ಮಪ್ರಚಾರಕರಾದ ಮತ್ತು ಕಥೋಲಿಕ ಪ್ರಭಾವಿಗಳ ಜೂಬಿಲಿ ಮತ್ತು ಯುವಜನತೆಯ ಜೂಬಿಲಿ ಕಾರ್ಯಕ್ರಮದಲ್ಲಿ ಭಾಗವಹಿಸಲು ಜಗತ್ತಿನ ಮೂಲೆ ಮೂಲೆಗಳಿಂದ ಪ್ರಯಾಣ ಬೆಳೆಸಿರುವ ಸಾವಿರಾರು ಯುವಜನತೆಯ ಗುಂಪಿನಲ್ಲಿ ಲೆಬನಾನ್‌ನ ಅವಳಿ ಸಹೋದರರು ಇದ್ದಾರೆ: ಚಾರ್ಬೆಲ್ ಮತ್ತು ಜಿಯೋವಾನಿ ಲೀಟೀಫರು.
"eastern_christians" ಎಂಬ ತಮ್ಮ Instagram ಖಾತೆಯಲ್ಲಿ 600,000ಕ್ಕೂ ಹೆಚ್ಚು ಅನುಯಾಯಿಗಳನ್ನು ಹೊಂದಿರುವ ಸಹೋದರರು, ಮಧ್ಯಪ್ರಾಚ್ಯ ಮತ್ತು ಉತ್ತರ ಆಫ್ರಿಕಾದಲ್ಲಿ ವಾಸಿಸುವ ಕ್ರೈಸ್ತರ ಬಗ್ಗೆ ಮಾಹಿತಿಯನ್ನು ಹಂಚಿಕೊಳ್ಳಲು ತಮ್ಮ ಖಾತೆಯ ಪುಟವನ್ನು ಮೀಸಲಿಟ್ಟಿದ್ದಾರೆ. ತಮ್ಮನ್ನು ಪ್ರಭಾವಿಗಳೆಂದು ನೋಡುವ ಬದಲು, ಅವರು ತಮ್ಮ ಕೆಲಸವನ್ನು ಶತಮಾನಗಳಷ್ಟು ಹಳೆಯದಾದ ಧ್ಯೇಯವನ್ನು ಮುಂದುವರೆಸುವುದಾಗಿ ವಿವರಿಸುತ್ತಾರೆ.
2,000 ವರ್ಷಗಳಷ್ಟು ಹಳೆಯದಾದ ಧ್ಯೇಯವನ್ನು ಮುಂದುವರಿಸುವುದು
ವ್ಯಾಟಿಕನ್ ಸುದ್ಧಿಯ ಜೋಸೆಫ್ ಟುಲ್ಲೊಚ್ ರವರೊಂದಿಗೆ ಮಾತನಾಡಿದ ಜಿಯೋವಾನಿಯು ತಮ್ಮ ಧ್ಯೇಯವನ್ನು ಎರಡು ಸಹಸ್ರಮಾನಗಳ ಹಿಂದೆ ಯೇಸುವಿನೊಂದಿಗೆ ಪ್ರಾರಂಭವಾಯಿತು ಎಂದು ವಿವರಿಸಿದರು. ನಾವು ಅದನ್ನು ಮುಂದುವರಿಸುತ್ತಿದ್ದೇವೆ ಏಕೆಂದರೆ ಅದನ್ನು ತೆಗೆದುಕೊಂಡು ಅದನ್ನು ಬಲಪಡಿಸುವುದು ಮತ್ತು ಅದನ್ನು ರವಾನಿಸುವುದು ಪ್ರತಿ ಪೀಳಿಗೆಯ ಜವಾಬ್ದಾರಿಯಾಗಿದೆ. ನಮ್ಮ ವಿಶ್ವಾಸವು ಸಮುದಾಯಕ್ಕೆ ಕೊಡುಗೆ ನೀಡುವ ಸಮಯವಿದು ಎಂದು ಅವರು ಒತ್ತಿ ಹೇಳಿದರು.
ನೀವು ಮಧ್ಯಪ್ರಾಚ್ಯದಲ್ಲಿ ಕ್ರೈಸ್ತರಾಗಿ ಜನಿಸಿದಾಗ, "ನೀವು ಒಂದು ಧ್ಯೇಯದೊಂದಿಗೆ ಜನಿಸುತ್ತೀರಿ." ಅವರ ಸಂಸ್ಕೃತಿ, ಗುರುತು ಮತ್ತು ಸಂಪ್ರದಾಯಗಳನ್ನು ಆದಿ ಕ್ರೈಸ್ತರಿಂದಲೂ ತಲೆಮಾರುಗಳಿಂದ ರವಾನಿಸಲಾಗಿದೆ ಮತ್ತು ಈ ಅವಳಿ ಸಹೋದರರು "ಈ ಸುಂದರ ಉಡುಗೊರೆಯನ್ನು" ಮುಂದುವರಿಸುವ ಜವಾಬ್ದಾರಿಯನ್ನು ಹೊಂದಿದ್ದಾರೆಂದು ಹಂಚಿಕೊಂಡರು. ಈ ಕಾರ್ಯವು ಮಧ್ಯಪ್ರಾಚ್ಯವನ್ನು ಮೀರಿ ಭೂಮಿಯ ತುದಿಗಳವರೆಗೆ ವಿಸ್ತರಿಸುತ್ತದೆ ಎಂದು ಇಬ್ಬರೂ ಗುರುತಿಸುತ್ತಾರೆ ಮತ್ತು ಸಾಮಾಜಿಕ ಮಾಧ್ಯಮವು ಅದನ್ನು ಸಾಧ್ಯವಾಗಿಸಿದೆ.
ಟಿಕ್‌ಟಾಕ್‌ಗಳು, ರೀಲ್‌ಗಳು ಮತ್ತು ಲೈಕ್‌ಗಳ ಯುಗದಲ್ಲಿ, ಚಾರ್ಬೆಲ್ ಮತ್ತು ಜಿಯೋವಾನಿರವರು ತಮ್ಮ “ಪೂರ್ವ_ಕ್ರೈಸ್ತರ” ಖಾತೆಯು ಕೇವಲ ಸಾಮಾಜಿಕ ಮಾಧ್ಯಮ ಪುಟವಲ್ಲ ಎಂದು ಒತ್ತಿ ಹೇಳುತ್ತಾರೆ. “ಜನರನ್ನು ತಲುಪಲು ಮತ್ತು ಜಾಗೃತಿ ಮೂಡಿಸಲು ಇದು ಉತ್ತಮ ಮಾರ್ಗವಾಗಿದೆ” ಎಂದು ಜಿಯೋವಾನಿರವರು ವಿವರಿಸಿದರು.