ಹುಡುಕಿ

FRANCE-OVERSEAS-POLYNESIA-POLITICS FRANCE-OVERSEAS-POLYNESIA-POLITICS  (AFP or licensors)

ಪೆಸಿಫಿಕ್‌ನಿಂದ ಬಂದ ಯಾತ್ರಿಕರು ಯುವಜನತೆಯ ಜೂಬಿಲಿಗೆ ತಮ್ಮ ಸಂಸ್ಕೃತಿಯನ್ನು ತರುತ್ತಿದ್ದಾರೆ

ಟಹೀಟಿ, ಟೋಂಗಾ ಮತ್ತು ಗುವಾಮ್‌ನ ಮೂವರು ಯಾತ್ರಿಕರು ಯುವಜನತೆಯ ಜೂಬಿಲಿಯಲ್ಲಿ ಭಾಗವಹಿಸುವ ತಮ್ಮ ಉತ್ಸಾಹ ಮತ್ತು ಅವರು ಮನೆಗೆ ಮರಳಿ ತರಲು ಬಯಸುವ ಭರವಸೆ ಮತ್ತು ಶಕ್ತಿಯನ್ನು ವ್ಯಾಟಿಕನ್ ಸುದ್ಧಿಯೊಂದಿಗೆ ಹಂಚಿಕೊಳ್ಳುತ್ತಾರೆ.

ಇಸಾಬೆಲ್ಲಾ ಹೆಚ್. ಡಿ ಕಾರ್ವಾಲ್ಹೋ

12 ಗಂಟೆಗಳ ಸಮಯದ ವ್ಯತ್ಯಾಸವನ್ನು ಒಳಗೊಂಡಂತೆ ಕ್ರಮವಾಗಿ 8 ಮತ್ತು 11 ಗಂಟೆಗಳ ಎರಡು ವಿಮಾನಗಳಲ್ಲಿ ಸುಮಾರು 18,000 ಕಿ.ಮೀ. ಪ್ರಯಾಣ. ಫ್ರೆಂಚ್ ಪಾಲಿನೇಷ್ಯಾದ ಟಹೀಟಿಯಿಂದ ಸುಮಾರು 40 ಯುವಕರು ಮತ್ತು ವಯಸ್ಕರ ಗುಂಪು ಜುಲೈ 28 ರಂದು ಪ್ರಾರಂಭವಾಗಿ ಆಗಸ್ಟ್ 3 ರವರೆಗೆ ರೋಮ್‌ನಲ್ಲಿ ನಡೆಯುವ ಯುವಜನತೆಯ ಜೂಬಿಲಿಗೆ ಭಾಗವಹಿಸಲು ಪ್ರಯಾಣಿಸಿದ ದೂರವದು.

ಕೆಲವು ಯುವಜನರಿಗೆ, ಇದು ಅವರ ಮೊದಲ ಬಾರಿಗೆ ವಿಮಾನ ಹತ್ತುವಿಕೆ ಎಂದು ಗುಂಪಿನ ಜೊತೆಗಿದ್ದ 39 ವರ್ಷದ ಮಾರೆವರೆವಾ ಟ್ಯೂಯಿರಾರವರು ವ್ಯಾಟಿಕನ್ ಸುದ್ಧಿಗೆ ತಿಳಿಸಿದರು. ನಮಗೆ ಕಥೊಲಿಕರಿಗೆ, ರೋಮ್ ನಗರವು ನಮ್ಮ ಮನೆಯಾಗಿದೆ.

ಟಹೀಟಿಯ ಗುಂಪಿನ ಜೊತೆಗೆ, ಗುವಾಮ್‌ನಿಂದ 6 ಯುವಕರು ಮತ್ತು ಟೊಂಗಾದಿಂದ 3 ಯುವಕರು ಈ ಪವಿತ್ರ ವರ್ಷದ ಕಾರ್ಯಕ್ರಮದಲ್ಲಿ ಪೆಸಿಫಿಕ್ ನ್ನು ಪ್ರತಿನಿಧಿಸಲು ಈ ದೀರ್ಘ ಪ್ರಯಾಣವನ್ನು ಕೈಗೊಳ್ಳಲಿದ್ದಾರೆ. ಈ ದೇಶಗಳ ಮೂವರು ಯಾತ್ರಿಕರು ವ್ಯಾಟಿಕನ್ ಸುದ್ಧಿಯೊಂದಿಗೆ ಮಾತನಾಡಿ, ಅವರು ಹೇಗೆ ತಯಾರಿ ನಡೆಸುತ್ತಿದ್ದಾರೆ. ಅವರು ಎದುರಿಸಿದ ಸವಾಲುಗಳು ಮತ್ತು ಈ ಪ್ರವಾಸಕ್ಕಾಗಿ ಅವರ ಭರವಸೆಗಳು ಮತ್ತು ನಿರೀಕ್ಷೆಗಳನ್ನು ಹಂಚಿಕೊಂಡರು.

ಗುವಾಮ್‌ನ ಫ್ರಾಂಕಿ
ನಮ್ಮ ದ್ವೀಪದಲ್ಲಿ ಸುಮಾರು 160,000 ಜನರಿರುವುದರಿಂದ, ಯುವಜನರು ಮತ್ತು ಯುವ ವಯಸ್ಕರ ಗುಂಪಿನೊಂದಿಗೆ ಸಾರ್ವತ್ರಿಕ ಧರ್ಮಸಭೆಯ ಜೂಬಿಲಿಯ ಅನುಭವವನ್ನು ಅನುಭವಿಸಲು ನಾನು ಕಾಯಲು ಸಾಧ್ಯವಿಲ್ಲ. ರೋಮ್‌ನಲ್ಲಿ ನಡೆಯುವ ಸಭೆಯು ಇನ್ನೂ ಅನೇಕರನ್ನು ಒಳಗೊಂಡಿರುತ್ತದೆ, ಮತ್ತು ಇದು ನನಗೆ ಮತ್ತು ನನ್ನ ವಿಶ್ವಾಸದ ಕಣ್ಣು ತೆರೆಸಲಿದೆ.

ಗುವಾಮ್‌ನ ರಾಜಧಾನಿ ಹಗಾಟ್ನಾದ 32 ವರ್ಷದ ಅಪರಾಧಶಾಸ್ತ್ರ ವಿದ್ಯಾರ್ಥಿನಿ ಫ್ರಾಂಕಿ ಕ್ಯಾಸಿಲ್ ರವರು, ಮೊದಲ ಬಾರಿಗೆ ರೋಮ್‌ಗೆ ಬರಲು ಸಾಧ್ಯವಾಗುತ್ತಿರುವುದಕ್ಕೆ ಇನ್ನೂ ವಿಸ್ಮಯಗೊಂಡಿದ್ದಾರೆ. ಅವರು ಅಗಾನಾ ಮಹಾಧರ್ಮಕ್ಷೇತ್ರದಲ್ಲಿರುವ ಯುವ ಮತ್ತು ಯುವ ವಯಸ್ಕರ ಕಚೇರಿಯ ಸ್ವಯಂಸೇವಕರಾಗಿದ್ದು, ಇತರ 5 ಯುವಕರೊಂದಿಗೆ ಬರಲಿದ್ದಾರೆ. ಪವಿತ್ರಾತ್ಮ ಮತ್ತು ದೇವರು ನನ್ನ ಮಾರ್ಗವನ್ನು ಕಳುಹಿಸುವ ಎಲ್ಲದಕ್ಕೂ ನಾನು ಮುಕ್ತನಾಗಿದ್ದೇನೆ ಎಂದು ಅವರು ಹೇಳಿದರು.

ಟೊಂಗಾದ ಲಾಟು: ನಮ್ಮ ನಂಬಿಕೆ ಸಾರ್ವತ್ರಿಕ
ಟೊಂಗಾದ 28 ವರ್ಷದ ನಾಗರಿಕ ಸೇವಕಿ ಲಾಟು ಮಾಲುಪೊಗೆರವರು, ಮೊದಲ ಬಾರಿಗೆ ಬೇರೆ ದೇಶಕ್ಕೆ ಪ್ರಯಾಣಿಸುತ್ತಿದ್ದಾರೆ. ಬಹಳ ದೀರ್ಘ ವಿಮಾನ ಪ್ರಯಾಣದ ಹೊರತಾಗಿಯೂ, ಅವರು ಇದೆಲ್ಲವೂ ಯೋಗ್ಯವಾಗಿದೆ ಎಂದು ಒತ್ತಾಯಿಸುತ್ತಾರೆ. ನಮ್ಮ ವಿಶ್ವಾಸ ಎಷ್ಟು ಬಲವಾಗಿರಬಹುದು ಎಂಬುದನ್ನು ನಾನು ಅನುಭವಿಸಲು ಬಯಸುತ್ತೇನೆ. ನಮ್ಮ ಪುಟ್ಟ ದೇಶದಿಂದ ಇದೆಲ್ಲವೂ ಬಂದ ಸ್ಥಳಕ್ಕೆ ಹೋಗುವುದು ಅದ್ಭುತವಾಗಿದೆ ಎಂದು ಅವರು ಹೇಳಿದರು. "ಕ್ರೈಸ್ತಧರ್ಮ ಮತ್ತು ಕಥೋಲಿಕ್ ಧರ್ಮಸಭೆಯ ವಿಷಯಕ್ಕೆ ಬಂದಾಗ ಇಟಲಿ ಸಂಸ್ಕೃತಿ ಮತ್ತು ಇತಿಹಾಸದಲ್ಲಿ ಬಹಳ ಶ್ರೀಮಂತವಾಗಿದೆ ಎಂದು ನನಗೆ ತಿಳಿದಿದೆ.

ಟಹೀಟಿಯಿಂದ ಮಾರೆವರೆವಾ: ರೋಮ್‌ಗೆ ಸಂಗೀತ ಮತ್ತು ಶಕ್ತಿಯನ್ನು ತರುವುದು
ಟಹೀಟಿಯಿಂದ ಮಾರೆವರೆವಾರವರು ರೋಮ್‌ಗೆ ಸಂಗೀತ ಮತ್ತು ಶಕ್ತಿಯನ್ನು ತರುವುದು ಅದರ ಬಗ್ಗೆ ಯಾವುದೇ ಸಂದೇಹವಿಲ್ಲ. ಟಹೀಟಿಯ ಪಪೀಟೆಯಲ್ಲಿ ತಮ್ಮ ಪ್ರಾರ್ಥನೆಗಳನ್ನು ಅನಿಮೇಟ್ ಮಾಡಲು ಬಳಸುವ ವಾದ್ಯಗಳನ್ನು ರೋಮ್‌ಗೆ ತೀರ್ಥಯಾತ್ರೆಗೆ ತರುತ್ತಾರೆಯೇ ಎಂದು ಕೇಳಿದಾಗ ಮಾರೆವರೆವಾ ಉದ್ಗರಿಸುತ್ತಾರೆ. ನಮ್ಮ ವಾದ್ಯಗಳು ಎಂದಿಗೂ ನಮ್ಮನ್ನು ಬಿಟ್ಟು ಹೋಗುವುದಿಲ್ಲ. ನಾವು ಸಂಗೀತವನ್ನು ಪ್ರೀತಿಸುತ್ತೇವೆ, ನಮ್ಮ ಪ್ರಾರ್ಥನೆಗಳ ಮೂಲಕ ಹಾಗೆಯೇ ಜೀವಿಸುತ್ತೇವೆ ಎಂದು ಅವರು ಹೇಳುತ್ತಾರೆ, ಅವರು ತಮ್ಮ ಪ್ರಾರ್ಥನೆಗಳಲ್ಲಿ ಉಕುಲೆಲೆಗಳು, ಡ್ರಮ್ಸ್, ಪಿಯಾನೋ ಮತ್ತು ಇತರ ಸಂಗೀತ ವಾದ್ಯಗಳನ್ನು ನುಡಿಸಲು ಒಗ್ಗಿಕೊಂಡಿದ್ದಾರೆ ಎಂದು ವಿವರಿಸುತ್ತಾರೆ.
 

25 ಜುಲೈ 2025, 22:51