ಕಥೋಲಿಕ ಸಂಗೀತ ಪ್ರಶಸ್ತಿಗಳು 2025 ರ ಅಂತಿಮ ಸ್ಪರ್ಧಿಗಳನ್ನು ಪ್ರಕಟಿಸುತ್ತವೆ
ದೆಬೊರಾ ಕ್ಯಾಸ್ಟೆಲ್ಲಾನೊ ಲುಬೊವ್
ಕಥೋಲಿಕ ಸಂಗೀತ ಪ್ರಶಸ್ತಿಗಳು 2025ರ ಅಂತಿಮ ಸ್ಪರ್ಧಿಗಳನ್ನು ಘೋಷಿಸಲಾಗಿದೆ ಎಂದು ಸಂಘಟಕರ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
CMA ಗಳು ಸ್ಪ್ಯಾನಿಷ್, ಇಂಗ್ಲಿಷ್, ಇಟಾಲಿಯನ್ ಮತ್ತು ಪೋರ್ಚುಗೀಸ್ ಭಾಷೆಗಳಲ್ಲಿ ಕಥೋಲಿಕ ಸಂಗೀತದಲ್ಲಿನ ಶ್ರೇಷ್ಠತೆಯನ್ನು ಆಚರಿಸುವ ಪ್ರಮುಖ ಅಂತರರಾಷ್ಟ್ರೀಯ ಕಾರ್ಯಕ್ರಮವಾಗಿದೆ. ಪ್ರಶಸ್ತಿ ಪ್ರದಾನ ಸಮಾರಂಭವು ಜುಲೈ 27, 2025 ರ ಭಾನುವಾರ ಸಂಜೆ 7:00 ಗಂಟೆಗೆ ನಡೆಯಲಿದೆ.
ಈ ಕಾರ್ಯಕ್ರಮವು ವ್ಯಾಟಿಕನ್‌ನಲ್ಲಿರುವ ಆಡಿಟೋರಿಯಂ ಕಾನ್ಸಿಲಿಯಾಜಿಯೋನ್‌ನಲ್ಲಿ ನಡೆಯಲಿದೆ ಮತ್ತು ಪ್ರಪಂಚದಾದ್ಯಂತದ ಭಕ್ತವಿಶ್ವಾಸಿಗಳಿಗಾಗಿ ಮತ್ತು ಅಭಿಮಾನಿಗಳಿಗಾಗಿ ಈ ಸಾಮಾಜಿಕ ಜಾಲತಾಣಗಳಲ್ಲಿ ಕಥೋಲಿಕ ಸಂಗೀತದಲ್ಲಿನ ಶ್ರೇಷ್ಠತೆಯನ್ನು ಆಚರಿಸುವ ಪ್ರಮುಖ ಅಂತರರಾಷ್ಟ್ರೀಯ ಕಾರ್ಯಕ್ರಮವು ನೇರ ಪ್ರಸಾರವಾಗಲಿದೆ. CMA ಗಳ ಅಧಿಕೃತ ಜಾಲತಾಣಗಳಲ್ಲಿ/ವೆಬ್‌ಸೈಟ್‌ನಲ್ಲಿ ಅಂತಿಮ ಸ್ಪರ್ಧಿಗಳ ಪಟ್ಟಿಯನ್ನು ಪರಿಶೀಲಿಸಬಹುದು.
ನಂಬಿಕೆಗೆ ಸೇವೆ ಸಲ್ಲಿಸಲು ಸಂಗೀತ ಕಲೆಯನ್ನು ಪ್ರೋತ್ಸಾಹಿಸುವುದು
ಕಾರ್ಡಿನಲ್ ಆಸ್ಕರ್ ರೊಡ್ರಿಗಸ್ ಮರಡಿಯಾಗಾರವರು ಮತ್ತು ಸಹೋದರ ರಿಕಾರ್ಡೊ ಗ್ರ್ಜೋನಾರವರ ನೇತೃತ್ವದ ಭ್ರಾತೃತ್ವ ಮತ್ತು ಫೌಂಡೇಶನ್ ರಾಮನ್ ಪ್ಯಾನೆರವರ ಕಲ್ಪನೆಯಿಂದ, ವಿಶ್ವಾಸದ ಸೇವೆಯಲ್ಲಿ ಸಂಗೀತ ಕಲೆಯನ್ನು ಉತ್ತೇಜಿಸಲು ಮತ್ತು ಪ್ರೋತ್ಸಾಹಿಸಲು ರಚಿಸಲಾಗಿದೆ. ಪತ್ರಿಕಾ ಪ್ರಕಟಣೆಯಲ್ಲಿ ವಿವರಿಸಿದಂತೆ, ಪ್ರಶಸ್ತಿಯನ್ನು ಸಂಗೀತದ ಮೂಲಕ ಕ್ರೈಸ್ತೀಯ ಮೌಲ್ಯಗಳನ್ನು ಉತ್ತೇಜಿಸುವ ಕಲಾವಿದರು ಮತ್ತು ಸಮುದಾಯಗಳಿಗೆ ಅಂತರ್ಸಾಂಸ್ಕೃತಿಕ ಮತ್ತು ಬಹುಭಾಷಾ ದೃಷ್ಟಿಕೋನದೊಂದಿಗೆ ಉಲ್ಲೇಖವಾಗಿ ಕ್ರೋಢೀಕರಿಸಲಾಗಿದೆ.
ಈ ಮೊದಲ ಆವೃತ್ತಿಯು ವಿವಿಧ ಪ್ರಕಾರಗಳು, ಶೈಲಿಗಳು ಮತ್ತು ಪಾಲನಾ ಸೇವೆಯ ಉದ್ದೇಶಗಳನ್ನು ಒಳಗೊಂಡ 19 ವಿಭಾಗಗಳನ್ನು ಒಳಗೊಂಡಿದೆ, ಸ್ಪರ್ಧೆಯಲ್ಲಿ ಕೃತಿಗಳ ಕಲಾತ್ಮಕ ಪ್ರತಿಭೆ, ತಾಂತ್ರಿಕ ಗುಣಮಟ್ಟ ಮತ್ತು ಆಧ್ಯಾತ್ಮಿಕ ಪ್ರಭಾವವನ್ನು ಗುರುತಿಸುತ್ತದೆ.
ವಿಭಾಗಗಳು ಈ ಕೆಳಗಿನಂತಿವೆ: ಅತ್ಯುತ್ತಮ ಆಲ್ಬಮ್; ಅತ್ಯುತ್ತಮ ಮಹಿಳಾ ಗಾಯಕಿ; ಅತ್ಯುತ್ತಮ ಪುರುಷ ಗಾಯಕಿ; ಅತ್ಯುತ್ತಮ ಅಪ್ರಕಟಿತ ಹಾಡು; ಅತ್ಯುತ್ತಮ ಪ್ರಾರ್ಥನಾ ಗೀತೆ; ಅತ್ಯುತ್ತಮ ಹೊಗಳಿಕೆಯ ಹಾಡು; ಅತ್ಯುತ್ತಮ ಸುವಾರ್ತಾಬೋಧನಾ ಗೀತೆ; ಅತ್ಯುತ್ತಮ ಮಾತೆ ಮರಿಯಳ ಹಾಡು; ಧರ್ಮೋಪದೇಶರಿಗಾಗಿ ಅತ್ಯುತ್ತಮ ಹಾಡು; ಅತ್ಯುತ್ತಮ ಧರ್ಮಕೇಂದ್ರದವರ ಗಾನವೃಂದ; ಅತ್ಯುತ್ತಮ ಪಾಪ್ ಹಾಡು; ಅತ್ಯುತ್ತಮ ಉಷ್ಣವಲಯದ ಹಾಡು; ಅತ್ಯುತ್ತಮ ಗುಂಪು, ಬ್ಯಾಂಡ್ ಅಥವಾ ಜೋಡಿ; ಅತ್ಯುತ್ತಮ ನಗರ ಹಾಡು; ಅತ್ಯುತ್ತಮ ರಾಕ್ ಹಾಡು; ಯಾವುದೇ ಭಾಷೆಯಲ್ಲಿ ಅತ್ಯುತ್ತಮ ಹಾಡು; ಅತ್ಯುತ್ತಮ ನಿರ್ಮಾಣ; ಅತ್ಯುತ್ತಮ ಧ್ವನಿ ಎಂಜಿನಿಯರಿಂಗ್; ಮತ್ತು, ಅತ್ಯುತ್ತಮ ಸಂಗೀತ ವೀಡಿಯೊ.
ಸುವಾರ್ತಾಬೋಧನೆಯ ವಿಷಯ, ಕಲಾತ್ಮಕ ಮೌಲ್ಯ ಮತ್ತು ತಾಂತ್ರಿಕ ವೃತ್ತಿಪರತೆಯ ಎಚ್ಚರಿಕೆಯ ಮೌಲ್ಯಮಾಪನದ ನಂತರ, ಅಂತಿಮ ಸ್ಪರ್ಧಿಗಳನ್ನು ಸಂಗೀತ ಮತ್ತು ಪಾಲನಾ ಸೇವೆಯ ಆರೈಕೆಯ ಪ್ರಪಂಚದ ತಜ್ಞರನ್ನು ಒಳಗೊಂಡ ಅಂತರರಾಷ್ಟ್ರೀಯ ತೀರ್ಪುಗಾರರು ಆಯ್ಕೆ ಮಾಡಿದರು.
ಜುಲೈ 26 ರ ಶನಿವಾರ ಬೆಳಿಗ್ಗೆ 11 ಗಂಟೆಗೆ ವ್ಯಾಟಿಕನ್‌ನಲ್ಲಿ ಪತ್ರಿಕಾಗೋಷ್ಠಿ ನಡೆಯಲಿದ್ದು, ನಂತರ ಭಾನುವಾರ ಸಂಜೆ ಸಭಾಂಗಣದಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ.