ನೈಜೀರಿಯಾದ ಗುರುವಿದ್ಯಾಮಂದಿರದ ಮೇಲೆ ದಾಳಿ: ಗುರುವಿದ್ಯಾಮಂದಿರದ ವಿದ್ಯಾರ್ಥಿಗಳನ್ನು ಅಪಹರಿಸಲಾಗಿದೆ
ವ್ಯಾಟಿಕನ್ ಸುದ್ದಿ
ಜುಲೈ 10ರ ಗುರುವಾರ, ನೈಜೀರಿಯಾದ ಎಡೊ ರಾಜ್ಯದ ಇವಿಯಾನೋಕ್ಪೋಡಿಯಲ್ಲಿರುವ ಗುರುವಿದ್ಯಾಮಂದಿರದ ಮೇಲೆ ನಡೆದ ಸಶಸ್ತ್ರ ದಾಳಿಯಲ್ಲಿ 3 ಅಪಹರಿಸಲಾಯಿತು ಮತ್ತು ಒಬ್ಬ ಭದ್ರತಾ ಅಧಿಕಾರಿ ಸಾವನ್ನಪ್ಪಿದರು ಎಂದು ಜುಲೈ 12 ರಂದು ಫೈಡ್ಸ್ ಸುದ್ದಿ ಸಂಸ್ಥೆ ವರದಿ ಮಾಡಿದೆ.
ಲೇಖನದ ಪ್ರಕಾರ, ಔಚಿ ಧರ್ಮಕ್ಷೇತ್ರದ ಒಂದು ಹೇಳಿಕೆಯನ್ನು ಬಿಡುಗಡೆ ಮಾಡಿದ್ದು, ನಿರ್ಮಲ ಮಾತೆಯ ಗುರುವಿದ್ಯಾಮಂದಿರದಲ್ಲಿ ರಾತ್ರಿ 9:00 ಗಂಟೆಯ ನಂತರ ಅಪಹರಣ ಸಂಭವಿಸಿದೆ ಎಂದು ವಿವರಿಸಿದೆ.
ಇತರ ಗುರುವಿದ್ಯಾಮಂದಿರದ ವಿದ್ಯಾರ್ಥಿಗಳನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಯಿತು
ಘಟನೆಯ ತನಿಖೆ ನಡೆಸುತ್ತಿರುವ ಪೊಲೀಸ್ ಅಧಿಕಾರಿಗಳು ಇದನ್ನು ಅನಾಗರಿಕ ಮಾತ್ರವಲ್ಲ, ಸಾರ್ವಜನಿಕ ಶಾಂತಿ ಮತ್ತು ಭದ್ರತೆಯ ಮೇಲಿನ ನೇರ ದಾಳಿ ಮತ್ತು ಧಾರ್ಮಿಕ ಸಂಸ್ಥೆ ಮತ್ತು ಮುಗ್ಧ ಯುವ ವಿದ್ಯಾರ್ಥಿಗಳ ವಿರುದ್ಧದ ಅರ್ಥಹೀನ ಹಿಂಸಾಚಾರ ಎಂದು ಬಣ್ಣಿಸಿದ್ದಾರೆ ಎಂದು ಫೈಡ್ಸ್ ವರದಿ ಮಾಡಿದೆ. ನಿರ್ಮಲ ಮಾತೆಯ ಗುರುವಿದ್ಯಾಮಂದಿರದಲ್ಲಿ ಸಾಕಷ್ಟು ಭದ್ರತಾ ಕ್ರಮಗಳನ್ನು ಜಾರಿಗೆ ತರುವವರೆಗೆ ಇತರ ಗುರುವಿದ್ಯಾಮಂದಿರಗಳನ್ನು ತಾತ್ಕಾಲಿಕವಾಗಿ ಸುರಕ್ಷಿತ ಪ್ರದೇಶಕ್ಕೆ ಸ್ಥಳಾಂತರಿಸಲಾಗಿದೆ.
ಅಪಹರಣಕಾರರ ಹೃದಯ ಮತ್ತು ಮನಸ್ಸನ್ನು ದೇವರು ದೇವರು ಪರಿವರ್ತಿಸಿ ಒಳ್ಳೆಯ ಗುಣಗಳಿಂದ ಬೆಳಗಿಸಲಿ ಎಂದು ಪ್ರಾರ್ಥಿಸಲು ಈ ದಿನಗಳಲ್ಲಿ ಧರ್ಮಕೇಂದ್ರದ ಎಲ್ಲಾ ಭಕ್ತಾಧಿಗಳು ಯೇಸುವಿನ ಅತ್ಯಂತ ಅಮೂಲ್ಯವಾದ ರಕ್ತದ ಸ್ಮರಾಣಾರ್ಥವಾಗಿ ದಿವ್ಯಬಲಿಪೂಜೆಯನ್ನು ಆಚರಿಸಬೇಕೆಂದು ಧರ್ಮಾಧ್ಯಕ್ಷರಾದ ದುನಿಯಾರವರು ವಿನಂತಿಸಿದರು.
ಒಂದು ವರ್ಷಕ್ಕಿಂತ ಕಡಿಮೆ ಅವಧಿಯಲ್ಲಿ ಎರಡನೇ ದಾಳಿ
ಒಂದು ವರ್ಷಕ್ಕಿಂತ ಕಡಿಮೆ ಅವಧಿಯಲ್ಲಿ ಈ ಗುರುವಿದ್ಯಾಮಂದಿರದ ಮೇಲೆ ದಾಳಿ ನಡೆದಿರುವುದು ಇದು ಎರಡನೇ ಬಾರಿ. ಅಕ್ಟೋಬರ್ 2024ರಲ್ಲಿ ಶಸ್ತ್ರಸಜ್ಜಿತ ಬಂದೂಕುಧಾರಿಗಳು ಗುರುವಿದ್ಯಾಮಂದಿರದ ಪ್ರಾರ್ಥನಾ ಮಂದಿರಕ್ಕೆ ನುಗ್ಗಿ ಸಂಸ್ಥೆಯ ರೆಕ್ಟರ್ ಧರ್ಮಗುರು ಥಾಮಸ್ ಓಯೋಡ್ ರವರನ್ನು ಅಪಹರಿಸಿದರು. 11 ದಿನಗಳ ಸೆರೆಯಲ್ಲಿದ್ದ ನಂತರ ನವೆಂಬರ್ 7 ರಂದು ಅವರನ್ನು ಬಿಡುಗಡೆ ಮಾಡಲಾಯಿತು.
ಈ ಗುರುವಿದ್ಯಾಮಂದಿರವು ಒಂದು ಪ್ರತ್ಯೇಕ ಪ್ರಕರಣವಲ್ಲ ಏಕೆಂದರೆ ಕಳೆದ ಒಂದು ದಶಕದಿಂದ ನೈಜೀರಿಯಾದ ಕಥೋಲಿಕ ಧರ್ಮಸಭೆಯಲ್ಲಿ ಯಾಜಕರು, ಗುರುವಿದ್ಯಾಮಂದಿರದ ವಿದ್ಯಾರ್ಥಿಗಳು ಮತ್ತು ಇತರ ಧಾರ್ಮಿಕ ಸಿಬ್ಬಂದಿಯನ್ನು ಗುರಿಯಾಗಿಸಿಕೊಂಡು ಅಪಹರಣಗಳ ಸಂಖ್ಯೆ ಆತಂಕಕಾರಿಯಾಗಿ ಹೆಚ್ಚಾಗಿದೆ. ಮಾರ್ಚ್ 2025ರಲ್ಲಿ ಫೈಡ್ಸ್ ಒಂದು ವರದಿಯನ್ನು ಬಿಡುಗಡೆ ಮಾಡಿತು, ಇದು 2015 ಮತ್ತು 2025ರ ನಡುವೆ ಒಟ್ಟು 145 ಯಾಜಕರನ್ನು ಅಪಹರಿಸಲಾಗಿದೆ ಮತ್ತು ಅದರಲ್ಲಿ 11 ಮಂದಿ ಕೊಲ್ಲಲ್ಪಟ್ಟಿದ್ದಾರೆ ಎಂದು ಸೂಚಿಸುತ್ತಿದೆ. ಆರ್ಥಿಕ ಪರಿಸ್ಥಿತಿ ಹದಗೆಟ್ಟಿರುವುದರಿಂದ ಸುಲಿಗೆ ಪಡೆಯಲು ಅಪಹರಣವು ದೇಶದಲ್ಲಿ ಒಂದು ಪ್ರವರ್ಧಮಾನಕ್ಕೆ ಬರುತ್ತಿರುವ ಉದ್ಯಮವಾಗಿದೆ.