ಯುವಜನರಿಗಾಗಿ ಯುವಜನತೆ: ಮಾತೆಮೇರಿಯ ಬಿಸಿಯೂಟವು ಜೂಬಿಲಿಯ ಭರವಸೆಯನ್ನು ತರುತ್ತದೆ
ಫ್ರಾನ್ಸೆಸ್ಕಾ ಮೆರ್ಲೊ
ಯುವಜನತೆಯ ಜೂಬಿಲಿ ಆರಂಭವಾಗುತ್ತಿದ್ದಂತೆ, ರೋಮ್‌ನಲ್ಲಿನ ಬೀದಿಗಳು ಮತ್ತೊಮ್ಮೆ ಯಾತ್ರಿಕರ ಸದ್ದಿನಿಂದ ತುಂಬಿವೆ. ಜೂಬಿಲಿಯನ್ನು ಗಮನಿಸಿದರೆ ಅದು ಆಶ್ಚರ್ಯವೇನಲ್ಲದಿದ್ದರೂ, ಈ ಬಾರಿ, ಶಕ್ತಿಯು ವಿಭಿನ್ನವಾಗಿದೆ: ಹಾಡುಗಳು ವೇಗವಾಗಿರುತ್ತವೆ ಮತ್ತು ಹೆಜ್ಜೆಗಳು ಹಗುರವಾಗಿರುತ್ತವೆ. ಇತ್ತೀಚೆಗೆ ಮಾಧರ್ಮಾಧ್ಯಕ್ಷರಾದ ರಿನೋ ಫಿಸಿಚೆಲ್ಲಾರವರು "ಬಹುಶಃ ವರ್ಷದ ಅತ್ಯಂತ ನಿರೀಕ್ಷಿತ ಕಾರ್ಯಕ್ರಮ" ಎಂದು ವಿವರಿಸಿದ್ದಕ್ಕಾಗಿ, ಶಾಶ್ವತ ನಗರವು ಪ್ರಪಂಚದಾದ್ಯಂತದ ಒಂದು ಮಿಲಿಯನ್‌ಗಿಂತಲೂ ಹೆಚ್ಚು ಯುವಜನತೆಯನ್ನು ಸ್ವಾಗತಿಸುತ್ತಿದೆ.
ಭರವಸೆಯ ಸಂದೇಶವನ್ನು ತರುವ ಅನೇಕರಲ್ಲಿ ಮಾತೆಮೇರಿಯ ಬಿಸಿಯೂಟವನ್ನು ಪ್ರತಿನಿಧಿಸುವವರು ಸೇರಿದ್ದಾರೆ, ಇದು ಜಾಗತಿಕ ಶಾಲಾ ಆಹಾರ ದತ್ತಿ ಸಂಸ್ಥೆಯಾಗಿದ್ದು, ಅದು ಘೋಷಿಸಲು ಇಷ್ಟಪಡುವ ಸಮೀಕರಣವನ್ನು ಸಾಕಾರಗೊಳಿಸುತ್ತದೆ: ಆಹಾರ + ಶಾಲೆ = ಭರವಸೆ.
ಉದ್ದೇಶದ ಉಪಸ್ಥಿತಿ
ಆಚರಣಾ ವಾರದಲ್ಲಿ ಮಾತೆಮೇರಿಯ ಬಿಸಿಯೂಟವು ರೋಮ್‌ನಾದ್ಯಂತ ಚೌಕಗಳಲ್ಲಿ ನಡೆಯಲಿದ್ದು, ಆಗಸ್ಟ್ 2 ರಂದು ಟೋರ್ ವರ್ಗಾಟಾದಲ್ಲಿ ವಿಶ್ವಗುರು ಹದಿನಾಲ್ಕನೇ ಲಿಯೋರವರ ನೇತೃತ್ವದ ಪ್ರಾರ್ಥನಾ ಜಾಗರಣೆಯಲ್ಲಿ ಭಾಗವಹಿಸಲಿದೆ - 2000ನೇ ಇಸವಿಯಲ್ಲಿ ವಿಶ್ವ ಯುವ ದಿನವನ್ನು ಆಯೋಜಿಸಿದಾಗಿನಿಂದ ಇದು ಈಗಾಗಲೇ ಅನೇಕ ಜನರ ಹೃದಯಗಳನ್ನು ಸ್ಪರ್ಶಿಸಿದ ಸ್ಥಳವಾಗಿದೆ.
ಭರವಸೆ ನಿರಾಸೆಗೊಳಿಸುವುದಿಲ್ಲ
ತೆರೆಮರೆಯಲ್ಲಿ ಕಾರ್ಯನಿರ್ವಹಿಸುವ ಮಾತೆಮೇರಿಯ ಬಿಸಿಯೂಟದ ಜೀವನಕ್ಕೆ ಆಧಾರವಾಗಿರುವ ಆಹಾರ ಮತ್ತು ಘನತೆಯನ್ನು ಹೆಚ್ಚು ಅಗತ್ಯವಿರುವವರಿಗೆ ತಲುಪಿಸುತ್ತದೆ. ಹಸಿವು ಅನಿವಾರ್ಯವಲ್ಲ, ಶಿಕ್ಷಣವು ಒಂದು ಹಕ್ಕು ಮತ್ತು ಯಾವುದೇ ಮಗು ಕೇವಲ ಬದುಕಬೇಕಾಗಿಲ್ಲ ಎಂದು ಅದು ಜಗತ್ತಿಗೆ ನೆನಪಿಸುತ್ತದೆ.
ವ್ಯಾಟಿಕನ್ ಸುದ್ಧಿಯವರ ಜೊತೆ ಮಾತನಾಡಿದ ಮಾತೆಮೇರಿಯ ಬಿಸಿಯೂಟದ ಅಂತರರಾಷ್ಟ್ರೀಯ ಮಾಧ್ಯಮ ವ್ಯವಸ್ಥಾಪಕಿ ಪಲೋಮಾ ಗಾರ್ಸಿಯಾ ಒವೆಜೆರೊರವರು, ಜೂಬಿಲಿಯು ದತ್ತಿ ಸಂಸ್ಥೆಗೆ ಒಂದು ಕನಸು ನನಸಾಗಿದೆ ಎಂದು ಹೇಳುತ್ತಾರೆ. "ಭರವಸೆ ನಮ್ಮ ಗುರುತಿನ ಭಾಗವಾಗಿದೆ" ಎಂದು ಅವರು ವಿವರಿಸುತ್ತಾರೆ. "ನಾವು ಪ್ರತಿ ಶಾಲಾ ದಿನದಲ್ಲಿ ಸುಮಾರು ಮೂರು ಮಿಲಿಯನ್ ಮಕ್ಕಳಿಗೆ ಆಹಾರವನ್ನು ನೀಡುತ್ತೇವೆ. ಆದರೆ ಇನ್ನೂ 67 ಮಿಲಿಯನ್ ಮಕ್ಕಳು ಒಂದು ಹೊತ್ತಿನ ಊಟಕ್ಕೆ ಕಾಯುತ್ತಿದ್ದಾರೆ. ಒಂದು ಮಗುವಿಗೆ ಆಹಾರವನ್ನು ನೀಡಲು ವರ್ಷಕ್ಕೆ ಕೇವಲ €22 ವೆಚ್ಚವಾಗುತ್ತದೆ. ಅಂದರೆ ಎಲ್ಲರೂ - ಪ್ರತಿಯೊಬ್ಬ ವ್ಯಕ್ತಿಯೂ - ಸಹಾಯ ಮಾಡಬಹುದು."
ಗಾರ್ಸಿಯಾ ಒವೆಜೆರೊರವರು ಇಂದು ಅನೇಕ ಯುವಕರು ಸ್ಥಳಾಂತರ, ಹವಾಮಾನ ವಿಕೋಪ ಮತ್ತು ಮಾನವ ನಿರ್ಮಿತ ಸಂಘರ್ಷದ ಜಗತ್ತಿನಲ್ಲಿ ಬೆಳೆಯುತ್ತಿದ್ದಾರೆ ಎಂಬ ವಾಸ್ತವವನ್ನು ಪ್ರತಿಬಿಂಬಿಸುತ್ತಾರೆ. "ಹೆಚ್ಚಾಗಿ ಯುವಕರು ಹೆಚ್ಚು ಹತಾಶರಾಗುತ್ತಾರೆ. ಆದರೆ ಮಾತೆಮೇರಿಯ ಬಿಸಿಯೂಟದಲ್ಲಿ, ಅವರು ಭರವಸೆಯ ನಟರಾಗುವುದನ್ನು ನಾವು ನೋಡುತ್ತೇವೆ.