ಹುಡುಕಿ

Japan marks 80th anniversary of Hiroshima atomic bombing Japan marks 80th anniversary of Hiroshima atomic bombing  (ANSA)

ಹಿರೋಷಿಮಾ ವಾರ್ಷಿಕೋತ್ಸವದಂದು ಕಾರ್ಡಿನಲ್ ಕ್ಯುಪಿಚ್: ರೂಪಾಂತರವು ಶಾಂತಿಯ ಹಾದಿಯನ್ನು ಬಹಿರಂಗಪಡಿಸುತ್ತದೆ

ಹಿರೋಷಿಮಾದಲ್ಲಿ, ಪರಮಾಣು ಬಾಂಬ್ ದಾಳಿಯ 80 ನೇ ವಾರ್ಷಿಕೋತ್ಸವದಂದು, ಕಾರ್ಡಿನಲ್ ಬ್ಲೇಸ್ ಕ್ಯುಪಿಚ್ ರವರು ರೂಪಾಂತರದ ಹಬ್ಬದಂದು ಶಾಂತಿಗಾಗಿ ದಿವ್ಯಬಲಿಪೂಜೆಯಲ್ಲಿಅಧ್ಯಕ್ಷತೆ ವಹಿಸುತ್ತಾರೆ. ತಮ್ಮ ಪ್ರಬೋಧನೆಯಲ್ಲಿ, ಅವರು ವಿಶ್ವಗುರು ಫ್ರಾನ್ಸಿಸ್ ರವರ ಕರೆಯನ್ನು ಪ್ರತಿಧ್ವನಿಸುತ್ತಾರೆ, ನೆನಪಿಸಿಕೊಳ್ಳಿ, ಒಟ್ಟಿಗೆ ಪ್ರಯಾಣಿಸಿ ಮತ್ತು ಪರಸ್ಪರ ರಕ್ಷಿಸಿ, ಜಾಗತಿಕ ಸಮುದಾಯವು ವಿಭಜನೆಯನ್ನು ತಿರಸ್ಕರಿಸಿ ಶಾಂತಿಯ ಮಾರ್ಗವನ್ನು ಆರಿಸಿಕೊಳ್ಳುವಂತೆ ಒತ್ತಾಯಿಸುತ್ತಾರೆ.

ಲಿಂಡಾ ಬೋರ್ಡೋನಿ

ಹಿರೋಷಿಮಾ ಮತ್ತು ನಾಗಾಸಾಕಿಯ ಪರಮಾಣು ಬಾಂಬ್ ದಾಳಿಯ 80 ನೇ ವಾರ್ಷಿಕೋತ್ಸವವನ್ನು ಆಚರಿಸುತ್ತಾ, ಕಾರ್ಡಿನಲ್ ಬ್ಲೇಸ್ ಕ್ಯುಪಿಚ್ ರವರು ಜಪಾನ್‌ನಲ್ಲಿ ಇತರ ಧರ್ಮಸಭೆಯ ನಾಯಕರೊಂದಿಗೆ ಶಾಂತಿಯ ತೀರ್ಥಯಾತ್ರೆಯಲ್ಲಿದ್ದಾರೆ, ಅಹಿಂಸೆ ಮತ್ತು ಪರಮಾಣು ಶಸ್ತ್ರಾಸ್ತ್ರಗಳ ನಿರ್ಮೂಲನೆಗೆ ಧರ್ಮಸಭೆಯ ಬದ್ಧತೆಯನ್ನು ಎತ್ತಿ ತೋರಿಸುತ್ತಾರೆ ಮತ್ತು ಎತ್ತಿಹಿಡಿಯುತ್ತಾರೆ.

ರೂಪಾಂತರದ ಹಬ್ಬದಂದು ಶಾಂತಿಗಾಗಿ ದಿವ್ಯಬಲಿಪೂಜೆಯ ಅಧ್ಯಕ್ಷತೆ ವಹಿಸುತ್ತಾ, ಚಿಕಾಗೋದ ಮಹಾಧರ್ಮಾಧ್ಯಕ್ಷರಾದವರು ಹಿರೋಷಿಮಾದಲ್ಲಿ ತಮ್ಮ ಪ್ರಬೋಧನೆಯನ್ನು ನೀಡಿದರು, ಆಗಸ್ಟ್ 6, 1945ರಂದು ಜಗತ್ತು ಮೊದಲು ಪರಮಾಣು ಯುದ್ಧದ ವಿನಾಶಕಾರಿ ಶಕ್ತಿಯನ್ನು ಕಂಡ ನಗರವೇ ಅದು.

ಕಾರ್ಡಿನಲ್ ಕ್ಯುಪಿಚ್ ರವರು ತಮ್ಮ ಪ್ರಬೋಧನೆಯಲ್ಲಿ, ದೈವಿಕತೆಯನ್ನು ಬಹಿರಂಗಪಡಿಸುವಿಕೆಯ ಒಂದು ಕ್ಷಣವಾದ ರೂಪಾಂತರದ ಬೆಳಕನ್ನು ಮತ್ತೊಂದು, ಹೆಚ್ಚು ಭಯಾನಕ ಬೆಳಕಿನಿಂದ ಹೇಗೆ ಮರೆಮಾಡಲಾಯಿತು ಎಂಬುದನ್ನು ನೆನಪಿಸಿಕೊಂಡರು: ಪರಮಾಣು ಬಾಂಬ್‌ನ ಮಿಂಚು.

ತಾಬೋರ್‌ನಲ್ಲಿ, ತಂದೆಯ ಪುತ್ರರು ಮತ್ತು ಪುತ್ರಿಯರಾಗಿ ದೈವಿಕ ಮಹಿಮೆಯಲ್ಲಿ ಶಾಶ್ವತವಾಗಿ ಹಂಚಿಕೊಳ್ಳಲು ನಮ್ಮ ಕರೆಯನ್ನು ಬೆಳಕು ಬಹಿರಂಗಪಡಿಸಿತು ಎಂದು ಅವರು ಹೇಳಿದರು. ಆದರೆ "ಹಿರೋಷಿಮಾದಲ್ಲಿ, ಬೆಳಕು ಊಹಿಸಲಾಗದಂತಹ ವಿನಾಶ, ಕತ್ತಲೆ ಮತ್ತು ಸಾವನ್ನು ತಂದಿತು."

ಮಾನವ ವಿನಾಶದ ಸಾಮರ್ಥ್ಯತೆ
ಎರಡು ಘಟನೆಗಳ ನಡುವಿನ ತೀವ್ರ ವ್ಯತ್ಯಾಸವನ್ನು ಕಾರ್ಡಿನಲ್ ಎಲ್ಲಾ ಮಾನವೀಯತೆಯ ಆತ್ಮಸಾಕ್ಷಿಗೆ ಒಂದು ಕರೆ ಎಂದು ಬಣ್ಣಿಸಿದರು.

"ನಮ್ಮ ಮಾನವ ಹೃದಯಗಳಲ್ಲಿರುವ ವಿನಾಶದ ಸಾಮರ್ಥ್ಯವನ್ನು ಒಪ್ಪಿಕೊಳ್ಳಲು ಈ ದಿನದಂದು ನಾವು ಒತ್ತಾಯಿಸಲ್ಪಡುತ್ತೇವೆ" ಎಂದು ಅವರು ಎಚ್ಚರಿಸಿದರು, ಪರಮಾಣು ವಿದಳನದ ಸರಪಳಿ ಕ್ರಿಯೆಯನ್ನು ವಿಭಜನೆ, ಅಸಮಾಧಾನ ಮತ್ತು ದ್ವೇಷದ ಸಾಮಾಜಿಕ ಅಪಾಯಗಳಿಗೆ ಹೋಲಿಸಿ ಅದರ ಬಗ್ಗೆ ವಿವರಿಸಿದರು.

ಒಗ್ಗಟ್ಟಿಗೆ ಮನವಿ
ಜಗತ್ತು ಜಾಗತಿಕ ಅಸ್ಥಿರತೆ, ಯುದ್ಧ ಮತ್ತು ಪರಮಾಣು ಪ್ರಸರಣದ ಬೆದರಿಕೆಯನ್ನು ಎದುರಿಸುತ್ತಿರುವಾಗ, ಮಾನವ ಜಾಣ್ಮೆಯನ್ನು ವಿನಾಶದಿಂದ ಒಗ್ಗಟ್ಟಿನ ಕಡೆಗೆ ಪರಿವರ್ತಿಸಲು ಕಾರ್ಡಿನಲ್ ರವರು ಭಕ್ತವಿಶ್ವಾಸಿಗಳು ಮತ್ತು ನಾಯಕರಿಗೆ ಕರೆ ನೀಡಿದರು.

80 ವರ್ಷಗಳ ಹಿಂದೆ ಈ ದಿನದಂದು, ಊಹಿಸಲಾಗದ ವಿನಾಶಕ್ಕೆ ಕಾರಣವಾದ ಮಾನವ ಜಾಣ್ಮೆಯ ಆತಂಕಕಾರಿ ದುರುಪಯೋಗವನ್ನು ಜಗತ್ತು ಕಂಡಿತು ಎಂದು ಅವರು ಹೇಳಿದರು. ಆದ್ದರಿಂದ ಈ ಬೆಳಿಗ್ಗೆ, ಶಾಶ್ವತ ಶಾಂತಿಯತ್ತ ಹೊಸ ಮಾರ್ಗಗಳನ್ನು ಸೃಷ್ಟಿಸುವ ಮೂಲಕ ದೇವರು ನಮಗಾಗಿ ಯಾವಾಗಲೂ ಹೊಂದಿದ್ದ ದೃಷ್ಟಿಕೋನವನ್ನು ಉಳಿಸಿಕೊಳ್ಳಲು ಮತ್ತು ನಮ್ಮದಾಗಿಸಿಕೊಳ್ಳಲು ನಾವು ಕರೆಯಲ್ಪಟ್ಟಿದ್ದೇವೆ.
 

06 ಆಗಸ್ಟ್ 2025, 18:07