ಬೆನಿನೀಸ್ ಧರ್ಮಾಧ್ಯಕ್ಷ: ಜಿಹಾದಿ ದಾಳಿಗಳು ಧರ್ಮಸಭೆಯ ಚಟುವಟಿಕೆಯನ್ನು ತಡೆಯುವ ಗುರಿ
ಕೀಲ್ಸ್ ಗುಸ್ಸಿ
ಸೆಪ್ಟೆಂಬರ್ 10 ರಂದು, ನೈಜೀರಿಯಾದ ಜಿಹಾದಿ ಗುಂಪು ಬೆನಿನ್‌ನ ಧರ್ಮಕ್ಷೇತ್ರದಲ್ಲಿರುವ ಕಲಾಲೆ ಗ್ರಾಮದ ಮೇಲೆ ದಾಳಿ ಮಾಡಿತು. ಎನ್'ಡಾಲಿಯ ಧರ್ಮಾಧ್ಯಕ್ಷರಾದ ಮಾರ್ಟಿನ್ ಅಡ್ಜೌ ಮೌಮೌನಿರವರು ವ್ಯಾಟಿಕನ್‌ನ ಫೈಡ್ಸ್ ಸುದ್ದಿ ಸಂಸ್ಥೆಗೆ ಜಿಹಾದಿಗಳು ಮತ್ತಷ್ಟು ದಾಳಿಗಳನ್ನು ಘೋಷಿಸಿದ್ದಾರೆ ಮತ್ತು ಎಲ್ಲರೂ ಚಿಂತಿತರಾಗಿದ್ದಾರೆ ಎಂದು ಹೇಳಿದರು.
ಹಿಂಸಾಚಾರದ ಬೆದರಿಕೆಗೆ ಒಳಗಾದ ಸಮುದಾಯ
ಈ ದಾಳಿಗಳ ಗುರಿ ಸೈನಿಕರು ಮತ್ತು ಪೊಲೀಸ್ ಅಧಿಕಾರಿಗಳನ್ನು ಅಪಹರಿಸಿ ನಂತರ ಬೆನಿನ್‌ನಲ್ಲಿ ಜೈಲಿನಲ್ಲಿರುವ ಅವರ ನಾಯಕರೊಂದಿಗೆ ಅವರನ್ನು ವಿನಿಮಯ ಮಾಡಿಕೊಳ್ಳುವ ಉದ್ದೇಶವಿದೆ ಎಂದು ಧರ್ಮಾಧ್ಯಕ್ಷರಾದ ಮೌಮೌನಿರವರು ವಿವರಿಸಿದರು. 200ಕ್ಕೂ ಹೆಚ್ಚು ಜಿಹಾದಿಗಳು ಆ ಪ್ರದೇಶದ ಭದ್ರತಾ ಪಡೆಗಳನ್ನು ಗುರಿಯಾಗಿಸಿಕೊಂಡು ಹತ್ತಿರದ ಮಿಲಿಟರಿ ನೆಲೆಯಲ್ಲಿ ಸೈನಿಕರ ಮೇಲೆ ಹೊಂಚು ಹಾಕಿ ಸ್ಥಳೀಯ ಪೊಲೀಸ್ ಠಾಣೆಯ ಮೇಲೆ ದಾಳಿ ನಡೆಸಿದ್ದಾರೆಂದು ಅವರು ಒತ್ತಿ ಹೇಳಿದರು.
ಧರ್ಮಾಧ್ಯಕ್ಷರಾದ ಮೌಮೌನಿರವರು ಹೇಳಿದರು, "ಅದೃಷ್ಟವಶಾತ್", ಗುಂಡುಗಳ ಹಾರಾಟಗಳಿಂದ, ಕನಿಷ್ಠ ನಮಗೆ ತಿಳಿದಿರುವಂತೆ, ನಾಗರಿಕರಲ್ಲಿ ಅಥವಾ ಭದ್ರತಾ ಪಡೆಗಳಲ್ಲಿ ಯಾವುದೇ ಸಾವುನೋವುಗಳು ಸಂಭವಿಸಿಲ್ಲ. ಆದಾಗ್ಯೂ, ಕಲಾಲೆ ಗ್ರಾಮದ ಆರು ನಿವಾಸಿಗಳನ್ನು ಅಪಹರಿಸಲಾಗಿದ್ದು, ಅವರ ಭವಿಷ್ಯದ ಬಗ್ಗೆ ಇನ್ನೂ ತಿಳಿಸಿಲ್ಲ.
ಜುಲೈನಲ್ಲಿ ಇತರ ನಾಲ್ವರೊಂದಿಗೆ ಅಪಹರಿಸಲ್ಪಟ್ಟ ಧರ್ಮಗುರುವಿನ ಸಾಕ್ಷ್ಯವನ್ನು ಕೇಳಿದ ನಂತರ ಧರ್ಮಾಧ್ಯಕ್ಷರು ಈ ಗ್ರಾಮಸ್ಥರು ಎದುರಿಸುತ್ತಿರುವ ಚಿತ್ರಹಿಂಸೆ ಮತ್ತು ಸವಾಲುಗಳನ್ನು ವಿವರಿಸಿದರು. ಆ ವ್ಯಕ್ತಿ ಮತ್ತು ಆತನ ಸಹ ಸಂತ್ರಸ್ತರುಗಳು ಕಾಡಿನ ಮೂಲಕ ದೀರ್ಘಕಾಲದವರೆಗೆ ಬಂಧನದ ಸ್ಥಳಕ್ಕೆ ಬರುವ ಮೊದಲು ದೋಣಿಯಲ್ಲಿ ನದಿಯನ್ನು ದಾಟಲು ಒತ್ತಾಯಿಸಲಾಯಿತು ಎಂದು ನನಗೆ ಹೇಳಿದರು.
ಧರ್ಮಸಭೆಗೆ ಬೆದರಿಕೆ
ಜಿಹಾದಿಗಳು ಮತ್ತೆ ದಾಳಿ ಮಾಡುವುದಾಗಿ ಬೆದರಿಕೆ ಹಾಕಿರುವುದರಿಂದ ಜನರು ಕಳವಳಗೊಂಡಿದ್ದಾರೆ ಎಂದು ಧರ್ಮಾಧ್ಯಕ್ಷರಾದ ಮೌಮೌನಿರವರು ವಿವರಿಸಿದರು, "ಆದರೆ ಧರ್ಮಸಭೆಯ ತನ್ನ ಪಾಲನಾ ಸೇವೆಯ ಚಟುವಟಿಕೆಗಳನ್ನು ಮುಂದುವರಿಸುವುದನ್ನು ತಡೆಯಲು ಅವರು ಬಯಸುತ್ತಾರೆ ಎಂದು ಸ್ಪಷ್ಟಪಡಿಸಿದ್ದಾರೆ.
ದೇಶದ ದೊಡ್ಡ ಬಂದರು ನಗರವಾದ ಕೊಟೊನೌದಲ್ಲಿ ಸರ್ಕಾರದೊಂದಿಗೆ ಸಭೆಯಲ್ಲಿ ಭಾಗವಹಿಸಿದ್ದ ಮಿಲಿಟರಿ ನಾಯಕರೊಂದಿಗೆ ಧರ್ಮಾಧ್ಯಕ್ಷರು ಸಂಪರ್ಕದಲ್ಲಿದ್ದಾರೆ. ಧರ್ಮಕ್ಷೇತ್ರದ ಜನರ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಮತ್ತು ನಮ್ಮ ಪಾಲನಾ ಸೇವೆಯನ್ನು ಮುಂದುವರಿಸಲು ನಮಗೆ ಅವಕಾಶ ನೀಡಲು ತೆಗೆದುಕೊಳ್ಳಲಾಗುತ್ತಿರುವ ಕ್ರಮಗಳ ಬಗ್ಗೆ ಯಾವುದೇ ಸುದ್ದಿ ಮತ್ತು ಮಾಹಿತಿಯೊಂದಿಗೆ ಅವರನ್ನು ಸಂಪರ್ಕಿಸುವುದಾಗಿ ಅವರು ಭರವಸೆ ನೀಡಿದರು.