ಹುಡುಕಿ

 Regina Lynch Aid to the Church in Need Regina Lynch Aid to the Church in Need 

ಎಸಿಎನ್ ಅಧ್ಯಕ್ಷರು: ಶಾಂತಿ ಮತ್ತು ಧಾರ್ಮಿಕ ಸ್ವಾತಂತ್ರ್ಯದ ನಡುವಿನ ಪರಸ್ಪರ ಸಂಬಂಧ

ವ್ಯಾಟಿಕನ್ ಸುದ್ದಿಯೊಂದಿಗೆ ಮಾತನಾಡುತ್ತಾ, ನೆರವಿನ ಅವಶ್ಯಕತೆಯಿರುವ ಧರ್ಮಸಭೆ/ಏಡ್ ಟು ದಿ ಚರ್ಚ್ ಇನ್ ನೀಡ್, ಎಂಬ ಅಂತರರಾಷ್ಟ್ರೀಯ ಸಂಸ್ಥೆಯ ಕಾರ್ಯನಿರ್ವಾಹಕ ಅಧ್ಯಕ್ಷೆ ರೆಜಿನಾ ಲಿಂಚ್ ರವರು, ಕ್ರಿಸ್ತನ ಯಾತನೆಗೆ ಹೋಲಿಸಿದರೆ ತಾವು ಏನೂ ಅಲ್ಲ ಎಂದು ಹೇಳುವ ಮೂಲಕ ತಮ್ಮ ನೋವನ್ನು ಸ್ವೀಕರಿಸುವ ಪಾಕಿಸ್ತಾನದ ಕ್ರೈಸ್ತರ ಬಗ್ಗೆ; ಹಾಗೆಯೇ ಅವರ ಸಂಸ್ಥೆ ನಡೆಸುತ್ತಿರುವ 5,500ಕ್ಕೂ ಹೆಚ್ಚು ನೆರವು ಯೋಜನೆಗಳು ಮತ್ತು ಇತರ ಧರ್ಮಗಳ ಜನರೊಂದಿಗೆ ಸಹ ಪ್ರತಿಧ್ವನಿಸುವ ವಿಶ್ವಗುರು XIVನೇ ಲಿಯೋರವರ ಮಾತುಗಳ ಬಗ್ಗೆ ಚಿಂತಿಸುತ್ತಾರೆ.

ವೊಜ್ಸಿಕ್ ರೋಗಾಸಿನ್

ವ್ಯಾಟಿಕನ್ ಸುದ್ದಿಯೊಂದಿಗೆ ಮಾತನಾಡುತ್ತಾ, ನೆರವಿನ ಅವಶ್ಯಕತೆಯಿರುವ ಧರ್ಮಸಭೆ/ಏಡ್ ಟು ದಿ ಚರ್ಚ್ ಇನ್ ನೀಡ್, ಎಂಬ ಅಂತರರಾಷ್ಟ್ರೀಯ ಸಂಸ್ಥೆಯ ಕಾರ್ಯನಿರ್ವಾಹಕ ಅಧ್ಯಕ್ಷೆ ರೆಜಿನಾ ಲಿಂಚ್ ರವರು, ಕ್ರಿಸ್ತನ ಯಾತನೆಗೆ ಹೋಲಿಸಿದರೆ ತಾವು ಏನೂ ಅಲ್ಲ ಎಂದು ಹೇಳುವ ಮೂಲಕ ತಮ್ಮ ನೋವನ್ನು ಸ್ವೀಕರಿಸುವ ಪಾಕಿಸ್ತಾನದ ಕ್ರೈಸ್ತರ ಬಗ್ಗೆ; ಹಾಗೆಯೇ ಅವರ ಸಂಸ್ಥೆ ನಡೆಸುತ್ತಿರುವ 5,500ಕ್ಕೂ ಹೆಚ್ಚು ನೆರವು ಯೋಜನೆಗಳು ಮತ್ತು ಇತರ ಧರ್ಮಗಳ ಜನರೊಂದಿಗೆ ಸಹ ಪ್ರತಿಧ್ವನಿಸುವ ವಿಶ್ವಗುರು XIVನೇ ಲಿಯೋರವರ ಮಾತುಗಳ ಬಗ್ಗೆ ಚಿಂತಿಸುತ್ತಾರೆ.

ಧಾರ್ಮಿಕ ಕಿರುಕುಳದ ಹಿಂದಿನ ಹಲವು ಕಾರಣಗಳು
ಎಸಿಎನ್ ಕಾರ್ಯನಿರ್ವಾಹಕ ಅಧ್ಯಕ್ಷರು ಇಂದು ಧಾರ್ಮಿಕ ಕಿರುಕುಳವು ಹಿಂದಿನದಕ್ಕಿಂತ ಹೆಚ್ಚು ವ್ಯಾಪಕವಾಗಿದೆ ಎಂದು ಒತ್ತಿ ಹೇಳುತ್ತಾರೆ. ಮೊದಲ ಕಾರಣವೆಂದರೆ, ತಮ್ಮ ಸಮಾಜಗಳನ್ನು ನಿಯಂತ್ರಿಸಲು ಪ್ರಯತ್ನಿಸುವ, ಸರ್ವಾಧಿಕಾರಿ ಸರ್ಕಾರಗಳ ಸಂಖ್ಯೆ ಹೆಚ್ಚುತ್ತಿರುವುದು, ಆಧುನಿಕ ತಂತ್ರಜ್ಞಾನದಿಂದ ಈ ಕಾರ್ಯ ಸುಲಭವಾಗಿದೆ ಎಂದು ಅವರು ವಿವರಿಸುತ್ತಾರೆ. ಇದರ ಜೊತೆಗೆ, ಸೆಪ್ಟೆಂಬರ್ 11, 2001ರ ದಾಳಿಯ ನಂತರ ಜಗತ್ತು ಜಿಹಾದಿ ಕ್ರಿಯೆಯಲ್ಲಿ ಏರಿಕೆ ಕಂಡಿದೆ, ಅನೇಕ ಧರ್ಮಗಳ ಅನುಯಾಯಿಗಳು ಇದರ ಸಂತ್ರಸ್ತರುಗಳು.

ಕಿರುಕುಳಕ್ಕೊಳಗಾದವರ ಅಸಾಧಾರಣ ಸಾಕ್ಷ್ಯಗಳು
ಸ್ಥಳೀಯ ಪರಿಸ್ಥಿತಿಗಳನ್ನು ನಿರ್ಣಯಿಸಲು ಮತ್ತು ACN ಯೋಜನೆಗಳನ್ನು ಅಭಿವೃದ್ಧಿಪಡಿಸಲು ಲಿಂಚ್ ರವರು ವಿವಿಧ ಪ್ರದೇಶಗಳಿಗೆ ಪ್ರಯಾಣಿಸುವಾಗ, ಅವರು ಸ್ಥಳೀಯ ಸಮುದಾಯಗಳಿಂದ ಪ್ರಬಲ ಸಂದೇಶಗಳನ್ನು ಕೇಳಿಸಿಕೊಂಡಿದ್ದಾರೆ ಮತ್ತು ಅವರು ಭೇಟಿಯಾದ ಕಥೊಲಿಕರ ವಿಶ್ವಾಸದಿಂದ ಆಳವಾಗಿ ಪ್ರೇರಿತರಾಗಿದ್ದಾರೆ.

ಅವರು ವಿಶೇಷವಾಗಿ ಪಾಕಿಸ್ತಾನದಲ್ಲಿ ತಮ್ಮ ಅನುಭವಗಳನ್ನು ನೆನಪಿಸಿಕೊಳ್ಳುತ್ತಾರೆ, ಅಲ್ಲಿ ಕ್ರೈಸ್ತರು ಸಣ್ಣ ಮತ್ತು ಬಡ ಅಲ್ಪಸಂಖ್ಯಾತರಾಗಿದ್ದಾರೆ. ಈ ಸರಳ ಜನರು ಕ್ರಿಸ್ತನು ಅನುಭವಿಸಿದ ಕಷ್ಟಕ್ಕಿಂತ ತಾವು ಅನುಭವಿಸುತ್ತಿರುವ ಕಷ್ಟವು ಅಪಾರವಾದುದು, ತಮ್ಮ ಸ್ವಂತ ಕಷ್ಟಗಳನ್ನು ಆತನ ಕಷ್ಟಗಳಿಗೆ ಹೋಲಿಸಿದರೆ ಅವರ ಕಷ್ಟವು ಆತನ ಯಾತನೆ ಮುಂದೆ, ಏನೂ ಅಲ್ಲ ಎಂದು ಹೇಳುವುದನ್ನು ಅವರು ನೆನಪಿಸಿಕೊಳ್ಳುತ್ತಾರೆ.

ವಿಶ್ವಾದ್ಯಂತ 5,500 ನೆರವು ಯೋಜನೆಗಳು
ACN ನ ಕೆಲಸವು ಸರ್ಕಾರ ಅಥವಾ ಸಾರ್ವಜನಿಕ ಬೆಂಬಲವಿಲ್ಲದೆ ಸಂಪೂರ್ಣವಾಗಿ ಖಾಸಗಿ ದೇಣಿಗೆಗಳಿಂದ ಧನಸಹಾಯ ಪಡೆದ ದೃಢವಾದ ಯೋಜನೆಗಳನ್ನು ಒಳಗೊಂಡಿದೆ. ಸರಿಸುಮಾರು 5,500 ನಡೆಯುತ್ತಿರುವ ಉಪಕ್ರಮಗಳಲ್ಲಿ ಬಡ ಪ್ರದೇಶಗಳಲ್ಲಿ ಧರ್ಮಪ್ರಚಾರಕರ ಪ್ರಯತ್ನಗಳು ಸೇರಿವೆ, ಅಲ್ಲಿ ದೇವಾಲಯಗಳು ಅಥವಾ ಗುರುವಿದ್ಯಾಮಂದಿರಗಳನ್ನು ನಿರ್ಮಿಸಲು ಅಥವಾ ಸಹೋದರಿಯರು ಮತ್ತು ಧರ್ಮೋಪದೇಶಕರುಗಳಿಗೆ ತರಬೇತಿ ನೀಡಲು ಸಂಪನ್ಮೂಲಗಳ ಕೊರತೆಯಿದೆ. ಈ ಸಂಸ್ಥೆಯು ವಿಶ್ವಾಸವನ್ನು ಪೋಷಿಸುವ ಬೈಬಲ್, ಶೈಕ್ಷಣಿಕ ಮತ್ತು ಪಾಲನಾ ಸೇವೆಯ ಕಾರ್ಯಕ್ರಮಗಳನ್ನು ಸಹ ಬೆಂಬಲಿಸುತ್ತದೆ.

ಮಾಧ್ಯಮದ ನಿರ್ಣಾಯಕ ಪಾತ್ರ
ಕೊನೆಯದಾಗಿ, ಈ ವಿಷಯಗಳ ಬಗ್ಗೆ ಜಾಗೃತಿ ಮೂಡಿಸುವಲ್ಲಿ ಮಾಧ್ಯಮದ ಪ್ರಮುಖ ಪಾತ್ರವನ್ನು ಅವರು ಒತ್ತಿ ಹೇಳುತ್ತಾರೆ. ಸಕಾರಾತ್ಮಕ ಕಥೆಗಳನ್ನು ಹಂಚಿಕೊಳ್ಳುವುದು ಮುಖ್ಯ, ಆದರೆ ಜನರ ಸಂಕಷ್ಟಗಳನ್ನು ವರದಿ ಮಾಡುವುದು ಸಹ ಮುಖ್ಯ ಎಂದು ಲಿಂಚ್ ರವರು ವಿವರಿಸುತ್ತಾರೆ. ನಾವು ವಾಸಿಸುತ್ತಿರುವ ವಾಸ್ತವವನ್ನು ಹೆಚ್ಚು ಜನರು ಅರ್ಥಮಾಡಿಕೊಂಡಷ್ಟೂ, ಅವರು ಕ್ರಮ ತೆಗೆದುಕೊಳ್ಳುವ ಸಾಧ್ಯತೆ ಹೆಚ್ಚಾಗುತ್ತದೆ ಎಂಬುದು ಮಾಧ್ಯಮವು ನಮಗೆ ಮಾಹಿತಿ ನೀಡುತ್ತದೆ.
 

31 ಅಕ್ಟೋಬರ್ 2025, 15:51