ಹುಡುಕಿ

Luca, figlio di Olena Mosendz, in udienza con il Papa Luca, figlio di Olena Mosendz, in udienza con il Papa  

ನವಜಾತ ಶಿಶು, ಮುಂಭಾಗದಲ್ಲಿ ಪತಿ ಮತ್ತು ಸ್ವಯಂಸೇವಕ ಸೇವೆ: ಇಂದು ಉಕ್ರೇನ್‌ನಲ್ಲಿರುವ ಮಹಿಳೆ

ಉಕ್ರೇನಿನ ಯುವ ತಾಯಿ ಒಲೆನಾ ಮೊಸೆಂಡ್ಜ್, ಆಕೆಯ ಪತಿ ಯುದ್ಧಭೂಮಿಯಲ್ಲಿ ಹೋರಾಡುತ್ತಿದ್ದಾರೆ, ಅವರು ಕೆಲಸವನ್ನು ಸಮತೋಲನಗೊಳಿಸಲು ಮತ್ತು ತಮ್ಮ ಕುಟುಂಬಗಳನ್ನು ನೋಡಿಕೊಳ್ಳುವುದರೊಂದಿಗೆ ಯುದ್ಧದ ಪ್ರಯತ್ನಕ್ಕೆ ಸಹಾಯ ಮಾಡಲು ಪ್ರಯತ್ನಿಸುತ್ತಿರುವ ಅನೇಕ ಮಹಿಳೆಯರ ಜೀವನ ಹೇಗಿದೆ ಎಂದು ವ್ಯಾಟಿಕನ್ ಸುದ್ದಿಗೆ ಹೇಳುತ್ತಾರೆ.

ಸ್ವಿಟ್ಲಾನಾ ಡುಖೋವಿಚ್

ಒಲೆನಾ ಮೊಸೆಂಡ್ಜ್ ರವರು ಒಬ್ಬ ಯುವತಿ, ದಕ್ಷಿಣ ಉಕ್ರೇನ್‌ನ ಖೇರ್ಸನ್ ಪ್ರದೇಶದ ನೋವಾ ಕಾಖೋವ್ಕಾದಲ್ಲಿ ಹುಟ್ಟಿ ಬೆಳೆದವರು. ಆಕೆಯ ನಗರ ಈಗ ರಷ್ಯಾದ ಆಕ್ರಮಣದಲ್ಲಿದೆ. ಪೂರ್ಣ ಪ್ರಮಾಣದ ಯುದ್ಧದ ಆರಂಭದಲ್ಲಿ, ಯುವತಿ ಲಿವಿವ್‌ನ ಕಥೋಲಿಕ ವಿಶ್ವವಿದ್ಯಾಲಯದಲ್ಲಿ ಉಪನ್ಯಾಸಕಿಯಾಗಿ ತನ್ನ ಕೆಲಸವನ್ನು ತೊರೆದು ಜಪೋರಿಝಿಯಾಗೆ ತೆರಳಿದಳು. ಒಂದೆಡೆ ಆಕ್ರಮಿತ ನಗರದಿಂದ ಸ್ವಲ್ಪ ಸಮಯದ ನಂತರ ಪಲಾಯನ ಮಾಡುವಲ್ಲಿ ಯಶಸ್ವಿಯಾದ ತನ್ನ ಕುಟುಂಬಕ್ಕೆ ಹತ್ತಿರವಾಗಲು ಮತ್ತು ಮತ್ತೊಂದೆಡೆ, ಮೊದಲು ಖೆರ್ಸನ್ ಪ್ರದೇಶದ ಆಕ್ರಮಿತ ಭಾಗಕ್ಕೆ ಹಾಗೂ ನಂತರ ಯುದ್ಧದ ಭೂಮಿಲ್ಲಿರುವ ಮಿಲಿಟರಿ ವೈದ್ಯರಿಗೆ ಔಷಧಿಗಳನ್ನು ಕಳುಹಿಸಲು ತನ್ನ ನೆರವನ್ನು ನೀಡಿದಳು.

2023ರ ಕೊನೆಯಲ್ಲಿ, ಒಲೆನಾ ವೈದ್ಯಕೀಯ ಘಟಕದಲ್ಲಿ ಸೇವೆ ಸಲ್ಲಿಸುತ್ತಿರುವ ಸೈನಿಕನನ್ನು ವಿವಾಹವಾದರು ಮತ್ತು ಈಗ ಸ್ವಯಂಸೇವಕರ ಜೊತೆಗೆ, ಅವರು ಉಕ್ರೇನ್‌ನಲ್ಲಿ ಕಾರತಾಸ್‌ ಸಂವಹನ ವ್ಯವಸ್ಥಾಪಕರಾಗಿಯೂ ಸಹ ಕೆಲಸ ಮಾಡುತ್ತಿದ್ದಾರೆ. ಅಕ್ಟೋಬರ್ ಆರಂಭದಲ್ಲಿ, ರಜೆ ಮಂಜೂರು ಮಾಡಲಾದ ತನ್ನ ಪತಿ ಮತ್ತು ಅವರ ಒಂದು ವರ್ಷದ ಮಗ ಲೂಕಾರವರ ಜೊತೆ ಅವರು ಸಣ್ಣ ರಜೆಗಾಗಿ ರೋಮ್‌ಗೆ ಬಂದರು.

ವ್ಯಾಟಿಕನ್ ಸುದ್ದಿಗೆ ನೀಡಿದ ಸಂದರ್ಶನದಲ್ಲಿ, ಒಲೆನಾರವರು ಒಂದು ಪುಟ್ಟ ಮಗುವಿನ ತಾಯಿಯಾಗಿ ಮತ್ತು ಸೈನಿಕನ ಹೆಂಡತಿಯಾಗಿ ಇಂತಹ ಕಷ್ಟದ ಸಮಯದಲ್ಲಿ ಎದುರಿಸುತ್ತಿರುವ ತೊಂದರೆಗಳ ಬಗ್ಗೆ ಮತ್ತು ಸ್ವಯಂಸೇವೆ ಹಾಗೂ ಕೆಲಸದೊಂದಿಗೆ ಇದನ್ನೆಲ್ಲಾ ಸಮತೋಲನಗೊಳಿಸುವುದನ್ನು ಹೇಗೆ ನಿರ್ವಹಿಸುತ್ತಾರೆ ಎಂಬುದರ ಕುರಿತು ಮಾತನಾಡಿದರು.

ಯುದ್ಧ, ಆತ್ಮಸಾಕ್ಷಿ ಮತ್ತು ಆದ್ಯತೆಗಳು
ಶಿಕ್ಷಣ ನನಗೆ ಮೂಲಭೂತ ಪ್ರಾಮುಖ್ಯತೆಯನ್ನು ಹೊಂದಿದೆ: ವಿಶ್ವವಿದ್ಯಾಲಯದ ಮೌಲ್ಯಗಳು ಮತ್ತು ಭವಿಷ್ಯದ ಪತ್ರಕರ್ತರು ಮತ್ತು ಸಂವಹನಕಾರರ ತರಬೇತಿಯ ಬಗ್ಗೆ ನಾನು ಆಳವಾಗಿ ಕಾಳಜಿ ವಹಿಸುತ್ತೇನೆ. ಆದರೆ, ನಮ್ಮ ದೇಶವು ಉಳಿವಿಗಾಗಿ ಹೋರಾಡುತ್ತಿರುವಾಗ, ಆದ್ಯತೆಗಳು ಬದಲಾಗುತ್ತವೆ, ಎಂದು ಒಲೆನಾ ಹೇಳಿದರು, 2022ರಲ್ಲಿ ತುಲನಾತ್ಮಕವಾಗಿ ಸುರಕ್ಷಿತ ನಗರವಾದ ಎಲ್ವಿವ್ ಅನ್ನು ತೊರೆಯಲು ಮತ್ತು ಸಾಮಾಜಿಕ ಸಂವಹನ ವಿಭಾಗದಲ್ಲಿ ತನ್ನ ಬೋಧನಾ ಕೆಲಸವನ್ನು ತ್ಯಜಿಸಲು ಮತ್ತು ಮುಂಚೂಣಿಯ ಬಳಿಯ ಜಪೋರಿಝಿಯಾಗೆ ತೆರಳಲು ಹೇಗೆ ನಿರ್ಧರಿಸಿದರು ಎಂಬುದನ್ನು ನೆನಪಿಸಿಕೊಳ್ಳುತ್ತಾರೆ.

ಪರಸ್ಪರ ಬೆಂಬಲ
ಆಕೆಯು ಮದುವೆಯಾದಾಗ ಮತ್ತು ಆಕೆಯ ಮಗುವನ್ನು ನಿರೀಕ್ಷಿಸುತ್ತಿದ್ದಾಳೆಂದು ತಿಳಿದಾಗ, ಘರ್ಷಣೆ ತೀವ್ರವಾಗಿರುವ ಪ್ರದೇಶಗಳಿಗೆ ದೈಹಿಕವಾಗಿ ಹೋಗಲು ಆಕೆಗೆ ಇನ್ನು ಮುಂದೆ ಸಾಧ್ಯವಾಗಲಿಲ್ಲ. ನನ್ನ ಜವಾಬ್ದಾರಿ ಇನ್ನು ಮುಂದೆ ನನ್ನ ಸ್ವಂತ ಜೀವನಕ್ಕೆ ಮಾತ್ರವಲ್ಲ, ನನ್ನ ಮಗುವಿನ ಜೀವನಕ್ಕೂ ಸಹ ಎಂದು ಅವರು ವಿವರಿಸಿದರು. "ಆದರೆ ನಾನು ಔಷಧಿಗಳನ್ನು ಪೂರೈಸುವುದನ್ನು ಮುಂದುವರಿಸಲು ಸಾಧ್ಯವಾಗುವಂತೆ ನಾವು ನಮ್ಮ ಕೆಲಸವನ್ನು ಮರುಸಂಘಟಿಸಿದೆವು: ನಾವು ಅವುಗಳನ್ನು ಖರೀದಿಸಿ ಕೊರಿಯರ್ ಮೂಲಕ ಔಷಧಿಯ ಅವಶ್ಯಕತೆ ಇರುವ ಸ್ಥಳಗಳಿಗೆ ಕಳುಹಿಸುತ್ತೇವೆ.

ಅಂತರವನ್ನು ಮೀರಿದ ಪ್ರೀತಿ
ಒಲೆನಾ ಮತ್ತು ಆಕೆಯ ಪತಿಯ ನಡುವಿನ ಪ್ರೇಮಕಥೆಯು ಯುದ್ಧದ ಮಧ್ಯದಲ್ಲಿ ಪ್ರಾರಂಭವಾಯಿತು, ಇದು ಅನೇಕ ಕುಟುಂಬಗಳು ಮತ್ತು ದಂಪತಿಗಳ ಮೇಲೆ ಒತ್ತಡವನ್ನುಂಟು ಮಾಡುತ್ತದೆ. ಹೆಂಡತಿ ತನ್ನ ಪತಿಯನ್ನು ಅವನು ಎಲ್ಲೇ ಇದ್ದರೂ ಭೇಟಿ ಮಾಡಬೇಕೇ ಅಥವಾ ಆತನು ಹೆಚ್ಚಾಗಿ ಆಕೆಯನ್ನು ಭೇಟಿ ಮಾಡಬೇಕೇ ಎಂಬುದನ್ನು ವಿವರಿಸುವ ಯಾವುದೇ ಕೈಪಿಡಿ ಇಲ್ಲ, ಅಂತರವು ಅವರನ್ನು ವಿಭಜಿಸುವಂತೆ ತೋರಿದಾಗ ಸಂಬಂಧವನ್ನು ಹೇಗೆ ಜೀವಂತವಾಗಿಡುವುದು ಎಂಬುದನ್ನು ಹೇಳುವುದಂತೂ ಮುಖ್ಯ.

ವಿಶ್ವಗುರುಗಳ ಶುಭಾಶಯಗಳು
ಉಕ್ರೇನ್‌ಗೆ ಹಿಂತಿರುಗಿದ ಮೊಸೆಂಡ್ಜ್ ಕುಟುಂಬವು ವ್ಯಾಟಿಕನ್‌ನಲ್ಲಿ ಸಾಮಾನ್ಯ ಪ್ರೇಕ್ಷಕರಿಗೆ ಹಾಜರಾದ ನೆನಪುಗಳನ್ನು ಮಾತ್ರವಲ್ಲದೆ, ವಿಶ್ವಗುರು ಲಿಯೋರವರು ಪುಟ್ಟ ಲೂಕಾಳನ್ನು ಆಶೀರ್ವದಿಸಿದ ನೆನಪುಗಳನ್ನು ಮಾತ್ರವಲ್ಲದೆ, ವಿಶ್ವದಾದ್ಯಂತದ ವಿವಿಧ ದೇಶಗಳ ಯಾತ್ರಿಕರ ಒಗ್ಗಟ್ಟನ್ನೂ ಸಹ ಮನೆಗೆ ತಂದಿತು.

ನಾವು ಎಲ್ಲಿಂದ ಬಂದವರು ಎಂದು ಅವರು ನಮ್ಮನ್ನು ಕೇಳಿದಾಗ ಮತ್ತು ನಾವು ಉಕ್ರೇನ್ ಎಂದು ಉತ್ತರಿಸಿದಾಗ, ಅವರು ನಮ್ಮನ್ನು ಬೆಂಬಲಿಸಿದ್ದಾರೆ ಮತ್ತು ನಮಗಾಗಿ ಪ್ರಾರ್ಥಿಸಿದ್ದಾರೆ ಎಂದು ಹೇಳಿದರು. ನಾನು ಇದನ್ನು ನನ್ನೊಂದಿಗೆ ಉಕ್ರೇನ್‌ಗೆ ಮನೆಗೆ ತೆಗೆದುಕೊಂಡು ಹೋಗುತ್ತಿದ್ದೇನೆ, ನಮ್ಮ ಸೈನಿಕರಿಗಾಗಿ ಮತ್ತು ನನ್ನ ಕುಟುಂಬಕ್ಕಾಗಿ ವಿಶ್ವಗುರುಗಳ ಶುಭಾಶಯಗಳನ್ನು ಮನೆಗೆ ತೆಗೆದುಕೊಂಡು ಹೋಗುತ್ತಿದ್ದೇನೆ. "ಅವರು ಒಬ್ಬಂಟಿಯಾಗಿಲ್ಲ, ಯಾರಾದರೂ ಅವರನ್ನು ನೆನಪಿಸಿಕೊಳ್ಳುತ್ತಾರೆ ಎಂದು ಅವರಿಗೆ ತಿಳಿದಿರುವುದು ಮುಖ್ಯ ಮತ್ತು ನಾನು ಈ ಸಂದೇಶವನ್ನು ಸಂತೋಷದಿಂದ ಹರಡುವುದನ್ನು ಮುಂದುವರಿಸುತ್ತೇನೆ, ಎಂದು ಒಲೆನಾರವರು ತಮ್ಮ ಮಾತುಗಳನ್ನು ಮುಕ್ತಾಯಗೊಳಿಸುತ್ತಾರೆ.
 

28 ಅಕ್ಟೋಬರ್ 2025, 05:43