USCCB ಅಧ್ಯಕ್ಷರು : ಮೆಲಿಸ್ಸಾ ಚಂಡಮಾರುತದಿಂದ ಹಾನಿಗೊಳಗಾದವರಿಗೆ ಪ್ರಾರ್ಥನೆ
ವ್ಯಾಟಿಕನ್ ಸುದ್ದಿ
ಮೆಲಿಸ್ಸಾ ಚಂಡಮಾರುತವು ಕೆರಿಬಿಯವನ್ನು ಅಪ್ಪಳಿಸಿತು, ಜಮೈಕಾ ಮತ್ತು ಕ್ಯೂಬಾವನ್ನು ನಾಶಮಾಡಿದೆ. ಇದು ಆಧುನಿಕ ಇತಿಹಾಸದಲ್ಲಿ ಅತ್ಯಂತ ಪ್ರಬಲವಾದ ಬಿರುಗಾಳಿಗಳಲ್ಲಿ ಒಂದಾಗಿದ್ದು, ಅದರ ಉತ್ತುಂಗದಲ್ಲಿ ಗಂಟೆಗೆ 298ಕಿಮೀ (185ಎಮ್‌ಪಿಎಚ್) ವೇಗದಲ್ಲಿ ಗಾಳಿ ಬೀಸಿದೆ, ಇದು ಕತ್ರಿನಾ ಚಂಡಮಾರುತಕ್ಕಿಂತ ಪ್ರಬಲವಾಗಿತ್ತು ಎಂದು ಕಂಡು ಬಂದಿದೆ. ಈ ಚಂಡಮಾರುತದಿಂದ 34 ಜನರು ಸಾವನ್ನಪ್ಪಿದ್ದಾರೆ ಮತ್ತು ಹತ್ತಾರು ಸಾವಿರ ಜನರು ವಿದ್ಯುತ್ ವ್ಯವಸ್ಥೆಗಳಿಲ್ಲದೆ ಜೀವನ ನಡೆಸುತ್ತಿದ್ದಾರೆ.
ಇದಕ್ಕೆ ಪ್ರತಿಕ್ರಿಯೆಯಾಗಿ, ಅಮೆರಿಕದ ಕಥೊಲಿಕ ಧರ್ಮಾಧ್ಯಕ್ಷರುಗಳ ಸಮ್ಮೇಳನದ ಅಧ್ಯಕ್ಷರಾದ ಮಹಾಧರ್ಮಾಧ್ಯಕ್ಷರಾದ ತಿಮೋತಿ ಪಿ. ಬ್ರೋಗ್ಲಿಯವರು,, 5ನೇ ವರ್ಗದ ಚಂಡಮಾರುತದಿಂದ ಪ್ರಭಾವಿತರಾದ ಜನರಿಗಾಗಿ ಪ್ರಾರ್ಥಿಸಲು ಮತ್ತು ಬೆಂಬಲಿಸಲು ಕಥೊಲಿಕರಿಗೆ ಕರೆ ನೀಡುವ ಹೇಳಿಕೆಯನ್ನು ಹೊರಡಿಸಿದರು.
ಕೆರಿಬಿಯ ಪ್ರದೇಶದ ಕುಟುಂಬಗಳು, ಪ್ರವಾಹ, ಭೂಕುಸಿತ, ಸ್ಥಳಾಂತರ ಮತ್ತು ಮೂಲಸೌಕರ್ಯದ ಹಾನಿಯಿಂದ ತೀವ್ರ ಅಪಾಯವನ್ನು ಎದುರಿಸುತ್ತಿವೆ ಮತ್ತು ಪ್ರತಿಕ್ರಿಯಿಸಲು ಕಡಿಮೆ ಸಂಪನ್ಮೂಲಗಳಿವೆ ಎಂದು USCCB ಅಧ್ಯಕ್ಷರು ವಿವರಿಸಿದರು. ಜಮೈಕಾ, ಕ್ಯೂಬಾ ಮತ್ತು ಹೈಟಿಯಂತಹ ಸಣ್ಣ ದ್ವೀಪ ರಾಷ್ಟ್ರಗಳಲ್ಲಿನ ಸಹೋದರ ಸಹೋದರಿಯರು ಇಂತಹ ಬಲವಾದ ಬಿರುಗಾಳಿಗಳ ಪ್ರಭಾವಕ್ಕೆ ಹೇಗೆ ಹೆಚ್ಚು ಗುರಿಯಾಗುತ್ತಾರೆ ಮತ್ತು ತಾಪಮಾನ ಏರಿಕೆಯಿಂದ ಏನೆಲ್ಲಾ ತೊಂದರೆಗಳನ್ನು ಎದುರಿಸುತ್ತಿದ್ದಾರೆ ಎಂಬುದನ್ನು ಚಿಂತಿಸಿದರು. ಧರ್ಮಸಭೆಯು ಇವರಿಗೋಸ್ಕರ ಪ್ರಾರ್ಥನೆಯ ಮೂಲಕ ಅವರಿಗೆ ನೆರವಾಗುತ್ತಿದ್ದಾರೆ.