ಮಧ್ಯ ಫಿಲಿಪೈನ್ಸ್‌ನಲ್ಲಿ ಭೀಕರ ಭೂಕಂಪ: ದೇವಾಲಯಗಳ ತಪಾಸಣೆಗೆ ಚಾಲನೆ
ಮಾರ್ಕ್ ಸಲೂಡೆಸ್, ಲಿಕಾಸ್ ಸುದ್ಧಿ
ಒಂದು ಹೇಳಿಕೆಯಲ್ಲಿ, ಸೆಬುವಿನ ಮಹಾಧರ್ಮಾಧ್ಯಕ್ಷರು, ಮಹಾಧರ್ಮಾಧ್ಯಕ್ಷರಾದ ಆಲ್ಬರ್ಟೊ ಉಯ್ರವರು, ಭೂಕಂಪ ಪೀಡಿತ ಧರ್ಮಕೇಂದ್ರಗಳಲ್ಲಿರುವ ಭಕ್ತವಿಶ್ವಾಸಿಗಳು ಸರಿಯಾದ ತಜ್ಞರು ಮೌಲ್ಯಮಾಪನವನ್ನು ನಡೆಸಿ ರಚನೆಗಳನ್ನು ಬಳಕೆಗೆ ಸುರಕ್ಷಿತವೆಂದು ಘೋಷಿಸುವವರೆಗೆ ಪವಿತ್ರ ದಿವ್ಯಬಲಿಪೂಜೆಯ ಆಚರಣೆಗೆ ನಿಮ್ಮ ದೇವಾಲಯಗಳನ್ನು ಬಳಸುವುದನ್ನು ತಡೆಯಿರಿ ಎಂದು ಒತ್ತಾಯಿಸಿದರು.
ನಾವು ನಮ್ಮನ್ನು, ನಮ್ಮ ಕುಟುಂಬಗಳನ್ನು ಮತ್ತು ನಮ್ಮ ಸಮುದಾಯಗಳನ್ನು ಆತನ ಕರುಣಾಮಯಿ ಕೈಗಳಿಗೆ ಒಪ್ಪಿಸುತ್ತೇವೆ. ದೇವರು ನಮ್ಮನ್ನು ತನ್ನ ರಕ್ಷಣೆಯ ರೆಕ್ಕೆಗಳ ಕೆಳಗೆ ಆಶ್ರಯಿಸಲಿ, ಪ್ರತಿಯೊಂದು ಹಾನಿಯಿಂದ ನಮ್ಮನ್ನು ರಕ್ಷಿಸಲಿ ಮತ್ತು ಸುರಕ್ಷತೆ ಹಾಗೂ ಶಾಂತಿಗೆ ಮಾರ್ಗದರ್ಶನ ನೀಡಲಿ ಎಂದು ಅವರು ಹೇಳಿದರು.
ಆ ದಿನದ ಆರಂಭದಲ್ಲಿ, ಭೂಕಂಪ ಸಂಭವಿಸುವ ಮೊದಲು, ಸುಮಾರು 60 ಕಥೊಲಿಕ ಮಹಾಧರ್ಮಾಧ್ಯಕ್ಷರುಗಳು ಸೆಬು ನಗರದಲ್ಲಿ ಸೆಬುವಿನ ಮಹಾನಗರದ ಪ್ರಧಾನಾಲಯದಲ್ಲಿ ಮಹಾಧರ್ಮಾಧ್ಯಕ್ಷರಾದ ಉಯ್ ರವರ ಸ್ಥಾಪನೆಯ ಪ್ರಾರ್ಥನೆಗಾಗಿ ಹಾಜರಿದ್ದರು, ಅಲ್ಲಿ ಅವರು ಸೆಬುವಿನಲ್ಲಿರುವ ಕಥೊಲಿಕ ಭಕ್ತವಿಶ್ವಾಸಿಗಳ "ಕುರುಬನಾಗಿ ನನ್ನ ಜೀವನದಲ್ಲಿ ಆ ಕರೆಯನ್ನು ಸ್ವೀಕರಿಸುವ" ಉದ್ದೇಶವನ್ನು ವ್ಯಕ್ತಪಡಿಸಿದರು.
ಅಕ್ಟೋಬರ್ 1-ರಂದು, ಫಿಲಿಪೈನ್ಸ್ ಅಧಿಕಾರಿಗಳು ಸುಮಾರು 60-ಸಾವುನೋವುಗಳನ್ನು ದೃಢಪಡಿಸಿದರು ಮತ್ತು ಸಾವುನೋವುಗಳು ಹೆಚ್ಚುತ್ತಲೇ ಇದ್ದವು.
ಬೊಗೊ ಆಸ್ಪತ್ರೆಯು ಕನಿಷ್ಠ 53 ಸಾವುಗಳನ್ನು ದೃಢಪಡಿಸಿದೆ ಎಂದು ನಾಗರಿಕ ರಕ್ಷಣಾ ಕಚೇರಿ ತಿಳಿಸಿದೆ, ಅವರಲ್ಲಿ 30 ಜನರು ಬೊಗೊ ನಗರದಿಂದ ಬಂದವರು, 150ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ.
ನಾವು ಹೆಚ್ಚುವರಿ ಸಂಖ್ಯೆಯ ಸಾವುನೋವುಗಳನ್ನು ವರದಿ ಮಾಡುತ್ತಿದ್ದೇವೆ, ಆದ್ದರಿಂದ ಈ ವಿಷಯವು ತುಂಬಾ ಅಸ್ಥಿರವಾಗಿದೆ ಎಂದು ಉಪ ಆಡಳಿತಾಧಿಕಾರಿ ರಫೇಲಿಟೊ ಅಲೆಜಾಂಡ್ರೊ ಏಜೆನ್ಸ್ ಫ್ರಾನ್ಸ್-ಪ್ರೆಸ್ (AFP) ವರದಿಯಲ್ಲಿ ತಿಳಿಸಿದ್ದಾರೆ.
ಸೆಬು ಪ್ರಾಂತ್ಯದಾದ್ಯಂತ ಹಾನಿ ವಿಸ್ತರಿಸಿದೆ. ಬಂಟಾಯನ್ ದ್ವೀಪದಲ್ಲಿ, ಶತಮಾನಗಳಷ್ಟು ಹಳೆಯದಾದ ಕಥೋಲಿಕ ದೇವಾಲಯವು ಬೆಲ್‌ಫ್ರೂ ಹಿಂಸಾತ್ಮಕವಾಗಿ ತೂಗಾಡಿದ ನಂತರ ಕುಸಿದು ಬಿದ್ದಿದೆ.
ದೇವಾಲಯದ ಕಡೆಯಿಂದ ಜೋರಾಗಿ ಶಬ್ದ ಕೇಳಿಸಿತು, ನಂತರ ಕಟ್ಟಡದಿಂದ ಬಂಡೆಗಳು ಬೀಳುತ್ತಿರುವುದನ್ನು ನಾನು ನೋಡಿದೆ. ಅದೃಷ್ಟವಶಾತ್, ಯಾರಿಗೂ ಗಾಯವಾಗಲಿಲ್ಲ" ಎಂದು 25 ವರ್ಷದ ನಿವಾಸಿ ಮಾರ್ಥಮ್ ಪ್ಯಾಸಿಲನ್ ಹೇಳಿದರು.
ದಕ್ಷಿಣಕ್ಕೆ 100 ಕಿಲೋಮೀಟರ್ ದೂರದಲ್ಲಿರುವ ಸೆಬು ನಗರದಲ್ಲಿ, ಛಾವಣಿಗಳು ಕುಸಿದಾಗ ಖರೀದಿದಾರರು ಮಾಲ್‌ನಿಂದ ಓಡಿಹೋದರು. "ಭೂಮಿಯು ತಿರುಗುವುದನ್ನು ನಿಲ್ಲಿಸಿದಂತೆ ಭಾಸವಾಯಿತು. ನಂತರ ಮಾಲ್ ನಡುಗಲು ಪ್ರಾರಂಭಿಸಿತು" ಎಂದು 21 ವರ್ಷದ ಜೇಫೋರ್ಡ್ ಮರಂಗಾ ನೆನಪಿಸಿಕೊಂಡರು, ಅವರು ತಮ್ಮ ಸ್ನೇಹಿತನಿಗೆ ಸ್ವಲ್ಪ ಗಾಯಗೊಂಡಿದ್ದಾರೆ ಎಂದು ಹೇಳಿದರು.
ಸೆಪ್ಟೆಂಬರ್ 30ರ ಬೆಳಿಗ್ಗೆ ಸೆಬು ನಗರದಲ್ಲಿ ಮಹಾಧರ್ಮಾಧ್ಯಕ್ಷರಾದ ಉಯ್ ರವರ ಪ್ರತಿಷ್ಠಾಪನಾ ಸಮಾರಂಭದಲ್ಲಿ ಹಾಜರಿದ್ದ ಮಹಾಧರ್ಮಾಧ್ಯಕ್ಷರಾದ ಮೆಸಿಯೋನಾರವರು, ತಮ್ಮ ಧರ್ಮ ಪ್ರಾಂತ್ಯದಲ್ಲಿ ಇತರ ಕಾರ್ಯಗಳಲ್ಲಿ ಭಾಗವಹಿಸಲು ದಿವ್ಯಬಲಿಪೂಜೆಯ ನಂತರ ತಕ್ಷಣವೇ ಪ್ರಾಂತ್ಯವನ್ನು ತೊರೆದರು ಎಂದು ಲಿಕಾಸ್ ಸುದ್ಧಿಗೆ ತಿಳಿಸಿದರು.
ರಾಷ್ಟ್ರೀಯ ದುಃಖದ ಸಮಯದಲ್ಲಿ ಪ್ರಾರ್ಥನೆಯ ಮೂಲಕ ಒಗ್ಗಟ್ಟು ಅತ್ಯಗತ್ಯ ಎಂದು ಧರ್ಮಗುರುಗಳು ಹೇಳಿದರು, ಸಂತ್ರಸ್ತರುಗಳು ಮತ್ತು ಅವರ ಕುಟುಂಬಗಳನ್ನು ಅವರ ಪ್ರಾರ್ಥನೆಯ ಉದ್ದೇಶಗಳಲ್ಲಿ ಸ್ಮರಿಸುವಂತೆ ನಿಷ್ಠಾವಂತರನ್ನು ಒತ್ತಾಯಿಸಿದರು.