ಹುಡುಕಿ

Sr. Ruby Eden at mealtime with the children Sr. Ruby Eden at mealtime with the children 

ಫಿಲಿಪೈನ್ಸ್‌ನಲ್ಲಿ ಪವಿತ್ರಾತ್ಮರ ಧಾರ್ಮಿಕ ಸಭೆಯ ಧಾರ್ಮಿಕ ಭಗಿನಿಯರು

ಹಬಲ್-ಹಬಲ್ ಎಂದು ಕರೆಯಲ್ಪಡುವ ಸ್ಥಳೀಯ ಮೋಟಾರ್ ಸೈಕಲ್ ಟ್ಯಾಕ್ಸಿಗಳು ಮಾತ್ರ ಪ್ರವೇಶಿಸಬಹುದಾದ ಏಷ್ಯಾದ ದೂರದ ಭಾಗವಾದ ದಾವೊ ಡಿ ಓರೊ ಪ್ರಾಂತ್ಯದಲ್ಲಿ, ಇಬ್ಬರು ಧಾರ್ಮಿಕ ಮಹಿಳೆಯರು ಬಡ ಕುಟುಂಬಗಳು, ಆಹಾರವಿಲ್ಲದೆ ಬಳಲುತ್ತಿರುವ ಮಕ್ಕಳು ಮತ್ತು ಬಡತನದ ಕಷ್ಟಗಳನ್ನು ಅನುಭವಿಸುತ್ತಿರುವ ಯುವಜನತೆಗೆ ಭರವಸೆಯ ಬೆಂಕಿಯ ಕಿಡಿಯನ್ನು ಹಚ್ಚಿದ್ದಾರೆ.

ಎಲೆಯಾನ್ನಾ ಗುಗ್ಲಿಯೆಲ್ಮಿ

ಇಲ್ಲಿ ಹಸಿವಿನಿಂದ ಅಳುವ ಮಕ್ಕಳಿದ್ದಾರೆ. ಇಲ್ಲಿರುವ ಅನೇಕರು ದಿವ್ಯಬಲಿಪೂಜೆಗೆ ಹೋಗಬೇಕೆ ಅಥವಾ ಇತರರಿಗಾಗಿ ಉಳಿಸಕೊಳ್ಳಲು ಹಾಗೂ ಅವರಿಗೆ ಆಹಾರ ಒದಗಿಸಲು, ಏನಾದರೂ ಸಂಪಾದಿಸಬೇಕೆ ಎಂದು ಯಾವುದನ್ನು ಆಯ್ಕೆ ಮಾಡಿಕೊಳ್ಳಬೇಕು ಎಂಬ ಸನ್ನಿವೇಶದಲ್ಲಿದ್ದಾರೆ. ಯುವಜನತೆಯ ತಮ್ಮ ಕುಟುಂಬದಲ್ಲಿ ಆಹಾರಕ್ಕಾಗಿ ಬಾಯಿಗಳ ಸಂಖ್ಯೆಯನ್ನು ಕಡಿಮೆ ಮಾಡಲು, ಅಕಾಲಿಕವಾಗಿ ಒಟ್ಟಿಗೆ ವಾಸಿಸಲು ಆಶ್ರಯಿಸುತ್ತಾರೆ. "ಇದು ತಪ್ಪು ಮನಸ್ಥಿತಿ, ಆದರೆ ಅದು ಆಳವಾಗಿ ಬೇರೂರಿದೆ" ಎಂದು ಕಾಂಪೋಸ್ಟೆಲಾ ಪರ್ವತಗಳಲ್ಲಿರುವ ದೂರದ ಹಳ್ಳಿಯಲ್ಲಿ ಸಿಸ್ಟರ್ ರೂಬಿ ಈಡನ್ ರವರೊಂದಿಗೆ ವಾಸಿಸುವ ಸಿಸ್ಟರ್ ಎರ್ಲಿಂಡಾ ಡಿ. ತುಮುಲಕ್ ರವರು ಹೇಳುತ್ತಾರೆ. ಈ ಪ್ರದೇಶವು ದಟ್ಟ ಕಾಡುಗಳು, ಜೋಳದ ಹೊಲಗಳು ಮತ್ತು ಮಳೆಗಾಲದಲ್ಲಿ ಮಣ್ಣಿನ ಹೊಳೆಗಳಾಗಿ ಬದಲಾಗುವ ಹಾದಿಗಳಿಂದ ಆವೃತವಾಗಿದೆ.

ದೇವರನ್ನು ಇನ್ನೂ ಅರಿಯದ ಪರ್ವತಗಳಲ್ಲಿನ ಜನರು
ಕಾಂಪೋಸ್ಟೆಲಾದ ಪರ್ವತ ಪ್ರದೇಶದ ಹೃದಯಭಾಗದಲ್ಲಿರುವ ಪುರೋಕ್ 16-ಎ ಸಿಟಿಯೊ ಕಿಲಾಬೋಟ್ ತನ್ನದೇ ಆದ ಒಂದು ಪ್ರಪಂಚದಂತೆ ಕಾಣುತ್ತದೆ: ಕಾಡುಗಳು, ಜೋಳದ ಹೊಲಗಳು ಮತ್ತು ಮಳೆಗಾಲದಲ್ಲಿ ಪ್ರವೇಶಿಸಲು ಅಸಾಧ್ಯವಾಗುವ ಕೆಸರುಮಯ ಹಾದಿಗಳಿವೆ. ಈ ಪ್ರದೇಶವನ್ನು ತಲುಪಲು, ಜನರು ಮತ್ತು ಅಕ್ಕಿ ಚೀಲಗಳನ್ನು ಹೊತ್ತುಕೊಂಡು ಕೆಸರಿನಲ್ಲಿ ಚಲಿಸುವ ಹಬಲ್-ಹಬಲ್ ಮೋಟಾರ್ ಸೈಕಲ್ ಟ್ಯಾಕ್ಸಿಗಳನ್ನು ಅವಲಂಬಿಸಬೇಕಾಗುತ್ತದೆ. ದೇವರನ್ನು ನಿಜವಾಗಿಯೂ ಅರಿಯದ ಅನೇಕ ಜನರು ಇನ್ನೂ ಇದ್ದಾರೆ ಎಂಬ ದೂರದ ಪ್ರದೇಶದ ಸ್ಥಳೀಯ ಜನರೊಂದಿಗೆ ದೇವರೊಂದಿಗಿನ ತಮ್ಮ ಜೀವನದ ಅನುಭವವನ್ನು ಹಂಚಿಕೊಳ್ಳಲು ಇಬ್ಬರು ಧಾರ್ಮಿಕ ಸಭೆಯ ಧಾರ್ಮಿಕ ಭಗಿನಿಯರು ಈ ಜೀವನವನ್ನು ಆಯ್ಕೆ ಮಾಡಿಕೊಂಡಿದ್ದಾರೆ.

1923 ರಲ್ಲಿ ಕ್ಯಾಲಬ್ರಿಯಾದಲ್ಲಿ ಮದರ್ ಗಿಯುಡಿಟ್ಟಾ ಮಾರ್ಟೆಲ್ಲಿ ಸ್ಥಾಪಿಸಿದ ಈ ಸಂಸ್ಥೆಯು ಸ್ಥಳೀಯ ಧರ್ಮಸಭೆಯ ಹೃದಯಭಾಗಕ್ಕೆ ತನ್ನ ವರ್ಚಸ್ಸನ್ನು ತರುತ್ತದೆ: ಪಾಲನಾ ಸೇವೆಯನ್ನು ಹಂಚಿಕೊಳ್ಳಲು, ಧರ್ಮಕೇಂದ್ರಗಳಲ್ಲಿ ಜೀವನವನ್ನು ಉಳಿಸಿಕೊಳ್ಳಲು, ಮಕ್ಕಳೊಂದಿಗೆ ಹೋಗಲು ಮತ್ತು ದುರ್ಬಲರಿಗೆ ಹತ್ತಿರವಾಗಲು, ಸಿಸ್ಟರ್‌ಗಳು ಪ್ರತಿದಿನ ದೂರದ ಪ್ರಾಂತ್ಯದ ದಾವೊ ಡಿ ಓರೊದಲ್ಲಿ ಸಾಕಾರಗೊಳಿಸಲು ಪ್ರಯತ್ನಿಸುತ್ತಾರೆ.

ಭರವಸೆಯ ಮನೆಯಾಗಿ ಮಾರ್ಪಟ್ಟ ಗುಡಿಸಲು
ನಾವು ಮೊದಲು ಇಲ್ಲಿಗೆ ಬಂದಾಗ, ನಮ್ಮಲ್ಲಿ ಕೇವಲ ಒಂದು ಖಾಲಿ ಕುಬೊ ಇತ್ತು, ಬೇರೇನೂ ಇರಲಿಲ್ಲ, ಎಂದು ಸಿಸ್ಟರ್ ಎರ್ಲಿಂಡಾರವರು ನೆನಪಿಸಿಕೊಳ್ಳುತ್ತಾರೆ. ಸಿಸ್ಟರ್‌ಗಳ ಮೊದಲ ವಾಸಸ್ಥಾನ ಬಿದಿರು ಮತ್ತು ತಾಳೆ ಎಲೆಗಳ ಗುಡಿಸಲಾಗಿತ್ತು. ಅಸ್ಥಿರವಾದ ಮನೆ ನಿಧಾನವಾಗಿ ಕಾನ್ವೆಂಟ್ ಆಗಿ ಮಾರ್ಪಟ್ಟಿತು, ತರಕಾರಿಗಳನ್ನು ಬೆಳೆಯಲು, ಕೋಳಿಗಳನ್ನು ಸಾಕಲು, ಟಿಲಾಪಿಯಾವನ್ನು ಸಾಕಲು ಮತ್ತು ಸರಳವಾದ ಊಟಗಳನ್ನು ಬೇಯಿಸಲು ಮತ್ತು ಹಂಚಿಕೊಳ್ಳಲು ಒಂದು ಸ್ಥಳವಾಯಿತು. ಮಕ್ಕಳು ಊಟ ಸ್ವೀಕರಿಸಿದಾಗ ನಗುವುದನ್ನು ನೋಡುವುದು ನಮ್ಮನ್ನು ಯೇಸು ಕ್ರಿಸ್ತನ ಸೇವೆಯ ಬಗ್ಗೆ ಧ್ಯಾನಿಸುವಂತೆ ಮಾಡುತ್ತದೆ. ಇಲ್ಲಿ, ನಾವು ನಿಜವಾಗಿಯೂ ಬಡವರಲ್ಲಿ ಬಡವರ ಸ್ಥಿತಿಯನ್ನು ಅನುಭವಿಸುತ್ತೇವೆ ಎಂದು ಸಿಸ್ಟರ್ ಎರ್ಲಿಂಡಾರವರು ವಿವರಿಸಿದರು. ಪ್ರತಿಯೊಂದು ಸಂಕೇತವು ಸಾಕ್ಷಿಯಾಗಿದೆ: ರೋಗಿಗಳ ಭೇಟಿ, ಸಾಂತ್ವನದ ಮಾತುಗಳು, ಊಟ. ಅನೇಕರಿಗೆ, ಸಿಸ್ಟರ್ಸ್ ಮನೆ "ಭರವಸೆಯ ಮನೆ"ಯಾಯಿತು.

ದೇವರು ಜನರಿಗೆ, ಜನರು ದೇವರಿಗೆ
ಪವಿತ್ರಾತ್ಮರ ಧಾರ್ಮಿಕ ಸಭೆಯ ಧಾರ್ಮಿಕ ಭಗಿನಿಯರು ಧ್ಯೇಯವು ಕೇವಲ ಯೋಜನೆಗಳು ಮತ್ತು ರಚನೆಗಳ ಬಗ್ಗೆ ಅಲ್ಲ. ನಮ್ಮ ಮೂಲಕ ಜನರು ಕ್ರಿಸ್ತನನ್ನು ಅನುಭವಿಸಬೇಕೆಂಬುದು ನಮ್ಮ ಆಶಯ ಎಂದು ಸಿಸ್ಟರ್ಸ್ ತಮ್ಮ ಅಭಿಪ್ರಾಯವನ್ನು ನೀಡುತ್ತಾರೆ. ಈ ಪ್ರತಿಷ್ಠಾನವು ಅವರ ಅಸ್ತಿತ್ವವನ್ನು ಉಳಿಸಿಕೊಳ್ಳುತ್ತದೆ ಮತ್ತು ಹಸಿವು, ಬಡತನ ಮತ್ತು ಕೆಸರಿನ ಮಧ್ಯೆ ದೂರದ ಹಳ್ಳಿಯಲ್ಲಿ ವಾಸಿಸುವುದಕ್ಕೆ ಅರ್ಥವನ್ನು ನೀಡುತ್ತದೆ. ನಾವು ಬಡವರಲ್ಲಿ ಬಡವರ ಪಕ್ಕದಲ್ಲಿರಲು ಸಂತೋಷಪಡುತ್ತೇವೆ ಎಂದು ಅವರು ಒತ್ತಿ ಹೇಳುತ್ತಾರೆ. ಸಭೆಯ ಧ್ಯೇಯ ಕನಸು ಕಾಣುವವರಿಗೆ ಸಿಸ್ಟರ್ ಎರ್ಲಿಂಡಾರವರು ಕೆಲವು ಸರಳ ಆದರೆ ಆಮೂಲಾಗ್ರ ಸಲಹೆಯನ್ನು ನೀಡುತ್ತಾರೆ: "ಭಯಪಡಬೇಡಿ. ಆಹಾರ ಮತ್ತು ಬಟ್ಟೆಯ ಬಗ್ಗೆ ಚಿಂತಿಸಬೇಡಿ, ದೇವರು ತನ್ನದೇ ಆದ ರೀತಿಯಲ್ಲಿ ನಿಮ್ಮನ್ನು ಒಂದು ಸಾಧನವಾಗಿ ಬಳಸಿಕೊಳ್ಳಲಿದ್ದಾರೆ.

ಕಾಂಪೋಸ್ಟೆಲಾ ಕಾಡುಗಳ ಕೆಸರಿನ ಹಾದಿಗಳಲ್ಲಿ, ಒಂಟಿಯಾಗಿರುವ ಕುಬೊವು "ಭರವಸೆಯ ಮನೆ" ಯಾಗಿ ಮಾರ್ಪಟ್ಟಿದೆ, ಸಿಸ್ಟರ್ ಎರ್ಲಿಂಡಾ ಮತ್ತು ಸಿಸ್ಟರ್ ರೂಬಿರವರಿಗೆ ಧನ್ಯವಾದಗಳು, ಅವರು ಅವಿಲಾದ ಸಂತ ಥೆರೆಸಾರವರ ಮಾತುಗಳನ್ನು ಆಗಾಗ್ಗೆ ಪುನರಾವರ್ತಿಸುತ್ತಾರೆ,"ಸೊಲೊ ಡಿಯೋಸ್ ಬಸ್ತಾ -ದೇವರು ಮಾತ್ರ ಸಾಕು”.
 

28 ಅಕ್ಟೋಬರ್ 2025, 05:36