ಹುಡುಕಿ

Aftermath of a Russian drone attack in Dnipro Aftermath of a Russian drone attack in Dnipro 

ಅಸ್ಸಿಸಿಯಲ್ಲಿ ಕಾರ್ಡಿನಲ್ ಜುಪ್ಪಿ: ಹುತಾತ್ಮ ಉಕ್ರೇನ್ ನಲ್ಲಿ ಶಾಂತಿ ಪ್ರಯತ್ನಗಳನ್ನು ನವೀಕರಿಸಿ

ಇಟಾಲಿಯದ ಧರ್ಮಾಧ್ಯಕ್ಷರುಗಳ ಸಮ್ಮೇಳನದ (CEI) 81ನೇ ಸಾಮಾನ್ಯ ಸಭೆಯನ್ನು ಮುಕ್ತಾಯಗೊಳಿಸಲು ವಿಶ್ವಗುರು XIVನೇ ಲಿಯೋರವರು ಈ ವಾರ ಇಟಾಲಿಯದ ಪಟ್ಟಣವಾದ ಅಸ್ಸಿಸಿಗೆ ಭೇಟಿ ನೀಡುತ್ತಿರುವ ಹಿನ್ನೆಲೆಯಲ್ಲಿ, ಧರ್ಮಾಧ್ಯಕ್ಷರುಗಳ ನಾಯಕ ಕಾರ್ಡಿನಲ್ ಮ್ಯಾಟಿಯೊ ಮಾರಿಯಾ ಜುಪ್ಪಿರವರು ತಮ್ಮ ಸಹ ಧರ್ಮಾಧ್ಯಕ್ಷರುಗಳನ್ನು ಉದ್ದೇಶಿಸಿ ಯುದ್ಧ-ಹಾನಿಗೊಳಗಾದ ಜಗತ್ತಿನಲ್ಲಿ ಶಾಂತಿಯನ್ನು ಉತ್ತೇಜಿಸಲು ಮತ್ತು ಅಂಚಿನಲ್ಲಿರುವವರ ಹೊರಗಿಡುವಿಕೆಯನ್ನು ಎದುರಿಸಲು ಕರೆ ನೀಡುತ್ತಾರೆ.

ಸ್ಟೆಫಾನೊ ಲೆಸ್ಜ್ಜಿನ್ಸ್ಕಿ ಮತ್ತು ದೆಬೊರಾ ಕ್ಯಾಸ್ಟೆಲ್ಲಾನೊ ಲುಬೊವ್

ಇಟಾಲಿಯದ ಧರ್ಮಾಧ್ಯಕ್ಷರುಗಳ ಸಮ್ಮೇಳನದ (CEI) 81ನೇ ಸಾಮಾನ್ಯ ಸಭೆಯನ್ನು ಮುಕ್ತಾಯಗೊಳಿಸಲು ವಿಶ್ವಗುರು XIVನೇ ಲಿಯೋರವರು ಮುಂಬರುವ ಅಸ್ಸಿಸಿಯ ಪಟ್ಟಣದ ಭೇಟಿಗೆ ಮುಂಚಿತವಾಗಿ, ಕಾರ್ಡಿನಲ್ ಮ್ಯಾಟಿಯೊ ಮಾರಿಯಾ ಜುಪ್ಪಿರವರು, ಇಟಲಿಯದ ಧರ್ಮಾಧ್ಯಕ್ಷರುಗಳು ಶಾಂತಿಯ ಸ್ಥಾಪನೆಯ ಪ್ರಯತ್ನಕ್ಕೆ ತಮ್ಮ ಬದ್ಧತೆಯನ್ನು ತೀವ್ರಗೊಳಿಸುವಂತೆ ಮತ್ತು ಅಪಾಯದಲ್ಲಿರುವವರನ್ನು ರಕ್ಷಿಸುವಂತೆ ಒತ್ತಾಯಿಸಿದರು.

ನವೆಂಬರ್ 17ರಂದು ಸಾಂಟಾ ಮಾರಿಯಾ ಡೆಗ್ಲಿ ಏಂಜೆಲಿಯ ಡೊಮಸ್ ಪ್ಯಾಸಿಸ್‌ನಲ್ಲಿ ಸಾಮಾನ್ಯ ಸಭೆಯನ್ನು ಉದ್ಘಾಟಿಸುತ್ತಾ, CEI ಅಧ್ಯಕ್ಷರಾದ ಕಾರ್ಡಿನಲ್ ಜುಪ್ಪಿರವರು, ನಡೆಯುತ್ತಿರುವ ಜಾಗತಿಕ ಸಂಘರ್ಷಗಳು, ಬಡವರು, ವಲಸಿಗರು ಮತ್ತು ಜೈಲಿನಲ್ಲಿರುವವರ ಅಂಚಿನಲ್ಲಿರುವಿಕೆಯಿಂದ ಉಂಟಾದ ನೋವನ್ನು ಎತ್ತಿ ತೋರಿಸಿದರು. ನಿರ್ದಿಷ್ಟವಾಗಿ ಹೇಳುವುದಾದರೆ, ಬೊಲೊಗ್ನಾದ ಧರ್ಮಾಧ್ಯಕ್ಷರು, ಇಂದು ಎಲ್ಲಾ ಮಹಿಳೆಯರು ಮತ್ತು ಪುರುಷರಲ್ಲಿ ಸಮಾನತೆಯನ್ನು ಪುನಃಸ್ಥಾಪಿಸಲು, ಪ್ರತಿಯೊಬ್ಬ ಜನರು ಮತ್ತು ರಾಷ್ಟ್ರಕ್ಕೂ ಹಕ್ಕುಗಳು ಹಾಗೂ ನೈಜ ನ್ಯಾಯಯುತ ಕಾಲವನ್ನು ಪುನರಾರಂಭಿಸಲು ದೃಢವಾದ ಉಪಕ್ರಮಗಳ ಬಗ್ಗೆ ಭರವಸೆ ವ್ಯಕ್ತಪಡಿಸಿದರು.

ವಿಶ್ವಗುರು XIVನೇ ಲಿಯೋರವರು ಸಾಮಾನ್ಯ ಸಭೆಯನ್ನು ಮುಕ್ತಾಯಗೊಳಿಸಲಿದ್ದಾರೆ
ನವೆಂಬರ್ 17-20, 2025 ರಂದು ನಡೆಯುವ ನಾಲ್ಕು ದಿನಗಳ ಸಭೆಯು ಇಟಲಿಯಾದ್ಯಂತದ ಧರ್ಮಾಧ್ಯಕ್ಷರುಗಳನ್ನು ಒಟ್ಟುಗೂಡಿಸಿ ಪಾಲನಾ ಸೇವೆಯ ಆದ್ಯತೆಗಳು, ರಕ್ಷಣೆ ಮತ್ತು ಕಥೋಲಿಕ ಶಿಕ್ಷಣದ ಕುರಿತು ಚಿಂತಿಸುತ್ತಿದೆ. ಅವರ ಚರ್ಚೆಗಳು ಇಟಲಿಯಲ್ಲಿ ಇತ್ತೀಚೆಗೆ ಪೂರ್ಣಗೊಂಡ ಸಿನೊಡಲ್ ಹಾದಿಯ ಒಳನೋಟಗಳನ್ನು ಸೆಳೆಯುತ್ತಿವೆ, ಇದರ ಪರಿಣಾಮವಾಗಿ ಮೇ 2026ರ ಸಾಮಾನ್ಯ ಸಭೆಯಲ್ಲಿ ಪಾಲನಾ ಸೇವೆಯ ಮಾರ್ಗಸೂಚಿಗಳನ್ನು ಅಂತಿಮಗೊಳಿಸಲಾಗುವುದು. ವಿಶ್ವಗುರು XIVನೇ ಲಿಯೋರವರು ನವೆಂಬರ್ 20, ಗುರುವಾರ ಬೆಳಿಗ್ಗೆ 9:30ಕ್ಕೆ ಸಾಂತಾ ಮಾರಿಯಾ ಡೆಗ್ಲಿ ಏಂಜೆಲಿಯ ಮಹಾದೇವಾಲಯದಲ್ಲಿ ಸಮಾರೋಪ ಅಧಿವೇಶನಕ್ಕಾಗಿ ಧರ್ಮಾಧ್ಯಕ್ಷರುಗಳನ್ನು ಭೇಟಿ ಮಾಡಲಿದ್ದಾರೆ.

ಯುದ್ಧ ನಡೆಯುವಲ್ಲಿ ಶಾಂತಿ ಮತ್ತು ಅಭಿವೃದ್ಧಿಯನ್ನು ಉತ್ತೇಜಿಸಲು ಕರೆ
ತಮ್ಮ ಹೇಳಿಕೆಗಳಲ್ಲಿ, ಕಾರ್ಡಿನಲ್ ಜುಪ್ಪಿರವರು ಪವಿತ್ರ ನಾಡಿನ ಮತ್ತು ಗಾಜಾದಲ್ಲಿನ ಉಪಕ್ರಮಗಳನ್ನು ಉಲ್ಲೇಖಿಸಿ, ವಿಸ್ತೃತ ಅಭಿವೃದ್ಧಿ ಸಹಕಾರವನ್ನು ಪ್ರೋತ್ಸಾಹಿಸಿದರು. ಯುರೋಪ್ ಮತ್ತು ಮೆಡಿಟರೇನಿಯನ್ ನಡುವಿನ ಸಹಯೋಗವನ್ನು ಬಲಪಡಿಸಲು ನವೀಕೃತ ಪ್ರಯತ್ನಗಳಿಗೆ ಕರೆ ನೀಡಿದ ಸಿಇಐ ಅಧ್ಯಕ್ಷರು, ಸುಸ್ಥಿರ ಶಾಂತಿಯ ವಾಸ್ತುಶಿಲ್ಪವನ್ನು ರೂಪಿಸುವಲ್ಲಿ ಯುರೋಪಿನ ಜವಾಬ್ದಾರಿಯನ್ನು ಒತ್ತಿ ಹೇಳಿದರು.
 

18 ನವೆಂಬರ್ 2025, 17:33