ಹುಡುಕಿ

Aftermath of Typhoon Kalmaegi in Cebu, Philippines Aftermath of Typhoon Kalmaegi in Cebu, Philippines 

ಚಂಡಮಾರುತದಿಂದ ಬದುಕುಳಿದವರಿಗೆ ಮನೆಗಳನ್ನು ತೆರೆಯುವಂತೆ ಕಥೊಲಿಕರಿಗೆ ಫಿಲಿಪಿನೋ ಮಹಾಧರ್ಮಾಧ್ಯಕ್ಷರ ಕರೆ

ಈ ಋತುವಿನ 20ನೇ ಚಂಡಮಾರುತವು ಫಿಲಿಪೈನ್ಸ್‌ಗೆ ಅಪ್ಪಳಿಸುತ್ತಿದ್ದಂತೆ, ಸೆಬುವಿನ ಮಹಾಧರ್ಮಾಧ್ಯಕ್ಷರಾದ ಕಥೊಲಿಕ ಸಮುದಾಯವು ನೆರವಿ ಅಗತ್ಯವಿರುವವರಿಗೆ ತಮ್ಮ ಮನೆಗಳು, ದೇವಾಲಯಗಳು ಮತ್ತು ಸಂಸ್ಥೆಗಳ ಬಾಗಿಲುಗಳನ್ನು ತೆರೆಯುವಂತೆ ಒತ್ತಾಯಿಸುತ್ತಾರೆ.

ವ್ಯಾಟಿಕನ್ ಸುದ್ದಿ

ಸ್ಥಳೀಯವಾಗಿ ಟಿನೋ ಎಂದು ಕರೆಯಲ್ಪಡುವ ಕಲ್ಮೇಗಿ ಚಂಡಮಾರುತವು ಫಿಲಿಪೈನ್ಸ್ ದ್ವೀಪದ ಸೆಬುದಲ್ಲಿ 90ಕ್ಕೂ ಹೆಚ್ಚು ಜನರನ್ನು ಬಲಿ ತೆಗೆದುಕೊಂಡಿದೆ ಮತ್ತು ದೇಶದ ಮಧ್ಯ ಭಾಗವನ್ನು ಧ್ವಂಸಮಾಡಿದೆ. ಈ ಋತುವಿನಲ್ಲಿ ದೇಶವನ್ನು ಅಪ್ಪಳಿಸುವ 20 ನೇ ಚಂಡಮಾರುತವು ಇದಾಗಿದೆ.

ಸೆಬು ಪ್ರಾಂತ್ಯದಲ್ಲಿ, ಹಲವಾರು ಪುರಸಭೆಗಳು ಪ್ರವಾಹಕ್ಕೆ ಸಿಲುಕಿವೆ ಮತ್ತು ನಾಗರಿಕ ಅಧಿಕಾರಿಗಳು ಹೆಚ್ಚು ನಗರೀಕರಣಗೊಂಡ ಪ್ರದೇಶಗಳಲ್ಲಿ ಮನೆಗಳು ಮತ್ತು ಬೀದಿಗಳಿಗೂ ನೀರು ನುಗ್ಗಿದೆ ಎಂದು ವರದಿ ಮಾಡಿದ್ದಾರೆ. ಮುನ್ನೆಚ್ಚರಿಕೆ ಕ್ರಮವನ್ನು ಅನುಸರಿಸಿ, ಸುಮಾರು 400,00 ಜನರನ್ನು ಸ್ಥಳಾಂತರಿಸಲಾಗಿದ್ದು, ಈಗ ಅವರು ನಿರಾಶ್ರಿತರಾಗಿದ್ದಾರೆ. ಚಂಡಮಾರುತವು ಭಾರೀ ಮಳೆಯನ್ನು ತಂದಿದೆ ಎಂದು ರಾಷ್ಟ್ರೀಯ ಹವಾಮಾನ ಸೇವೆ ದಾಖಲಿಸಿದೆ, ಇದನ್ನು "ಅಭೂತಪೂರ್ವ" ಎಂದು ವಿವರಿಸಲಾಗಿದೆ.

ಕಥೋಲಿಕರ ಪ್ರತಿಕ್ರಿಯೆ
ವ್ಯಾಟಿಕನ್‌ನ ಫೈಡ್ಸ್ ಏಜೆನ್ಸಿಯ ಪ್ರಕಾರ, ಸೆಬುವಿನ ಮಹಾಧರ್ಮಾಧ್ಯಕ್ಷರಾದ ಆಲ್ಬರ್ಟೊ ಎಸ್. ಉಯ್ ರವರು ಸ್ಥಳೀಯ ಕಥೋಲಿಕ ಸಮುದಾಯವು ನೆರವಿನ ಅಗತ್ಯವಿರುವವರಿಗೆ ತಮ್ಮ ಮನೆಗಳು, ದೇವಾಲಯಗಳು ಮತ್ತು ಸಂಸ್ಥೆಗಳ ಬಾಗಿಲುಗಳನ್ನು ತೆರೆಯುವಂತೆ ಪ್ರೋತ್ಸಾಹಿಸಿದ್ದಾರೆ. ಈ ರೀತಿಯ ವಿಪತ್ತುಗಳು ನಮ್ಮ ಸಾಮಾನ್ಯ ಮನೆಗಾಗಿ ನಾವು ಏನು ಮಾಡಿದ್ದೇವೆ ಅಥವಾ ಏನು ಮಾಡಲು ವಿಫಲರಾಗಿದ್ದೇವೆ ಎಂಬುದನ್ನು ಪ್ರತಿಬಿಂಬಿಸುತ್ತವೆ ಎಂದು ಅವರು ಒತ್ತಿ ಹೇಳಿದರು.

ದೇವರು ಗಾಳಿ ಮತ್ತು ನೀರಿನ ಮೂಲಕ ನಮ್ಮೊಡನೆ ಮಾತನಾಡಲು ಪ್ರಯತ್ನಿಸುತ್ತಿದ್ದಾರೆ ಎಂದು ಮಹಾಧರ್ಮಾಧ್ಯಕ್ಷರು ವಿವರಿಸಿದರು. ಶೋಷಕರಾಗಿ ಅಲ್ಲ, ಬದಲಾಗಿ ಮೇಲ್ವಿಚಾರಕರಾಗಿ ನಮ್ಮ ಜವಾಬ್ದಾರಿಯನ್ನು ಪುನಃ ಕಂಡುಕೊಳ್ಳಲು ಅವರು ನಮ್ಮನ್ನು ಆಹ್ವಾನಿಸುತ್ತಿದ್ದಾರೆ. ಪ್ರವಾಹಗಳು -ನಮ್ಮಲ್ಲಿ ಪರಿಸರ ಮತ್ತು ನೈತಿಕ ಪರಿವರ್ತನೆಯನ್ನು ಮತ್ತು ನಮ್ಮ ಸಾಮಾನ್ಯ ಮನೆಯನ್ನು ನೋಡಿಕೊಳ್ಳುವುದು ವಿಶ್ವಾಸ, ನ್ಯಾಯ ಮತ್ತು ಪ್ರೀತಿಯ ಕ್ರಿಯೆ "ಜಾಗೃತಗೊಳಿಸಲಿ" ಎಂಬುದನ್ನು ನಮಗೆ ನೆನಪಿಸಲಿ ಎಂಬ ಬಯಕೆಯನ್ನು ಅವರು ವ್ಯಕ್ತಪಡಿಸಿದರು.

ಸೆಬು ದ್ವೀಪದ ಮೇಲೆ ಪರಿಣಾಮ ಬೀರಿದ ಮೊದಲ ನೈಸರ್ಗಿಕ ವಿಕೋಪ ಇದಲ್ಲ. ಕಳೆದ ತಿಂಗಳಷ್ಟೇ ಆ ಪ್ರದೇಶದಲ್ಲಿ ಭೂಕಂಪ ಸಂಭವಿಸಿ 70ಕ್ಕೂ ಹೆಚ್ಚು ಜನರು ಸಾವನ್ನಪ್ಪಿದರು, 20,000ಕ್ಕೂ ಹೆಚ್ಚು ಜನರು ಸ್ಥಳಾಂತರಗೊಂಡರು ಮತ್ತು ಐತಿಹಾಸಿಕ ಕಟ್ಟಡಗಳು, ದೇವಾಲಯಗಳು ಮತ್ತು ಸೌಲಭ್ಯಗಳಿಗೆ ತೀವ್ರ ಹಾನಿಯಾಯಿತು.

ಆ ಭೂಕಂಪದ ನಂತರ, ಸ್ಥಳೀಯ ಧರ್ಮಸಭೆಯು "ಭರವಸೆ ನೀಡಿ" ಎಂಬ ಮನವಿಯೊಂದಿಗೆ ತುರ್ತು ಪರಿಹಾರ ಉಪಕ್ರಮವನ್ನು ಪ್ರಾರಂಭಿಸಿತು. ಈಗ, ಟೈಫೂನ್ ಟಿನೋ ನಂತರ, ಚಂಡಮಾರುತದಿಂದ ಪೀಡಿತರಿಗೆ, ಒಗ್ಗಟ್ಟು ಮತ್ತು ಬೆಂಬಲವನ್ನು ನೀಡಲು ಈ ಪರಿಹಾರ ಪ್ರಯತ್ನವನ್ನು ಪುನರಾರಂಭಿಸಲಾಗುತ್ತಿದೆ.
 

05 ನವೆಂಬರ್ 2025, 23:34