ಧಾರ್ಮಿಕ ಭಗಿನಿಯರಿಗೆ ಸೇವೆ ಸಲ್ಲಿಸಲು ವಯಸ್ಸು ಅಡ್ಡಿಯಲ್ಲ
ಸಿಸ್ಟರ್ ಇಲಾರಿಯಾ ಡಿ ಲಿಲ್ಲೊ
ಕೊಡಲು ಏನೂ ಇಲ್ಲದಷ್ಟು ಬಡವರಿಲ್ಲ ಮತ್ತು ಸ್ವೀಕರಿಸಲು ಏನೂ ಅಗತ್ಯವಿಲ್ಲದಷ್ಟು ಶ್ರೀಮಂತರು ಯಾರೂ ಇಲ್ಲ ಎಂದು ದಿವಂಗತ ವಿಶ್ವಗುರು ಫ್ರಾನ್ಸಿಸ್ ರವರು ಧರ್ಮಗುರು ಒರೆಸ್ಟೆ ಬೆಂಜಿರವರನ್ನು (61ನೇ ವಿಶ್ವ-ದೈವಕರೆ ಮತ್ತು ಪ್ರಾರ್ಥನಾ ದಿನವನ್ನು ಕುರಿತು ವಿಶ್ವಗುರು ಫ್ರಾನ್ಸಿಸ್ ರವರ ಸಂದೇಶ) ಉಲ್ಲೇಖಿಸಿ ಹೇಳಿದರು.
ಸಿಸ್ಟರ್ ಏಂಜೆಲಾರವರ ಪೂರ್ಣ ಜೀವನವನ್ನು ನೋಡಿದರೆ, ವಯಸ್ಸು, ಅನುಭವ ಅಥವಾ ಒಬ್ಬರು ಎಲ್ಲಿದ್ದರೂ, ಪ್ರೀತಿಯಿಂದ ತಮ್ಮ ಸೇವೆ ನೀಡಲು ಮತ್ತು ಸ್ವೀಕರಿಸಲು ಯಾವಾಗಲೂ ಏನಾದರೂ ಇರುತ್ತದೆ ಎಂದು ಹೇಳಿದರು. ನಿವೃತ್ತ ದಾದಿಯಾಗಿರುವ ಇವರಿಗೆ 93 ವರ್ಷ ವಯಸ್ಸಾಗಿದ್ದು, 70 ವರ್ಷಗಳ ಕಾಲ ಧಾರ್ಮಿಕ ಜೀವನದ ಅಭ್ಯಂಗಿತ ಸೇವಾ ಜೀವನವನ್ನು ಸಂತೋಷದಿಂದ ಕಳೆದಿದ್ದಾರೆ.
ಶುದ್ಧೀಕರಣ ಸ್ಥಳದಲ್ಲಿರುವ ಪವಿತ್ರ ಆತ್ಮಗಳಿಗೆ ಪ್ರಾರ್ಥಿಸುವ ಧಾರ್ಮಿಕ ಭಗಿನಿ ಸಿಸ್ಟರ್ ಏಂಜೆಲಾ ಸಿನೊಪೊಲಿರವರು 2001ರಿಂದ ಮಾಟೆರಾದಲ್ಲಿ ವಾಸಿಸುತ್ತಿದ್ದಾರೆ, ಅವರ ನಿಕಟತೆಯ ಪಾಲನಾ ಸೇವಾಕಾರ್ಯದ ಸೇವೆಯನ್ನು ನಿರ್ವಹಿಸುತ್ತಿದ್ದಾರೆ.
ಈ ಧ್ಯೇಯವು ಆಕೆಯನ್ನು ದಾರಿಯಲ್ಲಿ ಭೇಟಿಯಾಗುವವರನ್ನು ಸ್ವಾಗತಿಸಲು, ಒಂಟಿಯಾಗಿರುವವರನ್ನು, ಅನಾರೋಗ್ಯದಿಂದ ಬಳಲುತ್ತಿರುವವರನ್ನು ಅಥವಾ ಅವರು ಜೀವನದ ಕಷ್ಟ-ನೋವುಗಳನ್ನು ಹಂಚಿಕೊಳ್ಳಲು ನಂಬಬಹುದಾದ ವ್ಯಕ್ತಿಗಳನ್ನು ಹುಡುಕುತ್ತಿರುವವರನ್ನು ಭೇಟಿ ಮಾಡುತ್ತಿದ್ದಾರೆ. ಅವರ ಕಷ್ಟಗಳನ್ನು ಕೇಳಿಸಿಕೊಳ್ಳುವ ಅಥವಾ ಆಲಿಸುವಾಗ, ಕೆಲವೊಮ್ಮೆ ಅಸ್ತಿತ್ವದಲ್ಲಿಲ್ಲದ ಪರಿಹಾರವನ್ನು ನೀಡಲು ಅಥವಾ ಸೂಕ್ತವಲ್ಲದ ಉತ್ತರಗಳನ್ನು ನೀಡಲು ಪ್ರಲೋಭನೆ ಉಂಟಾಗಬಹುದು.
ಆದರೆ ತನ್ನ ಅಭಿಪ್ರಾಯದ ಪೆಟ್ಟಿಗೆಯಲ್ಲಿ ಸಿಸ್ಟರ್ ಏಂಜೆಲಾ ತನ್ನೊಂದಿಗೆ, ಇತರರ ಜೀವನದ ಮೇಲೆ ಯಾವುದೇ ತೀರ್ಪನ್ನು ನೀಡದೆ, ಅವರು ತಮ್ಮ ಕಷ್ಟಗಳನ್ನು ಹೇಳುವಾಗ ಮೌನವಾಗಿರುವುದು, ಇನ್ನೊಬ್ಬ ವ್ಯಕ್ತಿಯು ನಂಬಿಕೆಯಿಂದ ಹೇಳಿದ ಮಾತುಗಳನ್ನು ತನ್ನ ಹೃದಯದಲ್ಲಿ ಇಟ್ಟುಕೊಳ್ಳುವುದು ಮತ್ತು ಆ ವ್ಯಕ್ತಿ ಖಿನ್ನತೆಗೆ ಒಳಗಾಗದಂತೆ ಬದಲಿಗೆ, ಆಶಾದಾಯಕವಾಗಿರಲು ಅವರೊಂದಿಗೆ ಹೋಗುವುದು, ಆಕೆಯ ಅಭಿಪ್ರಾಯ ಕೇಳಿದಾಗ, ಏನು ಹೇಳಬೇಕೆಂದು ನನಗೆ ಅರಿವಿಲ್ಲ, ಆದರೆ ದೇವರು ನನಗೆ ಸೂಚಿಸುವ ಮಾತುಗಳಿಂದ ನಾನು ಮಾರ್ಗದರ್ಶನ ಪಡೆಯುತ್ತೇನೆ ಎಂದು ತಮ್ಮ ವಿಶ್ವಾಸವನ್ನು ವ್ಯಕ್ತಪಡಿಸುತ್ತಾರೆ.
ಕ್ರಿಸ್ತರಿಂದ ಕಲಿಯುವುದು
ಮನೆ ಬಿಟ್ಟು ಜನರನ್ನು ಭೇಟಿ ಮಾಡುವುದು, ವಿಶ್ವಗುರು ಫ್ರಾನ್ಸಿಸ್ "ಪರಿಧಿಗೆ ಹೋಗುವುದು" ಎಂದು ಕರೆದದ್ದು, ಸಿಸ್ಟರ್ ಏಂಜೆಲಾರವರು ಪ್ರಭುಯೇಸುವನ್ನು ತಮ್ಮ ಮಾದರಿಯಾಗಿ ತೆಗೆದುಕೊಂಡು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುವ ಸುವಾರ್ತಾಬೋಧಕ ಶೈಲಿಯಾಗಿದೆ. ಪ್ರಭುಯೇಸು ಇತರರನ್ನು ನೋಡುವ ರೀತಿ, ಅಂದರೆ ಪ್ರೀತಿಯ ಜೀವಿಗಳಂತೆ, ಬಡವರನ್ನು ನೋಡಿಕೊಳ್ಳುವ ಮತ್ತು ಅವರಿಗೆ ಭರವಸೆಯನ್ನು ತರುವ ರೀತಿಯಿಂದ ಆಕರ್ಷಿತರಾದ ಸಿಸ್ಟರ್ ಏಂಜೆಲಾ, ಘರ್ಷಣೆಗಳು ಮತ್ತು ಸಮಸ್ಯೆಗಳ ಹೊರತಾಗಿಯೂ, ಈ ಜಗತ್ತಿನಲ್ಲಿ ದೇವರು ಕೆಲಸ ಮಾಡುತ್ತಿರುವುದನ್ನು ಖಚಿತವಾಗಿ ತಮ್ಮ ಜೀವನದಲ್ಲಿ ಅನುಭವ ಎದುರಾಗುವ ವಿಧವನ್ನು ಹುಡುಕಲು ಪ್ರೇರೇಪಿಸಲ್ಪಡುತ್ತಾರೆ.
ತಮ್ಮ ದೈವಕರೆಯ ಮತ್ತು ಜವಾಬ್ದಾರಿಗಳಿಂದ ನಿವೃತ್ತರಾದ ನಂತರವೂ ಜನರಿಗೆ ಸೇವೆ ಸಲ್ಲಿಸುತ್ತಿರುವ ಅನೇಕ ಧಾರ್ಮಿಕ ಮಹಿಳೆಯರಲ್ಲಿ ಸಿಸ್ಟರ್ ಏಂಜೆಲಾರವರೂ ಸಹ ಒಬ್ಬರು. ನಮ್ಮ ಜೀವನ ಇತರರಿಗೆ ಸೇವೆ ಸಲ್ಲಿಸುವ ಜೀವನ ಎಂದು ಅವರು ತೀರ್ಮಾನಿಸುತ್ತಾರೆ.