ಹುಡುಕಿ

Sr. Josephine Kwenga listening to trainers teaching Hydroponic farming Sr. Josephine Kwenga listening to trainers teaching Hydroponic farming 

ಕೃಷಿಯನ್ನು ಒಂದು ಸಮುದಾಯ ಅಭಿವೃದ್ಧಿಯಾಗಿ ಪರಿವರ್ತಿಸುತ್ತಿರುವ ಕೆನ್ಯಾದ ಧಾರ್ಮಿಕ ಭಗಿನಿ

ಸುಸ್ಥಿರ ಕೃಷಿಯ ಮೂಲಕ ಸಮುದಾಯ ಸಬಲೀಕರಣವು ಸಿಸ್ಟರ್ ಜೋಸೆಫೀನ್ ಕ್ವೆಂಗಾರವರ ಕೆಲಸವನ್ನು ಮುನ್ನಡೆಸುತ್ತಿದೆ, ಕೀನ್ಯಾದ ಹಳ್ಳಿಗಳಲ್ಲಿನ ರೈತರು ಕುಟುಂಬಗಳಿಗೆ ಹೊಸ ಜೀವನವನ್ನು ತರುವ ಸಲುವಾಗಿ ಕಾರ್ಯಸಾಧ್ಯವಾದ ಕೃಷಿ ಪದ್ಧತಿಗಳನ್ನು ಅಭಿವೃದ್ಧಿಪಡಿಸಲು ಸಹಾಯ ಮಾಡುತ್ತಾರೆ ಮತ್ತು ಸೃಷ್ಟಿಗಾಗಿ ಕಾಳಜಿ ವಹಿಸುವ ಧರ್ಮಸಭೆಯ ಧ್ಯೇಯವನ್ನು ಮುನ್ನಡೆಸುತ್ತಾರೆ.

ಸಿಸ್ಟರ್ ಕ್ರಿಸ್ಟೀನ್ ಮಾಸಿವೊ, ಸಿಪಿಎಸ್

ಟಾರ್ಬ್ಸ್‌ನ ಸಂತ ಜೋಸೆಫ್ ರವರ ಧಾರ್ಮಿಕ ಭಗಿನಿಯಾದ ಸಿಸ್ಟರ್ ಜೋಸೆಫೀನ್ ಕ್ವೆಂಗಾರವರು ವಿಶ್ವಾಸ, ಸುಸ್ಥಿರತೆ ಮತ್ತು ಸಮುದಾಯ ಸಬಲೀಕರಣವನ್ನು ಒಂದುಗೂಡಿಸುವ ರೀತಿಯಲ್ಲಿ ಜೀವನವನ್ನು ಪರಿವರ್ತಿಸುತ್ತಾರೆ. ಸುಸ್ಥಿರ ಕೃಷಿಯು ಕುಟುಂಬಗಳು, ಸಮುದಾಯಗಳು ಮತ್ತು ಧರ್ಮಸಭೆಯ ಉತ್ಸಾಹಕ್ಕೆ ಅನುಗುಣವಾಗಿ ಸೃಷ್ಟಿಯನ್ನು ಕಾಪಾಡಿಕೊಳ್ಳುವ ಧ್ಯೇಯಕ್ಕೆ ಹೊಸ ಜೀವ ತುಂಬುತ್ತಿದೆ.

ಸಮಗ್ರ ಸೇವೆ
2023 ರಲ್ಲಿ, ಸಿಸ್ಟರ್ ಜೋಸೆಫೀನರವರಿಗೆ ಸುಸ್ಥಿರ ಕೃಷಿಯಲ್ಲಿ ಅವರ ಕೆಲಸಕ್ಕಾಗಿ ವಿಶ್ವಸಂಸ್ಥೆಯ ಪತ್ರಕರ್ತರು ಮತ್ತು ಬರಹಗಾರರ ಪ್ರತಿಷ್ಠಾನದಿಂದ ಗುರುತಿಸುವಿಕೆ ಪ್ರಮಾಣಪತ್ರವನ್ನು ನೀಡಿ ಗೌರವಿಸಲಾಯಿತು. ಧಾರ್ಮಿಕ ಭಗಿನಿಯಾಗಿ ಅವರ ಸಾಕ್ಷಿ ಮತ್ತು ಇಂದಿನ ಸಮಾಜದಲ್ಲಿ ಅವರ ಪ್ರವಾದಿಯ ಪಾತ್ರವು ಅವರ ನಿಸ್ವಾರ್ಥ ಸೇವೆಯ ಉತ್ಸಾಹವನ್ನು ಮಿಶ್ರಣ ಮಾಡುತ್ತದೆ.

ನಾನು ತಂಡದ ಕೆಲಸ ಮತ್ತು ಸಮಗ್ರ ಅಭಿವೃದ್ಧಿ ಮತ್ತು ಸಾಮಾಜಿಕ ಪರಿವರ್ತನೆಯ ಪ್ರಚಾರದ ಬಗ್ಗೆ ಉತ್ಸುಕಳಾಗಿದ್ದೇನೆ" ಎಂದು ಆಕೆಯು ವ್ಯಾಟಿಕನ್ ಸುದ್ದಿಗೆ ತಿಳಿಸಿದರು. ನಮ್ಮ ಸೇವಾಕಾರ್ಯವು ಸಂಪನ್ಮೂಲಗಳನ್ನು ಸಂಗ್ರಹಿಸುವುದರ ಬಗ್ಗೆ ಅಲ್ಲ, ಇದು ಸಮುದಾಯ ಸಬಲೀಕರಣ, ವಿಶ್ವಾಸ ಮತ್ತು ನಾವು ಸೇವೆ ಸಲ್ಲಿಸುವವರಿಗೆ ಸಂಪನ್ಮೂಲವಾಗಿರುವುದರ ಬಗ್ಗೆ ಹಾಗೂ ಸುಸ್ಥಿರತೆಯನ್ನು ಸಂಯೋಜಿಸುವ ಕಾರ್ಯಕ್ರಮಗಳನ್ನು ನಿಗದಿಪಡಿಸುವುದು.

ಶಿಕ್ಷಣ, ಅಭಿವೃದ್ಧಿ ಅಧ್ಯಯನಗಳು ಮತ್ತು ಸಾಮಾಜಿಕ ಪರಿವರ್ತನೆಯಲ್ಲಿ ತನ್ನ ವಿಶಿಷ್ಟ ಶೈಕ್ಷಣಿಕ ಹಿನ್ನೆಲೆಯೊಂದಿಗೆ, ಸುಸ್ಥಿರ ಅಭಿವೃದ್ಧಿ, ಶಾಂತಿ ನಿರ್ಮಾಣ, ನಾಯಕತ್ವ ಮತ್ತು ಯೋಜನಾ ನಿರ್ವಹಣೆಯಲ್ಲಿ ಪರಿಣತಿ ಹೊಂದಿರುವ ಸಿಸ್ಟರ್ ಜೋಸೆಫೀನರವರು ಅಭಿವೃದ್ಧಿ ಉಪಕ್ರಮಗಳಿಗೆ ಮಾರ್ಗದರ್ಶನ ನೀಡಲು ಸಜ್ಜಾಗಿದ್ದಾರೆ.

ಕೃಷಿ ಒಂದು ಆಧ್ಯಾತ್ಮಿಕ ಕ್ರಿಯೆ
ಕೃಷಿ ಎಂದರೆ ಆಹಾರ ಉತ್ಪಾದನೆಗಿಂತ ಅಧಿಕವಾದುದು ಎಂದು ಸಿಸ್ಟರ್ ಜೋಸೆಫೀನರವರು ನಂಬುತ್ತಾರೆ. ಇದು ಸೃಷ್ಟಿಕರ್ತ ದೇವರೊಂದಿಗೆ ಒಗ್ಗಟ್ಟಾಗಿರುವುದು ಕ್ರಿಯೆಯಲ್ಲಿ ಕಂಡುಬರುತ್ತದೆ. ನಾವು ಮಣ್ಣನ್ನು ಪೋಷಿಸಿದಾಗ, ಸಸ್ಯಗಳು ಮತ್ತು ಪ್ರಾಣಿಗಳನ್ನು ಕಾಳಜಿ ವಹಿಸಿದಾಗ, ನಾವು ದೇವರ ಸೃಷ್ಟಿ ಕಾರ್ಯದಲ್ಲಿ ಭಾಗವಹಿಸುತ್ತಿದ್ದೇವೆ ಎಂದು ಅವರು ಹೇಳಿದರು. ನಾವು ಕೃಷಿಯಿಂದ ತಾಳ್ಮೆ, ವಿಶ್ವಾಸ ಮತ್ತು ನಮ್ರತೆಯನ್ನು ಕಲಿಯುತ್ತೇವೆ. ಅದು ನಮ್ಮನ್ನು ಜೀವನದ ಲಯದೊಂದಿಗೆ ಸಂಪರ್ಕಿಸುತ್ತದೆ. ನಾವು ಭೂಮಿಯಲ್ಲಿ ಬಿತ್ತಿದಾಗ, ಫಸಲಿಗೆ ಕಾಯುವಾಗ, ಪೋಷಿಸಿದಾಗ ಮತ್ತು ಕೊಯ್ಲು ಮಾಡಿದಾಗ, ಅದು ವಿಶ್ವಾಸದ ಪ್ರಯಾಣವನ್ನು ಪ್ರತಿಬಿಂಬಿಸುತ್ತದೆ ಮತ್ತು ಆದ್ದರಿಂದ ಕೃಷಿಯು ಸೃಷ್ಟಿಯ ಉಡುಗೊರೆಗಾಗಿ ಪ್ರಾರ್ಥನೆಯಾಗುತ್ತದೆ ಎಂದು ಅವರು ವಿವರಿಸಿದರು.
 

19 ನವೆಂಬರ್ 2025, 17:36