ಹುಡುಕಿ

MEXICO-US-BORDER MEXICO-US-BORDER  (Justin Hamel)

ವಲಸಿಗರಿಗೆ ಅಮೆರಿಕದ ಧರ್ಮಾಧ್ಯಕ್ಷರುಗಳು: ನಿಮ್ಮ ಸಂಕಷ್ಟದಲ್ಲಿ ನಾವು ನಿಮ್ಮೊಂದಿಗಿದ್ದೇವೆ

ವಲಸೆಯ ಕುರಿತಾದ "ವಿಶೇಷ ಸಂದೇಶದಲ್ಲಿ” ಅಮೆರಿಕದ ಧರ್ಮಾಧ್ಯಕ್ಷರುಗಳು ವಲಸಿಗರಿಗೆ ಅವರ ಸಂಕಷ್ಟದಲ್ಲಿ ತಮ್ಮ ಒಗ್ಗಟ್ಟಿನ ಭರವಸೆ ನೀಡುತ್ತಾ, ರಾಷ್ಟ್ರದ ವಲಸೆ ಕಾನೂನುಗಳ "ಅರ್ಥಪೂರ್ಣ ಸುಧಾರಣೆಗೆ” ಕರೆ ನೀಡುತ್ತಾರೆ.

ಕ್ರಿಸ್ಟೋಫರ್ ವೆಲ್ಸ್

ಅಮೆರಿಕದಲ್ಲಿ ವಲಸಿಗರ ಮೇಲೆ ಪರಿಣಾಮ ತೊಂದರೆಗಳು ಅಧಿಕವಾಗುತ್ತಿರುವ ಪರಿಸ್ಥಿತಿಯ ಬಗ್ಗೆ ತಮ್ಮ ಕಳವಳವನ್ನು ವ್ಯಕ್ತಪಡಿಸುತ್ತಾ, ಧರ್ಮಾಧ್ಯಕ್ಷರುಗಳು ಒಂದೇ ಸಭೆಯಾಗಿ ತಮ್ಮ ಅಭಿಪ್ರಾಯಗಳನ್ನು ಮುಂದಿಟ್ಟು ಈ ವಿಷಯದ ಕುರಿತು ಚರ್ಚಿಸಲು ಸಭೆ ಸೇರಿಸಿ, ತುರ್ತು ವಿಧಾನವನ್ನು ಆಹ್ವಾನಿಸುತ್ತಾ, ಅಮೆರಿಕದ ಧರ್ಮಾಧ್ಯಕ್ಷರುಗಳ ಸಮ್ಮೇಳನವು "ವಿಶೇಷ ಸಂದೇಶವನ್ನು” ಬಿಡುಗಡೆ ಮಾಡಿದೆ.

2013ರಲ್ಲಿ ಫೆಡರಲ್ ಸರ್ಕಾರದ ಗರ್ಭನಿರೋಧಕ ಆದೇಶಕ್ಕೆ ಪ್ರತಿಕ್ರಿಯೆಯಾಗಿ ಪ್ರಕಟವಾದ ಇದೇ ರೀತಿಯ ಸಂವಹನದ ನಂತರ ಧರ್ಮಾಧ್ಯಕ್ಷರುಗಳು ಬಿಡುಗಡೆ ಮಾಡಿದ ಮೊದಲ ವಿಶೇಷ ಸಂದೇಶವಿದು. ಅಂತಹ ಸಂದೇಶಗಳನ್ನು ಸಮ್ಮೇಳನದ ಪೂರ್ಣಸಭೆಗಳಲ್ಲಿ ಮಾತ್ರ ನೀಡಬಹುದು ಮತ್ತು ನಂತರ ಸಭೆಯಲ್ಲಿ ಹಾಜರಿರುವ ಹಾಗೂ ಮತ ಚಲಾಯಿಸುವ ಆ ಧರ್ಮಾಧ್ಯಕ್ಷರುಗಳಲ್ಲಿ ಮೂರನೇ ಎರಡರಷ್ಟು ಜನರ ಅನುಮೋದನೆಯೊಂದಿಗೆ ಮಾತ್ರ ಆ ಸಂದೇಶಗಳನ್ನು ನೀಡಬಹುದು. ಪ್ರಸ್ತುತ ಸಂದೇಶವು ಸುಮಾರು 97% ರಷ್ಟು ಪರವಾಗಿ ಅಂಗೀಕರಿಸಲ್ಪಟ್ಟಿತು ಮತ್ತು ಕೇವಲ ಐದು ಧರ್ಮಾಧ್ಯಕ್ಷರುಗಳು ಮಾತ್ರ ಈ ಕ್ರಮದ ವಿರುದ್ಧ ಮತ ಚಲಾಯಿಸಿದರು.

ವಿಶೇಷ ಸಂದೇಶವೇನೆಂದರೆ ವಲಸಿಗರು ಒಂಟಿಯಾಗಿಲ್ಲ ಎಂದು ಅಮೆರಿಕದ ಧರ್ಮಾಧ್ಯಕ್ಷರುಗಳು ವಲಸಿಗರಿಗೆ ಅವರ ಸಂಕಷ್ಟದಲ್ಲಿ ನಾವು ನಿಮ್ಮೊಂದಿಗಿದ್ದೇವೆ ಎಂದು ತಮ್ಮ ಒಗ್ಗಟ್ಟಿನ ಭರವಸೆ ನೀಡುತ್ತಾರೆ ಎಂದು ಹೇಳುತ್ತಾರೆ. ಪತ್ರದ ಆರಂಭವೇ "ಭಯ ಮತ್ತು ಆತಂಕದ ವಾತಾವರಣದಲ್ಲಿ" ವಾಸಿಸುವ ವಲಸಿಗರ ಬಗ್ಗೆ ಧರ್ಮಾಧ್ಯಕ್ಷರುಗಳು ತಮ್ಮ ಕಳವಳಗಳನ್ನು ಹಾಗೂ ವಲಸಿಗರ "ನಿಂದನೆ", ಬಂಧನದ ಕೇಂದ್ರಗಳಲ್ಲಿನ ಪರಿಸ್ಥಿತಿಗಳು, ಪಾಲನಾ ಸೇವೆ ಆರೈಕೆಯ ಸೌಲಭ್ಯದ ಕೊರತೆ ಮತ್ತು ವಲಸಿಗರ ಘನತೆಯ ಮೇಲಿನ ಇತರ ದಾಳಿಗಳು ಸೇರಿದಂತೆ ವಲಸೆಯ ಕುರಿತಾದ ಚರ್ಚೆಯ ಪ್ರಸ್ತುತ ಸ್ಥಿತಿಯನ್ನು ಎತ್ತಿ ತೋರಿಸುತ್ತದೆ.

ತಮ್ಮ ದೇಶದ ಮೇಲಿನ ಪ್ರೀತಿ, ಅದರ ಶಾಂತಿ ಮತ್ತು ಸಮೃದ್ಧಿಗಾಗಿ, ತಮ್ಮ ಪ್ರಾರ್ಥನೆಗಳನ್ನು ನೆನಪಿಸಿಕೊಳ್ಳುವುದರಿಂದ, ಧರ್ಮಾಧ್ಯಕ್ಷರುಗಳು ದೇವರು ಕೊಟ್ಟಿರುವ ಮಾನವ ಘನತೆಯ ರಕ್ಷಣೆಗಾಗಿ ಬಲವಂತವಾಗಿ ತಮ್ಮ ಧ್ವನಿಯನ್ನು ಎತ್ತಬೇಕಾಗಿದೆ ಎಂದು ಭಾವಿಸುತ್ತಾರೆ ಎಂದು ಹೇಳುತ್ತಾರೆ.

ಕಥೋಲಿಕ ಬೋಧನೆಯು ರಾಷ್ಟ್ರಗಳು ವಲಸಿಗರು ಸೇರಿದಂತೆ ಎಲ್ಲಾ ವ್ಯಕ್ತಿಗಳ ಮೂಲಭೂತ ಘನತೆಯನ್ನು ಗುರುತಿಸುವಂತೆ ಪ್ರೋತ್ಸಾಹಿಸುತ್ತದೆ ಎಂದು ಧರ್ಮಾಧ್ಯಕ್ಷರುಗಳು ಬರೆಯುತ್ತಾರೆ. ಅದೇ ಸಂದರ್ಭದಲ್ಲಿ, ಮಾನವ ಘನತೆ ಮತ್ತು ರಾಷ್ಟ್ರೀಯ ಭದ್ರತೆ ಸಂಘರ್ಷದಲ್ಲಿಲ್ಲ ಮತ್ತು ಒಳ್ಳೆಯ ಜನರು ಒಟ್ಟಾಗಿ ಕೆಲಸ ಮಾಡಿದರೆ, ಈ ಎರಡೂ ಕೆಲಸಗಳು ಸಾಧ್ಯವೆಂದು ಅವರು ಸಮರ್ಥಿಸಿಕೊಳ್ಳುತ್ತಾರೆ.

ತಮ್ಮ ವಿಶೇಷ ಸಂದೇಶದಲ್ಲಿ, ಧರ್ಮಾಧ್ಯಕ್ಷರುಗಳು ವಲಸಿಗರು ಅಥವಾ ಕಾನೂನು ಜಾರಿ ಸಿಬ್ಬಂದಿಯ ಕಡೆಗೆ ನಿರ್ದೇಶಿಸಲ್ಪಟ್ಟಿದ್ದರೂ ಸಹ, ವಿವೇಚನಾರಹಿತ ಸಾಮೂಹಿಕ ಗಡೀಪಾರು, ಅಮಾನವೀಯ ವಾಕ್ಚಾತುರ್ಯ ಮತ್ತು ಹಿಂಸಾಚಾರಕ್ಕೆ ತಮ್ಮ ವಿರೋಧವನ್ನು ಸ್ಪಷ್ಟವಾಗಿ ವ್ಯಕ್ತಪಡಿಸಿದ್ದಾರೆ. ನೆರೆಹೊರೆಯವರ ಬಗ್ಗೆ ಧರ್ಮಸಭೆಯ ಕಾಳಜಿ, "ದೇವರು ನಮ್ಮನ್ನು ಪ್ರೀತಿಸಿದಂತೆಯೇ ಪರರನ್ನು ಪ್ರೀತಿಸಬೇಕೆಂಬ ಆಜ್ಞೆಗೆ ಪ್ರತಿಕ್ರಿಯೆಯಾಗಿದೆ ಎಂದು ಧರ್ಮಾಧ್ಯಕ್ಷರುಗಳು ಹೇಳುತ್ತಾರೆ.

13 ನವೆಂಬರ್ 2025, 05:04