ಹುಡುಕಿ

 World Day Poor European Laudato Sì Alliance World Day Poor European Laudato Sì Alliance 

ವಿಶ್ವ ಬಡವರ ದಿನಕ್ಕಾಗಿ 'ಸಾಲವನ್ನು ಭರವಸೆಯನ್ನಾಗಿ ಪರಿವರ್ತಿಸಿ'

ಒಂಬತ್ತನೇ ವಿಶ್ವ ಬಡವರ ದಿನದಂದು, ಯುರೋಪಿನ ಲೌದಾತೊ ಸಿ' ಮೈತ್ರಿ ಕೂಟವು, ಅತ್ಯಂತ ದುರ್ಬಲರ ಮೇಲೆ ಪರಿಣಾಮ ಬೀರುವ ಜಾಗತಿಕ ಸಾಲದ ಬಿಕ್ಕಟ್ಟನ್ನು ಪರಿಹರಿಸಲು ಯುರೋಪಿನ ಒಕ್ಕೂಟಕ್ಕೆ ಕರೆ ನೀಡುತ್ತದೆ. "ಸಾಲವನ್ನು ಭರವಸೆಯಾಗಿ ಪರಿವರ್ತಿಸಿ" ಎಂಬ ಅಭಿಯಾನದ ಮೂಲಕ, ಮೈತ್ರಿಕೂಟವು ಬಡತನವನ್ನು ಕಡಿಮೆ ಮಾಡಲು ಮತ್ತು ನ್ಯಾಯವನ್ನು ಉತ್ತೇಜಿಸಲು ನ್ಯಾಯಯುತ, ಪಾರದರ್ಶಕ ಪರಿಹಾರಗಳನ್ನು ಒತ್ತಾಯಿಸುತ್ತದೆ.

ಲಿಂಡಾ ಬೋರ್ಡೋನಿ

ತಾಯಿ ಧರಮಸಭೆಯು ಒಂಬತ್ತನೇ ವಿಶ್ವ ಬಡವರ ದಿನವನ್ನು ಆಚರಿಸುತ್ತಿರುವ ಈ ಸಂದರ್ಭದಲ್ಲಿ, ಯುರೋಪಿನ ಲೌದಾತೊ ಸಿ' ಮೈತ್ರಿಕೂಟ (ELSiA) ಯುರೋಪಿನ ಒಕ್ಕೂಟವು ಜಾಗತಿಕ ಸಾಲದ ಬಿಕ್ಕಟ್ಟನ್ನು ಪರಿಹರಿಸಲು ಕ್ರಮ ಕೈಗೊಳ್ಳುವಂತೆ ಒತ್ತಾಯಿಸುತ್ತಿದೆ, ಇದು ಬಡತನ ನಿರ್ಮೂಲನೆ ಪ್ರಯತ್ನಗಳನ್ನು ದುರ್ಬಲಗೊಳಿಸುತ್ತಿದೆ ಮತ್ತು ಜಾಗತಿಕ ದಕ್ಷಿಣದಾದ್ಯಂತ ಸುಸ್ಥಿರ ಅಭಿವೃದ್ಧಿಗೆ ಬೆದರಿಕೆ ಹಾಕುತ್ತಿದೆ.

2018ರಲ್ಲಿ ರಚನೆಯಾದ ELSiA, ಯುರೋಪಿನ ಕಾರಿತಾಸ್ ಸೇರಿದಂತೆ ಏಳು ಕಥೋಲಿಕ ಸಂಸ್ಥೆಗಳ ಜಾಲವಾಗಿದ್ದು, ವಿಶ್ವಗುರು ಫ್ರಾನ್ಸಿಸ್ ರವರ ವಿಶ್ವಪರಿಪತ್ರವಾದ ಲೌದಾತೊ ಸಿʼನ್ನು ಯುರೋಪಿನಲ್ಲಿ ಜೀವಂತಗೊಳಿಸಲು ಒಟ್ಟಾಗಿ ಕೆಲಸ ಮಾಡುತ್ತಿದೆ. ಯುರೋಪಿನ ಕಾರಿತಾಸ್ ಹಿರಿಯ ಅಂತರರಾಷ್ಟ್ರೀಯ ಸಹಕಾರ ಅಧಿಕಾರಿ ಲೂಯಿಸಾ ಫೊಂಡೆಲ್ಲೊರವರು, ಧರ್ಮಸಭೆಯ ಸಾಮಾಜಿಕ ಬೋಧನೆಯ ಆಧಾರದ ಮೇಲೆ ನೀತಿ ವಕಾಲತ್ತು ಮತ್ತು ಸುಸ್ಥಿರ ಜೀವನಶೈಲಿಗಾಗಿ ಪ್ರಾಯೋಗಿಕ ಉಪಕ್ರಮಗಳ ಮೂಲಕ ಪರಿಸರ ನ್ಯಾಯವನ್ನು ಉತ್ತೇಜಿಸುವುದು ಎಂದು ಮೈತ್ರಿಕೂಟದ ಧ್ಯೇಯವಾಗಿದೆ ಎಂದು ಹೇಳುತ್ತಾರೆ.

ELSiA ಹೃದಯಭಾಗದ ಜಾಗತಿಕ ಸಾಲದ ಬಿಕ್ಕಟ್ಟಾಗಿದೆ, ಇದು ಫೊಂಡೆಲ್ಲೊರವರ ಪ್ರಕಾರ, ʼಇತಿಹಾಸದಲ್ಲಿ ಅತ್ಯಂತ ಕೆಟ್ಟದ್ದನ್ನುʼ ಅಂದರೆ ನೂರಕ್ಕೂ ಹೆಚ್ಚು ದೇಶಗಳು, ಒಂದಷ್ಟರ ಮಟ್ಟಿಗೆ ಕಡಿಮೆ ಮತ್ತು ಮಧ್ಯಮ-ಆದಾಯದ ದೇಶಗಳ ಮೇಲೆ ಅಧಿಕ ಪರಿಣಾಮ ಬೀರುವ ಹಂತಕ್ಕೆ ತಲುಪಿದೆ.

ಇದೀಗ, 2.4 ಶತಕೋಟಿ ಜನರು ಆರೋಗ್ಯ ರಕ್ಷಣೆ ಅಥವಾ ಶಿಕ್ಷಣಕ್ಕಿಂತ ಸಾರ್ವಜನಿಕ ಸಾಲದ ಮೇಲಿನ ಬಡ್ಡಿ ಪಾವತಿಗಳಿಗೆ ಹೆಚ್ಚು ಖರ್ಚು ಮಾಡುವ ದೇಶಗಳಲ್ಲಿ ವಾಸಿಸುತ್ತಿದ್ದಾರೆ ಎಂದು ಅವರು ಹೇಳುತ್ತಾರೆ. ಅಂದರೆ ಬಡತನ ನಿರ್ಮೂಲನೆ ಪ್ರಯತ್ನಗಳನ್ನು ಗಂಭೀರವಾಗಿ ದುರ್ಬಲಗೊಳಿಸಲಾಗುತ್ತಿದೆ.

ಬಡತನವು ಕೇವಲ ಹಣಕಾಸಿನ ಅಭಾವಕ್ಕೆ ಸೀಮಿತವಾಗಿಲ್ಲ, ಆದರೆ ಮಾನವ ಘನತೆಗೆ ಅಗತ್ಯವಾದ ಮೂಲಭೂತ ಅಂಶಗಳಾದ ಶಿಕ್ಷಣ, ಆರೋಗ್ಯ ರಕ್ಷಣೆ ಮತ್ತು ಮೂಲಸೌಕರ್ಯಗಳ ಲಭ್ಯತೆಯನ್ನೂ ಇದು ಒಳಗೊಂಡಿದೆ ಎಂದು ಫೊಂಡೆಲ್ಲೊರವರು ಒತ್ತಿ ಹೇಳುತ್ತಾರೆ.

ಪ್ರಾಚೀನ ವಿಧಿವಿಧಾನಗಳು ಕೆಲಸಕ್ಕೆ ಬರುವುದಿಲ್ಲ
ಪ್ರಸ್ತುತ ಅಂತರರಾಷ್ಟ್ರೀಯ ಸಾಲ ಆಡಳಿತವು ವಿಭಜಿತವಾಗಿದೆ ಮತ್ತು ಸಾಲಗಾರರ ಪರವಾಗಿ ಪಕ್ಷಪಾತ ಹೊಂದಿದೆ ಎಂದು ಫೋಂಡೆಲ್ಲೊರವರು ಗಮನಸೆಳೆದಿದ್ದಾರೆ. ಯಾವುದೇ ಬಂಧಕ ಕಾರ್ಯವಿಧಾನವಿಲ್ಲ, ಸಾಮಾನ್ಯ ತತ್ವಗಳಿಲ್ಲ, ಪಾರದರ್ಶಕತೆಯಿಲ್ಲ ಎಂದು ಅವರು ವಿವರಿಸುತ್ತಾರೆ.

ತಮ್ಮ ಸಾರ್ವಜನಿಕ ಸಾಲವನ್ನು ಮರುಪಾವತಿಸಲು ಸಾಧ್ಯವಾಗದ ಜಾಗತಿಕ ದಕ್ಷಿಣದ ದೇಶಗಳಿಗೆ ನ್ಯಾಯಯುತ ಪರಿಹಾರಗಳನ್ನು ಮಾತುಕತೆ ನಡೆಸಲು ಪ್ರಜಾಸತ್ತಾತ್ಮಕ ಸ್ಥಳವಿಲ್ಲ. ಅದಕ್ಕಾಗಿಯೇ ELSiA "ಪರಿವರ್ತನಾ ವಿಧಾನ" ಎಂದು ಕರೆಯುತ್ತಿದೆ.

ಸಾಲವನ್ನು ಭರವಸೆಯನ್ನಾಗಿ ಪರಿವರ್ತಿಸಿ
ಪ್ರಸ್ತುತ ದುಸ್ತರವೆಂದು ತೋರುವ ರಾಜಕೀಯ ಮತ್ತು ಆರ್ಥಿಕ ಸವಾಲುಗಳ ಹೊರತಾಗಿಯೂ, ಫೊಂಡೆಲ್ಲೊರವರು ಇನ್ನೂ ಆಶಾವಾದಿಯಾಗಿಯೇ ಇದ್ದಾರೆ ಎಂದು ಹೇಳುತ್ತಾರೆ. ಅದಕ್ಕಾಗಿಯೇ, ಯುರೋಪಿನ ಕಾರಿತಾಸ್‌ ಮತ್ತು ಅದರ ಪಾಲುದಾರರು ಸಾರ್ವಜನಿಕ ಜಾಗೃತಿ ಮೂಡಿಸಲು ಮತ್ತು ಬದಲಾವಣೆಗೆ ಆವೇಗವನ್ನು ಹೆಚ್ಚಿಸಲು "ಸಾಲವನ್ನು ಭರವಸೆಯಾಗಿ ಪರಿವರ್ತಿಸಿ" ಎಂಬ ಅಭಿಯಾನವನ್ನು ಪ್ರಾರಂಭಿಸಿದ್ದಾರೆ ಎಂದು ಅವರು ವಿವರಿಸುತ್ತಾರೆ.

ಭರವಸೆಯು ನಮಗೆ ಮಾರ್ಗದರ್ಶನ ನೀಡಲಾಗಿದೆ ಎಂದು ಅವರು ಹೇಳುತ್ತಾರೆ., ಏಕೆಂದರೆ, ಈ ವರ್ಷ ನಾವು ಪ್ರಗತಿಯನ್ನು ಕಂಡಿದ್ದೇವೆ, ಹಾಗೆಯೇ, ಹೆಚ್ಚಿನ ರಾಜಕಾರಣಿಗಳು ಸಾಲದ ಸಮಸ್ಯೆಯ ಬಗ್ಗೆ ಚರ್ಚಿಸುತ್ತಿದ್ದಾರೆ ಮತ್ತು ವಿಶ್ವಸಂಸ್ಥೆಯ ಸಾಲ ಪರಿಹಾರ ಕಾರ್ಯವಿಧಾನಕ್ಕೆ ಆಫ್ರಿಕಾದ ಒಕ್ಕೂಟದಂತಹ ಸಂಸ್ಥೆಗಳಿಂದ ಬೆಂಬಲ ಹೆಚ್ಚುತ್ತಿದೆ.

ವಿಶ್ವಾದ್ಯಂತ ವ್ಯಕ್ತಿಗಳು ಮತ್ತು ಸಂಸ್ಥೆಗಳಿಗೆ ಮುಕ್ತವಾಗಿರುವ ಈ ಅಭಿಯಾನವು, ನ್ಯಾಯಯುತ ಸಾಲ ವ್ಯವಸ್ಥೆಯನ್ನು ಬೆಂಬಲಿಸುವ ಅರ್ಜಿಗೆ ಸಹಿ ಹಾಕಲು ನಾಗರಿಕರನ್ನು ಆಹ್ವಾನಿಸುತ್ತದೆ. ನ್ಯಾಯ ಮತ್ತು ಒಗ್ಗಟ್ಟಿನಲ್ಲಿ ವಿಶ್ವಾಸವಿರುವ ಪ್ರತಿಯೊಬ್ಬರೂ ಈ ಅಭಿಯಾನದಲ್ಲಿ ಸೇರಬಹುದು ಎಂದು ಫೊಂಡೆಲ್ಲೊರವರು ಹೇಳುತ್ತಾರೆ. ಈ "ವೆಬ್‌ಸೈಟ್ ನ್ನು ಕಂಡುಹಿಡಿಯುವುದು ಸುಲಭ: turndebtinohope.caritas.org."
 

16 ನವೆಂಬರ್ 2025, 16:55