ಹುಡುಕಿ

Pope Leo XIV Holds Virtual Mass At Rate Field In Chicago Pope Leo XIV Holds Virtual Mass At Rate Field In Chicago  (2025 Getty Images)

ಶ್ವೇತ ಭವನ ಕ್ಷಮೆ ಕೇಳಬೇಕು ಎಂದು ಮಹಾಧರ್ಮಾಧ್ಯಕ್ಷರಾದ ಪೂಜ್ಯ ಕ್ಯೂಪಿಚ್ ಆಗ್ರಹ

ಶಿಕಾಗೋ ಮಹಾಧರ್ಮಾಧ್ಯಕ್ಷರಾದ ಪೂಜ್ಯ ಬ್ಲೇಸ್ ಕ್ಯೂಪಿಚ್, ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಟ್ರೂತ್ ಸೋಶಿಯಲ್ ಖಾತೆಯಲ್ಲಿ ಹಂಚಲಾದ ವಿಡಿಯೋ ಕುರಿತು ತಮ್ಮ “ಆಘಾತ ಮತ್ತು ಆಕ್ರೋಶ” ವ್ಯಕ್ತಪಡಿಸಿದ್ದಾರೆ. ಆ ವಿಡಿಯೋದಲ್ಲಿ ಮಾಜಿ ಅಧ್ಯಕ್ಷ ಬರಾಕ್ ಒಬಾಮಾ ಮತ್ತು ಅವರ ಪತ್ನಿ ಮಿಶೆಲ್ ಒಬಾಮಾ ಅವರನ್ನು ವಾನರಗಳಂತೆ ಚಿತ್ರಿಸಲಾಗಿತ್ತು. ಪೂಜ್ಯ ಕ್ಯೂಪಿಚ್, ಈ ರೀತಿಯ ಚಿತ್ರಣ ಅವಮಾನಕಾರಿ ಮತ್ತು ಮಾನವ ಘನತೆಯನ್ನು ಹೀನಗೊಳಿಸುವಂತಿದೆ ಎಂದು ಹೇಳಿ, ಶ್ವೇತ ಭವನ ಈ ಕುರಿತು ಸಾರ್ವಜನಿಕವಾಗಿ ಕ್ಷಮೆ ಕೇಳಬೇಕು ಎಂದು ಒತ್ತಾಯಿಸಿದ್ದಾರೆ.

ಲೇಖಕರು: ಜೋಸೆಫ್ ಟಲ್ಲೊಚ್

ಶಿಕಾಗೋ ಮಹಾಧರ್ಮಾಧ್ಯಕ್ಷರಾದ ಪ್ರಧಾನ ಗುರು ಪೂಜ್ಯ ಬ್ಲೇಸ್ ಕ್ಯೂಪಿಚ್, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಮ್ಮ ಟ್ರೂತ್ ಸೋಶಿಯಲ್ ಖಾತೆಯಲ್ಲಿ ಹಂಚಿಕೊಂಡ “ಅತಿ ಹೀನಾಯವಾದ ವರ್ಣಾಧಾರಿತ” ವಿಡಿಯೋ ಕುರಿತು ಸಾರ್ವಜನಿಕವಾಗಿ ಕ್ಷಮೆ ಕೇಳಬೇಕು ಎಂದು ಆಗ್ರಹಿಸಿದ್ದಾರೆ ಎಂದು ತಿಳಿಸಿದ್ದಾರೆ.

ಗುರುವಾರ ಸಂಜೆ ಅಧ್ಯಕ್ಷ ಟ್ರಂಪ್ ಅವರ ಖಾತೆಯಲ್ಲಿ ಪ್ರಕಟವಾದ ಆ ವಿಡಿಯೋದ ಕೊನೆಯ ದೃಶ್ಯಗಳಲ್ಲಿ ಮಾಜಿ ಅಧ್ಯಕ್ಷ ಬರಾಕ್ ಒಬಾಮಾ ಮತ್ತು ಮಾಜಿ ಪ್ರಥಮ ಮಹಿಳೆ ಮಿಶೆಲ್ ಒಬಾಮಾ ಅವರನ್ನು ವಾನರಗಳಂತೆ ಚಿತ್ರಿಸಲಾಗಿತ್ತು ಎಂದು ವರದಿಯಾಗಿದೆ.

ಶ್ವೇತ ಭವನ ಪತ್ರಿಕಾ ಕಾರ್ಯದರ್ಶಿ ಕರೊಲಿನ್ ಲೀವಿಟ್ ಆರಂಭದಲ್ಲಿ ಆ ವಿಡಿಯೋವನ್ನು ಸಮರ್ಥಿಸಿಕೊಂಡಿದ್ದು, ಅದರ ವಿರುದ್ಧದ ಪ್ರತಿಕ್ರಿಯೆಯನ್ನು “ಕೃತಕ ಆಕ್ರೋಶ” ಎಂದು ಕರೆದಿದ್ದರು ಎಂದು ತಿಳಿದುಬಂದಿದೆ. ಆದರೆ, ವಿಡಿಯೋ ಪ್ರಕಟವಾದ ಸುಮಾರು ಹನ್ನೆರಡು ಗಂಟೆಗಳ ನಂತರ ಅದನ್ನು ಅಳಿಸಲಾಗಿತ್ತು ಎಂದು ಹೇಳಲಾಗಿದೆ.

ಈ ಕುರಿತು ಪ್ರಕಟಣೆಯಲ್ಲಿ ಪ್ರಧಾನ ಗುರು ಪೂಜ್ಯ ಕ್ಯೂಪಿಚ್, “ಮಾನವರನ್ನು ಪ್ರಾಣಿಗಳಂತೆ ಚಿತ್ರಿಸುವುದು ಹೊಸತೇನಲ್ಲ” ಎಂದು ತಿಳಿಸಿದ್ದಾರೆ. ಅಮೆರಿಕಕ್ಕೆ ಬಂದ ಅನೇಕ ವಲಸಿಗ ಪೀಳಿಗೆಗಳು ಇದೇ ರೀತಿಯಲ್ಲಿ ಅವಮಾನಕ್ಕೆ ಒಳಗಾಗಿವೆ ಎಂದು ಅವರು ನೆನಪಿಸಿದ್ದಾರೆ.

ಈ ವಿಡಿಯೋ, “ಶ್ವೇತ ಭವನದಲ್ಲಿ ಇಂತಹ ನಿರ್ಲಜ್ಜ ವರ್ಣಭೇದ ನೀತಿ ಕೇವಲ ಭೂತಕಾಲದ ವಿಷಯವಲ್ಲ” ಎಂಬುದನ್ನು ತೋರಿಸುತ್ತದೆ ಎಂದು ಪ್ರಧಾನ ಗುರು ಪೂಜ್ಯ ಕ್ಯೂಪಿಚ್ ಹೇಳಿದ್ದಾರೆ.

ಕ್ಷಮೆಯ ಕುರಿತ ವಿವಾದ

ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆ ವಿಡಿಯೋವನ್ನು ಖಂಡಿಸಿದ್ದಾರೆ ಎಂದು ತಿಳಿದುಬಂದಿದೆ, ಆದರೆ ಅದು ತಮ್ಮ ಸಹಾಯಕನ ತಪ್ಪಿನಿಂದ ಪೋಸ್ಟ್ ಆಗಿದೆ ಎಂದು ಹೇಳಿ ಕ್ಷಮೆ ಕೇಳಲು ನಿರಾಕರಿಸಿದ್ದಾರೆ.

ಈ ಹಿನ್ನೆಲೆಯಲ್ಲಿ, ಪ್ರಧಾನ ಗುರು ಪೂಜ್ಯ ಕ್ಯೂಪಿಚ್ ತಮ್ಮ ಹೇಳಿಕೆಯಲ್ಲಿ ಅಧ್ಯಕ್ಷರು ಅಧಿಕೃತವಾಗಿ ಕ್ಷಮೆ ಕೇಳಬೇಕು. ಆ ವರ್ಣಭೇದ ಚಿತ್ರಗಳನ್ನು ಒಳಗೊಂಡ ಸಂದೇಶವನ್ನು ಅಧ್ಯಕ್ಷರು ಉದ್ದೇಶಪೂರ್ವಕವಾಗಿ ಅನುಮೋದಿಸಿದ್ದರೆ, ಅದನ್ನು ಅವರು ಒಪ್ಪಿಕೊಳ್ಳಬೇಕು,” ಎಂದು ಮಹಾಧರ್ಮಾಧ್ಯಕ್ಷರು ಬರೆದಿದ್ದಾರೆ. “ಅವರು ಇದನ್ನು ಮೊದಲು ತಿಳಿದಿರಲಿಲ್ಲ ಎಂದಾದರೆ, ಅದನ್ನು ಅವರ ಸಿಬ್ಬಂದಿ ‘ಕೃತಕ ಆಕ್ರೋಶ’ ಎಂದು ಕರೆಯಲು ಅವರು ಹೇಗೆ ಅವಕಾಶ ನೀಡಿದರು ಎಂಬುದನ್ನು ವಿವರಿಸಬೇಕು.”

“ನಮ್ಮ ಆಘಾತ ನಿಜ,” ಎಂದು ಪ್ರಧಾನ ಗುರು ಪೂಜ್ಯ ಕ್ಯೂಪಿಚ್ ಹೇಳಿದ್ದಾರೆ. “ನಮ್ಮ ಕೋಪವೂ ನಿಜ. ರಾಷ್ಟ್ರಕ್ಕೂ ಹಾಗೂ ಅವಮಾನಕ್ಕೊಳಗಾದ ವ್ಯಕ್ತಿಗಳಿಗೂ ಸ್ಪಷ್ಟ ಮತ್ತು ನಿರ್ವಿವಾದ ಕ್ಷಮೆ ಹೊರತುಪಡಿಸಿ ಬೇರೆ ಯಾವುದನ್ನೂ ನಾವು ಒಪ್ಪಲಾರೆವು  ಮತ್ತು ಅದು ತಕ್ಷಣವೇ ಬರಬೇಕು” ಎಂದು ಆಗ್ರಹಿಸಿದ್ದಾರೆ.

ನಮ್ಮ ಲೇಖನವನ್ನು ಓದಿದ್ದಕ್ಕಾಗಿ ಧನ್ಯವಾದಗಳು. ನಮ್ಮ ದೈನಂದಿನ ಸುದ್ದಿಪತ್ರಕ್ಕೆ ಚಂದಾದಾರರಾಗುವ ಮೂಲಕ ನೀವು ಸದಾ ಇತ್ತೀಚಿನ ಮಾಹಿತಿಯನ್ನು ಪಡೆದುಕೊಳ್ಳಬಹುದು.(ಇಲ್ಲಿ ಕ್ಲಿಕ್ ಮಾಡಿ).

10 ಫೆಬ್ರವರಿ 2026, 20:30