ಹುಡುಕಿ

ಅವರು ಮಾರ್ಚ್ 31, 2026 ರಂದು ರೋಮ್‌ನಲ್ಲಿ ನಡೆದ ಪ್ರಾರ್ಥನಾ ಜಾಗರಣೆಯಲ್ಲಿ ಭಾಗವಹಿಸಿದ್ದ ತೆಹ್ರಾನ್‌ನ ಮಹಾಧರ್ಮಧ್ಯಕ್ಷರಾದ ಪ್ರಧಾನ ಗುರು ಕಾರ್ಡಿನಲ್ ಮ್ಯಾಥ್ಯೂ ಅವರು ಮಾರ್ಚ್ 31, 2026 ರಂದು ರೋಮ್‌ನಲ್ಲಿ ನಡೆದ ಪ್ರಾರ್ಥನಾ ಜಾಗರಣೆಯಲ್ಲಿ ಭಾಗವಹಿಸಿದ್ದ ತೆಹ್ರಾನ್‌ನ ಮಹಾಧರ್ಮಧ್ಯಕ್ಷರಾದ ಪ್ರಧಾನ ಗುರು ಕಾರ್ಡಿನಲ್ ಮ್ಯಾಥ್ಯೂ 

ತೆಹ್ರಾನ್ ಪ್ರಧಾನ ಗುರು: “ಪುನರುತ್ಥಾನಿ ಕ್ರಿಸ್ತನು ಸಂಕಷ್ಟಗಳ ಮಧ್ಯೆಯೂ ಹೊಸ ಜೀವನ ನೀಡುತ್ತಾರೆ”

ತೆಹ್ರಾನ್ ಪ್ರಧಾನ ಧರ್ಮಾಧ್ಯಕ್ಷರಾದ ಡೊಮಿನಿಕ್ ಜೋಸೆಫ್ ಮ್ಯಾಥ್ಯೂ ಅವರು, ಇರಾನ್ ಯುದ್ಧ ತೀವ್ರಗೊಳ್ಳುತ್ತಿರುವ ಸಂದರ್ಭದಲ್ಲಿ ಸಾಮಾನ್ಯ ಜನರ ನೋವು ಹೆಚ್ಚುತ್ತಿರುವುದನ್ನು ಗಮನಿಸಿ, ಕ್ರಿಸ್ತನಲ್ಲಿ ದೊರಕುವ ಹೊಸ ಜೀವನವು ಇರಾನ್ ಕ್ರೈಸ್ತರನ್ನು ಇಂದಿನ ಸಂಕಷ್ಟಗಳನ್ನು ಸಹಿಸಲು ಪ್ರೇರೇಪಿಸಲಿ ಎಂಬ ತಮ್ಮ ಭರವಸೆಯನ್ನು ವ್ಯಕ್ತಪಡಿಸಿದರು.

ಲೇಖಕರು: ಡೆವಿನ್ ವಾಟ್ಕಿನ್ಸ್

ತೆಹ್ರಾನ್-ಇಸ್ಫಹಾನ್ ಲ್ಯಾಟಿನ್ ಧರ್ಮಪ್ರಾಂತ್ಯದ ಪ್ರಧಾನ ಧರ್ಮಾಧ್ಯಕ್ಷರಾದ ಅವರು, ಪುನರುತ್ಥಾನ ಮಹೋತ್ಸವದ ಆಚರಣೆಗಾಗಿ ರೋಮ್‌ನಲ್ಲಿರುವ ಸಂತ ಪೇತ್ರ ಪ್ರಧಾನ ದೇವಾಲಯದಲ್ಲಿ ಪೂಜ್ಯ ಜಗದ್ಗುರುಗಳಾದ 14ನೆ ಲಿಯೋ ಹಾಗೂ ಇತರ ಪ್ರಧಾನ ಗುರುಗಳೊಂದಿಗೆ ಸೇರಿದರು.

ಮಾರ್ಚ್ 9 ರಂದು, ಇರಾನ್ ಯುದ್ಧ ಪ್ರಾರಂಭವಾದ ನಂತರ “ದುಃಖ ಮತ್ತು ವಿಷಾದವಿಲ್ಲದೆ ಅಲ್ಲ” ಎಂಬ ಭಾವನೆಯೊಂದಿಗೆ, ಅವರು ಇರಾನ್‌ನ ಇಟಾಲಿಯನ್ ರಾಯಭಾರಿ ಕಛೇರಿಯ ಸಿಬ್ಬಂದಿಗಳೊಂದಿಗೆ ರೋಮ್‌ಗೆ ತೆರಳಿರುವುದಾಗಿ ಘೋಷಿಸಿದ್ದರು.

ರೋಮ್‌ನಲ್ಲಿ ಪುನರುತ್ಥಾನ ಮಹೋತ್ಸವ ಆಚರಿಸಿದ ನಂತರ,  ಇರಾನ್‌ನಲ್ಲಿರುವ ಎಲ್ಲಾ ಲ್ಯಾಟಿನ್ ವಿಧಿಯ ಕಥೋಲಿಕ ವಿಶ್ವಾಸಿಗಳನ್ನು ಒಳಗೊಂಡಂತೆ ತಮ್ಮ ಧರ್ಮಪ್ರಾಂತ್ಯದ ವಿಶ್ವಾಸಿಗಳಿಗೆ ತಮ್ಮ ಆಧ್ಯಾತ್ಮಿಕ ಸಮೀಪತೆಯನ್ನು ವ್ಯಕ್ತಪಡಿಸಲು ಅವರು ಈ ಸಂದೇಶವನ್ನು ಪ್ರಕಟಿಸಿದ್ದಾರೆ.

ವ್ಯಾಟಿಕನ್‌ನ ಫಿದೆಸ್ ಸುದ್ದಿಸಂಸ್ಥೆ ಪುನರುತ್ಥಾನ ಮಹೋತ್ಸವದ ನಂತರದ ದಿನ ಪ್ರಕಟಿಸಿದ ತಮ್ಮ ಸಂದೇಶದಲ್ಲಿ  ಪ್ರಧಾನ ಗುರು ಅವರು ತಮ್ಮ ಪುನರುತ್ಥಾನ ಅನುಭವವನ್ನು ವಿವರಿಸುತ್ತಾ, “ದೂರ ಎಂಬುದರ ಸಾಪೇಕ್ಷತೆಯನ್ನು ಅರಿಯುವ ಅನುಭವ” ಮತ್ತು ಸಮೀಪತೆ ಹಾಗೂ ದೂರತ್ವ ಒಂದೇ ಸಮಯದಲ್ಲಿ ಸಹವಾಸಿಸುವ ಆಂತರಿಕ ಅನುಭವದಿಂದ ಅದು ರೂಪುಗೊಂಡಿತ್ತು ಎಂದು ಹೇಳಿದರು.

“ನಾನು ನಿಮಗೆ—ನನಗೆ ಒಪ್ಪಿಸಲ್ಪಟ್ಟಿರುವ ಹಿಂಡಿನಿಂದ ದೂರದಲ್ಲಿದ್ದೇನೆ; ಯುದ್ಧದ ಘಟನೆಗಳಿಂದ ಬೇರ್ಪಟ್ಟಿದ್ದೇನೆ; ಮತ್ತೆ ನಿಮ್ಮನ್ನು ಭೇಟಿ ಮಾಡುವ ದಿನಕ್ಕಾಗಿ ಕಾಯುತ್ತಿದ್ದೇನೆ,” ಎಂದು ಅವರು ಹೇಳಿದರು. “ಆದರೂ, ಪವಿತ್ರ ರಾತ್ರಿ, ನಾನು ಜಾಗರಣೆ ಬಲಿಪೂಜೆಯನ್ನು ಆಚರಿಸಿದಾಗ, ನಿಮ್ಮನ್ನೆಲ್ಲ ನನ್ನ ಹೃದಯದಲ್ಲಿ ಹೊತ್ತಿದ್ದೆ—ನನ್ನ ಹಿಂಡಿಯಿಂದ ದೂರದಲ್ಲಿದ್ದರೂ, ಒಂದು ರಹಸ್ಯಮಯ ರೀತಿಯಲ್ಲಿ ನಿಮ್ಮ ಪ್ರತಿಯೊಬ್ಬರಿಗೂ ಸಮೀಪದಲ್ಲಿದ್ದೆ,” ಎಂದು ಹೇಳಿದರು.

ಅವರು ಸಂತ ಪೇತ್ರ ಪ್ರಧಾನ ದೇವಾಲಯದ ಗೋಪುರದಡಿ ನಿಂತಿದ್ದೇನೆ ಎಂದು ವಿವರಿಸಿ, “ಸರ್ವತ್ರ ಧರ್ಮಸಭೆಯ ಸಂಕೇತದಡಿ, ಪೇತ್ರನ ಉತ್ತರಾಧಿಕಾರಿಯೊಂದಿಗೆ ಮತ್ತು ಸಂಪೂರ್ಣ ಧರ್ಮಸಭೆಯೊಂದಿಗೆ ದೃಶ್ಯಮಾನ ಐಕ್ಯತೆಯಲ್ಲಿ ಇದ್ದೆ. ಈ ಅನುಭವದಲ್ಲಿ, ತನ್ನ ಹಿಂಡಿಯಿಂದ ದೈಹಿಕವಾಗಿ ದೂರವಾಗಿರುವುದು, ಕ್ರಿಸ್ತನಲ್ಲಿ ಎಲ್ಲಾ ಕ್ರೈಸ್ತರನ್ನು ಒಂದಾಗಿಸುವ ಸೇತುವೆಯಾಗಿ ಪರಿಣಮಿಸುತ್ತದೆ ಎಂಬ ಅರಿವು ತನ್ನೊಳಗೆ ಮೂಡಿತು" ಎಂದು ಅವರು ಹೇಳಿದರು.

“ಸಂತರ ಐಕ್ಯತೆಯಲ್ಲಿ ಮತ್ತು ಸಂಸ್ಕಾರಗಳ ಕೃಪೆಯಲ್ಲಿ—ವಿಶೇಷವಾಗಿ ಪವಿತ್ರ ಬಲಿಪೂಜೆಯಲ್ಲಿ—ನಾವು ನೇರವಲ್ಲದಿದ್ದರೂ ನಿಜವಾಗಿಯೂ ಒಂದಾಗಿದ್ದೇವೆ. ಕಣ್ಣಿಗೆ ದೂರವಾಗಿ ಕಾಣುವುದೇ, ವಿಶ್ವಾಸದಲ್ಲಿ ಐಕ್ಯತೆಯಾಗುತ್ತದೆ,” ಎಂದು ಅವರು ಹೇಳಿದರು.

ಜಾಗರಣೆ ಬಲಿಪೂಜೆ ರಾತ್ರಿ ಮತ್ತು ಬೆಳಕಿನ ನಡುವಿನ ಗಡಿಯಾಗಿದೆ ಎಂದು ಅವರು ವಿವರಿಸಿದರು. ಅದು ಚಂದ್ರನಂತೆ ಕ್ರಿಸ್ತನ ಬೆಳಕನ್ನು ಪ್ರತಿಬಿಂಬಿಸುವ ರಾತ್ರಿಯಾಗಿದೆ ಎಂದು ಹೇಳಿದರು—ಇದು ದೇವಮಾತೆಯನ್ನು ನೆನಪಿಸುತ್ತದೆ.

“ಚಂದ್ರನು ಸೂರ್ಯನ ಬೆಳಕನ್ನು ಪ್ರತಿಬಿಂಬಿಸುವಂತೆ, ಅವಳು ಎಲ್ಲಾ ಜೀವನದ ಮೂಲವಾದ ತನ್ನ ಮಗನಾದ ಯೇಸು ಕ್ರಿಸ್ತನತ್ತ ಸತ್ಯ ದೇವರೂ ಸತ್ಯ ಮಾನವನೂ ಆಗಿರುವ ಪ್ರಭು ನಮ್ಮನ್ನು ತೋರಿಸುತ್ತಾಳೆ—,” ಎಂದು ಹೇಳಿದರು.

ಅವರು ಖಾಲಿ ಸಮಾಧಿಯನ್ನು ಕಂಡ ಮಹಿಳೆಯರ ಪರಿವರ್ತನೆಯನ್ನು ನೆನಪಿಸಿಕೊಂಡರು—ಅವರು ಮರಣ ಮತ್ತು ಅಂಧಕಾರದ ಸ್ಮರಣೆಯಿಂದ ಓಡಿಬಂದರೂ, “ವಿಶ್ವಾಸದತ್ತ ದಾರಿ ತೆರೆಸುವ ಪವಿತ್ರ ಭಯದಿಂದ” ತುಂಬಿದ್ದರು.

ಕ್ರೈಸ್ತರು ಅಂತಿಮ ಪುನರುತ್ಥಾನಕ್ಕಾಗಿ ಕಾಯುತ್ತಿರುವಾಗ, “ಈ ‘ಭವಿಷ್ಯದ’ ಪುನರುತ್ಥಾನವು ಈಗಾಗಲೇ ಇರುವ ಕೃಪೆಯ ಮೂಲಕ ವಿಶ್ವಾಸಿಯ ಜೀವನದಲ್ಲಿ ಕಾರ್ಯನಿರ್ವಹಿಸುತ್ತಿರುವ ಪುನರುತ್ಥಾನದ ರಹಸ್ಯದೊಂದಿಗೆ ಒಂದಾಗಿರಬೇಕು” ಎಂದು ಅವರು ಹೇಳಿದರು.

“ಪುನರುತ್ಥಾನಿ ಕ್ರಿಸ್ತನಲ್ಲಿ, ಇನ್ನೂ ಸಂಕಷ್ಟಗಳ ಮೂಲಕ ಸಾಗುತ್ತಿದ್ದರೂ ಕೂಡ ಹೊಸ ಜೀವನ ಈಗಾಗಲೇ ಪ್ರಾರಂಭವಾಗಿದೆ,,” ಎಂದು ಹೇಳಿದರು.

ಇರಾನ್‌ನ ಲ್ಯಾಟಿನ್ ವಿಧಿಯ ವಿಶ್ವಾಸಿಗಳತ್ತ ತಮ್ಮ ಹೃದಯಪೂರ್ವಕ ಸಮೀಪತೆಯನ್ನು ಅವರು ವ್ಯಕ್ತಪಡಿಸಿ, ಮತ್ತು ಮತ್ತೆ ಒಂದಾಗುವ ದಿನಕ್ಕಾಗಿ ನಿರೀಕ್ಷೆ ವ್ಯಕ್ತಪಡಿಸಿದರು.

“ಜೀವಂತ ಮತ್ತು ಪುನರುತ್ಥಾನಿ ಕ್ರಿಸ್ತನಲ್ಲಿ, ದೂರ ಮತ್ತು ಸಮೀಪತೆ ರೂಪಾಂತರಗೊಳ್ಳುತ್ತವೆ,” ಎಂದು ತೆಹ್ರಾನ್ ಪ್ರಧಾನ ಧರ್ಮಾಧ್ಯಕ್ಷರು ತಮ್ಮ ಸಂದೇಶವನ್ನು ಮುಕ್ತಾಯಗೊಳಿಸಿದರು.

“ನಮ್ಮನ್ನು ಒಂದಾಗಿಸುವವರು, ನಮ್ಮನ್ನು ಕಾಪಾಡುವವರು, ಮತ್ತು ನಮ್ಮನ್ನು ನಡೆಸುವವರು ಒಬ್ಬನೇ—ನಾವು ಮತ್ತೆ ಒಂದೇ ಹಿಂಡಿಯಾಗಿ, ಏಕೈಕ ಕುರಿಗಾಹಿಯೊಂದಿಗೆ ಒಂದಾಗುವ ದಿನದವರೆಗೆ,” ಎಂದು ಹೇಳಿದರು. 

ನಮ್ಮ ಲೇಖನವನ್ನು ಓದಿದ್ದಕ್ಕಾಗಿ ಧನ್ಯವಾದಗಳು. ನಮ್ಮ ದೈನಂದಿನ ಸುದ್ದಿಪತ್ರಕ್ಕೆ ಚಂದಾದಾರರಾಗುವ ಮೂಲಕ ನೀವು ಸದಾ ಇತ್ತೀಚಿನ ಮಾಹಿತಿಯನ್ನು ಪಡೆದುಕೊಳ್ಳಬಹುದು.(ಇಲ್ಲಿ ಕ್ಲಿಕ್ ಮಾಡಿ).

07 ಏಪ್ರಿಲ್ 2026, 01:07