ಸೇವೆಯ ಸವಾಲುಗಳ ನಡುವೆಯೂ ಜಗದ್ಗುರುಗಳಿಂದ ಪ್ರೋತ್ಸಾಹ ಪಡೆದ ಕ್ಯಾಥೋಲಿಕ್ ಚಾರಿಟೀಸ್ USA
ಲೇಖಕರು: ತದ್ದೆಯುಸ್ ಜೋನ್ಸ್ ಮತ್ತು ಲಿಂಡಾ ಬೋರ್ಡೊನಿ
ವ್ಯಾಟಿಕನ್‌ನಲ್ಲಿ ಸೋಮವಾರ ನಡೆದ ಭೇಟಿಯ ವೇಳೆ, ಪೂಜ್ಯ ಜಗದ್ಗುರುಗಳಾದ ೧೪ನೆ ಲಿಯೋ ಅವರು ಕ್ಯಾಥೋಲಿಕ್ ಚಾರಿಟೀಸ್ USA ನೇತೃತ್ವಕ್ಕೆ ಪ್ರೋತ್ಸಾಹ ಮತ್ತು ಕೃತಜ್ಞತೆಯ ಮಾತುಗಳನ್ನು ವ್ಯಕ್ತಪಡಿಸಿ, ಬಡವರು ಮತ್ತು ದುರ್ಬಲರಿಗೆ ಸೇವೆ ಸಲ್ಲಿಸುವ ಅವರ ಸೇವೆಯನ್ನು “ಮಾನವಕುಲದ ಮೇಲಿನ ಕ್ರಿಸ್ತನ ಪ್ರೀತಿಯ ವ್ಯಕ್ತೀಕರಣ” ಎಂದು ದೃಢಪಡಿಸಿದರು.
ಜಗದ್ಗುರುಗಳನ್ನು ಭೇಟಿ ಮಾಡಿದ ನಂತರ ಪತ್ರಕರ್ತರೊಂದಿಗೆ ಮಾತನಾಡಿದ ಸಂಸ್ಥೆಯ ಅಧ್ಯಕ್ಷೆ ಕೆರಿ ಅಲಿಸ್ ರಾಬಿನ್ಸನ್ ಅವರು, “ಅಮೆರಿಕಾದ ಎಲ್ಲಾ 50 ರಾಜ್ಯಗಳಲ್ಲಿ, ಐದು ಯುಎಸ್ ಪ್ರದೇಶಗಳಲ್ಲಿ ಮತ್ತು ಕೊಲಂಬಿಯಾದಲ್ಲಿ ನಡೆಯುತ್ತಿರುವ ಕ್ಯಾಥೋಲಿಕ್ ಚಾರಿಟೀಸ್ ಸೇವೆಗಳು ಕ್ರಿಸ್ತನ ಪ್ರೀತಿಯ ಪ್ರತಿಬಿಂಬವಾಗಿದ್ದು, ಭರವಸೆಯ ದೀಪಸ್ತಂಭವಾಗಿದೆ” ಎಂದು ಜಗದ್ಗುರುಗಳು ಮೆಚ್ಚುಗೆ ವ್ಯಕ್ತಪಡಿಸಿದುದಾಗಿ ಹೇಳಿದರು.
ಜಗದ್ಗುರು ಲಿಯೋ ಅವರು, ಕ್ಯಾಥೋಲಿಕ್ ಚಾರಿಟೀಸ್ ಸಂಸ್ಥೆಯಿಂದ ಸಹಾಯ ಪಡೆಯುವವರು ಅನುಭವಿಸುವ ನೋವು “ದಾರಿದ್ರ್ಯದಿಂದ ಹೆಚ್ಚಾಗುತ್ತದೆ ಮತ್ತು ತೀವ್ರಗೊಳ್ಳುತ್ತದೆ” ಎಂಬುದನ್ನು ಗುರುತಿಸಿದ್ದಾಗಿ ಅವರು ತಿಳಿಸಿದರು. ಅವರು ಮುಂದುವರೆದು, ಸೇವಾ ಕಾರ್ಯದಲ್ಲಿ ತೊಡಗಿರುವವರು ಎದುರಿಸುವ ಸವಾಲುಗಳನ್ನೂ ಜಗದ್ಗುರುಗಳು ಒಪ್ಪಿಕೊಂಡು, ತಮ್ಮ ಸೇವೆಯಲ್ಲಿ ದೃಢವಾಗಿ ಮುಂದುವರೆಯಲು ಪ್ರತಿನಿಧಿಗಳನ್ನು ಉತ್ತೇಜಿಸಿದ್ದಾರೆ ಎಂದು ಹೇಳಿದರು.
“ನಾವು ಪಾಸ್ಕ ಕಾಲದಲ್ಲಿದ್ದೇವೆ ಮತ್ತು ಪ್ರತಿದಿನ ಮಾನವ ನೋವನ್ನು ಎದುರಿಸುವುದು ಕಷ್ಟವಾದರೂ, ‘ನಾನು ಸದಾ ನಿಮ್ಮೊಂದಿಗಿದ್ದೇನೆ’ ಎಂಬ ಕ್ರಿಸ್ತನ ವಾಗ್ದಾನವನ್ನು ನೆನಪಿಸಿಕೊಳ್ಳಬೇಕು ಎಂದು ಹೇಳಿದರು.
ಈ ಭೇಟಿಯನ್ನು “ಆಳವಾಗಿ ಮನಸ್ಸಿಗೆ ತಟ್ಟಿದ ಅನುಭವ” ಎಂದು ವಿವರಿಸಿದ ರಾಬಿನ್ಸನ್, ಜಗದ್ಗುರುಗಳ ಮಾತುಗಳು “ಎಲ್ಲಾ ಹಿನ್ನೆಲೆಗಳ ಮತ್ತು ಎಲ್ಲಾ ಧರ್ಮಗಳ ಬಡ ಹಾಗೂ ದುರ್ಬಲ ಜನರಿಗೆ ಸೇವೆ ಸಲ್ಲಿಸುವ ನಮ್ಮ ಬದ್ಧತೆಯನ್ನು ಮತ್ತಷ್ಟು ದೃಢಪಡಿಸಿವೆ” ಎಂದು ಹೇಳಿದರು.
‘ಕಷ್ಟದ ಕೆಲಸ, ಆದರೆ ಅರ್ಥಪೂರ್ಣ’
ಕ್ಯಾಥೋಲಿಕ್ ಚಾರಿಟೀಸ್ ಎದುರಿಸುತ್ತಿರುವ ಸವಾಲುಗಳ ಕುರಿತು ಜಗದ್ಗುರುಗಳ ಅಭಿಪ್ರಾಯಗಳನ್ನು, ರಾಬಿನ್ಸನ್ ಆಧ್ಯಾತ್ಮಿಕ ಮತ್ತು ಪಾಲನಾ ದೃಷ್ಟಿಕೋನದಲ್ಲಿ ವಿವರಿಸಿದರು. “ಈ ಕೆಲಸ ಕಷ್ಟಕರವಾಗಿದೆ, ಏಕೆಂದರೆ ನೀವು ಪ್ರತಿದಿನ ಮಾನವ ನೋವಿಗೆ ಸಾಕ್ಷಿಯಾಗುತ್ತೀರಿ ಎಂಬ ವಾಸ್ತವದ ಬೆಳಕಿನಲ್ಲಿ ನಾನು ಆ ಮಾತುಗಳನ್ನು ಕೇಳಿದೆ,ಬಡ ಕುಟುಂಬಗಳು ಮತ್ತು ಸಮುದಾಯಗಳ ಸಂಕಷ್ಟಗಳನ್ನು ಎದುರಿಸಲು ಸಾಕಷ್ಟು ಸಂಪನ್ಮೂಲಗಳು ಎಂದಿಗೂ ಇರುವುದಿಲ್ಲವೆನ್ನಿಸುತ್ತದೆ” ಎಂದು ಅವರು ಹೇಳಿದರು.
ಅವರು ಮುಂದುವರೆದು, ಜಗದ್ಗುರು ಲಿಯೋ ಅವರ ಮಾತುಗಳು ಸೇವಾ ಕಾರ್ಯವು ಕೇವಲ ಆಡಳಿತಾತ್ಮಕ ವಿಷಯವಲ್ಲ, ಬದಲಿಗೆ ಸಂಬಂಧಾಧಾರಿತ ಮತ್ತು ಆತ್ಮವನ್ನು ಒಳಗೊಂಡದ್ದಾಗಿದೆ ಎಂಬ ಅರ್ಥವನ್ನು ಪ್ರತಿಬಿಂಬಿಸುತ್ತವೆ ಎಂದು ಹೇಳಿದರು.
“ಅವರು ಹೇಳಿದ್ದು: ಮೂಲತಃ ಇದು ಸುಲಭವಲ್ಲ ಎಂಬುದನ್ನು ನನಗೆ ತಿಳಿದಿದೆ,ನೀವು ಸೇವೆ ಪಡೆಯುವವರ ಹೆಸರುಗಳನ್ನು ತಿಳಿದುಕೊಂಡಾಗ, ಅವರ ಕಥೆಗಳನ್ನು ಅರಿತಾಗ ಮತ್ತು ಅವರ ಮಾನವೀಯತೆಯನ್ನು ಕಂಡಾಗ, ಆ ಸಂಬಂಧವು ಎರಡು ದಿಕ್ಕಿನ ದಾರಿಯಾಗಿದೆ. ನಾವು ದೇವರು ಬಡವರೊಂದಿಗೆ ಎಷ್ಟು ಸಮೀಪದಲ್ಲಿದ್ದಾನೆ ಎಂಬುದನ್ನು ನೆನಪಿಸಿಕೊಳ್ಳುತ್ತೇವೆ.”
ಆರ್ಥಿಕ ಮತ್ತು ರಾಜಕೀಯ ಒತ್ತಡಗಳಿಗೆ ಪ್ರತಿಕ್ರಿಯೆ
ರಾಬಿನ್ಸನ್ ಅವರು ಅಮೆರಿಕಾದ ಕಥೋಲಿಕ ಸೇವಾ ಸಂಸ್ಥೆಗಳ ಮೇಲೆ ಪರಿಣಾಮ ಬೀರುವ ಆರ್ಥಿಕ ಮತ್ತು ರಾಜಕೀಯ ಒತ್ತಡಗಳ ಬಗ್ಗೆ ವಿಶೇಷವಾಗಿ ಶರಣಾರ್ಥಿಗಳ ಪುನರ್ವಸತಿ ನಿಧಿಗಳಲ್ಲಿ ಕೆಲವು ಫೆಡರಲ್ ಕಡಿತಗಳ ಬಗ್ಗೆ. ಕೂಡ ಮಾತನಾಡಿದರು, ಅವರು ಗಮನಿಸಿದಂತೆ, ಕ್ಯಾಥೋಲಿಕ್ ಚಾರಿಟೀಸ್ USA ಸ್ವತಃ “ಮುಖ್ಯವಾಗಿ, ಬಹುತೇಕ ಸಂಪೂರ್ಣವಾಗಿ ಖಾಸಗಿ ನಿಧಿಗಳಿಂದಲೇ ನೆರವೇರಿಸಲಾಗುತ್ತದೆ,” ಆದರೆ ಕೆಲವು ಸ್ಥಳೀಯ ಕ್ಯಾಥೋಲಿಕ್ ಚಾರಿಟೀಸ್ ಘಟಕಗಳು ಶರಣಾರ್ಥಿ ಸಂಬಂಧಿತ ಸರ್ಕಾರದ ಸಹಾಯ ಕಡಿತಗಳಿಂದ ಸವಾಲುಗಳನ್ನು ಎದುರಿಸಿವೆ.
“ನಾವು ಅನುಭವಿಸಿದ ಕಡಿತಗಳು ಮುಖ್ಯವಾಗಿ ಶರಣಾರ್ಥಿಗಳ ಪುನರ್ವಸತಿ ಕ್ಷೇತ್ರದಲ್ಲೇ ನಡೆದವು,” ಎಂದು ಅವರು ಹೇಳಿದರು. ದೇಶವ್ಯಾಪಿ 45,000 ಪೂರ್ಣಕಾಲಿಕ ಕ್ಯಾಥೋಲಿಕ್ ಚಾರಿಟೀಸ್ ಉದ್ಯೋಗಿಗಳಲ್ಲಿ ಸುಮಾರು 450 ಹುದ್ದೆಗಳು ಕಳೆದುಹೋಗಿವೆ ಎಂದು ಅವರು ಅಂದಾಜಿಸಿದರು.
ಈ ಹಿನ್ನಡೆಗಳ ನಡುವೆಯೂ, ಸಂಸ್ಥೆ ತನ್ನ ಧ್ಯೇಯಕ್ಕೆ ಬದ್ಧವಾಗಿಯೇ ಮುಂದುವರಿಯುತ್ತಿದೆ ಎಂದು ರಾಬಿನ್ಸನ್ ಹೇಳಿದರು. ನಿಧಿಗಳ ಕೊರತೆಯನ್ನು ತುಂಬಲು ಮತ್ತು ಹೆಚ್ಚುತ್ತಿರುವ ಅಗತ್ಯಗಳನ್ನು ಪೂರೈಸಲು ಕ್ಯಾಥೋಲಿಕ್ ಚಾರಿಟೀಸ್ ದಾನಿಗಳ ಉದಾರತೆಯ ಮೇಲೆ ಅವಲಂಬಿತವಾಗಿಯೇ ಇದೆ.
“ಅಮೆರಿಕನ್ನರಿಗೆ ಹಸಿದವರ ಹೆಸರುಗಳು ಮತ್ತು ಮುಖಗಳು ಗೊತ್ತಾದಾಗ, ಅವರು ಸಹಾಯ ಮಾಡಲು ಬಯಸುತ್ತಾರೆ,” ಎಂದು ರಾಬಿನ್ಸನ್ ಹೇಳಿದರು. ಇತ್ತೀಚಿನ ತುರ್ತು ಆಹಾರ ಸಹಾಯ ಕರೆಗೆ ಪ್ರತಿಕ್ರಿಯೆಯಾಗಿ, ಫೆಡರಲ್ ಪೋಷಣಾ ಸಹಾಯ ಸ್ಥಗಿತಗೊಂಡ ನಂತರ ದೇಶವ್ಯಾಪಿ 25 ಮಿಲಿಯನ್ ಪೌಂಡ್ ಆಹಾರವನ್ನು ವಿತರಿಸಲು ಸಾಧ್ಯವಾಯಿತು ಎಂದು ಅವರು ಸೂಚಿಸಿದರು.
‘ಸೇವೆ ಮಾಡುವವರನ್ನು ಎದುರಿಸುವ ಕರುಣೆಯ ಮಾರ್ಗ’
ರಾಬಿನ್ಸನ್ ಅವರು ಜಗದ್ಗುರುಗಳಾದ ೧೪ನೆ ಲಿಯೋ ಕಥೋಲಿಕ ಸೇವಾ ಕಾರ್ಯದ ವಿಶೇಷ ಸಾಕ್ಷಿ ಧರ್ಮಸಭೆಯ ಆಧ್ಯಾತ್ಮಿಕ ಧ್ಯೇಯದಲ್ಲಿ ನೆಲಸಿರುವುದಾಗಿ ಅರ್ಥಮಾಡಿಕೊಂಡಿದ್ದಾರೆ ಎಂದು ಒತ್ತಿಹೇಳಿದರು. “ನಾವು ಕೇವಲ ಕಥೋಲಿಕ ಧರ್ಮಸಭೆಯ ಆಶ್ರಯದಲ್ಲಿರುವ ಒಂದು ಸಾಮಾಜಿಕ ಸೇವಾ ಸಂಸ್ಥೆಯಲ್ಲ ಎಂಬುದನ್ನು ಅವರು ಸ್ಪಷ್ಟವಾಗಿ ಅರ್ಥಮಾಡಿಕೊಂಡಿದ್ದಾರೆ,” ಎಂದು ಅವರು ಹೇಳಿದರು, “ಆದರೆ ನಾವು ಸೇವೆ ಮಾಡುವವರನ್ನು ಕರುಣೆಯ ಮಾರ್ಗದಲ್ಲಿ ಎದುರಿಸಲು ಬದ್ಧರಾಗಿದ್ದೇವೆ.”
ಕಥೋಲಿಕ ದಾನಧರ್ಮದ ಈ ಅಂಶದ ಬಗ್ಗೆ ಜಗದ್ಗುರುಗಳು ತೋರಿದ ಮೆಚ್ಚುಗೆ ಪ್ರತಿನಿಧಿಗಳ ಮನಸ್ಸಿಗೆ ತಟ್ಟಿತು ಎಂದು ಅವರು ಹೇಳಿದರು. “ನಾವು ಮಾನವೀಯ ಸಹಾಯವನ್ನು ಹೇಗೆ ನೀಡುತ್ತೇವೆ ಎಂಬುದಷ್ಟೇ ಅಲ್ಲ, ಅದನ್ನು ನಾವು ಕರುಣೆಯೊಂದಿಗೆ ಹೇಗೆ ಮಾಡುತ್ತೇವೆ ಎಂಬುದೇ ಮುಖ್ಯ—ನಾವು ಸೇವೆ ಪಡೆಯುವವರನ್ನು ಗಮನದಿಂದ ನೋಡುವುದು, ಅವರಿಗೆ ಗೌರವವನ್ನು ಮರಳಿ ನೀಡುವುದು, ಅವರನ್ನು ಹೆಸರಿನಿಂದ ಕರೆದು, ಅವರಿಗಾಗಿ ಪ್ರಾರ್ಥಿಸುವುದು.”
ಧರ್ಮಸಭೆಯ ದಾನಧರ್ಮ ಸಾಕ್ಷಿಯಲ್ಲಿ ಹೆಚ್ಚುತ್ತಿರುವ ಏಕತೆ
ರಾಬಿನ್ಸನ್ ಅವರು ಅಮೆರಿಕಾದ ಕಥೋಲಿಕ ನಾಯಕರಲ್ಲಿ ದಾನಧರ್ಮ ಮತ್ತು ಸಾಮಾಜಿಕ ಸೇವೆಗೆ ಬೆಂಬಲವಾಗಿ ಹೆಚ್ಚುತ್ತಿರುವ ಏಕತೆಯ ಬಗ್ಗೆ ಮಾತನಾಡಿದರು. “ಅಮೆರಿಕಾದ ಕಥೋಲಿಕ ಧರ್ಮಸಭೆಯಲ್ಲಿ ಇಷ್ಟು ಏಕತೆಯನ್ನು ನಾನು ಎಂದಿಗೂ ನೋಡಿಲ್ಲ,” ಎಂದು ಅವರು ಧರ್ಮಾಧ್ಯಕ್ಷರು, ಕಥೋಲಿಕ ಸೇವಾ ಸಂಸ್ಥೆಗಳು, ಶಿಕ್ಷಣಗಾರರು ಮತ್ತು ಆರೋಗ್ಯ ಸೇವಾ ನಾಯಕರ ನಡುವಿನ ಹೆಚ್ಚುತ್ತಿರುವ ಸಹಕಾರವನ್ನು ಸೂಚಿಸಿದರು.
ಅವರು ಅಮೆರಿಕಾದ ಧರ್ಮಾಧ್ಯಕ್ಷರಿಗೂ ಮತ್ತು ಜಗದ್ಗುರುಗಳಿಗೂ ಲಿಯೋ ಅವರಿಗೆ ಇದರ ಶ್ರೇಯಸ್ಸನ್ನು ನೀಡಿ, ಕರುಣೆಯ ಶುಭಸಂದೇಶದ ಕರೆಯೊಂದಿಗೆ ಬದ್ಧವಾಗಿರಲು ಕಥೋಲಿಕರನ್ನು ಪ್ರೋತ್ಸಾಹಿಸಿದ್ದಾರೆ ಎಂದು ಹೇಳಿದರು. “ಧರ್ಮಾಧ್ಯಕ್ಷರು ಈಗ ಹೆಚ್ಚಾಗಿ ಏಕಸ್ವರದಲ್ಲಿ ಮಾತನಾಡುತ್ತಿದ್ದು, ಎಲ್ಲಾ ಕಥೋಲಿಕರು ಮತ್ತು ಸತ್ಸಂಕಲ್ಪದ ಜನರಿಗೆ ಕರುಣೆಯ ಶುಭಸಂದೇಶದ ಕರೆಯನ್ನು ನೆನಪಿಸುತ್ತಿದ್ದಾರೆ,” ಎಂದು ರಾಬಿನ್ಸನ್ ಹೇಳಿದರು.
ಭೇಟಿಯ ಕುರಿತು ಪ್ರತಿಬಿಂಬಿಸುತ್ತಾ, ಜಗದ್ಗುರು ಲಿಯೋ ಅವರ ಮಾತುಗಳು ಕ್ಯಾಥೋಲಿಕ್ ಚಾರಿಟೀಸ್ ನಾಯಕರಿಗೆ ಶುಭಸಂದೇಶಕ್ಕೆ ನಿಷ್ಠೆಯಿಂದ ತಮ್ಮ ಸೇವೆಯನ್ನು ಮುಂದುವರಿಸಲು ಮತ್ತಷ್ಟು ದೃಢನಿಶ್ಚಯವನ್ನು ನೀಡಿವೆ ಎಂದು ಅವರು ಹೇಳಿದರು.
“ಈ ಸೇವೆಯನ್ನು ದೃಢವಾಗಿ ಮುಂದುವರಿಸಿ, ಅದನ್ನು ನಮ್ಮ ನಂಬಿಕೆಯ ಕರೆಯೊಂದಿಗೆ ಇನ್ನಷ್ಟು ಆಳವಾಗಿ ಜೋಡಿಸಲು ನಾವು ಹೊಸ ಧೈರ್ಯವನ್ನು ಪಡೆದಿದ್ದೇವೆ.”
ನಮ್ಮ ಲೇಖನವನ್ನು ಓದಿದ್ದಕ್ಕಾಗಿ ಧನ್ಯವಾದಗಳು. ನಮ್ಮ ದೈನಂದಿನ ಸುದ್ದಿಪತ್ರಕ್ಕೆ ಚಂದಾದಾರರಾಗುವ ಮೂಲಕ ನೀವು ಸದಾ ಇತ್ತೀಚಿನ ಮಾಹಿತಿಯನ್ನು ಪಡೆದುಕೊಳ್ಳಬಹುದು.(ಇಲ್ಲಿ ಕ್ಲಿಕ್ ಮಾಡಿ).