ಪೋಪ್ ಲಿಯೋ XIV: ಸಹಾನುಭೂತಿ ಎಂಬುದು ಮಾನವೀಯತೆಯ ವಿಷಯವೇ ಹೊರತು ಧಾರ್ಮಿಕವಲ್ಲ
ವರದಿ: ವ್ಯಾಟಿಕನ್ ನ್ಯೂಸ್
ಪೋಪ್ ಲಿಯೋ ಅವರು ಇಂದಿನ ಸಾರ್ವಜನಿಕ ಭೇಟಿ ಸಂದರ್ಭದಲ್ಲಿ ಸದಯ ಸಮಾರಿತನ ಸಾಮತಿಯ ಕುರಿತು ಚಿಂತನೆಯನ್ನು ವ್ಯಕ್ತಪಡಿಸುತ್ತಾ, ನಮ್ಮ ವ್ಯಾವಹಾರಿಕ ಬದುಕು ಸಹಾನುಭೂತಿ ಹೊಂದುವುದರಿಂದ ನಮ್ಮನ್ನು ಹೊರತುಪಡಿಸಬಾರದು ಎಂದು ಹೇಳಿದರು.
ಇಂದಿನ ಶುಭಸಂದೇಶದಲ್ಲಿನ ನುರಿತ ತಜ್ಞನ ಕುರಿತು ಪೋಪ್ ಹದಿನಾಲ್ಕನೇ ಲಿಯೋ ಅವರು ಮಾತನಾಡುತ್ತಾ, ಅವರನು ಹೇಗೆ ಯೇಸುವಿನ ಕುರಿತು ಮಾತನಾಡುತ್ತಾನೆ ಹಾಗೂ ಅವರಿಗೆ ಪ್ರಶ್ನೆಗಳನ್ನು ಹಾಕುತ್ತಾನೆ ಎಂಬುದರ ಮೇಲೆ ಬೆಳಕನ್ನು ಚೆಲ್ಲಿದ್ದಾರೆ. ನಿತ್ಯ ಜೀವವನ್ನು ಪಡೆದುಕೊಳ್ಳುವುದು ಹೇಗೆ ಎಂಬ ಪ್ರಶ್ನೆಯನ್ನು ಆತ ಕೇಳುತ್ತಾನೆ. ಆದರೆ, ಅವರು ನನ್ನ "ನೆರೆಹೊರೆಯವನು" ಯಾರು ಎಂದು ಕೇಳುತ್ತಾನೆ. ಈ ಕುರಿತು ನಾವು ಆಳವಾಗಿ ಚಿಂತಿಸಬೇಕು ಎಂದು ಪೋಪ್ ಅವರು ಹೇಳಿದರು.
ಈ ಪ್ರಶ್ನೆಗೆ ಉತ್ತರವನ್ನು ನೀಡಲು ಯೇಸುಕ್ರಿಸ್ತರು ಸಾಮತಿಯನ್ನು ಹೇಳಿದರು. ಹೀಗೆ ಅವರು ಹೇಳಿದ ಸಾಮತಿ ಜೆರುಸಲೇಮಿನಿಂದ ಜೆರಿಕೋ ನಗರಕ್ಕೆ ಹೊರಡುತ್ತಿದ್ದ ಯುವಕನ ಕುರಿತಾಗಿತ್ತು. ಇದನ್ನು ಉಲ್ಲೇಖಿಸಿದ ಪೋಪ್ ಹದಿನಾಲ್ಕನೇ ಲಿಯೋ ಅವರು ನಮ್ಮ ಬದುಕನ್ನು ಬಹಳ ಕಷ್ಟಕರ ಹಾಗೂ ಅಪಾಯಕಾರಿ ಪ್ರಯಾಣದ ರಸ್ತೆ ಎಂದು ಹೇಳಿದ್ದಾರೆ.
ಈ ಯುವಕ ತನ್ನ ಪ್ರಯಾಣದಲ್ಲಿ ಕಳ್ಳರಿಂದ ದಾಳಿಗೊಳಗಾಗುತ್ತಾನೆ, ಹೊಡೆತ ತಿನ್ನುತ್ತಾನೆ ಹಾಗೂ ಸಂಕಷ್ಟಕ್ಕೀಡಾಗುತ್ತಾನೆ. ಅದೇ ರೀತಿ, ನಾವೂ ಸಹ ನಮ್ಮ ಬದುಕಿನಲ್ಲಿ ವಿವಿಧ ರೀತಿಯ ಸಂಕಷ್ಟಗಳು ಹಾಗೂ ಸಂಕೋಲೆಗಳ ಕಾರಣ ಕಷ್ಟಕ್ಕೆ ಈಡಾಗುತ್ತೇವೆ ಎಂದು ಪೋಪ್ ಹದಿನಾಲ್ಕನೇ ಲಿಯೋ ಅವರು ಹೇಳಿದರು.
ಇಂತಹ ಸಂದರ್ಭಗಳಲ್ಲಿ ನಾವು ಯಾರು ಎಂಬುದನ್ನು ನಾವು ಅರಿತುಕೊಳ್ಳುತ್ತೇವೆ. ಸಂಕಷ್ಟದಲ್ಲಿರುವ ಯಾರನ್ನಾದರೂ ನೋಡಿದರೆ ನಮಗೆ ಎರಡು ಆಯ್ಕೆ ಇರುತ್ತದೆ: ಅವರನ್ನು ಸಂರಕ್ಷಿಸುವುದು ಹಾಗೂ ನಮ್ಮಷ್ಟಕ್ಕೆ ನಾವಿರುವುದು ಎಂದು ಪೋಪ್ ಲಿಯೋ ಅವರು ಹೇಳುತ್ತಾರೆ.
ಮುಂದುವರೆದು ಮಾತನಾಡಿದ ಅವರು ಸಹಾನುಭೂತಿ ಎಂದರೆ ಅಪಾಯಗಳನ್ನು ಮೈಮೇಲೆಳೆದುಕೊಳ್ಳುವುದು ಎಂದು ಹೇಳುತ್ತಾ, ಈ ಸಾಮತಿಯಲ್ಲಿ ಸದಯ ಸಮಾರಿತನು ತನಗೆ ನಷ್ಟ ಅಥವಾ ಸಂಕಷ್ಟ ಉಂಟಾಗಲಿದೆ ಎಂದು ತಿಳಿದೂ ಸಹ, ತನ್ನ ನೆರೆಹೊರೆಯವನಿಗೆ ಸಹಾಯ ಮಾಡುತ್ತಾನೆ. ಅಂತೆಯೇ ನಾವು ಸಹಾನುಭೂತಿಗಾಗಿ ಅಪಾಯಕ್ಕೀಡಾಗುದಕ್ಕೆ ಎಣೆ ನೀಡಬಾರದು ಎಂದು ಪೋಪ್ ಹದಿನಾಲ್ಕನೇ ಲಿಯೋ ಅವರು ಹೇಳಿದ್ದಾರೆ.
