ಹುಡುಕಿ

ಸಾರ್ವಜನಿಕ ಭೇಟಿಯಲ್ಲಿ ಪೋಪ್: ಪುನರುತ್ಥಾನವೇ ದುಃಖಕ್ಕೆ ಪರಿಹಾರ

ತಮ್ಮ ಸಾರ್ವಜನಿಕ ಭೇಟಿಯಲ್ಲಿ ಪೋಪ್ ಲಿಯೋ XIV ಅವರು ಯೇಸುವಿನ ಪುನರುತ್ಥಾನದ ಕುರಿತು ಪ್ರಬೋಧನೆಯನ್ನು ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಮಾತನಾಡಿರುವ ಅವರು ಪುನರುತ್ಥಾನವೆಂಬುದು ನಮ್ಮ ದೃಷ್ಟಿಕೋನವನ್ನು ಬದಲಾಯಿಸಿ, ನಮ್ಮೊಳಗಿನ ದುಃಖವನ್ನು ನೀಗಿಸುವಂತಹ ಭರವಸೆಯನ್ನು ನಮ್ಮೊಳಗೆ ತುಂಬುತ್ತದೆ ಎಂದು ಹೇಳಿದ್ದಾರೆ.

ವರದಿ: ವ್ಯಾಟಿಕನ್ ನ್ಯೂಸ್

ಸಂತ ಪೇತ್ರರ ಚೌಕದಲ್ಲಿ ಪೋಪ್ ಲಿಯೋ XIV ಅವರು ಏಸುಕ್ರಿಸ್ತರ ಪುನರುತ್ಥಾನದ ಕುರಿತು ಭಕ್ತಾದಿಗಳನ್ನು ಉದ್ದೇಶಿಸಿ ಮಾತನಾಡಿದರು. 

ಇಂದು ಜಗತ್ತಿನ ಅತಿ ದೊಡ್ಡ ಸಮಸ್ಯೆಗಳಲ್ಲೊಂದಾದ ದುಃಖವನ್ನು ಯೇಸುವಿನ ಪುನರುತ್ಥಾನವು ನೀಗಿಸುತ್ತದೆ. ಈ ಜಗತ್ತು ಪ್ರಸ್ತುತ ಅನೇಕ ವಿಧವಾದ ದುಃಖಗಳಿಂದ ಕೂಡಿದೆ ಈ ಎಲ್ಲಾ ರೀತಿಯ ದುಃಖಗಳನ್ನು ಪರಿಹರಿಸುವ ಶಕ್ತಿ ಯೇಸುವಿನ ಪುನರುತ್ಥಾನಕ್ಕೆ ಇದೆ ಎಂದು ಅವರು ಹೇಳಿದರು.

ಯೇಸುಕ್ರಿಸ್ತರು ಶಿಲುಬೆಯ ಮೇಲೆ ಪ್ರಾಣತ್ಯಾಗ ಮಾಡಿದ ನಂತರ ಅದನ್ನು ನೆನಪಿಸಿಕೊಂಡು ಎಮ್ಮಾವು ಹಾದಿಯಲ್ಲಿ ಶಿಷ್ಯರು ದುಃಖಿಸುತ್ತಾ ನಡೆಯುತ್ತಿದ್ದಾಗ ತಕ್ಷಣವೇ ಕ್ರಿಸ್ತರು ಅವರಿಗೆ ಕಾಣಿಸಿಕೊಂಡು ಅವರಿಗೆ ಸಾಂತ್ವನವನ್ನು ಹೇಳುತ್ತಾರೆ. ಯೇಸುಕ್ರಿಸ್ತರು ತಮ್ಮ ಶಿಷ್ಯರನ್ನು ಉದ್ದೇಶಿಸಿ ಮಾತನಾಡುತ್ತಾ ಅವರೊಳಗೆ ಭರವಸೆಯನ್ನು ತುಂಬುತ್ತಾರೆ. ಭರವಸೆ ಎಂಬುದು ಸ್ಪರ್ಶಿಸುವಂತಹ ಒಂದು ವಸ್ತುವಾಗಿದ್ದು ನಾವು ಅದನ್ನು ಪರಸ್ಪರ ಹಂಚಿಕೊಳ್ಳಬೇಕಿದೆ ಎಂದು ಹೇಳಿದರು.

ನಮ್ಮ ಜೀವನದ ಅತ್ಯಂತ ಸವಾಲಿನ ಪರಿಸ್ಥಿತಿಯಲ್ಲಿಯೂ ಸಹ ನಾವು ಯೇಸುವನ್ನು ಹಿಂಬಾಲಿಸಿದರೆ ಅವರ ಪುನರುತ್ಥಾನದ ಸಂತೋಷ ನಮಗೆ ಸಿಗುತ್ತದೆ ಎಂದು ಅವರು ಅಂತಿಮವಾಗಿ ನುಡಿದರು.

22 ಅಕ್ಟೋಬರ್ 2025, 16:34

ಇತ್ತೀಚಿನ ಭೇಟಿಗಳು

ಎಲ್ಲಾ ಓದಿ >