ಬಲಿಪೂಜೆಯಲ್ಲಿ ಪೋಪ್: ಕಂಟೆಂಟ್ ಸೃಷ್ಠಿ ಮಾಡುವವರು ಹೃದಯಗಳ ನಡುವೆ ಬೆಸುಗೆಯನ್ನು ಉತ್ತೇಜಿಸಬೇಕು
ವರದಿ: ವ್ಯಾಟಿಕನ್ ನ್ಯೂಸ್
ಡಿಜಿಟಲ್ ಸುವಾರ್ತಾ ಪ್ರಸಾರಕರು ಹಾಗೂ ಕಥೋಲಿಕ ಸಾಮಾಜಿಕ ಜಾಲತಾಣ ಕಾರ್ಯಕರ್ತರಿಗೆ ಅರ್ಪಿಸಿದ ಬಲಿಪೂಜೆಯಲ್ಲಿ ಪೋಪ್ ಲಿಯೋ ಅವರು ಸಾಮಾಜಿಕ ಜಾಲತಾಣಗಳಲ್ಲಿ ಮಾನವ ಸಂಸ್ಕೃತಿಯನ್ನು ಉತ್ತೇಜಿಸಬೇಕೆಂದು ಹೇಳಿದ್ದಾರೆ. ಈ ಬಲಿಪೂಜೆಯನ್ನು ಕಾರ್ಡಿನಲ್ ಲೂಯಿಸ್ ಅಂತೋನಿಯೋ ತಾಗ್ಲೆ ಅವರು ಅರ್ಪಿಸಿದರು.
ಪ್ರಭೋಧನೆಯಲ್ಲಿ ಮಾತನಾಡಿದ ಕಾರ್ಡಿನಲ್ ತಾಗ್ಲೆ ಅವರು 'ಪ್ರಭಾವ'ದ ಕುರಿತು ಮಾತನಾಡಿದರು. ಸಾಮಾಜಿಕ ಜಾಲತಾಣಗಳಲ್ಲಿ ಕಥೋಲಿಕರು ಬೀರುತ್ತಿರುವ ಪ್ರಭಾವದ ಕುರಿತು ಮಾತನಾಡಿದರು. ಪ್ರಸ್ತುತ ಕಾಲಘಟ್ಟದಲ್ಲಿ ಎಲ್ಲರೂ ಪ್ರಭಾವಶಾಲಿಗಳೇ ಎಂದು ಹೇಳಿದ ಕಾರ್ಡಿನಲ್ ಅವರು ಪ್ರಸ್ತುತ ನಾವು ಕುಟುಂಬಗಳು, ಶಾಲೆಗಳು ಹಾಗೂ ಇತರ ಸಾಮಾಜಿಕ ಸ್ಥರಗಳಿಂದ ಪ್ರಭಾವಿತರಾಗುತ್ತೇವೆ" ಎಂದು ಹೇಳಿದರು.
ಬಲಿಪೂಜೆಯ ಕೊನೆಯಲ್ಲಿ ಪೋಪ್ ಲಿಯೋ ಅವರು ಯುವಜನತೆಯನ್ನು ಉದ್ದೇಶಿಸಿ ಸ್ಪ್ಯಾನಿಷ್, ಇಂಗ್ಲೀಷ್ ಮತ್ತು ಇಟಾಲಿಯನ್ ಭಾಷೆಗಳಲ್ಲಿ ಮಾತನಾಡಿದರು. ಇದೇ ಸಂದರ್ಭದಲ್ಲಿ ಈ ಜಗತ್ತಿಗೆ ಶಾಂತಿಯ ಅವಶ್ಯಕತೆಯ ಕುರಿತು ಮಾತನಾಡಿದರು. ಯುವ ಜನತೆಯು ಶಾಂತಿಯನ್ನು ಈ ಜಗತ್ತಿನಲ್ಲಿ ಮೂಡಿಸಲು ಅವಿರತ ಪ್ರಯತ್ನವನ್ನು ಸಾಮಾಜಿಕ ಜಾಲತಾಣಗಳ ಮೂಲಕ ಮಾಡಬೇಕು ಎಂದು ಪೋಪ್ ಲಿಯೋ ಅವರು ಹೇಳಿದರು.
ನಮ್ಮ ದೈನಂದಿನ ಜೀವನದಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನ ಅತ್ಯಗತ್ಯ ಪಾತ್ರ ವಹಿಸುತ್ತಿದ್ದರೂ, ಮಾನವ ನಿರ್ಮಿತ ಯಾವುದನ್ನೂ "ಇತರರ ಘನತೆಯನ್ನು ಕುಗ್ಗಿಸಲು ಬಳಸಬಾರದು." ಎಂದು ಪೋಪ್ ಲಿಯೋ ಅವರು ಹೇಳಿದರು.
