ಹುಡುಕಿ

ಪೋಪ್: ಕಾಂಗೋದಲ್ಲಿನ ಚರ್ಚ್ ಮೇಲೆ ದಾಳಿ; ಮಡಿದ ರಕ್ತಸಾಕ್ಷಿಗಳ ರಕ್ತವು ಶಾಂತಿಯನ್ನು ಮೂಡಿಸಲಿ

ಕಾಂಗೋ ಪ್ರಜಾಸತ್ತಾತ್ಮಕ ಗಣರಾಜ್ಯದ ಇಟುರಿ ಪ್ರಾಂತ್ಯದ ಕೊಮಂಡಾದಲ್ಲಿರುವ ಪುನೀತ ಅನುರೈಟ್ ಧರ್ಮಕೇಂದ್ರದ ಮೇಲೆ ನಡೆದ ಮಾರಕ ದಾಳಿಯ ನಂತರ ಪೋಪ್ ಲಿಯೋ XIV ಅವರು ಮಡಿದ ಕುಟುಂಬಗಳಿಗೆ ದುಃಖ ಮತ್ತು ಆಧ್ಯಾತ್ಮಿಕ ಸಾಮೀಪ್ಯವನ್ನು ವ್ಯಕ್ತಪಡಿಸುತ್ತಾರೆ.

ವರದಿ: ವ್ಯಾಟಿಕನ್ ನ್ಯೂಸ್

ಕಾಂಗೋ ಪ್ರಜಾಸತ್ತಾತ್ಮಕ ಗಣರಾಜ್ಯದ ಇಟುರಿ ಪ್ರಾಂತ್ಯದ ಕೊಮಂಡಾದಲ್ಲಿರುವ ಪುನೀತ ಅನುರೈಟ್ ಧರ್ಮಕೇಂದ್ರದ ಮೇಲೆ ನಡೆದ ಮಾರಕ ದಾಳಿಯ ನಂತರ ಪೋಪ್ ಲಿಯೋ XIV ಅವರು ಮಡಿದ ಕುಟುಂಬಗಳಿಗೆ ದುಃಖ ಮತ್ತು ಆಧ್ಯಾತ್ಮಿಕ ಸಾಮೀಪ್ಯವನ್ನು ವ್ಯಕ್ತಪಡಿಸುತ್ತಾರೆ.

"ಈ ಹುತಾತ್ಮರ ರಕ್ತವು ಕಾಂಗೋಲೀಸ್ ಜನರಿಗೆ ಶಾಂತಿ, ಸಮನ್ವಯ, ಸಹೋದರತ್ವ ಮತ್ತು ಪ್ರೀತಿಯ ಬೀಜವಾಗಲಿ" ಎಂದು ಕಾಂಗೋ ಪ್ರಜಾಸತ್ತಾತ್ಮಕ ಗಣರಾಜ್ಯದ ಕೊಮಂಡಾ ಪಟ್ಟಣದಲ್ಲಿ ಕ್ಯಾಥೋಲಿಕ್ ಚರ್ಚ್ ಮೇಲೆ ನಡೆದ ಕ್ರೂರ ದಾಳಿಯ ನಂತರ ಪೋಪ್ ತಮ್ಮ ಸಂದೇಶದಲ್ಲಿ ಬರೆಯುತ್ತಾರೆ.

ಪೂರ್ವ ಕಾಂಗೋದ ಇಟುರಿ ಪ್ರಾಂತ್ಯದಲ್ಲಿ ಭಾನುವಾರ ನಡೆದ ಜಾಗರಣೆ ವೇಳೆ ಬಂಡುಕೋರರು ಕ್ಯಾಥೋಲಿಕ್ ಚರ್ಚ್‌ಗೆ ನುಗ್ಗಿ ಭಕ್ತರ ಮೇಲೆ ಗುಂಡು ಹಾರಿಸಿದ ಪರಿಣಾಮ ಸುಮಾರು 40 ಜನರು ಸಾವನ್ನಪ್ಪಿದ್ದಾರೆ.

ಮಹಿಳೆಯರು ಮತ್ತು ಮಕ್ಕಳು ಸೇರಿದಂತೆ ಕನಿಷ್ಠ 38 ಜನರು ಚರ್ಚ್‌ನಲ್ಲಿ ಸಾವನ್ನಪ್ಪಿದ್ದಾರೆ ಎಂದು ದೃಢಪಟ್ಟರೆ, ಹತ್ತಿರದ ಹಳ್ಳಿಯಲ್ಲಿ ಇನ್ನೂ ಐದು ಜನರು ಸಾವನ್ನಪ್ಪಿದ್ದಾರೆ.

ಕಾಂಗೋಲೀಸ್ ಅಧಿಕಾರಿಗಳ ಪ್ರಕಾರ, ಸಂಘರ್ಷ ಪೀಡಿತ ಪ್ರದೇಶದ ಕೊಮಂಡಾ ಪಟ್ಟಣದಲ್ಲಿ ದಾಳಿಗಳನ್ನು ಅಲೈಡ್ ಡೆಮಾಕ್ರಟಿಕ್ ಫೋರ್ಸ್ ನಡೆಸಿದೆ. ಇಸ್ಲಾಮಿಕ್ ಸ್ಟೇಟ್ ಬೆಂಬಲಿತ ಬಂಡಾಯ ಗುಂಪು ಇದಾಗಿದ್ದು, ಪೂರ್ವ ಕಾಂಗೋ ಮತ್ತು ಉಗಾಂಡಾದ ಗಡಿಯಾಚೆಗಿನ ಗ್ರಾಮಸ್ಥರನ್ನು ಹೆಚ್ಚಾಗಿ ಗುರಿಯಾಗಿಸಿಕೊಂಡಿದೆ.

28 ಜುಲೈ 2025, 16:38