ಹುಡುಕಿ

ಉಕ್ರೇನಿನ ಕಾರ್ಕೀವ್'ನಲ್ಲಿರುವ ಕುಟುಂಬಗಳಿಗೆ ಆಹಾರವನ್ನು ಕಳುಹಿಸಿದ ಪೋಪ್ ಲಿಯೋ

ಪೋಪ್ ಹದಿನಾಲ್ಕನೇ ಲಿಯೋ ಅವರು ವ್ಯಾಟಿಕನ್ನಿನ ದತ್ತಿಸಂಸ್ಥೆಯ ಮೂಲಕ ಉಕ್ರೇನ್ ದೇಶದಲ್ಲಿನ ಕಾರ್ಖೀವ್ ನಗರದಲ್ಲಿರುವ ಕುಟುಂಬಗಳಿಗೆ ಆಹಾರವನ್ನು ಕಳುಹಿಸಿದ್ದಾರೆ. ಈ ನಗರದ ಮೇಲೆ ಪದೇ ಪದೇ ಬಾಂಬ್ ದಾಳಿ ಆಗುತ್ತಿರುವ ಪರಿಣಾಮ, ಇಲ್ಲಿ ಆಹಾರವು ಅತಿ ವಿರಳವಾಗಿದ್ದು, ಅವರಿಗಾಗಿ ಪೋಪ್ ಲಿಯೋ ಅವರು ಮಿಡಿದಿದ್ದು, ಆಹಾರವನ್ನು ಕಳುಹಿಸಿದ್ದಾರೆ.

ವರದಿ: ವ್ಯಾಟಿಕನ್ ನ್ಯೂಸ್

ಪ್ರಸ್ತುತ ಪೋಪ್ ಲಿಯೋ ಅವರು ಕ್ಯಾಸ್ಟೆಲ್ ಗಂಡೋಲ್ಫೋದಲ್ಲಿ ರಜಾದಿನಗಳನ್ನು ಕಳೆಯುತ್ತಿದ್ದರೂ, ಅವರ ರಜಾದಿನಗಳು ಅವರು ಸೇವೆಯನ್ನು ಮುಂದೆವರೆಸುವುದಕ್ಕೆ ಅಡ್ಡಿಪಡಿಸುವುದಿಲ್ಲ. ಪೋಪ್ ಲಿಯೋ ಅವರು ಅವಶ್ಯಕತೆಯಲ್ಲಿರುವವರಿಗಾಗಿ ಸದಾ ಮಿಡಿಯುತ್ತಾರೆ ಎಂಬುದಕ್ಕೆ ಇದು ನಿದರ್ಶನವಾಗಿದೆ.

ಕಳೆದ ಭಾನುವಾರ ಅವರು ಸಂತ ತೋಮಾಸ್ ಆಫ್ ವಿಲ್ಲನೋವಾ ಧರ್ಮಕೇಂದ್ರದಲ್ಲಿ ಬಲಿಪೂಜೆಯನ್ನು ಅರ್ಪಿಸಿದ ಸಂದರ್ಭದಲ್ಲಿ "ಯುದ್ಧದಿಂದ ಜೀವಗಳು ನಾಶವಾಗುತ್ತಿವೆ" ಎಂದು ಹೇಳಿದ್ದರು. ಇದೀಗ ಅವರು ಯುದ್ಧ ನಿರತ ಉಕ್ರೇನ್ ದೇಶದಲ್ಲಿ ಹಸಿವಿನಿಂದ ನರಳುತ್ತಿರುವ ಜನತೆಗೆ ಹಾಗೂ ಕುಟುಂಬಗಳಿಗೆ ಆಹಾರವನ್ನು ಕಳುಹಿಸುವ ಮೂಲಕ ನೆರವನ್ನು ನೀಡಿದ್ದಾರೆ.

ಪೇಪಲ್ ಆಲ್ಮೊನೆರ್ (ಪೋಪರ ದತ್ತಿ-ದಾನಗಳ ನಿರ್ವಾಹಕ) ಆಗಿರುವ ಕಾರ್ಡಿನಲ್ ಕೊನ್ರಾಡ್ ಕ್ರಜೇವ್ಸ್ಕಿ ಅವರು ಈ ಕುರಿತು ಮಾತನಾಡಿ "ಆಹಾರವನ್ನು ಕಳುಹಿಸುವ ಕೆಲಸ ಆದಷ್ಟು ಬೇಗ ಆಗಬೇಕು. ತಡಮಾಡಬೇಡಿ" ಎಂದು ಹೇಳಿದ್ದಾರೆ. ಅವರು ಹೀಗೆ ಹೇಳಿದ ಬೆನ್ನಲ್ಲೇ ಆಹಾರವನ್ನು ಹೊತ್ತ ಟ್ರಕ್'ಗಳು ಸಂತ ಸೋಫಿಯಾ ಪ್ರಧಾನಾಲಯದಿಂದ ಉಕ್ರೇನ್ ದೇಶದ ಕಾರ್ಕೀವ್'ನತ್ತ ಹೊರಟಿದೆ ಎಂದು ಹೇಳಿದರು.

ಮುಂದುವರೆದು ಮಾತನಾಡಿರುವ ಕಾರ್ಡಿನಲ್ "ದಾನಶೀಲತೆ ಎಂದಿಗೂ ರಜೆ ತೆಗೆದುಕೊಳ್ಳುವುದಿಲ್ಲ" ಎಂದು ಹೇಳಿದ್ದಾರೆ.

ಪೋಪ್ ಲಿಯೋ ಅವರು ಕಳುಹಿಸಿದ ಆಹಾರ ಸಾಮಾಗ್ರಿಗಳನ್ನು ನೇರವಾಗಿ ಕಾರ್ಖೀವ್ ಯುದ್ಧದಿಂದ ನರಳುತ್ತಿರುವ ಜನತೆಯ ಕುಟುಂಬಗಳಿಗೆ ತಲುಪಿಸಲಾಗಿದೆ.

16 ಜುಲೈ 2025, 17:57