ಅಲ್ಬಾನೋದಲ್ಲಿ ಪೋಪ್: ಬಡವರಲ್ಲಿ ಕ್ರಿಸ್ತರನ್ನು ಸ್ವಾಗತಿಸಿ
ವರದಿ: ವ್ಯಾಟಿಕನ್ ನ್ಯೂಸ್
ಪೋಪ್ ಹದಿನಾಲ್ಕನೇ ಲಿಯೋ ಅವರು ಸಾಂತ ಮರಿಯ ದೆಲ್ಲಾ ರೊಟೊಂಡಾ ದೇವಾಲಯದಲ್ಲಿ ಇಂದು ಬಲಿಪೂಜೆಯನ್ನು ಅರ್ಪಿಸಿದ್ದಾರೆ. ಈ ವೇಳೆ ಅವರು ಅಲ್ಬಾನೋ ಧರ್ಮಕ್ಷೇತ್ರಕ್ಕೆ ಹಾಗೂ ಅಲ್ಲಿನ ಜನತೆಗೆ ಅವರು ಧನ್ಯವಾದಗಳನ್ನು ತಿಳಿಸಿದ್ದಾರೆ.
"ಮತ್ತೆ ನಿಮ್ಮೊಂದಿಗೆ ಬಲಿಪೂಜೆಯನ್ನು ನಾನು ಅರ್ಪಿಸುತ್ತಿರುವುದು ಮಹಾ ವರದಾನವಾಗಿದೆ. ವರದಾನಗಳಲ್ಲೇ ಮಹಾ ವರದಾನ ಕ್ರಿಸ್ತರು ಸಾವನ್ನು ಜಯಿಸಿರುವುದು. ಅದೇ ಈ ದಿನದ ವಿಶೇಷ" ಎಂದು ಪೋಪ್ ಲಿಯೋ ಅವರು ಭಕ್ತಾಧಿಗಳನ್ನು ಉದ್ದೇಶಿಸಿ ಹೇಳಿದರು.
ಮುಂದುವರೆದು ಮಾತನಾಡಿದ ಪೋಪ್ ಲಿಯೋ ಅವರು ಈ ದೇವಾಲಯದ ಕುರಿತು ಮಾತನಾಡಿದರು. ಈ ದೇವಾಲಯವು ದೇವರ ಗರ್ಭಗುಡಿಯಾಗಿದೆ. ಬಾಹ್ಯವಾಗಿ ಚರ್ಚಿನ ಗೋಡೆಗಳು ಗಡಸು ಎನಿಸಿದರು, ಆಂತರಿಕವಾಗಿ ಅವು ದೇವರ ಪ್ರೀತಿಯ ಗುಡಿಯಾಗಿದೆ" ಎಂದು ಅವರು ದೇವಾಲಯದ ಕುರಿತು ಹೇಳಿದರು.
ಶಾಂತಿಯ ಕುರಿತು ಮಾತನಾಡಿದ ಪೋಪ್ ಲಿಯೋ XIV ಅವರು ಇಂದಿನ ಶುಭಸಂದೇಶದ ಕುರಿತು ಚಿಂತನೆಯನ್ನು ನಡೆಸಿದರು. ಶಾಂತಿ ಎಂದರೆ ಸಮಾಧಾನ ಅಥವಾ ಆರಾಮದಾಯಕ ಬದುಕಲ್ಲ ಎಂದು ಹೇಳಿದ ಅವರು ಆದುದರಿಂದಲೇ ಇಂದಿನ ಶುಭಸಂದೇಶದಲ್ಲಿ ಕ್ರಿಸ್ತರು ನಾನು ಬೆಂಕಿಯನ್ನು ಹರಡಲು ಬಂದಿದ್ದೇನೆ ಎಂದು ಹೇಳುತ್ತಾರೆ ಎಂದು ಹೇಳಿದರು.
ಕ್ರಿಸ್ತರನ್ನು ಕೇವಲ ದೇವಾಲಯಗಳಲ್ಲಿ ಅಥವಾ ಮನೆಗಳಲ್ಲಿ ಮಾತ್ರ ಸೀಮಿತಗೊಳಿಸುವುದನ್ನು ನಾವು ನಿಲ್ಲಿಸಬೇಕು. ಏಕೆಂದರೆ ನಾವು ನಿಜವಾಗಿಯೂ ಕ್ರಿಸ್ತರನ್ನು ಬಡವರಲ್ಲಿ ಕಾಣಬೇಕು ಎಂದು ಅವರು ಹೇಳಿದರು.
