ಪೋಪರನ್ನು ಸ್ವಾಗತಿಸಲು ಉತ್ಸುಕರಾದ ಅಲ್ಬಾನೋ ಪುಣ್ಯಕ್ಷೇತ್ರದ ರೆಕ್ಟರ್
ಅಲ್ಬಾನೋದಲ್ಲಿರುವ ಸಾಂತ ಮರಿಯ ದೆಲ್ಲಾ ರೊಟೊಂಡಾ ಪುಣ್ಯಕ್ಷೇತ್ರಕ್ಕೆ ಪೋಪ್ ಲಿಯೋ ಅವರು ಭೇಟಿ ನೀಡಿದ ಹಿನ್ನೆಲೆ ಅವರನ್ನು ಸ್ವಾಗತಿಸಲು ಅಲ್ಲಿನ ರೆಕ್ಟರ್ ಫಾದರ್ ಅದ್ರಿಯಾನೋ ಜಿಬೆಲ್ಲಿನಿ ಅವರು ಅತ್ಯಂತ ಸಂತೋಷವಾಗಿದ್ದಾರೆ. ಪೋಪ್ ಅವರನ್ನು ಬರಮಾಡಿಕೊಳ್ಳಲು ಇಡೀ ಸಮುದಾಯವು ಉತ್ಸುಕವಾಗಿದೆ ಎಂದು ಅವರು ಹೇಳಿದ್ದಾರೆ.
ವರದಿ: ವ್ಯಾಟಿಕನ್ ನ್ಯೂಸ್

ಈ ಪುಣ್ಯಕ್ಷೇತ್ರಕ್ಕೆ ಪೋಪ್ ಹದಿನಾಲ್ಕನೇ ಲಿಯೋ ಅವರು ಆಗಮಿಸುತ್ತಿರುವುದು ವಿಶೇಷವಾಗಿದ್ದು, ನಮಗೆಲ್ಲರಿಗೂ ಅತ್ಯಂತ ಸಂತೋಷವಾಗಿದೆ ಎಂದು ಅವರು ವ್ಯಾಟಿಕನ್ ನ್ಯೂಸ್ ಗೆ ತಿಳಿಸಿದ್ದಾರೆ. ಈ ಕುರಿತು ಮಾತನಾಡಿರುವ ಅವರು ಪೋಪ್ ಈ ಭೇಟಿ ಅದೆಷ್ಟು ಮಹತ್ವವನ್ನು ಪಡೆದುಕೊಳ್ಳಲಿದೆ ಎಂದು ಹೇಳಿದ್ದಾರೆ.
16 ಆಗಸ್ಟ್ 2025, 15:31