ಗೋಜೋ ಪ್ರಧಾನಾಲಯ ಆಚರಣೆಗೆ ಪೋಪರ ಪ್ರತಿನಿಧಿಯಾಗಿ ಕಾರ್ಡಿನಲ್ ಮಾರಿಯೋ ಗ್ರೆಕ್ ನೇಮಕ
ಮಾಲ್ಟಾದಲ್ಲಿನ ಗೋಜೋದಲ್ಲಿರುವ ಸ್ವರ್ಗಸ್ವೀಕೃತ ಮಾತೆಯ ಪ್ರಧಾನಾಲಯವು ಐವತ್ತು ವರ್ಷಗಳನ್ನು ಆಚರಿಸುತ್ತಿರುವ ಹಿನ್ನೆಲೆಯಲ್ಲಿ ಆ ಸಂಭ್ರಮದಲ್ಲಿ ಪಾಲ್ಗೊಳ್ಳಲು ತಮ್ಮ ಪ್ರತಿನಿಧಿಯನ್ನಾಗಿ ಪೋಪ್ ಹದಿನಾಲ್ಕನೇ ಲಿಯೋ ಅವರು ಕಾರ್ಡಿನಲ್ ಮಾರಿಯೋ ಗ್ರೆಕ್ ಅವರನ್ನು ನೇಮಿಸಿದ್ದಾರೆ.
ವರದಿ: ವ್ಯಾಟಿಕನ್ ನ್ಯೂಸ್

ಈ ಆಚರಣೆಯು ಆಗಸ್ಟ್ 15 ರಂದು ಸ್ವರ್ಗಸ್ವೀಕೃತ ಮಾತೆಯ ಹಬ್ಬದಂದು ಜರುಗಲಿದೆ.
ಕಾರ್ಡಿನಲ್ ಮಾರಿಯೋ ಗ್ರೆಕ್ ಅವರ ಜೊತೆಗೆ ಗೋಝೋ ಧರ್ಮಕ್ಷೇತ್ರದ ಶ್ರೇಷ್ಠಗುರುಗಳಾಗಿರುವ ಮೊನ್ಸಿಜ್ಞೊರ್ ತಾರ್ಸಿಸಿಯೋ ಕಮಿಲೇರಿ ಹಾಗೂ ಧರ್ಮಕ್ಷೇತ್ರದ ಚಾನ್ಸೆಲರ್ ಅವರು ಉಪಸ್ಥಿತರುತ್ತಾರೆ.
ಈ ಹಿನ್ನೆಲೆಯಲ್ಲಿ ಪೋಪ್ ಹದಿನಾಲ್ಕನೇ ಲಿಯೋ ಅವರು ಕಾರ್ಡಿನಲ್ ಗ್ರೆಕ್ ಅವರಿಗೆ ಪತ್ರವನ್ನು ಬರೆದಿದ್ದು, ಈ ಪತ್ರದಲ್ಲಿ ಮಾತೆ ಮರಿಯಮ್ಮನವರ ಕುರಿತು ಹಾಗೂ ಅವರ ಮಧ್ಯಸ್ಥಿಕೆಯ ಕುರಿತು ಹೇಳಿದ್ದಾರೆ.
09 ಆಗಸ್ಟ್ 2025, 16:16