ಹುಡುಕಿ

ನೈಟ್ಸ್ ಆಫ್ ಕೊಲಂಬಸ್'ಗೆ ಪೋಪ್: ಭರವಸೆಯ ಚಿಹ್ನೆಗಳಾಗಿರಿ

ಪೋಪ್ ಹದಿನಾಲ್ಕನೇ ಲಿಯೋ ಅವರು ನೈಟ್ಸ್ ಆಫ್ ಕೊಲಂಬಸ್ ಅವರಿಗೆ ಪತ್ರವನ್ನು ಬರೆದಿದ್ದು, ಅದರಲ್ಲಿ ಅವರ ಸೇವೆಗೆ ಧನ್ಯವಾದಗಳನ್ನು ತಿಳಿಸಿದ್ದಾರೆ. ಬಡವರಿಗೆ ಸೇವೆಯನ್ನು ನೀಡುವ ಅವರ ಮನೋಭಾವವು ಅವರ ಸ್ಥಾಪಕ ಮೈಕೆಲ್ ಮ್ಯಾಕ್'ಗೀವ್ನಿ ಅವರಿಂದ ಪ್ರೇರಿತವಾಗಿದೆ ಎಂದು ಹೇಳಿದ್ದಾರೆ.

ವರದಿ: ವ್ಯಾಟಿಕನ್ ನ್ಯೂಸ್

ಪೋಪ್ ಹದಿನಾಲ್ಕನೇ ಲಿಯೋ ಅವರು ನೈಟ್ಸ್ ಆಫ್ ಕೊಲಂಬಸ್ ಅವರಿಗೆ ಪತ್ರವನ್ನು ಬರೆದಿದ್ದು, ಅದರಲ್ಲಿ ಅವರ ಸೇವೆಗೆ ಧನ್ಯವಾದಗಳನ್ನು ತಿಳಿಸಿದ್ದಾರೆ. ಬಡವರಿಗೆ ಸೇವೆಯನ್ನು ನೀಡುವ ಅವರ ಮನೋಭಾವವು ಅವರ ಸ್ಥಾಪಕ ಮೈಕೆಲ್ ಮ್ಯಾಕ್'ಗೀವ್ನಿ ಅವರಿಂದ ಪ್ರೇರಿತವಾಗಿದೆ ಎಂದು ಹೇಳಿದ್ದಾರೆ.

ತಮ್ಮ 143ನೇ ಮಹಾಸಮ್ಮೇಳನಕ್ಕಾಗಿ ಒಗ್ಗೂಡುತ್ತಿರುವ ನೈಟ್ಸ್ ಆಫ್ ಕೊಲಂಬಸ್ ಸಂಸ್ಥೆಯ ಸದಸ್ಯರಿಗೆ ಪೋಪ್ ಲಿಯೋ ಅವರು ಸಂದೇಶವನ್ನು ಕಳುಹಿಸುತ್ತಿದ್ದಾರೆ.

ಈ ಸಮ್ಮೇಳನದಲ್ಲಿ ವೈಯಕ್ತಿಕವಾಗಿ ಹಾಗೂ ವರ್ಚುವಲ್ ಮಾದರಿಯ ಮೂಲಕ ಹಾಜರಿದ್ದ ಎಲ್ಲರನ್ನೂ ಪೋಪ್ ಲಿಯೋ ಅವರು ಸ್ವಾಗತಿಸಿದರು. ಜುಬಿಲಿ ವರ್ಷದ ಭರವಸೆಯ ಸಮಯದಲ್ಲಿ ನಡೆಯುವ ಸಭೆಯ ಮಹತ್ವದ ಕುರಿತು ಅವರು ಮಾತನಾಡಿದರು. ಪೋಪ್ ಫ್ರಾನ್ಸಿಸ್ ಅವರನ್ನು ಉಲ್ಲೇಖಿಸುತ್ತಾ, ಅವರು ಭರವಸೆಯನ್ನು "ಭವಿಷ್ಯವು ಏನಾಗಬಹುದು ಎಂದು ನಮಗೆ ತಿಳಿದಿಲ್ಲದಿದ್ದರೂ, ಬರಲಿರುವ ಒಳ್ಳೆಯದರ ಬಯಕೆ ಮತ್ತು ನಿರೀಕ್ಷೆ" ಎಂದು ವ್ಯಾಖ್ಯಾನಿಸಿದರು ಎಂದು ಪೋಪ್ ಲಿಯೋ ಹೇಳಿದರು.

ಯೇಸು ಕ್ರಿಸ್ತರು ನಮ್ಮ ಭರವಸೆಯ ಮೂಲ" ಎಂದು ಪೋಪ್ ಮುಂದುವರಿಸುತ್ತಾ, ಕ್ರೈಸ್ತರ ಪ್ರತಿಯೊಂದು ಪೀಳಿಗೆಯೂ ಸುವಾರ್ತೆಯನ್ನು ಮಾತಿನಲ್ಲಿ ಮತ್ತು ಕಾರ್ಯದಲ್ಲಿ ಸಾರಲು ಕರೆಯಲ್ಪಟ್ಟಿದೆ ಎಂದು ನೈಟ್ಸ್‌ ಆಫ್ ಕೊಲಂಬಸ್ ಸದಸ್ಯರಿಗೆ ನೆನಪಿಸಿದರು. ನಂತರ ಅವರು ಭರವಸೆಯ ಸಂಕೇತವಾಗಿರುವುದರ ಮಹತ್ವವನ್ನು ಒತ್ತಿ ಹೇಳಿದರು.

ವಲಸೆ ಬಂದ ಕಥೋಲಿಕರು ಮತ್ತು ಬಡವರ ಅಗತ್ಯಗಳಿಗೆ ಪ್ರಾಯೋಗಿಕ ಸಹಾಯ ಮತ್ತು ಆಧ್ಯಾತ್ಮಿಕ ಬೆಂಬಲದೊಂದಿಗೆ ಸ್ಪಂದಿಸಿದ ನೈಟ್ಸ್ ಆಫ್ ಕೊಲಂಬಸ್‌ನ ಸಂಸ್ಥಾಪಕ ಪೂಜ್ಯ ಮೈಕೆಲ್ ಮೆಕ್‌ಗಿವ್ನಿಯವರ ಉದಾಹರಣೆಯನ್ನು ಪೋಪ್ ಲಿಯೋ XIV ಅವರು ಸ್ಮರಿಸಿಕೊಂಡರು. ಸಹೋದರತ್ವದ ಈ ಧ್ಯೇಯವು ಪ್ರಪಂಚದಾದ್ಯಂತದ ಸ್ಥಳೀಯ ನೈಟ್ಸ್ ಆಫ್ ಕೊಲಂಬಸ್ ಕೌನ್ಸಿಲ್‌ಗಳ ಕೆಲಸದ ಮೂಲಕ ಮುಂದುವರಿಯುತ್ತದೆ ಎಂದು ಅವರು ಗಮನಿಸಿದರು.

07 ಆಗಸ್ಟ್ 2025, 10:51