ಪೋಪ್: ಸಂಘರ್ಷ ಮತ್ತು ಆಯುಧಗಳಿಗೆ ನಾವು ಒಗ್ಗಿಕೊಳ್ಳಬಾರದು
ವರದಿ: ವ್ಯಾಟಿಕನ್ ನ್ಯೂಸ್
ಸ್ವರ್ಗಸ್ವೀಕೃತ ಮಾತೆಯ ಹಬ್ಬದ ಹಿನ್ನೆಲೆಯಲ್ಲಿ ತ್ರಿಕಾಲ ಪ್ರಾರ್ಥನೆಯಲ್ಲಿ ಮಾತನಾಡಿದ ಪೋಪ್ ಲಿಯೋ ಅವರು ಜನತೆಗೆ ಹಾಗೂ ಭಕ್ತಾಧಿಗಳಿಗೆ ಭರವಸೆಯನ್ನು ತರುವಲ್ಲಿ ಮಾತೆ ಮರಿಯಮ್ಮನವರ ಪಾತ್ರದ ಕುರಿತು ಮಾತನಾಡಿದ್ದಾರೆ. ಮಾತೆ ಮರಿಯಮ್ಮನವರು ನಮ್ಮೆಲ್ಲರ ಭರವಸೆಯ ತಾಯಿ ಎಂದು ಅವರು ಹೇಳಿದ್ದಾರೆ.
ಜಗತ್ತು ಕಂಡ ಅತ್ಯಂತ ರಕ್ತಸಿಕ್ತ ಎರಡನೇ ಮಹಾಯುದ್ಧದ ದುರಂತದ ನಂತರ, ಪೋಪ್ ಪಯಸ್ XII 1950 ರಲ್ಲಿ ಸ್ವರ್ಗಸ್ವೀಕೃತ ಮಾತೆಯ ವಿಶ್ವಾಸವನ್ನು ಘೋಷಿಸಿದರು.
"ಮರಿಯಳ ಅದ್ಭುತ ಮಾದರಿಯನ್ನು ಪ್ರತಿಬಿಂಬಿಸುವ ಪ್ರತಿಯೊಬ್ಬರೂ ಮಾನವ ಜೀವನದ ಮೌಲ್ಯವನ್ನು ಹೆಚ್ಚು ಹೆಚ್ಚು ಮನವರಿಕೆ ಮಾಡಿಕೊಳ್ಳುತ್ತಾರೆ ಎಂದು ಆಶಿಸಲು ಕಾರಣವಿದೆ." ಪೋಪ್ ಪಯಸ್ ಅವರು "ಯುದ್ಧದ ಮೂಲಕ ಮಾನವ ಜೀವನದ ಕಗ್ಗೊಲೆ"ಯನ್ನು ಜಗತ್ತು ಮತ್ತೆಂದೂ ನೋಡುವುದಿಲ್ಲ ಎಂಬ ಭರವಸೆಯನ್ನು ವ್ಯಕ್ತಪಡಿಸುತ್ತಾ ಅಂದು ಹೇಳಿದ್ದರು.
"ಜಗತ್ತಿನಲ್ಲಿ ಹೆಚ್ಚುತ್ತಿರುವ ಹಿಂಸೆಯ ಹರಡುವಿಕೆಯ ಮುಂದೆ ನಾವು ದುಃಖಕರವಾಗಿ ಶಕ್ತಿಹೀನರಾಗಿದ್ದೇವೆ - ಈ ಹಿಂಸೆಯು ಮಾನವೀಯತೆಯ ಯಾವುದೇ ಪ್ರಚೋದನೆಗೆ ಕಿವುಡ ಮತ್ತು ಭಾವನೆಯಿಲ್ಲದಂತಾಗುತ್ತಿದೆ." ಎಂದು ಹೇಳುವ ಮೂಲಕ ಪೋಪ್ ಲಿಯೋ ಅವರು ತಮ್ಮ ಪೂರ್ವವರ್ತಿ ಪೋಪರ ಭಾವನೆಯನ್ನು ಇಲ್ಲಿ ಹಂಚಿಕೊಂಡಿದ್ದಾರೆ.
ಆದರೆ, ನಾವು ಭರವಸೆ ಕಳೆದುಕೊಳ್ಳಬಾರದು ಎಂದು ಪೋಪ್ ಒತ್ತಿ ಹೇಳಿದರು. ದೇವರು ಮಾನವ ಪಾಪ ಮತ್ತು ನಾವು ಎದುರಿಸುವ ಯಾವುದೇ ಹಿಂಸಾಚಾರಕ್ಕಿಂತ ದೊಡ್ಡವನು ಎಂದು ಅವರು ಪುನರುಚ್ಚರಿಸಿದರು. "ನಾವು ಸಂಘರ್ಷ ಮತ್ತು ಆಯುಧಗಳ ಪ್ರಾಬಲ್ಯಕ್ಕೆ ನಮ್ಮನ್ನು ಒಪ್ಪಿಸಿಕೊಳ್ಳಬಾರದು" ಎಂದು ಪೋಪ್ ಲಿಯೋ ಅಂತಿಮವಾಗಿ ಹೇಳಿದರು.
