ಹುಡುಕಿ

ಯೆಮೆನ್‌ನಲ್ಲಿ ಹಡಗು ಅಪಘಾತದಲ್ಲಿ ಮೃತಪಟ್ಟ ವಲಸಿಗರಿಗೆ ಪೋಪ್ ಲಿಯೋ ಸಂತಾಪ ಸೂಚಿಸಿದ್ದಾರೆ

ಸೌದಿ ಅರೇಬಿಯಾ ಮತ್ತು ಇತರ ಶ್ರೀಮಂತ ತೈಲ ಉತ್ಪಾದಕ ದೇಶಗಳನ್ನು ತಲುಪಲು ಪ್ರಯತ್ನಿಸುತ್ತಿರುವಾಗ ಹಡಗು ಧ್ವಂಸದಲ್ಲಿ ಇಥಿಯೋಪಿಯನ್ ಪ್ರಜೆಗಳೂ ಸೇರಿದಂತೆ ಇನ್ನು ಹಲವಾರು ಜನರು ಸಾವನ್ನಪ್ಪಿದ್ದಾರೆ. - ಇವರನ್ನು ಸರ್ವಶಕ್ತ ದೇವರ ಪ್ರೀತಿಯ ಕರುಣೆಗೆ ಪೋಪ್ ಒಪ್ಪಿಸುತ್ತಾರೆ.

ವರದಿ: ವ್ಯಾಟಿಕನ್ ನ್ಯೂಸ್

ಯೆಮೆನ್ ಕರಾವಳಿಯಲ್ಲಿ ವಲಸೆ ಹಡಗು ಧ್ವಂಸಗೊಂಡ ಘಟನೆಗೆ ಪೋಪ್ ಲಿಯೋ XIV ತೀವ್ರ ದುಃಖ ವ್ಯಕ್ತಪಡಿಸಿದ್ದಾರೆ. ವ್ಯಾಟಿಕನ್ ರಾಜ್ಯ ಕಾರ್ಯದರ್ಶಿ ಪಿಯೆಟ್ರೊ ಕಾರ್ಡಿನಲ್ ಪರೋಲಿನ್ ಅವರು ಸಹಿ ಮಾಡಿದ ಟೆಲಿಗ್ರಾಮ್ ಅನ್ನು ಯೆಮೆನ್‌ನ ಅಪೋಸ್ಟೋಲಿಕ್ ನನ್ಸಿಯೊ ಮತ್ತು ಅರೇಬಿಯನ್ ಪೆನಿನ್ಸುಲಾದ ಪ್ರೇಷಿತ ಪ್ರತಿನಿಧಿ ಆರ್ಚ್‌ಬಿಷಪ್ ಜಖಿಯಾ ಎಲ್-ಕ್ಯಾಸಿಸ್ ಅವರಿಗೆ ಕಳುಹಿಸಲಾಗಿದೆ, ಅವರು ಅದನ್ನು ಸ್ಥಳೀಯ ಅಧಿಕಾರಿಗಳಿಗೆ ತಲುಪಿಸುತ್ತಾರೆ.

ಸಂದೇಶದಲ್ಲಿ, ಪೋಪ್ "ಸರ್ವಶಕ್ತ ದೇವರ ಪ್ರೀತಿಯ ಕರುಣೆಗೆ ಪ್ರಾಣ ಕಳೆದುಕೊಂಡ ಅನೇಕ ವಲಸಿಗರನ್ನು ಅರ್ಪಿಸುತ್ತಾರೆ." ಬದುಕುಳಿದವರು, ತುರ್ತು ಸಿಬ್ಬಂದಿ ಮತ್ತು ಈ ದುರಂತದಿಂದ ಬಾಧಿತರಾದ ಎಲ್ಲರಿಗೂ "ದೈವಿಕ ಶಕ್ತಿ, ಸಾಂತ್ವನ ಮತ್ತು ಭರವಸೆ" ಯನ್ನು ನೀಡಲಿ ಎಂದು ಪ್ರಾರ್ಥಿಸುತ್ತಾರೆ.

04 ಆಗಸ್ಟ್ 2025, 17:46