ಹುಡುಕಿ

ಶೀಘ್ರದಲ್ಲೇ ಧರ್ಮಸಭೆಯ ಪಂಡಿತ ಎಂದು ಘೋಷಿಸಲ್ಪಡುವ ಸಂತ ಜಾನ್ ಹೆನ್ರಿ ನ್ಯೂಮನ್

ಹತ್ತೊಂಬತ್ತನೇ ಶತಮಾನದ ಕ್ರೈಸ್ತ ಚಿಂತಕರಲ್ಲಿ ಅಗ್ಯಗಣ್ಯರಾಗಿದ್ದ, ಪ್ರಸಿದ್ಧ ಲೇಖಕ ಹಾಗೂ ಕವಿ ಸಂತ ಜಾನ್ ಹೆನ್ರಿ ನ್ಯೂಮನ್ ಅವರನ್ನು ಶೀಘ್ರದಲ್ಲಿಯೇ ಧರ್ಮಸಭೆಯ ಪಂಡಿತರೆಂದು ಘೋಷಿಸಲಾಗುತ್ತದೆ ಎಂದು ವ್ಯಾಟಿಕನ್ ಮಾಧ್ಯಮ ಕಚೇರಿಯು ಹೇಳಿದೆ.

ವರದಿ: ವ್ಯಾಟಿಕನ್ ನ್ಯೂಸ್

ಹತ್ತೊಂಬತ್ತನೇ ಶತಮಾನದ ಕ್ರೈಸ್ತ ಚಿಂತಕರಲ್ಲಿ ಅಗ್ಯಗಣ್ಯರಾಗಿದ್ದ, ಪ್ರಸಿದ್ಧ ಲೇಖಕ ಹಾಗೂ ಕವಿ ಸಂತ ಜಾನ್ ಹೆನ್ರಿ ನ್ಯೂಮನ್ ಅವರನ್ನು ಶೀಘ್ರದಲ್ಲಿಯೇ ಧರ್ಮಸಭೆಯ ಪಂಡಿತರೆಂದು ಘೋಷಿಸಲಾಗುತ್ತದೆ ಎಂದು ವ್ಯಾಟಿಕನ್ ಮಾಧ್ಯಮ ಕಚೇರಿಯು ಹೇಳಿದೆ.

ಸಂತ ಜಾನ್ ಹೆನ್ರಿ ನ್ಯೂಮನ್ ಅವರು ಆಂಗ್ಲಿಕನ್ ಧರ್ಮಸಭೆಗೆ ಸೇರಿದ್ದು, ಅಲ್ಲಿಯೇ ಗುರುವಾಗಿದ್ದವರು. ತದನಂತರ ಕಥೋಲಿಕ ವಿಶ್ವಾಸಕ್ಕೆ ಮನತಿರುಗಿದ ಅವರು ಕಥೋಲಿಕ ವಿಶ್ವಾಸವನ್ನು ಎಡೆಬಿಡದೆ ತಮ್ಮ ಬರಹಗಳು ಹಾಗೂ ಚಿಂತನೆಗಳಿಂದ ರಕ್ಷಿಸಿದವರು. ಅವರು ತಮ್ಮ "ಲೀಡ್ ಕೈಂಡ್ಲಿ ಲೈಟ್" ಎಂಬ ಪ್ರಾರ್ಥನಾ ಕವಿತೆಯಿಂದ ಹೆಸರುವಾಸಿಯಾಗಿದ್ದಾರೆ.

ಕಾರ್ಡಿನಲ್ ಜಾನ್ ಹೆನ್ರಿ ನ್ಯೂಮನ್ ಅವರ ಈ ಪ್ರಸಿದ್ಧ ಕವಿತೆಯನ್ನು ಬಿ ಎಂ ಶ್ರೀಕಂಠಯ್ಯನವರು ಕನ್ನಡದಲ್ಲಿ "ಕರುಣಾಳು ಬಾ ಬೆಳಕೆ" ಎಂಬುದಾಗಿ ಅನುವಾದಿಸಿದ್ದಾರೆ. ಇದು ಕನ್ನಡದಲ್ಲಿಯೂ ಸಹ ಅತ್ಯಂತ ಪ್ರಸಿದ್ಧವಾಗಿದೆ.

ಕರುಣಾಳು ಬಾ ಬೆಳಕೆ ಮುಸುಕಿದೀ ಮಬ್ಬಿನಲಿ
ಕೈ ಹಿಡಿದು ನಡೆಸೆನ್ನನು

ಇರುಳು ಕತ್ತಲೆಯ ಗವಿ ಮನೆ ದೂರ ಕನಿಕರಿಸಿ
ಕೈ ಹಿಡಿದು ನಡೆಸೆನ್ನನು

ಹೇಳಿ ನನ್ನಡಿಯಿಡಿಸು ಬಲುದೂರ ನೋಟವನು
ಕೇಳಿದೊಡನೆಯೇ ಸಾಕು ನನಗೊಂದು ಹೆಜ್ಜೆ
ಮುನ್ನೆ ಇಂತಿರದಾದೆ ನಿನ್ನ ಬೇಡದೆ ಹೋದೆ
ಕೈ ಹಿಡಿದು ನಡೆಸೆನ್ನನು

ಇಷ್ಟುದಿನ ಸಲಹಿರುವೆ ಈ ಮೂರ್ಖನನು ನೀನು ಮುಂದೆಯೂ
ಕೈ ಹಿಡಿದು ನಡೆಸದಿಹೆಯಾ
ಕಷ್ಟದಡವಿಯ ಕಳೆದು ಬೆಟ್ಟ ಹೊಳೆಗಳ ಹಾದು

ಇರುಳನ್ನು ನೂಕದಿಹೆಯಾ?

ಬೆಳಗಾಗ ಹೊಳೆಯದೆ ಹಿಂದೊಮ್ಮೆ ನಾನೊಲಿದು
ಈ ನಡುವೆ ಕಳಕೊಂಡೆ ದಿವ್ಯ ಮುಖ ನಗುತ

ಕಥೋಲಿಕ ಧರ್ಮಸಭೆಯು ಶೀಘ್ರದಲ್ಲೇ ಇವರನ್ನು ಧರ್ಮಸಭೆಯ ಪಂಡಿತ ಎಂದು ಘೋಷಿಸಲಿದೆ. 

01 ಆಗಸ್ಟ್ 2025, 18:01