ಏಷ್ಯಾದಲ್ಲಿ ಚಂಡಮಾರುತ ಸಂತ್ರಸ್ಥರಿಗಾಗಿ ಪ್ರಾರ್ಥಿಸಿದ ಪೋಪ್
ವರದಿ: ವ್ಯಾಟಿಕನ್ ನ್ಯೂಸ್
ಫಿಲಿಪೈನ್ಸ್, ತೈವಾನ್, ಹಾಂಗ್ ಕಾಂಗ್, ವಿಯೆಟ್ನಾಂ ಮತ್ತು ಚೀನಾದ ಕೆಲವು ಭಾಗಗಳನ್ನು ಅಪ್ಪಳಿಸಿದ ಚಂಡಮಾರುತದಿಂದ ಹಾನಿಗೊಳಗಾದವರಿಗಾಗಿ ಪೋಪ್ ಲಿಯೋ ಪ್ರಾರ್ಥಿಸುತ್ತಾರೆ.
ಧರ್ಮೋಪದೇಶಕರ ಜ್ಯೂಬಿಲಿಯ ಬಲಿಪೂಜೆಯ ಕೊನೆಯಲ್ಲಿ ಮತ್ತು ಮಧ್ಯಾಹ್ನದ ತ್ರಿಕಾಲ ಪ್ರಾರ್ಥನೆಯಲ್ಲಿ ಪ್ರಾರ್ಥನೆಯನ್ನು ಪಠಿಸುವ ಮೊದಲು, ಪೋಪ್ ಲಿಯೋ ಸಂತ ಪೇತ್ರರ ಚೌಕದಲ್ಲಿ ನೆರೆದಿದ್ದ ಭಕ್ತರನ್ನು ಉದ್ದೇಶಿಸಿ ಮಾತನಾಡಿದರು.
"ಚಂಡ ಮಾರುತ ಪೀಡಿತ ಜನಸಂಖ್ಯೆಗೆ, ವಿಶೇಷವಾಗಿ ಬಡವರಿಗೆ, ಬಲಿಪಶುಗಳು, ಕಾಣೆಯಾದವರು, ಸ್ಥಳಾಂತರಗೊಂಡ ಅನೇಕ ಕುಟುಂಬಗಳು, ಕಷ್ಟಗಳನ್ನು ಅನುಭವಿಸಿದ ಅಸಂಖ್ಯಾತ ಜನರು ಹಾಗೂ ರಕ್ಷಣಾ ಕಾರ್ಯಕರ್ತರು ಮತ್ತು ನಾಗರಿಕ ಅಧಿಕಾರಿಗಳಿಗೆ ನನ್ನ ಸಾಮೀಪ್ಯ ಮತ್ತು ಪ್ರಾರ್ಥನೆಯ ಬಗ್ಗೆ ನಾನು ಭರವಸೆ ನೀಡುತ್ತೇನೆ" ಎಂದು ಪೋಪ್ ಮುಂದುವರಿಸಿದರು.
ನವೆಂಬರ್ 1 ರಂದು ಸಂತ ಜಾನ್ ಹೆನ್ರಿ ನ್ಯೂಮನ್ ಅವರನ್ನು ಧರ್ಮಸಭೆಯ ಪಂಡಿತ ಎಂದು ಘೋಷಿಸಲಾಗುವುದು ಎಂದು ಪೋಪ್ ಲಿಯೋ ಅವರು ಹೇಳಿದ್ದಾರೆ.
2019 ರಂದು ಪೋಪ್ ಫ್ರಾನ್ಸಿಸ್ ಅವರು ಇಂಗ್ಲೀಷ್ ಕಾರ್ಡಿನಲ್ ಜಾನ್ ಹೆನ್ರಿ ನ್ಯೂಮನ್ ಅವರನ್ನು ಸಂತರ ಪದವಿಗೇರಿಸಿದ್ದರು.
