ಸಾರ್ವಜನಿಕ ಭೇಟಿಯಲ್ಲಿ ಪೋಪ್: ಮಾನವ ಅಸ್ಥಿತ್ವದ ಕಾರ್ಗತ್ತಲ ಸ್ಥಳಗಳನ್ನೂ ಸಹ ಕ್ರಿಸ್ತರು ರಕ್ಷಿಸುತ್ತಾರೆ
ವರದಿ: ವ್ಯಾಟಿಕನ್ ನ್ಯೂಸ್
ಇಂದಿನ ಸಾರ್ವಜನಿಕ ಭೇಟಿಯಲ್ಲಿ ಪೋಪ್ ಲಿಯೋ ಅವರು ಪವಿತ್ರ ಶನಿವಾರದಂದು ಕ್ರಿಸ್ತರು ಪಾತಳಕ್ಕೆ ಇಳಿದಿದ್ದರು ಎಂಬುದರ ಮೇಲೆ ಚಿಂತನೆಯನ್ನು ಹರಿಸುತ್ತಾರೆ. ಇದೇ ಸಂದರ್ಭದಲ್ಲಿ ಮಾನವ ಅಸ್ಥಿತ್ವದ ಕಾರ್ಗತ್ತಲ ಸ್ಥಳಗಳನ್ನೂ ಸಹ ರಕ್ಷಿಸುತ್ತಾರೆ ಕ್ರಿಸ್ತರು ರಕ್ಷಿಸುತ್ತಾರೆ ಎಂದು ಹೇಳಿದ್ದಾರೆ.
ಕ್ರಿಸ್ತರು ನಮಗಾಗಿ ಮರಣವನ್ನು ಪಾತ್ರವಲ್ಲ ನಾವು ಕಳೆದು ಹೋದಾಗ ನಮ್ಮನ್ನು ಹುಡುಕಿಕೊಂಡು ಬಂದರು. ಅವರ ಬೆಳಕಿನ ಕಿರಣಗಳು ಪಾತಾಳ ಲೋಕದ ಅಂಧಕಾರವನ್ನು ಛೇದಿಸುವಂತಹ ಶಕ್ತಿಯನ್ನು ಹೊಂದಿದ್ದವು. ಆ ಮೂಲಕ ಏಸುಕ್ರಿಸ್ತರು ಮಾನವನ ಅಂಧಕಾರದ ಸ್ಥಳಗಳನ್ನು ಸಹ ಪ್ರವೇಶಿಸುತ್ತಾರೆ ಎಂದು ವಿಶ್ವಗುರು ಲಿಯೋ ಹೇಳಿದರು.
ದೇವರು ನಮ್ಮನ್ನು ರಕ್ಷಿಸುತ್ತಾರೆ. ಅಂತೆಯೇ ನಾವು ಅವರ ಪ್ರೀತಿಗೆ ಸಾಕ್ಷಿಗಳಾಗಬೇಕಿದೆ. ದೇವರು ನಮ್ಮ ತಂದೆಯಾಗಿದ್ದಾರೆ ಆದುದರಿಂದ ನಾವು ಅವರ ಮಕ್ಕಳಾಗಿ ಅವರ ಪ್ರಜ್ವಲ ಪ್ರೀತಿಗೆ ಜ್ವಲಂತ ಉದಾಹರಣೆಯಾಗಬೇಕಿದೆ ಎಂದು ಪೋಪ್ ಲಿಯೋ ತಮ್ಮ ಸಾರ್ವಜನಿಕ ಭೇಟಿಯಲ್ಲಿ ಹೇಳಿದರು.
ಕರುಣೆಯ ಕುರಿತು ಮಾತನಾಡಿದ ಅವರು "ದೇವರು ಕರುಣಾಮಯಿಯಾಗಿರುವಂತೆ ನಾವೂ ಸಹ ಕರುಣೆಯಿಂದ ಜೀವಿಸಬೇಕು. ಜ್ಯೂಬಿಲಿ ವರ್ಷದಲ್ಲಿ ಭರವಸೆಯ ಯಾತ್ರಿಕರಂತೆ ಮುನ್ನಡೆಯಬೇಕು" ಎಂದು ಹೇಳಿದರು. ಪವಿತ್ರ ಶನಿವಾರ ಎಂಬುದು ಕ್ರಿಸ್ತರು ಪಾತಾಳಕ್ಕೆ ಇಳಿದದುದರ ಸ್ಮರಣೆಯಲ್ಲದೆ ಅದು ನಮ್ಮನ್ನು ರಕ್ಷಿಸಿದ ದಿನವೂ ಹೌದು ಎಂದು ಅವರು ಹೇಳಿದರು.
