ಎಲ್ಲರನ್ನೂ ಸ್ವಾಗತಿಸುವ ಪಾಲನಾ ಸೇವೆಯನ್ನು ಉತ್ತೇಜಿಸುವಂತೆ ರೋಮ್ ಧರ್ಮಕ್ಷೇತ್ರಕ್ಕೆ ಕರೆ ನೀಡಿದ ಪೋಪ್ ಲಿಯೋ
ವರದಿ: ವ್ಯಾಟಿಕನ್ ನ್ಯೂಸ್
ಪೋಪ್ ಲಿಯೋ ಅವರು ರೋಮ್ ಧರ್ಮಕ್ಷೇತ್ರದ ಯಾಜಕರೊಂದಿಗೆ ಮಾತನಾಡುತ್ತಾ, ಈ ಧರ್ಮಕ್ಷೇತ್ರವು ಎಲ್ಲರನ್ನೂ ಸ್ವಾಗತಿಸುವ ಪಾಲನಾ ಸೇವೆಯನ್ನು ಮಾಡುವ ಧರ್ಮಕ್ಷೇತ್ರವಾಗಬೇಕು ಎಂದು ಉತ್ತೇಜಿಸಿದ್ದಾರೆ. ಸಂತ ಜಾನ್ ಲ್ಯಾಟರನ್ ಮಹಾದೇವಾಲಯದಲ್ಲಿ ನಡೆದ ಸಭೆಯಲ್ಲಿ ಪೋಪ್ ಲಿಯೋ ಅವರು ಈ ಮಾತುಗಳನ್ನು ಹೇಳಿದ್ದಾರೆ.
ರೋಮ್ ಧರ್ಮಕ್ಷೇತ್ರದ ಧರ್ಮಾಧ್ಯಕ್ಷರಾಗಿ ಯಾಜಕರನ್ನು ಉದ್ದೇಶಿಸಿ ಮಾತನಾಡಿದ ಪೋಪ್ ಲಿಯೋ ಅವರು ಪೋಪ್ ಫ್ರಾನ್ಸಿಸ್ ಅವರು ಆರಂಭಿಸಿದ್ದ ಸಿನೋಡ್ ಪ್ರಕ್ರಿಯೆಯನ್ನು ಮುಂದುವರೆಸಿದರು. ನಾನು ರೋಮ್ ನಗರದ ಧರ್ಮಾಧ್ಯಕ್ಷ ಎಂದು ಎನಿಸಿಕೊಳ್ಳುವುದಕ್ಕಿಂತ ನಿಮಗೆ ನಾನು ಧರ್ಮಾಧ್ಯಕ್ಷನಾಗಿದ್ದೇನೆ ಎಂದು ಪೋಪ್ ಯಾಜಕರಿಗೆ ಹೇಳಿದರು.
ಮುಂದುವರೆದು ಮಾತನಾಡಿದ ಪೋಪ್ ಲಿಯೋ ಅವರು ನಾವು ಮಾಡಿದ್ದನೇ ಪದೇ ಪದೇ ಮಾಡುತ್ತಾ, ಮೈಮರೆಯಬಾರದು. ಒಂದು ಜಾಗತಿಕ ಧರ್ಮಕ್ಷೇತ್ರವಾಗಿ ಇಲ್ಲಿಗೆ ಬರುವ ಎಲ್ಲಾ ಭಕ್ತಾಧಿಗಳನ್ನು ಸ್ವಾಗತಿಸುವ ಪಾಲನಾ ಸೇವೆಯನ್ನು ಮಾಡುವ ಧರ್ಮಕ್ಷೇತ್ರವಾಗಿ ಕಾರ್ಯನಿರ್ವಹಿಸಬೇಕು ಎಂದು ಪೋಪ್ ಲಿಯೋ ನುಡಿದರು.
ನಾವು ವಿಶೇಷವಾಗಿ ಯುವ ಜನತೆ ಹಾಗೂ ಕುಟುಂಬಗಳೊಂದಿಗೆ ವಿಶ್ವಾಸದಲ್ಲಿ ಪಯಣಿಸಬೇಕು ಎಂದು ಪೋಪ್ ಲಿಯೋ ಅವರು ಜಾಗತಿಕ ಧರ್ಮಸಭೆಯಲ್ಲಿ ಯುವ ಜನರು ಹಾಗೂ ಕುಟುಂಬಗಳ ಪಾತ್ರವನ್ನು ಎತ್ತಿ ತೋರಿಸಿದರು. ಅಂತಿಮವಾಗಿ ಸಾಲುಸ್ ಪಾಪುಲಿ ರೊಮಾನಿ ದೇವಮಾತೆಯ ಪ್ರಾರ್ಥನಾಲಯದಲ್ಲಿ ಎಲ್ಲರಿಗಾಗಿ ಪ್ರಾರ್ಥಿಸಿದರು.
