ಹುಡುಕಿ

ಪೋಪ್ ಲಿಯೋ: ಪ್ಯಾಲೆಸ್ಟೈನ್ ಅನ್ನು ಗುರುತಿಸುವುದು ಸಹಾಯ ಮಾಡುತ್ತದೆ, ಆದರೆ ಸಂಭಾಷಣೆ ಮುರಿದುಹೋಗಿದೆ

ಮಂಗಳವಾರ ಸಂಜೆ ಕ್ಯಾಸ್ಟೆಲ್ ಗ್ಯಾಂಡೋಲ್ಫೊದಿಂದ ವ್ಯಾಟಿಕನ್‌ಗೆ ಹೊರಡಲು ಸಿದ್ಧರಾಗುತ್ತಿದ್ದಂತೆ ಪತ್ರಕರ್ತರ ಪ್ರಶ್ನೆಗಳಿಗೆ ಉತ್ತರಿಸುತ್ತಾ, ಪೋಪ್ ಲಿಯೋ XIV, 'ಯುರೋಪ್ ನಿಜವಾಗಿಯೂ ಒಗ್ಗಟ್ಟಾಗಿದ್ದರೆ, ಅದು ಬಹಳಷ್ಟು ಮಾಡಬಹುದೆಂದು ನಾನು ನಂಬುತ್ತೇನೆ' ಎಂದು ಹೇಳಿದರು.

ವರದಿ: ವ್ಯಾಟಿಕನ್ ನ್ಯೂಸ್

ಕ್ಯಾಸ್ಟೆಲ್ ಗ್ಯಾಂಡೋಲ್ಫೊದಲ್ಲಿ ಒಂದು ದಿನ ಕಳೆದ ನಂತರ ಪೋಪ್ ಲಿಯೋ XIV ಮಂಗಳವಾರ ಸಂಜೆ ವ್ಯಾಟಿಕನ್‌ಗೆ ಮರಳಿದ್ದಾರೆ.

ಆದಾಗ್ಯೂ, ನಿರ್ಗಮಿಸುವ ಮೊದಲು, ಅವರು ಮಧ್ಯಪ್ರಾಚ್ಯದ ಪರಿಸ್ಥಿತಿಯ ಬಗ್ಗೆ ಪತ್ರಕರ್ತರಿಗೆ ಸಂಕ್ಷಿಪ್ತವಾಗಿ ಪ್ರತಿಕ್ರಿಯಿಸಿದರು.

"ಪವಿತ್ರ ಪೀಠವು ಹಲವು ವರ್ಷಗಳಿಂದ ಎರಡು ರಾಜ್ಯಗಳ ಪರಿಹಾರವನ್ನು ಬೆಂಬಲಿಸಿದೆ" ಎಂದು ಅವರು ನೆನಪಿಸಿಕೊಂಡರು. ಅದೇ ದಿನ, ಅವರು ಗಾಜಾದಲ್ಲಿರುವ ಕಥೋಲಿಕ ಧರ್ಮಕೇಂದ್ರದೊಂದಿಗೆ ಸಂವಹನ ನಡೆಸಿದ್ದಾಗಿಯೂ ಅವರು ಉಲ್ಲೇಖಿಸಿದರು.

ಪ್ಯಾಲೆಸ್ಟೈನ್ ಅನ್ನು ಒಂದು ರಾಷ್ಟ್ರವಾಗಿ ಗುರುತಿಸುವ ಬಗ್ಗೆ ಕೇಳಿದಾಗ, ಪವಿತ್ರ ತಂದೆಯು, "ಪವಿತ್ರ ಧರ್ಮಸಭೆ ಕೆಲವು ಸಮಯದ ಹಿಂದೆ ಎರಡು-ರಾಜ್ಯ ಪರಿಹಾರವನ್ನು ಗುರುತಿಸಿತು. ಅದು ಸ್ಪಷ್ಟವಾಗಿದೆ: ನಾವು ಎಲ್ಲಾ ಜನರನ್ನು ಗೌರವಿಸುವ ಮಾರ್ಗವನ್ನು ಹುಡುಕಬೇಕು." ಎಂದು ಪುನರುಚ್ಚರಿಸಿದರು.

24 ಸೆಪ್ಟೆಂಬರ್ 2025, 15:56