ಹುಡುಕಿ

ಶಾಂತಿಗಾಗಿ ಅಕ್ಟೋಬರ್ ತಿಂಗಳಲ್ಲಿ ಜಪಸರ ಪಠಿಸುವಂತೆ ಕಥೋಲಿಕರಿಗೆ ಕರೆ ನೀಡಿದ ಪೋಪ್ ಲಿಯೋ XIV

ಪೋಪ್ ಲಿಯೋ ಅವರು ಅಕ್ಟೋಬರ್ ತಿಂಗಳಲ್ಲಿ ವಿಶ್ವದಲ್ಲಿ ಶಾಂತಿಗಾಗಿ ಎಲ್ಲರೂ ಪ್ರತಿದಿನ ಜಪಸರವನ್ನು ಪ್ರಾರ್ಥಿಸಬೇಕು ಎಂದು ಹೇಳಿದ್ದಾರೆ. ಅಕ್ಟೋಬರ್ 11 ರಂದು ಇದೇ ಕಾರಣಕ್ಕಾಗಿ ಸಂತ ಪೇತ್ರರ ಚೌಕದಲ್ಲಿ ಸಾರ್ವಜನಿಕ ಜಪಸರ ಪ್ರಾರ್ಥನೆಯನ್ನು ಹಮ್ಮಿಕೊಂಡಿದ್ದಾರೆ.

ವರದಿ: ವ್ಯಾಟಿಕನ್ ನ್ಯೂಸ್

ಪೋಪ್ ಲಿಯೋ ಅವರು ಅಕ್ಟೋಬರ್ ತಿಂಗಳಲ್ಲಿ ವಿಶ್ವದಲ್ಲಿ ಶಾಂತಿಗಾಗಿ ಎಲ್ಲರೂ ಪ್ರತಿದಿನ ಜಪಸರವನ್ನು ಪ್ರಾರ್ಥಿಸಬೇಕು ಎಂದು ಹೇಳಿದ್ದಾರೆ. ಅಕ್ಟೋಬರ್ 11 ರಂದು ಇದೇ ಕಾರಣಕ್ಕಾಗಿ ಸಂತ ಪೇತ್ರರ ಚೌಕದಲ್ಲಿ ಸಾರ್ವಜನಿಕ ಜಪಸರ ಪ್ರಾರ್ಥನೆಯನ್ನು ಹಮ್ಮಿಕೊಂಡಿದ್ದಾರೆ.

ಬುಧವಾರದ ಸಾರ್ವಜನಿಕ ಭೇಟಿಯಲ್ಲಿ ಪೋಪ್ ಲಿಯೋ ಅವರು ವಿಶ್ವದಾದ್ಯಂತ ಇರುವ ಎಲ್ಲರೂ ವಿಶ್ವ ಶಾಂತಿಗಾಗಿ, ಜಗತ್ತಿನಲ್ಲಿ ನಡೆಯುತ್ತಿರುವ ಯುದ್ಧಗಳು ನಿಲ್ಲಲಿ ಎಂದು ಎಲ್ಲಾ ಕಥೋಲಿಕರು ಜಪಸರ ಪ್ರಾರ್ಥನೆಯನ್ನು ಮಾಡಬೇಕೆಂದು ಕರೆ ನೀಡಿದ್ದಾರೆ.

"ಅಕ್ಟೋಬರ್ ತಿಂಗಳಾದ್ಯಂತ ಜಪಸರ ಪ್ರಾರ್ಥನೆಯನ್ನು ಮಾಡಬೇಕೆಂದು ಎಲ್ಲರನ್ನೂ ನಾನು ವಿನಂತಿಸಿಕೊಳ್ಳುತ್ತೇನೆ" ಎಂದು ಪೋಪ್ ಲಿಯೋ ಹೇಳಿದರು.

ವ್ಯಾಟಿಕನ್ ಉದ್ಯೋಗಿಗಳೆಲ್ಲರೂ ಪ್ರತಿ ದಿನ ಸಂಜೆ 7 ಗಂಟೆಗೆ ಸಂತ ಪೇತ್ರರ ಚೌಕದಲ್ಲಿ ಜಪಸರವನ್ನು ಮಾಡಬೇಕು ಎಂದು ಹೇಳಿದರು.

ಅಕ್ಟೋಬರ್ 11 ರಂದು ಇದೇ ಕಾರಣಕ್ಕಾಗಿ ಸಂತ ಪೇತ್ರರ ಚೌಕದಲ್ಲಿ ಸಾರ್ವಜನಿಕ ಜಪಸರ ಪ್ರಾರ್ಥನೆಯನ್ನು ಹಮ್ಮಿಕೊಂಡಿದ್ದಾರೆ.

24 ಸೆಪ್ಟೆಂಬರ್ 2025, 15:12