ಬಲಿಪೂಜೆಯಲ್ಲಿ ಪೋಪ್: ಧರ್ಮೋಪದೇಶಕರು ನಮ್ಮ ಜೀವನದ ವಿಶ್ವಾಸದ ಪಯಣದಲ್ಲಿ ಜೊತೆ ಪಯಣಿಸುತ್ತಾರೆ
ವರದಿ: ವ್ಯಾಟಿಕನ್ ನ್ಯೂಸ್
ಧರ್ಮೋಪದೇಶಕರ ಜ್ಯೂಬಿಲಿ ಬಲಿಪೂಜೆಯಲ್ಲಿ ಪೋಪ್ ಲಿಯೋ ಅವರು ಧರ್ಮೋಪದೇಶಕರನ್ನು ಶ್ಲಾಘಿಸುತ್ತಾರೆ. ಪ್ರೀತಿ, ಭರವಸೆ ಹಾಗೂ ನಂಬಿಕೆಯಲ್ಲಿ ಕ್ರೈಸ್ತರು ಪರಸ್ಪರ ನೆರವಾಗಬೇಕೆಂದು ಅವರು ಹೇಳುತ್ತಾರೆ.
ಸಂತ ಪೇತ್ರದ ಚೌಕದಲ್ಲಿ ನೆರೆದಿದ್ದ ಭಕ್ತಾದಿಗಳನ್ನು ಉದ್ದೇಶಿಸಿ ಮಾತನಾಡಿದ ಪೋಪ್ ಲಿಯೋ ಅವರು ಧರ್ಮೋಪದೇಶಕರ ಜುಬಿಲಿಯ ಬಲಿಪೂಜೆಯನ್ನು ಅರ್ಪಿಸಿದರು. ತಮ್ಮ ಪ್ರಭುದನೆಯಲ್ಲಿ ಮಾತನಾಡಿದ ಅವರು ಇಂದಿನ ಶುಭ ಸಂದೇಶದ ಕುರಿತು ಚಿಂತನೆಯನ್ನು ನಡೆಸಿದರು. ಧನಿಕ ಹಾಗೂ ಲಾಜರನ ಸಾಮತಿಯನ್ನು ಕ್ರಿಸ್ತರು ಹೇಳುವಾಗ ಈಸಾಮತೆಯು 2016ರಲ್ಲಿ ಕರುಣೆಯ ವರ್ಷದಲ್ಲಿ ಧರ್ಮೋಪದೇಶಕರ ಜ್ಯೂಬಿಲಿಯಲ್ಲಿ ಓದಲಾಗಿತ್ತು.
ಪ್ರಸ್ತುತ ಕಾಲಘಟ್ಟದಲ್ಲಿ ನಾವು ಎರಡು ವಿಭಿನ್ನ ಸಂಕ್ರಮಣಗಳಲ್ಲಿ ಜೀವಿಸುತ್ತಿದ್ದೇವೆ. ಒಂದು ಕಡೆ ಅತ್ಯಂತ ಶ್ರೀಮಂತ ಇದ್ದರೆ ಮತ್ತೊಂದು ಕಡೆ ಅತ್ಯಂತ ಬಡವರಿದ್ದಾರೆ. ಯುದ್ಧಗಳು ನಡೆಯುತ್ತಿರುವ ಹೊತ್ತಿನಲ್ಲಿ ಲಕ್ಷಾಂತರ ಜನರು ಸಾಯುತ್ತಿದ್ದಾರೆ ಹಾಗೂ ಅದೇ ಸಂದರ್ಭದಲ್ಲಿ ಯುದ್ಧದ ಕಾರಣದಿಂದ ಸಾವಿರಾರು ಜನರು ಶ್ರೀಮಂತರಾಗುತ್ತಿದ್ದಾರೆ. ಶತಮಾನಗಳ ನಂತರವೂ ಸಹ ಪರಿಸ್ಥಿತಿ ಬದಲಾಗಲಿಲ್ಲ ಎಂದು ಪೋಪ್ ಹೇಳುತ್ತಾರೆ.
ಧರ್ಮೋಪದೇಶಕರ ಕುರಿತು ಮಾತನಾಡಿದ ವಿಶ್ವಗುರು ಗ್ರೀಕ್ ಭಾಷೆಯಲ್ಲಿ ಧರ್ಮೋಪದೇಶಕ ಎಂದರೆ ಹೇಳಿಕೊಡುವವನು ಅಥವಾ ಪ್ರತಿಧ್ವನಿಸುವವನು ಎಂದರ್ಥ. ನಮ್ಮ ನಡುವೆ ಇರುವ ಧರ್ಮಪದೇಶಕರು ನಮಗೆ ವಿಶ್ವಾಸವನ್ನು ಹೇಳಿಕೊಡುತ್ತಾರೆ ಮಾತ್ರವಲ್ಲದೆ ನಮ್ಮ ಜೀವನದಲ್ಲಿ ವಿಶ್ವಾಸವನ್ನು ಪ್ರತಿಧ್ವನಿಸಲು ನೆರವಾಗುತ್ತಾರೆ. ಧರ್ಮೋಪದೇಶಕ ಎಂದರೆ ಶುಭ ಸಂದೇಶವನ್ನು ತನ್ನ ಜೀವಿತದ ಮೂಲಕ ಸಾರುವವನು ಎಂದರ್ಥ. ಯಾರಾದರೂ ಧರ್ಮೋಪದೇಶಕರಾಗಬಹುದು ನಮ್ಮ ತಂದೆ ತಾಯಿಗಳು ಅಥವಾ ಧರ್ಮಸಭೆಯ ಪರವಾಗಿ ಯಾವುದೇ ವ್ಯಕ್ತಿ ಧರ್ಮೋಪದೇಶಕರಾಗಬಹುದು.
ಅಂತಿಮವಾಗಿ ಧರ್ಮೋಪದೇಶಕರನ್ನು ಉದ್ದೇಶಿಸಿ ಮಾತನಾಡಿದ ಅವರು, ವಿಶ್ವಾಸದಿಂದಿರಿ ಹಾಗೂ ನಿಮ್ಮ ವಿಶ್ವಾಸ ಮತ್ತೊಬ್ಬರ ವಿಶ್ವಾಸಕ್ಕೆ ನೆರವಾಗಲಿ ಎಂದು ಹೇಳಿದರು.
