ಜೀವದ ಪಾವಿತ್ರ್ಯತೆಯನ್ನು ಕಾಪಾಡುತ್ತಿರುವ ನೈಟ್ಸ್ ಆಫ್ ಕೊಲಂಬಸ್ ಸಂಸ್ಥೆಗೆ ಧನ್ಯವಾದವನ್ನು ತಿಳಿಸಿದ ಪೋಪ್ ಲಿಯೋ XIV
ವರದಿ: ವ್ಯಾಟಿಕನ್ ನ್ಯೂಸ್
ಪವಿತ್ರ ತಂದೆಯ ದತ್ತಿ ಕಾರ್ಯಗಳನ್ನು ನಿರ್ವಹಿಸುವ ನಿಟ್ಟಿನಲ್ಲಿ ಅಪಾರ ನೆರವನ್ನು ನೀಡುತ್ತಿರುವ ನೈಟ್ಸ್ ಆಫ್ ಕೊಲಂಬರ್ ಸಂಸ್ಥೆಯನ್ನು ಪೋಪ್ ಲಿಯೋ XIV ಅವರು ಶ್ಲಾಘಿಸಿದ್ದಾರೆ. ಜೀವದ ಪಾವಿತ್ರ್ಯತೆಯನ್ನು ಕಾಪಾಡುತ್ತಿರುವ ಅವರಿಗೆ ಧನ್ಯವಾದಗಳನ್ನು ತಿಳಿಸಿದ್ದಾರೆ.
ಜ್ಯೂಬಿಲಿ ವರ್ಷದಲ್ಲಿ ನೈಟ್ಸ್ ಆಫ್ ಕೊಲಂಬಸ್ ಸಂಸ್ಥೆಯ ಸದಸ್ಯರು ರೋಮ್ ನಗರಕ್ಕೆ ಪವಿತ್ರ ಯಾತ್ರೆಯನ್ನು ಕೈಗೊಂಡಿದ್ದಾರೆ. ಈ ಸಂಸ್ಥೆಯನ್ನು 1882 ರಲ್ಲಿ ಆರಂಭಿಸಲಾಗಿದ್ದು, ಇದೊಂದು ಕಥೋಲಿಕ ಧಾರ್ಮಿಕ ದತ್ತಿ ಸಂಸ್ಥೆಯಾಗಿದೆ.
ಜ್ಯೂಬಿಲಿ ವರ್ಷದಲ್ಲಿ ಲಕ್ಷಾಂತರ ಜನರು ರೋಮ್ ನಗರಕ್ಕೆ ಪವಿತ್ರ ಯಾತ್ರೆಗಾಗಿ ಆಗಮಿಸಿದ್ದಾರೆ. ಅವರೆಲ್ಲರೂ ವಿಶ್ವವಿಖ್ಯಾತ ಬೆರ್ನಿನಿ ಎಂಬ ಕಲಾವಿದನು ರಚಿಸಿರುವ ಕಲಾಕೃತಿಯೊಳಗನ ಬಲ್ದಾಚಿನೋ (ಸಂತ ಪೇತ್ರರ ಕುರ್ಚಿ) ಯನ್ನು ಕಣ್ತುಂಬಿಕೊಂಡಿದ್ದಾರೆ. ಇದನ್ನು ಮರುಅನ್ವೇಷಿಸಲು ಧನ ಸಹಾಯವನ್ನು ನೀಡಿದ ನೈಟ್ಸ್ ಆಫ್ ಕೊಲಂಬಸ್ ಸಂಸ್ಥೆಯನ್ನು ಪೋಪ್ ಶ್ಲಾಘಿಸಿದ್ದಾರೆ. ಜೀವದ ಪಾವಿತ್ರ್ಯತೆಯನ್ನು ಕಾಪಾಡುತ್ತಿರುವ ಅವರಿಗೆ ಧನ್ಯವಾದಗಳನ್ನು ತಿಳಿಸಿದ್ದಾರೆ.
